ಮರಾಠರು (1627-1818)

 ಮರಾಠರು (1627-1818)

ಶಿವಾಜಿ (1627-1680)

ಶಿವಾಜಿಯು 1627 ರಲ್ಲಿ ಶಿವನೇರುದುರ್ಗದಲ್ಲಿ ಜನಿಸಿದನು. ತಂದೆ ಷಹಾಜಿ ಭೋಂಸ್ಲೆ ಮತ್ತು ತಾಯಿ ಜೀಜಾಬಾಯಿ.

ದಾದಾಜಿ ಕೊಂಡದೇವ ಎಂಬಾತನು ಶಿವಾಜಿಗೆ ಶಸ್ತ್ರ ವಿದ್ಯೆಗಳನ್ನು ಕಲಿಸಿಕೊಟ್ಟ ಗುರುವಾಗಿದ್ದನು. ಸಮರ್ಥ ರಾಮದಾಸರು ಶಿವಾಜಿಯ ಅಧ್ಯಾತ್ಮದ ಗುರುಗಳಾಗಿದ್ದರು.

ಬುಡಕಟ್ಟು ಜನರಾದ ಮಾಳ್ವರನ್ನು ಬಳಸಿಕೊಂಡು ಸೈನ್ಯವನ್ನು ಕಟ್ಟಿ ಗೆರಿಲ್ಲಾ ಯುದ್ಧ ತಂತ್ರವನ್ನು ಬಳಸಿ ಮೊಘಲರ ವಿರುದ್ಧ ಹೋರಾಡುತ್ತಿದ್ದನು. ಗೆರಿಲ್ಲಾ ಯುದ್ಧ ತಂತ್ರವನ್ನು ಶಿವಾಜಿಯು ಅಹ್ಮದ್ ನಗರದ ಅಂಬರ್ ಮಲಿಕ್ ಎಂಬ ಸುಲ್ತಾನನಿಂದ ಕಲಿತಿದ್ದನು.

ಬಿಜಾಪುರದ ಸುಲ್ತಾನ ಶಿವಾಜಿಯ ತಂದೆಯನ್ನು ಬಂಧಿಸಿದಾಗ ತನ್ನ ತಂದೆಯನ್ನು ಬಿಡಿಸಲು ಶಿವಾಜಿ ಕೊಂಡಾಣಾ ಕೋಟೆಯನ್ನು ಬಿಟ್ಟುಕೊಟ್ಟನು.

ಶಿವಾಜಿ ವಶಪಡಿಸಿಕೊಂಡ ಮೊದಲ ಕೋಟೆ ತೋರಣದುರ್ಗ. ನಂತರ ರಾಯಘಡಸಿಂಹಘಡಚಾಕಣ ಮತ್ತು ಬಿಜಾಪುರ ಸುಲ್ತಾನರ ಅಧೀನದಲ್ಲಿದ್ದ ಪುರಂದರಘಡ ಕೋಟೆಗಳನ್ನು ವಶಪಡಿಸಿಕೊಂಡನು

1659 ರಲ್ಲಿ ಬಿಜಾಪುರ ಸುಲ್ತಾನ ಅಲಿ ಆದಿಲ್ ಷಾಹಿಯ ಸೇನಾಪತಿ ಅಫ್ಜಲ್ ಖಾನ್ ಶಿವಾಜಿಯನ್ನು ಕೊಲ್ಲು ಬಂದು ತಾನೇ ಹತನಾದನು.

