ಬಹಮನಿ ಸುಲ್ತಾನರು (1347-1527)
ಬಹಮನಿ ಸುಲ್ತಾನರು (1347-1527)
ಅಲ್ಲಾವುದ್ದೀನ್ ಹಸನ್ ಬಹಮನ್ ಷಾ (1347-1358)
ಅಲ್ಲಾವುದ್ದೀನ್ ಹಸನ್ ಬಹಮನ್ ಷಾ (ಜಾಫರ್ ಖಾನ್) ಈ ಸಾಮ್ರಾಜ್ಯದ ಸ್ಥಾಪಕ. ಇವನು ಮೂಲತಃ ಇರಾನಿನವನು.
ಮೊದಲಿಗೆ ಅಶನಾಬಾದ್ (ಕಲ್ಬುರ್ಗಿ) ಇವರ ರಾಜಧಾನಿಯಾಗಿತ್ತು. ನಂತರ ಮುಹಮ್ಮದಾಬಾದ್ (ಬೀದರ್) ಇವರ ರಾಜಧಾನಿಯಾಯಿತು.
1356 ರಲ್ಲಿ ಬಾಗ್ದಾದಿನ ಖಲೀಫ್ ಅಲ್ಲಾವುದ್ದೀನ್ ಹಸನ್ ಬಹಮನ್ ಷಾ ನನ್ನು ಸುಲ್ತಾನ್ ಎಂದು ಅಧಿಕೃತವಾಗಿ ಘೋಷಿಸಿದನು.
ಇವನಿಗೆ ಖಾನ್ ಮತ್ತು ಮಲೀಕ್ ಎಂಬ ಬಿರುದುಗಳಿದ್ದವು
1ನೇ ಮಹ್ಮದ್ ಷಾ (1358-1375)
ವಾರಂಗಲ್ನ ಕಾಪಯ್ಯನಾಯಕನನ್ನು ಸೋಲಿಸಿ ಗೋಲ್ಕೊಂಡಾ ಕೋಟೆಯನ್ನು ವಶಪಡಿಸಿಕೊಂಡನು.
1366 ರ ಸಿರಗುಪ್ಪ ಕದನದಲ್ಲಿ 1ನೇ ಬುಕ್ಕರಾಯನನ್ನು ಸೋಲಿಸಿದನು.
1367 ರಲ್ಲಿ ಕಲ್ಬುರ್ಗಿಯಲ್ಲಿ ಜಾಮಿಯಾ ಮಸೀದಿಯನ್ನು ನಿರ್ಮಿಸಿದನು
ಫಿರೋಜ್ ಷಾ (1397-1422)
ಭೀಮಾ ನದಿಯ ತೀರದಲ್ಲಿ ಫಿರೋಜಾಬಾದ್ ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದನು.
ದೌಲತಾಬಾದ್ ನಲ್ಲಿ ಖಗೋಳ ವೀಕ್ಷಣಾಲಯವನ್ನು ಕಟ್ಟಿಸಿದನು.
ಮಹಾರಾಷ್ಟ್ರದ ದೌಲತಾಬಾದ್ ನಲ್ಲಿ ಚಾಂದ್ ಮಿನಾರ್ ಅನ್ನು ನಿರ್ಮಿಸಿದನು.
ಖುರಾನ್ ಅನ್ನು ಪ್ರತಿ ಮಾಡಿಸಿ ಅದರಿಂದ ಬಂದ ಹಣದಿಂದ ಸರಳ ಜೀವನ ನಡೆಸುತ್ತಿದ್ದನು
ಕೊಂಕಣ ತೀರದಲ್ಲಿ ಗೋವಾದ ಬಳಿ ಚೌಲ್ ಮತ್ತು ದಾಬೋರ್ ಬಂದರು ಪ್ರದೇಶಗಳನ್ನು ಅಭಿವೃದ್ಧಿಗೊಳಿಸಿದನು.
