ಸ್ವಾತಂತ್ರ್ಯಪೂರ್ವ ಪ್ರಮುಖ ಕಾಯ್ದೆಗಳು

  ಪ್ರಮುಖ ಕಾಯ್ದೆಗಳು

ಈಸ್ಟ್ ಇಂಡಿಯಾ ಕಂಪೆನಿ ಕಾಯ್ದೆಗಳು

1773ರ ರೆಗ್ಯುಲೇಟಿಂಗ್ ಶಾಸನ

ಈ ಕಾಯ್ದೆಯ ಮುಖ್ಯ ಉದ್ದೇಶ ಈಸ್ಟ್ ಇಂಡಿಯಾ ಕಂಪೆನಿಯ ನೌಕರರು ಭ್ರಷ್ಟಾಚಾರದಲ್ಲಿ ತೊಡಗದಂತೆ ನಿಯಂತ್ರಿಸುವುದಾಗಿತ್ತು.

ರಾರ್ಬರ್ಟ್ ಕ್ಲೈವನು ಬಂಗಾಳ ಪ್ರಾಂತ್ಯದಲ್ಲಿ ಜಾರಿಗೆ ತಂದಿದ್ದ ದ್ವಿಮುಖ ಸರ್ಕಾರ ರದ್ದಾಯಿತು.

ಬಂಗಾಳದ ಗವರ್ನರ್ ಹುದ್ದೆಯನ್ನು ಬಂಗಾಳದ ಗವರ್ನರ್ ಜನರಲ್ ಎಂದು ಕರೆಯಲಾಯಿತು. ವಾರ್ನ್ ಹೇಸ್ಟಿಂಗ್ಸ್ ಬಂಗಾಳದ ಮೊದಲನೆಯ ಗರ್ವನರ್ ಜನರಲ್ ಆದನು. 4 ಜನ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಮಂಡಳಿಯನ್ನು ಗವರ್ನರ್ ಜನರಲ್ ನ ಸಹಾಯಕ್ಕೆ ನಿಯಮಿಸಲಾಯಿತು.

ಸ್ವತಂತ್ರವಾಗಿದ್ದ ಮದ್ರಾಸ್ ಮತ್ತು ಬಾಂಬೆ ಗವರ್ನರ್ ಗಳು ಕಲ್ಕತ್ತಾದ ಗವರ್ನರ್ ಜನರಲ್‍ನ ಅಧೀನಕ್ಕೆ ಬಂದರು

ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ 1774 ರಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಮೊದಲ ಮುಖ್ಯನ್ಯಾಯಾಧೀಶರಾಗಿ ಸರ್ ಎಲಿಜಾ ಇಂಪೆ ನೇಮಕಗೊಂಡರು. ಜೊತೆಗೆ 3 ನ್ಯಾಯಾಧೀಶರನ್ನು ನೇಮಕ ಮಾಡಲಾಯಿತು.

1784 ರ ಪಿಟ್ಸ್ ಇಂಡಿಯಾ ಕಾಯ್ದೆ

ಬ್ರಿಟಿಷ್ ಪ್ರಧಾನಿ ವಿಲಿಯಂ ಪಿಟ್ಸ್ ಹೆಸರಿನಿಂದ ಈ ಕಾಯ್ದೆಯನ್ನು ಕರೆಯಲಾಗುತ್ತದೆ. ರೆಗ್ಯುಲೇಟಿಂಗ್ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಲು ಬ್ರಿಟಿಷ್ ಸರ್ಕಾರ ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ಈ ಕಾಯ್ದೆಯನ್ನು ಜಾರಿಗೆ ತಂದಿತು

ಕಂಪೆನಿಯ ಆಡಳಿತದ ಮೇಲೆ ಹತೋಟಿ ಹೊಂದಿದ 6 ಜನ ಸದಸ್ಯರ ಬೋರ್ಡ್ ಆಫ್ ಕಂಟ್ರೋಲ್ ಅನ್ನು ಸ್ಥಾಪಿಸಲಾಯಿತು. ಇವರು ಮಿಲಿಟರಿನಾಗರಿಕ ಮತ್ತು ಕಂದಾಯ ವಿಷಯಗಳ ನಿರ್ವಹಣೆ ಮಾಡುತ್ತಿದ್ದರು.

ಈ ಕಾಯ್ದೆ ದ್ವಿಸರ್ಕಾರ ಪದ್ದತಿಗೆ ಅವಕಾಶ ನೀಡಿತು. ಕಂಪೆನಿಯ ವ್ಯವಹಾರಗಳನ್ನು ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳು ಎಂದು ಪ್ರತ್ಯೇಕಗೊಳಿಸಲಾಯಿತು.

ಬಂಗಾಳದ ಗರ್ವನರ್ ಜನರಲ್ ನ ಕಾರ್ಯಕಾರಿ ಮಂಡಳಿಯಲ್ಲಿದ್ದ ಜನ ಸದಸ್ಯರ ಸಂಖ್ಯೆಯನ್ನು 3ಕ್ಕೆ ಇಳಿಸಲಾಯಿತು.

ಭಾರತ ಭೂಭಾಗವು ಬ್ರಿಟಿಷ್ ಸಾಮ್ರಾಜ್ಯದ ಅವಿಭಾಜ್ಯ ಅಂಗವೆಂದು (ಬ್ರಿಟಿಷ್ ಪ್ರೊಸೆಷನ್ ಇನ್ ಇಂಡಿಯಾ) ಬ್ರಿಟಿಷ್ ಸರ್ಕಾರ ಘೋಷಿಸಿತು

1786 ರ ಕಾಯ್ದೆ

ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಎಲ್ಲಾ ಸೇನಾಪಡೆಗಳ ದಂಡಾಧಿಕಾರಿಯನ್ನಾಗಿ ಮಾಡಲಾಯಿತು.

1793 ರ ಚಾರ್ಟರ್ ಕಾಯ್ದೆ

ಭಾರತದ ಮೇಲಿನ ಕಂಪನಿಯ ಅಧಿಕಾರವನ್ನು ಇನ್ನೂ 20 ವರ್ಷಗಳಿಗೆ ವಿಸ್ತರಿಸಲಾಯಿತು,

ವ್ಯಾಪಾರ ಮಾಡುವ ಪರವಾನಗಿಯನ್ನು ನೀಡುವ ಅಧಿಕಾರವನ್ನು ಕಂಪನಿಗೆ ನೀಡಲಾಯಿತು.