1660 ರಲ್ಲಿ ಔರಂಗಜೇಬನ ಸೇನಾಪತಿ ಶಯಿಸ್ತಾಖಾನ್ ಶಿವಾಜಿಯ ಮೇಲೆ ಯುದ್ದ ಸಾರಿದನು ಆದರೆ ಶಿವಾಜಿಯ ಹಠಾತ್ ದಾಳಿಯಿಂದ ಹೆದರಿ ಫಲಾಯನವಾದನು

1664 ರಲ್ಲಿ ಔರಂಗಜೇಬ್ ನ ಆಣತಿಯಂತೆ ರಾಜಾ ಜೈಸಿಂಗ್ ಶಿವಾಜಿಯನ್ನು ಸೋಲಿಸಿದಾಗ ಶಿವಾಜಿ ಜೈಸಿಂಗ್ ನೊಂದಿಗೆ ಪುರಂದರ ಘಡ ಒಪ್ಪಂದವನ್ನು ಮಾಡಿಕೊಂಡನು. ಔರಂಗಜೇಬನು ಶಿವಾಜಿಗೆ ರಾಜಾ ಎಂಬ ಬಿರುದು ನೀಡಿದನು

1672 ರಲ್ಲಿ ಶಿವಾಜಿಯು ಸಾಲ್ಹೇರ್ ಕದನದಲ್ಲಿ ಮೊಘಲರನ್ನು ಸೋಲಿಸಿದನು

1674 ಜೂನ್ 16 ರಂದು ಶಿವಾಜಿಯು ರಾಯಘಡದಲ್ಲಿ ಛತ್ರಪತಿ ಎಂಬ ಬಿರುದು ಧರಿಸಿ ಸಿಂಹಾಸನವೇರಿಸದನು.

ಮೈಸೂರು ಸಂಸ್ಥಾನದ ಬಳ್ಳಾರಿಚಿತ್ತೂರುಅರ್ಕಾಟ್ ಜಿಲ್ಲೆಗಳು ಶಿವಾಜಿಯ ವಶದಲ್ಲಿದ್ದವು

ಶಿವಾಜಿ 1680 ಏಪ್ರಿಲ್ 4 ರಂದು ಮೃತನಾದನು. ಇವನ ಸಮಾಧಿಯು ರಾಯಗಡದಲ್ಲಿದೆ

ಶಿವಾಜಿಯ ಆಡಳಿತ

ಶಿವಾಜಿಯು ತನ್ನ ರಾಜ್ಯವನ್ನು ಸುಭಾ (ಸುಭಾವನ್ನು ಮಹಲ್ ಅಥವಾ ಪರ್ಗಣ್ ಎಂತಲೂ ಕರೆಯಲಾಗುತ್ತಿತ್ತು)ತರಫ್ ಮತ್ತು ಪೌಜುಗಳಾಗಿ ವಿಂಗಡಿಸಿದ್ದನು.

ಆಡಳಿತ ಅನುಕೂಲಕ್ಕಾಗಿ ಅಷ್ಟಪ್ರಧಾನರೆಂಬ ಆಡಳಿತ ವರ್ಗವನ್ನು ಹೊಂದಿದ್ದನು.