1406 ರಲ್ಲಿ 1ನೇ ಬುಕ್ಕರಾಯ ಇವನ ಸಾಮ್ರಾಜ್ಯದಲ್ಲಿದ್ದ ಅಕ್ಕಸಾಲಿಗನ ಮಗಳನ್ನು ವಿವಾಹವಾಗಲು ಬಯಸಿದಾಗ ಯುದ್ದವಾಗಿ ಇವನು ಬುಕ್ಕರಾಯನಿಗೆ ಶರಣಾದನು.
1ನೇ ಅಹ್ಮದ್ ಷಾ ವಲಿ (1422-1436)
ಇವನ ಕಾಲದಲ್ಲಿ ರಾಜಧಾನಿಯು ಕಲ್ಬುರ್ಗಿಯಿಂದ ಬೀದರ್ ಗೆ ಬದಲಾಯಿತು
ಬೀದರ್ ನಲ್ಲಿ ಪ್ರಸಿದ್ಧ ತಖತ್ ಮಹಲ್ ಮತ್ತು ಸೋಲಹ್ ಕಂಬ ಮಸೀದಿಗಳನ್ನು ನಿರ್ಮಿಸಿದನು
ಇವನ ಆಸ್ಥಾನದಲ್ಲಿದ್ದ ಕವಿ ಅಜರಿಯು ಬಹಮನ್ ನಾಮಾ ಎಂಬ ಇತಿಹಾಸ ಕೃತಿಯನ್ನು ಬರೆದನು
ಸೂಫಿ ಸಂತ ಗೇಸುದರಾಜ್ ನ ಅನುಯಾಯಿಯಾಗಿದ್ದ ಇವನಿಗೆ ವಲೀ (ಸಂತ) ಎಂಬ ಬಿರುದಿತ್ತು
ಸಾಮ್ರಾಜ್ಯದಲ್ಲಿ ಸುನ್ನಿ ಮತ್ತು ಷಿಯಾ ಎಂಬ 2 ವರ್ಗಗಳಿದ್ದವು. ಸುನ್ನಿಗಳು ದಖ್ಖನ್ನಿನ (ದಕ್ಷಿಣ ಭಾರತ) ಶ್ರೀಮಂತ ವರ್ಗದವರಾಗಿದ್ದರು ಮತ್ತು ಷಿಯಾಗಳು ವಿದೇಶಿ ಮುಸ್ಲಿಂ ಶ್ರೀಮಂತರಾಗಿದ್ದರು. ಷಿಯಾಗಳನ್ನು ಪರ್ದೇಶಿಗಳೆಂದು ಕರೆಯುತ್ತಿದ್ದರು.
ಇವನ ಕಾಲದಲ್ಲಿ ಸುನ್ನಿ ಮತ್ತು ಷಿಯಾಗಳ ಮಧ್ಯೆ ಅಂತಃಕಲಹ ಪ್ರಾರಂಭವಾಯಿತು. ಅದಕ್ಕೆ ಕಾರಣ ಸುಲ್ತಾನನು ವಿದೇಶಿಯರಾದ ಷಿಯಾಗಳಿಗೆ ಪ್ರಾತಿನಿಧ್ಯ ನೀಡುತ್ತಿದ್ದನು. ಮುಂದೆ ಇದೇ ಕಾರಣ ಬಹಮನಿ ಸಾಮ್ರಾಜ್ಯ 5 ಭಾಗಗಳಾಗಿ ಒಡೆದು ಹೋಗಲು ನಾಂದಿಯಾಯಿತು.