1813 ರ ಚಾರ್ಟರ್ ಕಾಯ್ದೆ

ಕ್ರೈಸ್ತ ಮತ ಪ್ರಚಾರಕರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿ ಕ್ರಿಶ್ಚಿಯನ್ ಮಿಷಿನರಿಗಳಿಗೆ ಧರ್ಮದ ಬಗ್ಗೆ ಭೋದಿಸಲು ಅನುಮತಿ ಕೊಟ್ಟಿತು.

ಭಾರತದಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಅದಕ್ಕಾಗಿ 1 ಲಕ್ಷ ರೂಪಾಯಿಗಳನ್ನು ನೀಡಲಾಯಿತು.

1833 ರ ಚಾರ್ಟರ್ ಕಾಯ್ದೆ

ಬಂಗಾಳದ ಗವರ್ನರ್ ಜನರಲ್ ಸ್ಥಾನವು ಭಾರತದ ಗವರ್ನರ್ ಜನರಲ್ ಎಂದು ಬದಲಾಗಿ ಲಾರ್ಡ್ ವಿಲಿಯಂ ಬೆಂಟಿಕ್‍ನು ಭಾರತದ ಮೊದಲ ಗವರ್ನರ್ ಜನರಲ್ ಆದನು. 3 ಜನರಿದ್ದ ಗವರ್ನರ್ ಜನರಲ್ ನ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ಮತ್ತೆ 4 ಕ್ಕೆ ಏರಿಸಲಾಯಿತು.

ಭಾರತದ ಗವರ್ನರ್ ಜನರಲ್ ಕೇವಲ ರಾಜಕೀಯ ಮತ್ತು ಮಿಲಿಟರಿ ವ್ಯವಹಾರಗಳಲ್ಲಿ ಮಾತ್ರ ಅಧಿಕಾರ ನಡೆಸಬಹದಿತ್ತು. ಆರ್ಥಿಕ ವ್ಯವಹಾರಗಳನ್ನು ಬ್ರಿಟಿಷ್ ಸರ್ಕಾರವೇ ಉಳಿಸಿಕೊಂಡಿತು. ಬಾಂಬೆ ಮತ್ತು ಮದ್ರಾಸ್ ಗವರ್ನರ್ ಗಳ ಶಾಸನೀಯ ಅಧಿಕಾರಗಳನ್ನು ಹಿಂತೆಗೆದುಕೊಳ್ಳಲಾಯಿತು.

ಥಾಮಸ್ ಬ್ಯಾಬಿಂಗ್‍ಟನ್ ಮೆಕಾಲೆಯು ಭಾರತದ ಮೊದಲ ಕಾನೂನು ಸಲಹೆಗಾರನಾಗಿ ನೇಮಕವಾದನು.

ವಿಲಿಯಂ ಬೆಂಟಿಕ್‍ನು ಭಾರತೀಯ ದಂಡಸಂಹಿತೆ (ಇಂಡಿಯನ್  ಪೀನಲ್ ಕೋಡ್) ಜಾರಿಗೆ ತಂದನು.

ಈ ಕಾಯ್ದೆ ನಾಗರೀಕ ಸೇವೆಗಳಲ್ಲಿ ಮೆರಿಟ್ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಿತು. ಈ ಮೂಲಕ ಭಾರತೀಯರು ಸಹ ಉನ್ನತ ಹುದ್ದೆಗಳನ್ನು ಪಡೆಯುವಂತಾಯಿತು.

1853 ರ ಚಾರ್ಟರ್ ಕಾಯ್ದೆ

ಈಸ್ಟ್ ಇಂಡಿಯಾ ಕಂಪೆನಿ ಹೊರಡಿಸಿದ ಕಾಯ್ದೆಗಳಲ್ಲಿ ಇದು ಕೊನೆಯದು. ಈ ಕಾಯ್ದೆಯ ಮೂಲಕ ಭಾರತದಲ್ಲಿ ಸಂಸದೀಯ ಪದ್ಧತಿ ಪ್ರಾರಂಭವಾಯಿತು

ಗವರ್ನರ್ ಜನರಲ್ ನ ಕಾರ್ಯಗಳನ್ನು ಕಾರ್ಯಾಂಗೀಯ ಹಾಗೂ ಶಾಸಕಾಂಗೀಯ ಎಂದು ಪ್ರತ್ಯೇಕಿಸಲಾಯಿತು. ಬಂಗಾಳದ ಆಡಳಿತವನ್ನು ನೋಡಿಕೊಳ್ಳಲು ಪ್ರತ್ಯೇಕವಾಗಿ ಗವರ್ನರ್ ಒಬ್ಬನನ್ನು ನೇಮಿಸಲಾಯಿತು.

ಕೇಂದ್ರದಲ್ಲಿ ಶಾಸನ ಸಭೆಯನ್ನು ಸ್ಥಾಪಿಸಲಾಯಿತುಪ್ರಥಮ ಬಾರಿಗೆ ಭಾರತೀಯರಿಗೆ ಶಾಸನ ಸಭೆಗೆ ಅವಕಾಶ ನೀಡಲಾಯಿತು.

ಇಂದಿನ ಸಂಸತ್ತಿನ ಮೂಲರೂಪವೆನ್ನಬಹುದಾದ 6 ಜನ ಸದಸ್ಯರುಳ್ಳ ಲೆಜಿಸ್ಲೇಟಿವ್ ಕೌನ್ಸಿಲ್ ಅನ್ನು ಸ್ಥಾಪಿಸಲಾಯಿತು

ಭಾರತೀಯರಿಗೂ ಅವಕಾಶ ಸಿಗುವಂತೆ ಸರ್ಕಾರದ ಸೇವೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಪ್ರಕ್ರಿಯೆ ಆರಂಭವಾಯಿತು.