ಪೇಶ್ವೆ - ಪ್ರಧಾನಿ

ಅಮಾತ್ಯ - ಹಣಕಾಸು

ಮಂತ್ರಿ  ರಾಜನ ದೈನಂದಿನ ವ್ಯವಹಾರ

ಸಚಿವ - ಲೆಕ್ಕ ಪತ್ರ ವ್ಯವಹಾರ

ಪಂಡಿತರಾವ್  ಮುಖ್ಯ ಪುರೋಹಿತ

ಸುಮಂತ - ಹಣಕಾಸು ಮಂತ್ರಿ

ನ್ಯಾಯಾಧೀಶ - ನ್ಯಾಯ ಪ್ರಧಾತ

ಸರನೋಭತ್ತ - ಸೇನಾಪತಿ

ಬಾಗೀರ್ - ಸರ್ಕಾರದ ಅಶ್ವದಳಕ್ಕೆ ಅಧಿಪತಿಯಾಗಿದ್ದವರು

ಸಿಲ್ದಾದಾರ್  ತಾವೇ ಸ್ವತಃ ಅಶ್ವದಳವನ್ನು ಹೊಂದಿ ಅರಸನಿಗೆ ಯುದ್ಧದಲ್ಲಿ ನೆರವಾಗುತ್ತಿದ್ದವರು

ಶಿವಾಜಿಯ ಸಾಮ್ರಾಜ್ಯದಲ್ಲಿ ನೇರ ಆಡಳಿತಕ್ಕೊಳಪಟ್ಟ ಸ್ವರಾಜ್ಯ (ಮುಲ್ಕ್ ಇ ಕದೀಮ್) ಮತ್ತು ಚೌತ್ ಎಂಬ ಆಶ್ರಿತ ರಾಜ್ಯಗಳು ಇದ್ದವು.

ತನ್ನ ಅಧೀನದಲ್ಲಿದ್ದ ಪ್ರದೇಶಗಳ ಮೇಲೆ ಸರ್ ದೇಶ್ ಮುಖಿ (ಭೂಕಂದಾಯದ 1/10 ನೇ ಭಾಗ) ಮತ್ತು ಮೊಘಲ್ ಹಾಗೂ ಬಿಜಾಪುರ ಸುಲ್ತಾನರ ಪ್ರದೇಶಗಳ ಮೇಲೆ ಚೌತ್ (ಭೂಕಂದಾಯದ 1/4 ನೇ ಭಾಗ) ಎಂಬ ತೆರಿಗೆಗಳನ್ನು ವಿಧಿಸಿದ್ದನು

ಇವನ ನಂತರ ಇವನ ಮಗ ಸಂಭಾಜಿ ಸ್ವಲ್ಪ ಕಾಲ ರಾಜ್ಯವಾಳಿದನಾದರೂ ಸಂಭಾಜಿಯ ನಂತರ ಬಂದ ಸಾಹುವಿನ  ಕಾಲಕ್ಕೆ ಪೇಶ್ವೆಗಳು ಅಧಿಕಾರಕ್ಕೆ ಬಂದರು.

ಸಾಂಬಾಜಿ (1680-1689)

1689 ಫೆಬ್ರವರಿ 11 ರಂದು ಸಂಗಮೇಶ್ವರದ ಬಳಿ ನಡೆದ ಯುದ್ಧದಲ್ಲಿ ಮೊಘಲರ ಮುಕರಬ್ ಖಾನ್ ಸಾಂಬಾಜಿಯನ್ನು ಸೆರೆಹಿಡಿದನು. ನಂತರ ಔರಂಗಜೇಬನು  ಸಾಂಬಾಜಿಯನ್ನು ಕೊಲ್ಲಿಸಿದನು

ಸಾಂಬಾಜಿಯ ಮರಣ ನಂತರ 3 ನೇ ಶಿವಾಜಿ ಸಿಂಹಾಸನವೇರಿದನು. ಅವನು ಅಪ್ರಾಪ್ತನಾದ್ದರಿಂದ ತಾರಾಬಾಯಿ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದಳು

ಪೇಶ್ವೆಗಳು (1713-1818)

ಶಿವಾಜಿಯ ಕಾಲದಲ್ಲಿ ಮೋರೋಪಂತ್ ತ್ರಿಂಬಕ್ ಪಿಂಗಳೆ ಮೋದಲ ಪೇಶ್ವೆಯಾಗಿ ನೇಮಕಗೊಂಡನು. ಶಿವಾಜಿಯ ಮೊಮ್ಮಗ ಸಾಹುವಿನ ಕಾಲದಲ್ಲಿ ಪೇಶ್ವೆಯಾಗಿ ನೇಮಕವಾದ ಬಾಲಾಜಿ ವಿಶ್ವನಾಥನ ಕಾಲದಿಂದ ಪೇಶ್ವೆಗಳು ಪೂರ್ಣ ಪ್ರಮಾಣದಲ್ಲಿ ಮರಾಠ ಸಾಮ್ರಾಜ್ಯದ ಅಧಿಕಾರ ಪಡೆದರು .