2ನೇ ಅಲ್ಲಾವುದ್ದೀನ್ ಅಹ್ಮದ್ (1436-1458)
ಬೀದರ್ ನಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದನು. ದಖ್ಖನ್ ಶ್ರೀಮಂತರಾದ ಸುನ್ನಿಗಳ ಪ್ರೇರಣೆಯಿಂದ ವಿದೇಶಿ ಮುಸ್ಲಿಂರಾದ ಷಿಯಾಗಳನ್ನು ಕೊಲೆ ಮಾಡಿಸಿದನು. ಈ ಘಟನೆಯನ್ನು ಚಾಕನ್ ದುರಂತ ಎನ್ನುವರು
ಅಲ್ಲಾವುದ್ದೀನ್ ಹುಮಾಯೂನ್ ಬಹಮನ್ ಷಾ
(1458-1461)
ಅತ್ಯಂತ ಕ್ರೂರಿ ಆಡಳಿತಗಾರನಾದ ಇವನನ್ನು ಇತಿಹಾಸಕಾರ ಫೆರಿಸ್ತಾ ಜಾಲಿಂ ಎಂದು ಕರೆದಿದ್ದಾನೆ
ಇವನು ಅಸಮರ್ಥ ಆಡಳಿತಗಾರನಾದ ಕಾರಣ ಇವನ ಪತ್ನಿ ನರ್ಗಿಸ್ ಬೇಗಂ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸಿದಳು
ಮಹ್ಮದ್ ಗವಾನ್ ಇವನ ಕಾಲದಲ್ಲಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದನು. ಗವಾನ್ ಮೂಲತಃ ಪರ್ಷಿಯಾದವನು.
ಮಹ್ಮದ್ ಗವಾನ್ 1472 ರಲ್ಲಿ ಬೀದರ್ ನಲ್ಲಿ ಮದರಸಾವನ್ನು ಕಟ್ಟಿಸಿದನು.
ರಿಯಾನ್ ಉಲ್ ಇನ್ ಷಾ, ಮನ್ಚಿಯಲ್ ಇನ್ ಷಾ, ದಿವಾನ್ ಇ ಅಶ್ರಾ (ಆಷರ್) ಮತ್ತು ಕೌಜತ್ ಉಲ್ ಇನ್ ಷಾ ಇವು ಮಹ್ಮದ್ ಗವಾನನ ಕೃತಿಗಳು
ಮಹ್ಮದ್ ಗವಾನನ ಕಂದಾಯ ಮತ್ತು ಹಣಕಾಸಿನ ನೀತಿಗಳೇ ಮುಂದೆ ತೋದರಮಲ್ಲನಿಗೆ ಮಾದರಿಯಾದವು ಎನ್ನಲಾಗಿದೆ.
3ನೇ ಮಹ್ಮದ್ ಷಾ ಲಷ್ಕರಿ (1463 – 1482)
ರಷ್ಯಾದ ಪ್ರವಾಸಿ ನಿಕೇಟಿನ್ ಇವನ ಕಾಲದಲ್ಲಿ ಬಹಮನಿ ಸಾಮ್ರಾಜ್ಯ ಮತ್ತು ವಿಜಯನಗರ ಸಾಮ್ರಾಜ್ಯಗಳೆರಡಕ್ಕೂ ಭೇಟಿ ನೀಡಿದ್ದನು.
ಖಲೀಮ್ ಅಲ್ಲಾ ಷಾ ಬಹಮನಿ ಸಾಮ್ರಾಜ್ಯದ ಕೊನೆಯ ಅರಸನಾಗಿದ್ದು ಇವನು 1525-1527 ರವರೆಗೆ ಆಳ್ವಿಕೆ ನಡೆಸಿದನು
ಹೊನ್ನು ಎಂಬ ಚಿನ್ನದ ನಾಣ್ಯ, ಲಾರಿ, ಟಂಕ ಎಂಬ ಬೆಳ್ಳಿಯ ನಾಣ್ಯಗಳು ಇವರ ಕಾಲದ ನಾಣ್ಯಗಳಾಗಿದ್ದವು.
ಸಾಹಿತ್ಯ
ಇಸಾಮಿಯ - ಪುತುಹಸ್ ಸುಲ್ತಾನ್ ಸಯ್ಯದ್
ಮಿರಾನ್ – ಖುಷ್ ನಾಮಾ ಮತ್ತು ಖುಷ್ ನಾಗಜ್
ಅದಾರಿ - ಬಹುನಾಮ
ಮುಲ್ಲಾ ನಸ್ರತಿ – ಅಲಿನಾಮ
ಫೆರಿಸ್ತಾ - ತಾರೀಖ್ ಇ ಫೆರಿಸ್ತಾ
ಬಹಮನಿ ಸುಲ್ತಾನರ ಕಾಲದಲ್ಲಿ ವಿಶಿಷ್ಟವಾದ ಬಿದರಿ ಕಲೆ ಬೆಳೆದು ಬಂದಿತು.