ಬ್ರಿಟಿಷ್ ಸರ್ಕಾರದ ಕಾಯ್ದೆಗಳು

1858 ರ ಭಾರತ ಸರ್ಕಾರ ಕಾಯ್ದೆ

1 ನವೆಂಬರ್‌ 1858 ರಂದು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮ ಬ್ರಿಟನ್ ಪ್ರಧಾನಿ ಲಾರ್ಡ್ ಪಾಮರ್ ಸ್ಟನ್ ಈ ಕಾಯ್ದೆಯನ್ನು ಜಾರಿಗೆ ತಂದು ಭಾರತದ ಮೇಲಿನ ಅಧಿಕಾರವು ಕಂಪೆನಿಯಿಂದ ಬ್ರಿಟಿಷ್ ಮಹಾರಾಣಿಗೆ ಹಸ್ತಾಂತರವಾಗುವಂತೆ ಮಾಡಿದನು. ರಾಣಿಯು ಇನ್ನು ಮುಂದೆ ಬ್ರಿಟಿಷ್ ಸರ್ಕಾರವು ಭಾರತದ ಧಾರ್ಮಿಕ ವಿಷಯಗಳಲ್ಲಿ ಪ್ರವೇಶಿಸುವುದಿಲ್ಲವೆಂದು ಆಶ್ವಾಸನೆ ನೀಡುವುದರ ಜೊತೆಗೆ ಉತ್ತಮ ಆಡಳಿತದ ಭರವಸೆಯಿತ್ತಳು. ಈ ಕಾಯ್ದೆಯನ್ನು ಭಾರತ ಮ್ಯಾಗ್ನಾಕಾರ್ಟ್ ಎನ್ನುವರು

ಭಾರತದ ಗವರ್ನರ್ ಜನರಲ್ ಹುದ್ದೆಗೆ ಬದಲಿಗೆ ಭಾರತದ ವೈಸ್ರಾಯ್ ಎಂಬ ಹುದ್ದೆಯನ್ನು ಮಾಡಲಾಯಿತು. ಭಾರತದ ಮೊದಲ ವೈಸ್ರಾಯ್ ಲಾರ್ಡ್ ಕ್ಯಾನಿಂಗ್. 1858 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು ಭಾರತದ ಗವರ್ನರ್ ಜನರಲ್ ಆಗಿದ್ದ ಕ್ಯಾನಿಂಗ್ ಈ ಕಾಯ್ದೆಯ ನಂತರ ವೈಸ್ರಾಯ್ ಆದನು. ಹಾಗಾಗಿ ಕ್ಯಾನಿಂಗ್ ಭಾರತದ ಕೊನೆಯ ಗವರ್ನರ್ ಜನರಲ್ ಹಾಗೂ ಮೊದಲ ವೈಸ್ರಾಯ್ ಆದನು.

ಈ ಕಾಯ್ದೆಯನ್ವಯ ಬ್ರಿಟನ್ ಸಂಸತ್ತಿನಲ್ಲಿ ಭಾರತ ರಾಜ್ಯಕಾರ್ಯದರ್ಶಿಯ (Secratary of State for India) ಎಂಬ ಹುದ್ದೆಯ ಸೃಷ್ಟಿಯಾಯಿತು. ರಾಜ್ಯಕಾರ್ಯದರ್ಶಿಯ ನೆರವಿಗೆ 15 ಜನ ಸದಸ್ಯರನ್ನೊಳಗೊಂಡ ಭಾರತೀಯರನ್ನು ನೇಮಿಸಲಾಯಿತು.

ಬೋರ್ಡ್ ಆಫ್ ಡೈರೆಕ್ಟರ್ ಮತ್ತು ದ್ವಿಸರ್ಕಾರ ಪದ್ಧತಿಯನ್ನು ರದ್ಧುಗೊಳಿಸಲಾಯಿತು       

1861 ರ ಭಾರತ ಕೌನ್ಸಿಲ್ ಕಾಯ್ದೆ

ಈ ಕಾಯ್ದೆ ದೇಶದಲ್ಲಿ ಪೋರ್ಟ್ ಪೋಲಿಯೋ ವಿಧಾನವನ್ನು ಪರಿಚಯಿಸಿತು.

ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರನ್ನು ನಾಮಕರಣ ಮಾಡಿಕೊಳ್ಳುವುದರ ಮೂಲಕ ಪ್ರಥಮ ಬಾರಿಗೆ ಭಾರತೀಯರಿಗೆ ಶಾಸನ ಸಭೆಯನ್ನು ಪ್ರವೇಶಿಸಲು ಅವಕಾಶ ನೀಡಲಾಯಿತು. ಆಡಳಿತಕ್ಕನುಕೂಲವಾಗಿ ಅಗತ್ಯ ನಿಯಮ ರೂಪಿಸುವ ಆದೇಶ ನೀಡುವ ಅಧಿಕಾರವನ್ನು ವೈಸ್ರಾಯ್‌ ಗೆ ನೀಡಲಾಯಿತು.

ವೈಸ್ರಾಯ್ ನ ಕೌನ್ಸಿಲ್ ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರಾಗಿ ನೇಮಿಸಲಾಯಿತು. ಕಾನೂನು ರೂಪಿಸುವಲ್ಲಿ ಭಾರತೀಯರಿಗೆ ಅವಕಾಶ ಕಲ್ಪಿಸಲಾಯಿತು. ಈ ಲೆಜಿಸಲೇಟಿವ್‌ ಕೌನ್ಸಿಲ್‌ ನ ಕಾರ್ಯವ್ಯಾಪ್ತಿ ಕೇವಲ ಕಾನೂನು ರೂಪಿಸುವುದು ಮಾತ್ರ ಆಗಿತ್ತು

1892 ರ ಇಂಡಿಯನ್ ಕೌನ್ಸಿಲ್ ಕಾಯ್ದೆ

ಈ ಕಾಯ್ದೆಯನ್ನು 1861 ರ ಕಾಯ್ದೆಯ ಮುಂದುವರೆದ ಭಾಗ ಎನ್ನುವರು

ಕೇಂದ್ರೀಯ ಮತ್ತು ಪ್ರಾಂತೀಯ ಶಾಸನ ಸಭೆಗಳಲ್ಲಿ ಅಧಿಕಾರೇತರ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು.

ಶಾಸನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ, ಪ್ರಶ್ನೆಗಳನ್ನು ಕೇಳುವ, ಕಾರ್ಯಾಂಗದ ಕಾರ್ಯವನ್ನು ಪ್ರಶ್ನಿಸುವ ಅವಕಾಶ ನೀಡಲಾಯಿತು.