ಬಾಲಾಜಿ ವಿಶ್ವನಾಥ (1714-1720)

ಸಾಹುವಿನ ಕಾಲದಲ್ಲಿ ಮೊದಲ ಪೇಶ್ವೆಯಾಗಿ ನೇಮಕಗೊಂಡನು

ಮೊಗಲ್ ಚಕ್ರವರ್ತಿ 1ನೇ ಬಹಾದ್ದೂರ್ ಷಾ ನೊಂದಿಗೆ ದೆಹಲಿ ಒಪ್ಪಂದ ಮಾಡಿಕೊಂಡನು. ಈ ಒಪ್ಪಂದದ ಪ್ರಕಾರ ದಖ್ಖನ್ ನಲ್ಲಿ ತೆರಿಗೆ ವಸೂಲಿ ಮಾಡುವ ಹಕ್ಕು ಪಡೆದನು.

ಪೇಶ್ವೆ ಹುದ್ದೆಯನ್ನು ವಂಶಪಾರಂಪರ್ಯವಾಗುವಂತೆ ಮಾಡಿದನು.

ಇವನ ಕಾಲಾವಧಿಯಲ್ಲಿ ಅಧಿಕಾರವು ರಾಜನಿಂದ ಪೇಶ್ವೆಗಳ ಕೈಗೆ ಹಸ್ಥಾಂತರವಾಯಿತು

1ನೇ ಬಾಜಿರಾವ್ (1720-1740)

ಈತನನ್ನು 2ನೇ ಶಿವಾಜಿ ಎಂದು ಕರೆಯಲಾಗುತ್ತದೆ. ಮತ್ತು ಮರಾಠ ಸಾಮ್ರಾಜ್ಯದ ದ್ವಿತೀಯ ಸಂಸ್ಥಾಪಕ ಎಂದು ಸಹ ಕರೆಯಲಾಗುತ್ತದೆ.

ಹಿಂದೂ ಪಾದಪಾದ್ ಷಾಹಿ ಸಾಮ್ರಾಜ್ಯದ ನಿರ್ಮಾಣ ಇವನ ಕನಸಾಗಿತ್ತು. 

1739 ರಲ್ಲಿ ಪೋರ್ಚುಗೀಸರ ಮೇಲೆ ದಾಳಿ ಮಾಡಿ ಸಾಲ್ಸೇಟ್ ಮತ್ತು ಬೆಸ್ಸೀನ್ ಗಳನ್ನು ವಶಪಡಿಸಿಕೊಂಡನು

1750 ರಲ್ಲಿ ಮೊಘಲರು ಮತ್ತು ಮರಾಠರ ಮಧ್ಯೆ ಆದ ಸಂಘೋಲಾ ಒಪ್ಪಂದದಂತೆ ಪೇಶ್ವೆಯನ್ನು ನಿಜವಾದ ಮರಾಠ ನಾಯಕನೆಂದು ಘೋಷಿಸಲಾಯಿತು. ಆ ಮೂಲಕ ಪೇಶ್ವೆ ಬಾಲಾಜಿ ಬಾಜಿರಾವ್ ಮರಾಠರ ಮೊದಲ ಅಧಿಕೃತ ನಾಯಕನಾದನು.

1741 ರಲ್ಲಿ ಅರ್ಕಾಟ್ ಅನ್ನು ವಶಪಡಿಸಿಕೊಳ್ಳಲಾಯಿತು.

1742 ರಲ್ಲಿ ಬುಂದೇಲ್ ಖಂಡದ ನಾಯಕರನ್ನು ಸೋಲಿಸಿ ಝಾನ್ಸಿಯನ್ನು ವಶಪಡಿಸಿಕೊಂಡನು

1752 ರಲ್ಲಿ ಹೈದ್ರಾಬಾದ್ ನ ನಿಜಾಮ ಸಲಾಬತ್ ಜಂಗ್ ನ ಮೇಲೆ ಯುದ್ಧ ಹೂಡಿ ಅವನೊಡನೆ ಬಾಲ್ಕಿ ಒಪ್ಪಂದ ಮಾಡಿಕೊಂಡನು.

