ಪೋಸ್ಟ್‌ಗಳು

ಸ್ವಾತಂತ್ರ್ಯಪೂರ್ವ ಪ್ರಮುಖ ಕಾಯ್ದೆಗಳು

    ಪ್ರಮುಖ ಕಾಯ್ದೆಗಳು ಈಸ್ಟ್ ಇಂಡಿಯಾ ಕಂಪೆನಿ ಕಾಯ್ದೆಗಳು 1773 ರ ರೆಗ್ಯುಲೇಟಿಂಗ್ ಶಾಸನ ಈ ಕಾಯ್ದೆಯ ಮುಖ್ಯ ಉದ್ದೇಶ ಈಸ್ಟ್ ಇಂಡಿಯಾ ಕಂಪೆನಿಯ ನೌಕರರು   ಭ್ರಷ್ಟಾಚಾರದಲ್ಲಿ ತೊಡಗದಂತೆ ನಿಯಂತ್ರಿಸುವುದಾಗಿತ್ತು. ರಾರ್ಬರ್ಟ್ ಕ್ಲೈವನು   ಬಂಗಾಳ ಪ್ರಾಂತ್ಯದಲ್ಲಿ ಜಾರಿಗೆ ತಂದಿದ್ದ   ದ್ವಿಮುಖ ಸರ್ಕಾರ   ರದ್ದಾಯಿತು. ಬಂಗಾಳದ ಗವರ್ನರ್ ಹುದ್ದೆಯನ್ನು   ಬಂಗಾಳದ ಗವರ್ನರ್ ಜನರಲ್   ಎಂದು ಕರೆಯಲಾಯಿತು.   ವಾರ್ನ್ ಹೇಸ್ಟಿಂಗ್ಸ್   ಬಂಗಾಳದ ಮೊದಲನೆಯ ಗರ್ವನರ್ ಜನರಲ್ ಆದನು.   4   ಜನ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಮಂಡಳಿಯನ್ನು ಗವರ್ನರ್ ಜನರಲ್ ನ ಸಹಾಯಕ್ಕೆ ನಿಯಮಿಸಲಾಯಿತು. ಸ್ವತಂತ್ರವಾಗಿದ್ದ ಮದ್ರಾಸ್ ಮತ್ತು ಬಾಂಬೆ ಗವರ್ನರ್ ಗಳು ಕಲ್ಕತ್ತಾದ ಗವರ್ನರ್ ಜನರಲ್‍ನ ಅಧೀನಕ್ಕೆ ಬಂದರು ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ   1774   ರಲ್ಲಿ   ಸರ್ವೋಚ್ಚ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಮೊದಲ ಮುಖ್ಯನ್ಯಾಯಾಧೀಶರಾಗಿ   ಸರ್ ಎಲಿಜಾ ಇಂಪೆ   ನೇಮಕಗೊಂಡರು. ಜೊತೆಗೆ 3 ನ್ಯಾಯಾಧೀಶರನ್ನು ನೇಮಕ ಮಾಡಲಾಯಿತು. 1784   ರ ಪಿಟ್ಸ್ ಇಂಡಿಯಾ ಕಾಯ್ದೆ ಬ್ರಿಟಿಷ್ ಪ್ರಧಾನಿ ವಿಲಿಯಂ ಪಿಟ್ಸ್ ಹೆಸರಿನಿಂದ ಈ ಕಾಯ್ದೆಯನ್ನು ಕರೆಯಲಾಗುತ್ತದೆ. ರೆಗ್ಯುಲೇಟಿಂಗ್ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಲು ಬ್ರಿಟಿಷ್ ಸರ್ಕಾರ ಈಸ್ಟ್ ಇಂ...