1909 ರ ಮಾರ್ಲೆ  ಮಿಂಟೋ ಕಾಯ್ದೆ

ಬ್ರಿಟಿಷ್‌ ಸರ್ಕಾರವು ಚುನಾಯಿತರಾದ ಭಾರತೀಯರಿಗೆ ಶಾಸನಸಭೆಗಳಲ್ಲಿ ಅವಕಾಶ ನೀಡಲು ಈ ಕಾಯ್ದೆಯನ್ನು ಜಾರಿಮಾಡಿತು. ಈ ಕಾಯ್ದೆ ಜಾರಿಯಾದಾಗ ಲಾರ್ಡ್‌ ಮಾರ್ಲೆ ಭಾರತದ ರಾಜ್ಯ ಕಾರ್ಯದರ್ಶಿಯಾಗಿದ್ದರು ಮತ್ತು ಲಾರ್ಡ್‌ ಮಿಂಟೋ ಭಾರತದ ವೈಸ್ರಾಯ್‌ ಆಗಿದ್ದರು. ಈ ಕಾರಣದಿಂದ ಇದನ್ನು ಮಾರ್ಲೆ ಮಿಂಟೊ ಕಾಯ್ದೆ ಎಂದು ಕರೆಯಲಾಗುತ್ತದೆ.

ಪ್ರತ್ಯೇಕ ಚುನಾವಣ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯತೆ (Legalized Communalism) ನೀಡಲಾಯಿತು. ಇದರಿಂದಾಗಿ ಲಾರ್ಡ್ ಮಿಂಟೋರವರನ್ನು ಕೋಮು ಆಧಾರಿತ ಚುನಾವಣಾ ಪದ್ಧತಿಯ ಪಿತಾಮಹ ಎಂದು ಕರೆಯಲಾಗುತ್ತದೆ.

ರಾಜಕೀಯ ಅಪರಾಧಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಲಾಯಿತು.

ವೈಸ್ರಾಯ್ರವರ ಕಾರ್ಯಾಂಗೀಯ ಪರಿಷತ್ತಿಗೆ ಭಾರತೀಯರನ್ನು ನೇಮಕ ಮಾಡಿಕೊಳ್ಳುವ ಪದ್ಧತಿ ಆರಂಭವಾಯಿತು. ಹೀಗೆ ನೇಮಕಗೊಂಡ ಪ್ರಥಮ ಭಾರತೀಯ ಸತ್ಯೇಂದ್ರ ಪ್ರಸಾದ್ ಸಿನ್ಹ

ಚುನಾಯಿತರಾದ ಭಾರತೀಯರಿಗೆ ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳಲ್ಲಿ ಅವಕಾಶ. ವಾಣಿಜ್ಯೋದ್ಯಮಿಗಳಿಗೆವಿಶ್ವ ವಿದ್ಯಾಲಯಗಳಿಗೆ, ಪ್ರೆಸಿಡೆನ್ಸಿ ಕಾರ್ಪೋರೇಷನ್ಗಳಿಗೆಜಮೀನ್ದಾರರಿಗೆಶಾಸನ ಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯತೆಯನ್ನು ನೀಡಲಾಗಿತ್ತು. ಈ ರೀತಿ ಚುನಾವಣೆ ಮೂಲಕ ಭಾರತೀಯರು ಕಾರ್ಯಾಂಗ ಪ್ರವೇಶಿಸಲು ಅವಕಾಶ ದೊರೆಯಿತು.

ಕೆಂದ್ರದ ಸಂಸತ್ತಿನಲ್ಲಿ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಏರಿಸಲಾಯಿತು

1919ರ ಮಾಂಟೆಗೋ- ಚೆಲ್ಮ್ಸ್ ಫರ್ಡ್ ಕಾಯ್ದೆ

ಈ ಕಾಯ್ದೆಯ ಸಂದರ್ಭದಲ್ಲಿ ಎಡ್ವಿನ್‌ ಸುಮೆಲ್‌ ಮಾಂಟೆಗೊ ಭಾರತದ ರಾಜ್ಯಕಾರ್ಯದರ್ಶಿಯಾಗಿದ್ದರು ಮತ್ತು ಲಾರ್ಡ್‌ ಚೆಲ್ಮ್ಸ್‌ ಫರ್ಡ್‌ ಭಾರತದ ವೈಸ್ರಾಯ್‌ ಆಗಿದ್ದರು

ಮೊದಲ ಮಹಾಯುದ್ಧದಲ್ಲಿ ಭಾರತೀಯರು ಇಂಗ್ಲೆಂಡ್‌ ನ ಪರ ಭಾಗವಹಿಸಿದ ಕಾರಣ ಎಲ್ಲಾ ರಂಗಗಳಲ್ಲೂ ಭಾರತೀಯರಿಗೆ ಅವಕಾಶ ಕಲ್ಪಿಸುವಂತೆ ಭಾರತದ ಕಾರ್ಯದರ್ಶಿ ಮಾಂಟೆಗೋರವರು ಭರವಸೆ ನೀಡಿದರು.

ಕೌನ್ಸಿಲ್ ಆಫ್ ಸ್ಟೇಟ್ (ಮೇಲ್ಮನೆ), ಲೆಜಿಸ್ಲೇಟಿವ್ ಅಸೆಂಬ್ಲಿ (ಕೆಳಮನೆ) ಒಳಗೊಂಡ ದ್ವಿಸದನ ಶಾಸಕಾಂಗ ಪದ್ಧತಿ ಜಾರಿಗೆ ತರಲಾಯಿತು. ಕೌನ್ಸಿಲ್ ಆಫ್ ಸ್ಟೇಟ್ ಇಂದಿನ ರಾಜ್ಯಸಭೆಯಂತಿದ್ದು ಅದರ ಅಧಿಕಾರಾವಧಿ 3 ವರ್ಷಗಳು. ಲೆಜಿಸ್ಲೇಟಿವ್ ಅಸೆಂಬ್ಲಿಯು ಇಂದಿನ ಲೋಕಸಭೆಯಂತಿದ್ದು ಅದರ ಅಧಿಕಾರಾವಧಿ 5 ವರ್ಷಗಳು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಂಬ ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತರಲಾಯಿತು, ಶಾಸಕಾಂಗದ ಅಧಿಕಾರಗಳನ್ನು ಕೇಂದ್ರ ವಿಷಯಗಳು ಮತ್ತು ಪ್ರಾಂತೀಯ ವಿಷಯಗಳೆಂದು ವರ್ಗೀಕರಣ ಮಾಡಲಾಯಿತು.

ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರ ಜಾರಿಯಾಯಿತು ಪರಿಣಾಮವಾಗಿ ಆಡಳಿತ ವಿಷಯಗಳಲ್ಲಿ ಮೀಸಲು ವಿಷಯಗಳು ಹಾಗೂ ವರ್ಗಾಯಿತ ವಿಷಯಗಳೆಂಬ ವಿಭಾಗ ಉಂಟಾಯಿತು.