1ನೇ ಬಾಜಿರಾವ್ ನ ನಂತರದ ಮರಾಠ ಸಾಮ್ರಾಜ್ಯ

1 ಗ್ವಾಲಿಯರ್ ನ ಸಿಂಧಿಯರು (ಮಧ್ಯ ಪ್ರದೇಶ)

2 ಮಾಳ್ವದ ಪವಾರರು (ಮಧ್ಯಪ್ರದೇಶ ಮತ್ತು ರಾಜಸ್ಥಾನ)

3 ಇಂದೋರ್ ನ ಹೋಳ್ಕರ್ (ಮಧ್ಯ ಪ್ರದೇಶ)

4 ನಾಗಪುರ ಭೋಂಸ್ಲೆ (ಮಹಾರಾಷ್ಟ್ರ)

5 ಬರೋಡಾದ ಗಾಯಕ್ವಾಡ್ (ಗುಜರಾತ್)

ನಾನಾ ಸಾಹೇಬ ಮತ್ತು ಬಾಲಾಜಿ ಬಾಜಿರಾವ್ 

(1740-1761)

ಬಾಲಾಜಿ ಬಾಜಿರಾವ್ 1740 ರಲ್ಲಿ ಪೇಶ್ವೆ ಹುದ್ದೆಯನ್ನು ವಂಶಪಾರಂಪರ್ಯ ಎಂದು ಘೋಷಿಸಿದ

1761 ಜನವರಿ 14 ರಂದು 3ನೇ ಪಾಣಿಪತ್ ಕದನವು ಮರಾಠರ ಮತ್ತು ಅಫ್ಘನ್ನರ ನಾಯಕ ಅಹ್ಮದ್ ಷಾ ಅಬ್ದಾಲಿ ಮಧ್ಯೆ ನಡೆಯಿತು. ಯುದ್ಧದಲ್ಲಿ ಮರಾಠ ಪೇಶ್ವೆ ಸದಾಶಿವರಾವ್ ಮತ್ತು ನಾನಾ ಸಾಹೇಬ ಮರಣಿಸಿದರು.

ನಾನಾ ಸಾಹೇಬನ ಮಗ ಮಾಧವರಾಯ 1762-72 ರ ವರೆಗೆ ಮತ್ತು ಮಾಧವರಾಯನ ಮಗ ಸವಾಯಿ ಮಾಧವರಾವ್ 1772-1795ರ ವರೆಗೆ ರಾಜ್ಯವಾಳಿದರು.

ಕೊನೆಯ ಪೇಶ್ವೆ 2ನೇ ಬಾಜಿರಾಯ 1794 ರಿಂದ 1818 ರ ವರೆಗೆ ಆಡಳಿತ ನಡೆಸಿದನು. ಇವನು ಸ್ವಾರ್ಥಿಯಾಗಿ ವಿಫಲ ಆಡಳಿತಗಾರನಾದನು. ಇವನ ಕಾಲದಲ್ಲಿ 1818 ರಲ್ಲಿ ಬ್ರಿಟೀಷರ ಗವರ್ನರ್ ಜನರಲ್ ಲಾರ್ಡ್ ಹೇಸ್ಟಿಂಗ್ಸ್ ಪೇಶ್ವೆ ಹುದ್ದೆಯನ್ನು ರದ್ದು ಮಾಡಿದನು.