1518 ರಲ್ಲಿ ಬಹಮನಿ ಸಾಮ್ರಾಜ್ಯವು 5 ಭಾಗಗಳಾಗಿ ವಿಭಜನೆಯಾಯಿತು
ವಿಜಯಪುರ – ಆದಿಲ್ ಷಾಹಿ (ಯೂಸುಫ್ ಆದಿಲ್ ಷಾ)
ಅಹ್ಮದ್ ನಗರ - ನಿಜಾಂ ಷಾಹಿ (ಮಲಿಕ್ ಅಹ್ಮದ್)
ಬಿರಾರ್ – ಇಮಾದ್ ಷಾಹಿ (ಇಮಾದ್ ಉಲ್ ಮುಲ್ಕ್)
ಬೀದರ್ - ಬರೀದ್ ಷಾಹಿ (ಅಲಿ ಬರೀದ್/ಅಮೀರ್ ಅಲಿ)
ಗೋಲ್ಕೊಂಡ – ಕುತುಬ್ ಷಾಹಿ (ಕುತುಬ್ ಉಲ್ ಮುಲ್ಕ್/ಕುಲಿ ಕುತುಬ್ ಷಾ)
ವಿಜಯಪುರ – ಆದಿಲ್ ಷಾಹಿ
ಯೂಸುಫ್ ಆದಿಲ್ ಷಾ (1489-1510)
ಆದಿಲ್ ಷಾಹಿ ಮನೆತನದ ಸ್ಥಾಪಕ. ಇವನ ಕಾಲದಲ್ಲಿ ಪೋರ್ಚುಗೀಸರು ಭಾರತಕ್ಕೆ ಕಾಲಿರಿಸಿದರು.
1510 ರಲ್ಲಿ ಪೋರ್ಚುಗೀಸ್ ವೈಸ್ರಾಯ್ ಆಲ್ಫಾನ್ಸೋ ಡಿ ಅಲ್ಬುಕರ್ಕ್ ಕೃಷ್ಣದೇವರಾಯನ ನೆರವಿನಿಂದ ಯೂಸುಫ್ ಆದಿಲ್ ಷಾ ನೊಡನೆ ಹೋರಾಡಿ ಗೋವಾವನ್ನು ವಶಪಡಿಸಿಕೊಂಡನು.
1ನೇ ಇಬ್ರಾಹಿಂ ಆದಿಲ್ ಷಾ (1534-1558)
ಅದುವರೆಗೆ ಆಡಳಿತ ಭಾಷೆಯಾಗಿದ್ದ ಪರ್ಷಿಯನ್ ಭಾಷೆಯ ಬದಲಾಗಿ ಉರ್ದು ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದನು.
1ನೇ ಅಲಿ ಆದಿಲ್ ಷಾ (1558-1580)
ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ರಕ್ಕಸ ತಂಗಡಗಿ ಕದನದಲ್ಲಿ ಆದಿಲ್ ಷಾಹಿ ಮನೆತನದ ಪರವಾಗಿ ಭಾಗಿಯಾಗಿದ್ದ ಸುಲ್ತಾನ
ಅಹ್ಮದ್ ನಗರದ ನಿಜಾಂ ಷಾಹಿ ಮತ್ತು ವಿಜಯಪುರ ಆದಿಲ್ ಷಾಹಿಗಳು ಇವನ ಕಾಲದಲ್ಲಿ ಒಂದಾದವು
2ನೇ ಇಬ್ರಾಹಿಂ ಆದಿಲ್ ಷಾ (1580-1627)
ಮರಾಠಿ ಮತ್ತು ಕನ್ನಡ ಭಾಷೆಗಳನ್ನು ಆಡಳಿತ ಭಾಷೆಗಳಾಗಿ ಜಾರಿಗೆ ತಂದನು.