ವೈಸ್ರಾಯ್ ಗೆ ಸುಗ್ರೀವಾಜ್ಞೆಗಳನ್ನು ಹೊರಡಿಸುವ ಅಧಿಕಾರ ಮತ್ತು ವಿಟೋ ಅಧಿಕಾರ ನೀಡಲಾಯಿತು.

ಲೆಫ್ಟನೆಂಟ್‌ ರಾಜ್ಯಪಾಲರನ್ನು, ರಾಜ್ಯಪಾಲರಾಗಿ ನೇಮಿಸಲಾಯಿತು

ಸಿಖ್ಖರುಭಾರತೀಯ ಕ್ರಿಶ್ಚಿಯನ್ನರುಯುರೋಪಿಯನ್ನರುಆಂಗ್ಲೋ-ಇಂಡಿಯನ್ನರಿಗೆ ಪ್ರತ್ಯೇಕ ಮತದಾರ ವರ್ಗ ನೀಡಲಾಯಿತು.

ತೆರಿಗೆ ಪಾವತಿ, ಆಸ್ತಿ ಅಥವಾ ಶಿಕ್ಷಣ ಇವುಗಳ ಆಧಾರದ ಮೇಲೆ ಜನರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

ಕೇಂದ್ರ ಆಯ-ವ್ಯಯ ಪಟ್ಟಿಯಿಂದ ಪ್ರಾಂತೀಯ ಆಯ-ವ್ಯಯ ಪಟ್ಟಿಯನ್ನು ಪ್ರತ್ಯೇಕಿಸಲಾಯಿತು.

ಭಾರತ ವ್ಯವಹಾರಗಳ ಕಾರ್ಯದರ್ಶಿಯ ಅಧಿಕಾರವನ್ನು ಕಡಿಮೆ ಮಾಡಿ, ಮೊದಲ ಮಹಾಯುದ್ಧದಲ್ಲಿ ಬಾಗವಹಿಸಿದ ಭಾರತೀಯರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಲಂಡನ್ನ ಲ್ಲಿ ಹೈ ಕಮಿಷನರ್ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿ ಆತನಿಗೆ ಅಧಿಕಾರ ನೀಡಲಾಯಿತು.

1927ರ ಸೈಮನ್ ಆಯೋಗ

1919 ರ ಕಾಯ್ದೆಗೆ ಸಂಬಂಧಿಸಿದಂತೆ ವರದಿ ನೀಡಲು ಮತ್ತು ಅಗತ್ಯವೆನಿಸಿದಲ್ಲಿ ಸುಧಾರಣೆಗಳನ್ನು ಕೈಗೊಳ್ಳು 1927 ರಲ್ಲಿ ಸೈಮನ್‌ ಆಯೋಗವನ್ನು ಭಾರತಕ್ಕೆ ಕಳುಹಿಸಲಾಯಿತು.

ಜಾನ್ ಸೈಮನ್ ಈ ಆಯೋಗದ ಅಧ್ಯಕ್ಷರಾಗಿದ್ದು ಕ್ಲೆಮೆಂಟ್ ಅಟ್ಲೆ, ಹ್ಯಾರಿ ಲೇರಿ, ಎಡ್ವರ್ಡ್ ಕಾಡೋಗಾನ್, ವೆರ್ನನ್ ಹಾರ್ಟ್‍ಸಾಮ್, ಜಾರ್ಜ್ ಲಾನೆ ಫಾಕ್ಸ್, ಡೊನಾಲ್ಡ್ ಹಾವರ್ಡ್  ಇದರ ಸದಸ್ಯರಾಗಿದ್ದರು.

ಪ್ರಾಂತ್ಯಗಳಿಗಳಲ್ಲಿ ದ್ವಿಪ್ರಭುತ್ವ ರದ್ದುಗೊಳಿಸಿ ಸ್ವಾಯತ್ತತೆ ನೀಡುವುದು.

ಭಾರತದ ಸಾಂವಿಧಾನಿಕ ಫೆಡರಲ್ ವ್ಯವಸ್ಥೆಗೆ ಶಿಫಾರಸ್ಸು.

ಕೋಮುವಾರು ಚುನಾವಣಾ ಕ್ಷೇತ್ರಗಳನ್ನು ಮುಂದುವರೆಸುವುದು.

ಭಾರತದಿಂದ ಬರ್ಮಾವನ್ನು ಪ್ರತ್ಯೇಕಗೊಳಿಸಬೇಕೆಂದು ಶಿಫಾರಸ್ಸು

ಭಾರತದ ಸಮಸ್ಯೆಗಳನ್ನು ಬ್ರಿಟನ್ನಿನ ದುಂಡುಮೇಜಿನ ಪರಿಷತ್ತಿನಲ್ಲಿ ಚರ್ಚಿಸಲು ಅವಕಾಶ

ಈ ಆಯೋಗವು ಭಾರತ ಬ್ರಿಟನ್‌ ಅಧಿಪತ್ಯದಲ್ಲಿಯೇ ಮುಂದುವರೆಸುವ ಉದ್ದೇಶ ಹೊಂದಿತ್ತು. ಭಾರತಕ್ಕೆ ಜವಾಬ್ದಾರಿ ಸರ್ಕಾರ ರಚಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಸಹ ಈ ಆಯೋಗ ಮಾಡಲಿಲ್ಲ. ಅಲ್ಲದೆ ಈ ಆಯೋಗದಲ್ಲಿ ಭಾರತೀಯರಿಗೆ ಸದಸ್ಯತ್ವ ಇರಲಿಲ್ಲ. 

ಆದ್ದರಿಂದ ಭಾರತದೆಲ್ಲೆಡೆ ಸೈಮನ್ ಹಿಂದಿರುಗಿ ಎಂಬ ಘೋಷಣೆ ಮೊಳಗಿತು. 1928 ರಲ್ಲಿ ಲಾಹೋರ್‌ ನಲ್ಲಿ ನಡೆದ ಸೈಮನ್‌ ಗೋ ಬ್ಯಾಕ್‌ ಚಳುವಳಿಯಲ್ಲಿ ಸ್ಕಾಟ್‌ ಎಂಬ ಬ್ರಿಟಿಷ್‌ ಪೊಲಿಸ್‌ ಅಧಿಕಾರಿಯ ಲಾಠಿ ಹೊಡೆತದಿಂದ ಲಾಲಾ ಲಜಪತ್‌ ರಾಯ್‌ ಅವರು ಮರಣಿಸಿದರು. 1928 ರಲ್ಲಿ ಭಗತ್‌ ಸಿಂಗ್‌ ಮತ್ತು ಸುಖದೇವ್‌ ಮತ್ತು ಲಾಹೋರಿಗೆ ಬಂದ ಬ್ರಿಟಿಷ್‌ ಅಧಿಕಾರಿ ಸ್ಯಾಂಡರ್ಸ್‌ ನನ್ನು ಕೊಂದರು. ನಂತರ ದೇಶದೆಲ್ಲೆಡೆ ಹೋರಾಟ ತೀವ್ರವಾಗಿ 1929 ರಲ್ಲಿ ಸೈಮನ್ ಆಯೋಗ ರದ್ಧಾಯಿತು.