ಆಂಗ್ಲೋ ಮರಾಠ ಯುದ್ದಗಳು

ಪ್ರಥಮ ಆಂಗ್ಲೋ ಮರಾಠ ಯುದ್ದ (1775-1782)

ಮರಾಠ ಸಿಂಹಾಸನ ಪಡೆಯಲು ಉಂಟಾದ ಒಳಕಲಹದಲ್ಲಿ ರಘುನಾಥರಾಯನು (ರಘೋಬ) ಸಿಂಹಾಸನ ಪಡೆಯಲು ಬ್ರಿಟೀಷರ ನೆರವು ಯಾಚಿಸಿ ಅವರೊಂದಿಗೆ 7 ಮಾರ್ಚ್ 1775 ರಂದು ಬಾಂಬೆ ಗವರ್ನರ್ ಎಲ್ಫಿನ್ ಸ್ಟೋನ್ ಜೊತೆಗೆ ಸೂರತ್ ಒಪ್ಪಂದ ಮಾಡಿಕೊಂಡನು.

ಕರ್ನಲ್ ಕೇಟಿಂಗ್ ರಘುನಾಥರಾಯನೊಡನೆ ಸೇರಿ ಮರಾಠರ ವಿರುದ್ದ ಯುದ್ಧ ಹೂಡಿದನು. ಈ ಯುದ್ದದ ಸಮಯದಲ್ಲಿ ಗವರ್ನರ್ ಜನರಲ್ ಆಗಿದ್ದವನು ವಾರ್ನ್ ಹೇಸ್ಟಿಂಗ್ಸ್. ಯುದ್ದದಲ್ಲಿ ಕೊನೆಗೆ ಯಾರಿಗೂ ಜಯ ಸಿಗದಾದಾಗ 1 ಮಾರ್ಚ್ 1776 ರಂದು ಮರಾಠರ ಮುಖಂಡತ್ವ ವಹಿಸಿದ್ದ ನಾನಾ ಫಡ್ನವೀಸ್ ಮತ್ತು ಹೇಸ್ಟಿಂಗ್ಸ್ ನ ಮಧ್ಯೆ ಪುರಂದರ ಒಪ್ಪಂದವಾಯಿತು.

ಮುಂದೆ ನಾನಾ ಫಡ್ನವೀಸ್ ತನ್ನ ಅನೇಕ ಪ್ರದೇಶಗಳನ್ನು ಮರಳಿ ಪಡೆಯುವ ಉದ್ಧೇಶದಿಂದ ಜನವರಿ 1779 ರಂದು  ಬಾಂಬೆ ಸರ್ಕಾರದೊಡನೆ ವಡಗಾವ್ ಒಪ್ಪಂದ ಮಾಡಿಕೊಂಡನು. ಆದರೆ ಈ ಒಪ್ಪಂದ ಮರಾಠರಿಗೆ ಮಾತ್ರವೇ ಅನುಕೂಲಕರವಾಗಿದೆಯೆಂದು ಗವರ್ನರ್ ಜನರಲ್ ವಾರ್ನ್ ಹೇಸ್ಟಿಂಗ್ ಒಪ್ಪದ ಕಾರಣ ಯುದ್ಧ ಮುಂದುವರೆಯಿತು.

ಕೊನೆಗೆ ಮೊದಲನೇ ಆಂಗ್ಲೋ ಮರಾಠ ಯುದ್ಧವು 1782 ಅಕ್ಟೋಬರ್ ನಲ್ಲಿ ನಡೆದ ಸಾಲ್ಬಾಯ್ ಒಪ್ಪಂದದೊಂದಿಗೆ ಕೊನೆಗೊಂಡಿತು. ಒಪ್ಪಂದದ ಪ್ರಕಾರ 2ನೇ ಮಾಧವರಾಯನನ್ನು ಪೇಶ್ವೆ ಎಂದು ಪುರಸ್ಕರಿಸಲಾಯಿತು.