ಇಬ್ರಾಹಿಂ ಆದಿಲ್ ಷಾ ಧಾರ್ಮಿಕ ಸಾಮರಸ್ಯ ಮನೋಭಾವದ ಸುಲ್ತಾನಾಗಿದ್ದನು. ಇವನು ತನ್ನ ಕಿತಾಬ್ ಎ ನವರಸ್ ಗ್ರಂಥದಲ್ಲಿ ಸರಸ್ವತಿ, ಗಣೇಶ ಮತ್ತು ನರಸಿಂಹನ ಸ್ತುತಿಯನ್ನು ಮಾಡಿದ್ದಾನೆ.
ಮಹೀಪತಿ ದಾಸರ ಪ್ರವಚನಕ್ಕೆ ಮಾರುಹೋಗಿ ಅವರನ್ನು ಆಸ್ಥಾನದಲ್ಲಿರಿಸಿಕೊಂಡಿದ್ದನು
ಇವನಿಗೆ ಜಗದ್ಗುರು ಬಾದ್ ಷಾ ಮತ್ತು ಮುಲ್ಕ್ ಮೈದಾನ್ ತೋಫ್ (ಯುದ್ಧ ಭೂಮಿಯ ಒಡೆಯ) ಎಂಬ ಬಿರುದುಗಳಿದ್ದವು.
ವಿಜಯಪುರದಲ್ಲಿ ಇಬ್ರಾಹಿಂ ರೋಜಾವನ್ನು ಕಟ್ಟಿಸಿದನು. ಇದನ್ನು ದಕ್ಷಿಣ ಭಾರತದ ತಾಜ್ ಮಹಲ್ ಎನ್ನುವರು. ಇದು ಭಾರತದಲ್ಲಿರುವ ಏಕೈಕ ರೋಜಾ ಆಗಿದೆ.
1ನೇ ಮಹ್ಮದ್ ಆದಿಲ್ ಷಾ (1627-1656)
ಇವನು ವಿಜಯಪುರದಲ್ಲಿ ಗೋಲ್ ಗುಂಬಜ್ (ಗೋಳ ಗುಮ್ಮಟ) ಅನ್ನು ನಿರ್ಮಿಸಿದನು. ಪಿಸುಮಾತಿನ ಗೋಪುರ ಹೊಂದಿರುವ ಇದು ಭಾರತದ ಅತಿದೊಡ್ಡ ಗುಮ್ಮಟವಾಗಿದೆ. ಗೋಳ ಗುಮ್ಮಟದ ಶಿಲ್ಪಿ ಮಲ್ಲಿಕ್ ಸಂದಲ್. ಈ ಸ್ಮಾರಕವು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿದೆ.
ಅಲ್ಲದೇ ಆದಿಲ್ ಷಾ ನು ಜುಮ್ಮಾ ಮಸೀದ್, ಸಾದರ್ ಮಹಲ್ ಮತ್ತು ಅಸಾರ್ ಮಹಲ್ ಗಳನ್ನು ನಿರ್ಮಿಸಿದನು.
ಆದಿಲ್ ಷಾ ನು ವಾಜಿಯ ತಂದೆ ಷಹಾಜಿ ಭೋಂಸ್ಲೆಗೆ ಬೆಂಗಳೂರನ್ನು ಜಹಗೀರಾಗಿ ನೀಡಿದನು
ಷಿಯಾ ವಂಶಸ್ಥನಾದ ಆದಿಲ್ ಷಾ ನ ಮೇಲೆ ಸುನ್ನಿ ವಂಶಸ್ಥನಾದ ಮೊಘಲ್ ಅರಸ ಷಹಜಹಾನ್ ದಾಳಿ ಮಾಡಿದನು. ಆದಿಲ್ ಷಾನನ್ನು ಸುನ್ನಿಯಾಗಿ ಪರಿವರ್ತಿಸುವುದೇ ಈ ದಾಳಿಯ ಕಾರಣವಾಗಿತ್ತು.
ಈ ವಂಶದ ಕೊನೆಯ ಸುಲ್ತಾನ ಸಿಕಂದರ್ ಆದಿಲ್ ಷಾ. 1686 ರಲ್ಲಿ ಔರಂಗಜೇಬ್ ದಾಳಿ ಮಾಡಿ ವಿಜಯಪುರವನ್ನು ಮೊಘಲ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