ದುಂಡು ಮೇಜಿನ ಪರಿಷತ್ತುಗಳು

ಈ ಮೂರೂ ದುಂಡುಮೇಜಿನ ಪರಿಷತ್ತುಗಳ ಅಧ್ಯಕ್ಷರಾಗಿದ್ದವರು ಮ್ಯಾಕ್ ಡೊನಾಲ್ಡ್

ಮೊದಲ ದುಂಡು ಮೇಜಿನ ಪರಿಷತ್ತು 1930 ನವೆಂಬರ್ 12ರಂದು ನಡೆಯಿತು. ಈ ಪರಿಷತ್ತಿನಲ್ಲಿ ಕಾಂಗ್ರೆಸ್ ಭಾಗವಹಿಸಿರಲಿಲ್ಲ.

1931 ಮಾರ್ಚ್ 5 ರಂದು ಗಾಂಧಿ ಮತ್ತು ಲಾರ್ಡ್ ಇರ್ವಿನ್ ಮಧ್ಯ ಒಪ್ಪಂದ ನಡೆಯಿತು.

1931 ಸೆಪ್ಟಂಬರ್ 7 ರಂದು ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಕಾಂಗ್ರೇಸ್ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

1932 ಸೆಪ್ಟೆಂಬರ್ 14 ರಂದು ಗಾಂಧಿ ಮತ್ತು ಅಂಬೇಡ್ಕರ್ ಮಧ್ಯ ಪೂನಾ ಒಪ್ಪಂದ ನಡೆಯಿತು.

1932 ನವೆಂಬರ್ 17 ರಂದು ನಡೆದ ಮೂರನೇ ದುಂಡು ಮೇಜಿನ ಪರಿಷತ್ತಿನಲ್ಲಿ ಮತ್ತೆ ಕಾಂಗ್ರೇಸ್ ಭಾಗವಹಿಸಲಿಲ್ಲ.

ಅಂಬೇಡ್ಕರ್ ಅವರು ಈ ಮೇಲಿನ ಎಲ್ಲಾ ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ.

ಮೈಸೂರು ಸಂಸ್ಥಾನದಿಂದ ಸರ್ ಮಿರ್ಜಾ ಇಸ್ಮಾಯಿಲ್ ರು ದುಂಡುಮೇಜಿನ ಪರಿಷತ್‍ಗಳಲ್ಲಿ ಭಾಗವಹಿಸಿದ್ದರು.

ಭಾರತಕ್ಕೆ ಒಂದು ಹೊಸ ಸಂವಿಧಾನ, ಒಕ್ಕೂಟ ಸ್ವರೂಪದ ಸರ್ಕಾರ ಮೊದಲಾದವುಗಳನ್ನು ಒಳಗೊಂಡ ಶ್ವೇತಪತ್ರವನ್ನು ಬ್ರಿಟಿಷ್ ಸರ್ಕಾರ ಬಿಡುಗಡೆ ಮಾಡಿತು.

1935 ರ ಭಾರತ ಸರ್ಕಾರ ಕಾಯ್ದೆ

ನಮ್ಮ ಸಂವಿಧಾನದ ಬಹುತೇಕ ಅಂಶಗಳನ್ನು ಸ್ವೀಕರಿಸಿರುವುದು 1935 ರ ಕಾಯ್ದೆಯಿಂದ ಆದ್ದರಿಂದ ಈ ಕಾಯ್ದೆಯನ್ನು ಭಾರತ ಸಂವಿಧಾನದ ನೀಲಿ ನಕ್ಷೆ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಸಂಯುಕ್ತ ಪದ್ಧತಿಯನ್ನು ಜಾರಿಗೆ ತಂದಿತು. ಉಳಿದ ಅಧಿಕಾರಗಳನ್ನು ವೈಸ್ರಾಯ್ ಗೆ ನೀಡಲಾಯಿತು.

ಕೇಂದ್ರದಲ್ಲಿ ದ್ವಿಮುಖ ಸರ್ಕಾರಕ್ಕೆ ಅವಕಾಶ ನೀಡಿತು. ಆದರೆ ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರ ರದ್ಧುಗೊಳಿಸಿ ದ್ವಿಸದನ ಶಾಸಕಾಂಗ ಪದ್ದತಿಯನ್ನು ಜಾರಿಗೆ ತರಲಾಯಿತು. ಪ್ರಾಂತ್ಯಗಳಿಗೆ ಸ್ವಾಯತತ್ತೆ ನೀಡಲಾಯಿತು. 

ಕೇಂದ್ರ ಹಾಗೂ ರಾಜ್ಯಗಳಲ್ಲಿ ಶಾಸನಾಧಿಕಾರವನ್ನು ವಿಭಜಿಸಿ, ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಸಮವರ್ತಿ ಪಟ್ಟಿಗಳನ್ನು ರಚಿಸಲಾಯಿತು

ಅಖಿಲ ಭಾರತ ಫೆಡರೇಷನ್ ರಚನೆ. ದೆಹಲಿಯಲ್ಲಿ ಪ್ರಥಮ ಒಕ್ಕೂಟ (ಫೆಡರಲ್) ನ್ಯಾಯಾಲಯದ ಸ್ಥಾಪನೆ. ಲೋಕಸೇವಾ ಆಯೋಗಗಳ ರಚನೆಗೆ ಅವಕಾಶ (ಫೆಡರಲ್ ಪ್ರಾವಿಸನ್ಸ್)

1935 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ.

1940 ಅಗಸ್ಟ್ ಕೊಡುಗೆ

೨ನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ಹೋರಾಡಲು ‌ಬ್ರಿಟನ್‌ ಗೆ ಭಾರತದ ನೆರವು ಪಡೆಯುವ  ಅನಿವಾರ್ಯವಿತ್ತು. ಈ ಉದ್ದೇಶದಿಂದ 1942 ಮಾರ್ಚ್ ನಲ್ಲಿ ಬ್ರಿಟನ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಭಾರತಕ್ಕೆ ಸ್ವಯಂ ಸರ್ಕಾರ ನೀಡುತ್ತೇವೆ ಮತ್ತು ಭಾರತದ ಸಂವಿಧಾನ ರಚನೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕ್ರಿಪ್ಸ್ ರನ್ನು ಭಾರತಕ್ಕೆ ಕಳುಹಿಸಿದ. ಭಾರತೀಯರನ್ನು ಯುದ್ಧಕ್ಕೆ ಕಳುಹಿಸಲು ವಿರೋಧಿಸಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಇದನ್ನು ತಿರಸ್ಕರಿಸಿದರು.

2ನೇ ಮಹಾಯುದ್ಧದ ನಂತರ ಭಾರತಕ್ಕೆ ಡೊಮಿನಿಯನ್‌ ಸ್ಥಾನಮಾನ ನೀಡಲಾಗುವುದು ಎಂದು ಬ್ರಿಟನ್‌ ಪ್ರಧಾನಿ ಲಾರ್ಡ್‌ ಲಿನ್‌ ಲಿಥ್‌ ಗೊ 1940 ಆಗಸ್ಟ್‌ 8 ರಂದು ಭಾರತೀಯರಿಗೆ ಆಶ್ವಾಸನೆ ನೀಡಿದ. ಇದನ್ನೇ ಆಗಸ್ಟ್‌ ಕೊಡುಗೆ ಎನ್ನುವರು

1942 ಕ್ರಿಪ್ಸ್‌ ಆಯೋಗ

೨ನೇ ಮಹಾಯುದ್ಧದ ಒತ್ತಡದಿಂದ ಇಂಗ್ಲೆಂಡ್‌ ಪ್ರಧಾನಿ ಸ್ಟ್ರಾಫೋರ್ಡ್‌ ಕ್ರಿಪ್ಸ್‌ ಭಾರತಕ್ಕೆ ಒಂದು ನಿಯೋಗವನ್ನು ಕಳುಹಿಸಿದರು. ಅದೇ ಕ್ರಿಪ್ಸ್‌ ಆಯೋಗ. ಯುದ್ಧದ ನಂತರ ಭಾರತಕ್ಕೆ  ಡೊಮಿನಿಯನ್‌ ಸ್ಥಾನಮಾನ ಮತ್ತು ಸಂವಿಧಾನ ರಚನೆಗೆ ಅವಕಾಶ ನೀಡಲಾಗುವುದು ಎಂದು ಸ್ಟ್ರಾಫೋರ್ಡ್‌ ಕ್ರಿಪ್ಸ್ ಭಾರತೀಯರಿಗೆ ಆಶ್ವಾಸನೆ ನೀಡಿದ.

ಕಾಮನ್‌ ವೆಲ್ತ್‌ ಸಂಘದ ಸದಸ್ಯತ್ವದ ವಿಷಯದಲ್ಲಿ ಭಾರತಕ್ಕೆ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಯಿತು.‌

ಏಕ ಸಂವಿಧಾನ ಇಷ್ಟವಿಲ್ಲದೇ ಹೋದಲ್ಲಿ ಪ್ರಾಂತ್ಯಗಳು ತಮ್ಮದೇ ಸಂವಿಧಾನವನ್ನು ರಚಿಸಿಕೊಳ್ಳಲು ಅವಕಾಶ ನೀಡಲಾಯಿತು.

ರಕ್ಷಣಾ ಖಾತೆಯನ್ನು ಹೊರತುಪಡಿಸಿ ಉಳಿದೆಲ್ಲಾ ಅಧಿಕಾರವನ್ನು ಭಾರತೀಯರಿಗೆ ನೀಡುವುದಾಗಿ ಈ ಆಯೋಗ ಹೇಳಿತು

ಪ್ರತ್ಯೇಕ ಪಾಕಿಸ್ತಾನ ರಚನೆಯ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿತು

ಎಂ ವಿ ಪೈಲಿ ಅವರು "ಕ್ರಿಪ್ಸ್‌ ಆಯೋಗವು ಎಲ್ಲಾ ಭಾರತೀಯರನ್ನು ತೃಪ್ತಿಪಡಿಸಿತು ಆದರೆ ಯಾರನ್ನೂ ಸಮಾಧಾನ ಪಡಿಸಲಿಲ್ಲ" ಎಂದು ಹೇಳಿದರು

ಗಾಂಧೀಜಿ "ನದಿಯಲ್ಲಿ ಮುಳುಗಿ ಹೋಗುತ್ತಿರುವ ಬ್ಯಾಂಕ್‌ ನ ಮುಂದಿನ ದಿನಾಂಕದ ಚೆಕ್‌" ಎಂದು ಟೀಕಿಸಿದರು

1943 ಲಾರ್ಡ್‌ ವೆವೆಲ್‌ ಯೋಜನೆ

1943 ರಲ್ಲಿ ಲಾರ್ಡ್‌ ವೆವೆಲ್‌ ವೈಸ್ರಾಯ್‌ ಆಗಿ ಭಾರತಕ್ಕೆ ಬಂದನು. 14 ಜೂನ್‌ 1945 ರಂದು ವೆವೆಲ್‌ ಭಾರತದ ಸಂವಿಧಾನ ರಚಿಸುವ ಕುರಿತು ಭಾರತೀಯರನ್ನು ಉದ್ದೇಶಿಸಿ ರೇಡಿಯೋ ಭಾಷಣ ಮಾಡಿದನು. ಮತ್ತು ಇದೇ ವಿಷಯವನ್ನು ಕುರಿತು ಬ್ರಿಟನ್ ನ ಸೆಕ್ರೆಟರಿ ಆಫ್‌ ಸ್ಟೇಟ್‌ ಹೌಸ್‌ ಆಫ್‌ ಕಾಮನ್ಸ್‌ ನಲ್ಲಿ ಭಾಷಣ ಮಾಡಿದನು. 1945 ಜೂನ್‌ 25 ರಿಂದ ಜುಲೈ 14 ರ ವರೆಗೆ ಶಿಮ್ಲಾದಲ್ಲಿ ಸರ್ವಪಕ್ಷಗಳ ಸಮ್ಮೇಳನ ನಡೆಯಿತು. ಆದರೆ ವೆವಲ್ ಯೋಜನೆಯನ್ನು ಜಿನ್ನಾನ ನೇತೃತ್ವದಲ್ಲಿ ಮುಸ್ಲಿಂ ಲೀಗ್ ತಿರಸ್ಕರಿಸಿತು.

1945 ಫೆಬ್ರವರಿ 8 ರಂದು ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲಿಯವರು ಭಾರತೀಯರ ಸಮಸ್ಯೆ ಬಗೆಹರಿಸಲು ಲಾರೆನ್ಸ್, ಸ್ಟ್ಯಾಫರ್ಡ್ ಕ್ರಿಪ್ಸ್ ಮತ್ತು ಎ.ವಿ ಅಲೆಕ್ಸಾಂಡರ್ ಈ ಮೂರು ಜನ ಸದಸ್ಯರನ್ನೊಳಗೊಂಡ ಕ್ಯಾಬಿನೆಟ್ ಮಿಷನ್ ರಚಿಸಿ ಭಾರತಕ್ಕೆ ಕಳುಹಿಸಿದರು.

1946 ಕ್ಯಾಬಿನೆಟ್‌ ಆಯೋಗ

2ನೇ ಮಹಾಯುದ್ಧದ ನಂತರ ಬ್ರಿಟನ್‌ ನಲ್ಲಿ ಲೇಬರ್‌ ಪಾರ್ಟಿಯು ಅಧಿಕಾರಕ್ಕೆ ಬಂದಿತು. ಈ ಪಕ್ಷವು ಭಾರತಕ್ಕೆ ಸ್ವಾತಂತ್ರ್ಯ ನೀಡಲು ಭಾರತಕ್ಕೆ ಒಂದು ನಿಯೋಗವನ್ನು ಕಳುಹಿಸಿತು. ಲಾರ್ಡ್‌ ಪೆಥಿಕ್‌ ಲಾರೆನ್ಸ್‌ (ರಾಜ್ಯ ಕಾರ್ಯದರ್ಶಿ), ಸ್ಟಾಫೋರ್ಡ್‌ ಕ್ರಿಪ್ಸ್‌ (ವಾಣಿಜ್ಯ ಮಂಡಳಿಯ ಅಧ್ಯಕ್ಷ) ಮತ್ತು ಎ ವಿ ಅಲೆಗ್ಸಾಂಡರ್‌ (ನೌಕಾಪಡೆಯ ಕ್ಯಾಪ್ಟನ್‌) ಈ ಆಯೋಗದ ಸದಸ್ಯರಾಗಿದ್ದರು.

ಈ ಕ್ಯಾಬಿನೆಟ್ 1946 ಮೆ 16 ರಂದು ತನ್ನ ಯೋಜನೆ ಪ್ರಕಟಿಸಿತು. ಕ್ಯಾಬಿನೆಟ್ ಮಿಷನ್ ಯೋಜನೆಯಂತೆ 1946 ಸೆಪ್ಟೆಂಬರ್ ರಂದು ನೆಹರು 12 ಜನ ಸದಸ್ಯರನ್ನೊಳಗೊಂಡ ತಾತ್ಕಾಲಿಕ ಸರ್ಕಾರ ರಚಿಸಿದರು.

1947 ಜುಲೈ 4 ಭಾರತ ಸ್ವಾತಂತ್ರ್ಯ ಕಾಯ್ದೆ

ಭಾರತಕ್ಕೆ ಸ್ವಾತಂತ್ರ್ಯ ನೀಡಲು 1947 ಮಾರ್ಚ್‌ ನಲ್ಲಿ ಲಾರ್ಡ್‌ ಮೌಂಟ್‌ ಬ್ಯಾಟನ್‌ ಭಾರತಕ್ಕೆ ಆಗಮಿಸಿದನು. ಮೌಂಟ್‌ ಬ್ಯಾಟನ್‌ 3 ಜೂನ್‌ 1947 ರಂದು ಭಾರತ ವಿಭಜನೆಯ ಸೂತ್ರವನ್ನು ಸರ್ವಪಕ್ಷಗಳ ಮುಂದೆ ಇರಿಸಿ ದೇಶ ವಿಭಜನೆಯನ್ನು ಅಧಿಕೃತವಾಗಿ ಘೋಷಿಸಿದನು. ಇದನ್ನು ಜೂನ್‌ ಪ್ಲಾನ್‌ ಎನ್ನುವರು. 

ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಯನ್ನು ನಿರ್ಧರಿಸಲು ಸರ್‌ ರ್ಯಾಡ್‌ಕ್ಲಿಫ್‌ ಅವರನ್ನು ನೇಮಿಸಲಾಯಿತು. ದೇಶ ವಿಭಜನೆಯ ನಂತರ ದೇಶೀಯ ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ಥಾನದಲ್ಲಿ ವಿಲೀನವಾಗಲು ಸ್ವಾತಂತ್ರ್ಯವಿತ್ತು.

ಭಾರತಕ್ಕೆ ಆಗಸ್ಟ್‌ 15 ರಂದು ಸ್ವಾತಂತ್ರ್ಯ ನೀಡಲಾಯಿತು. ಸ್ವತಂತ್ರ ಭಾರತದ ಮೊದಲ ಗವರ್ನರ್‌ ಜನರಲ್‌ ಆಗಿ ಲಾರ್ಡ್‌ ಮೌಂಟ್‌ ಬ್ಯಾಟನ್‌ 6 ಜೂನ್‌ 1948 ರ ವರೆಗೆ ಅಧಿಕಾರ ವಹಿಸಿಕೊಂಡನು. ನಂತರ ಚಕ್ರವರ್ತಿ ರಾಜಗೋಪಾಲಚಾರಿ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್‌ ಜನರಲ್‌ ಆಗಿ ನೇಮಕವಾದರು. 

ಭಾರತದಲ್ಲಿ ವೈಸ್ರಾಯ್ ಹುದ್ದೆ ರದ್ಧಾಗಿ ಪ್ರಾಂತ್ಯಗಳಲ್ಲಿ ಗವರ್ನರ್ ಜನರಲ್ ನೇಮಕಕ್ಕೆ ಅವಕಾಶ ನೀಡಲಾಯಿತು.

1950 ಜನವರಿ 26 ರಂದು ಭಾರತ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಯಿತು. 1951-52 ರಲ್ಲಿ ದೇಶದ ಮೊದಲ ಸಾರ್ವತ್ರಿಕ‌ ಚುನಾವಣೆಗಳು ನಡೆದು ನೆಹರು ಅವರ ನೇತೃತ್ವದಲ್ಲಿ ಮೊದಲ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು.

ಕಾಮೆಂಟ್‌ಗಳು