ದ್ವಿತೀಯ ಆಂಗ್ಲೋ ಮರಾಠ ಯುದ್ದ (1803-1805)

ಮರಾಠರಲ್ಲಿ ಉಂಟಾದ ಒಳಜಗಳದಲ್ಲಿ 2ನೇ ಬಾಜಿರಾವ್ ಆಂಗ್ಲರ ಸಹಾಯ ಬೇಡಿ 31 ಡಿಸೆಂಬರ್ 1802 ರಂದು ಬ್ರಿಟೀಷರೊಂದಿಗೆ ಬೆಸ್ಸೀನ್ ಒಪ್ಪಂದ ಮಾಡಿಕೊಂಡನು. ಈ ಒಪ್ಪಂದ ಮೂಲಕ 2ನೇ ಬಾಜಿರಾಯನು ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ದತಿಗೆ ಸೇರ್ಪಡೆಯಾದನು.

17 ಡಿಸೆಂಬರ್ 1803 ರಲ್ಲಿ ಭೋಂಸ್ಲೆಯು ಬ್ರಿಟೀಷರೊಂದಿಗೆ ದಿಯೋಗಾವ್ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಸಹಾಯಕ ಸೈನ್ಯ ಪದ್ದತಿಗೆ ಸೇರಿದನು

30 ಡಿಸೆಂಬರ್ 1803 ರಲ್ಲಿ ಸೂರಜ್-ಅರ್ಜುನ್ ಗಾವ್ ಒಪ್ಪಂದದ ಮೂಲಕ ಸಿಂಧ್ಯಾನು ಸಹ ಸಹಾಯಕ ಸೈನ್ಯ ಪದ್ಧತಿಗೆ ಸೇರಿಕೊಂಡನು.

ಸಹಾಯಕ ಸೈನ್ಯ ಪದ್ದತಿಗೆ ಸೇರಲೊಪ್ಪದ ಹೋಳ್ಕರ್ ಬ್ರಿಟಿಷರೊಂದಿಗೆ ಕದನಕ್ಕಿಳಿದನು. ನಂತರ ಸೋತು ಬ್ರಿಟಿಷ್ ಗವರ್ನರ್ ಜನರಲ್ ಜಾರ್ಜ್ ಬಾರ್ಲೋನೊಂದಿಗೆ 25 ಡಿಸೆಂಬರ್ 1805 ರಲ್ಲಿ ರಾಜ್ಪುರ್ ಘಾಟ್ ಒಪ್ಪಂದ ಮಾಡಿಕೊಂಡನು. ದ್ವಿತೀಯ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದ ಮೂಲಕ ಮುಕ್ತಾಯವಾಯಿತು.

ತೃತೀಯ ಆಂಗ್ಲೋ ಮರಾಠ ಯುದ್ಧ (1817-1818)

ಬೆಸ್ಸಿನ್ ಒಪ್ಪಂದದ ಮೂಲಕ ಸಹಾಯಕ ಸೈನ್ಯ ಪದ್ದತಿಗೆ ಸೇರಿ ಬ್ರಿಟಿಷರ ಅಧೀನವಾಗಿದ್ದ ಬಾಜೀರಾಯನಿಗೆ ಬ್ರಿಟೀಷರ ಅಧಿನದಲ್ಲಿರುವುದನ್ನು ಸಹಿಸಲಾಗದೆ ತನ್ನ ಮಂತ್ರಿ ತ್ರಿಯಂಬಕ್ ಜೀ ಜೊತೆಗೆ ಸೇರಿ ಬ್ರಿಟೀಷರೊಂದಿಗೆ ಮಾಡಿಕೊಂಡಿದ್ದ ಬೆಸ್ಸೀನ್ ಒಪ್ಪಂದವನ್ನು ಮುರಿಯಲು ಸಿದ್ಧನಾದನು. ಸಹಾಯಕ ಸೈನ್ಯ ಪದ್ಧತಿಗೆ ಸೇರಿದ್ದು ಅವಮಾನವೆಂದು ಬಗೆದ ಇತರ ಮರಾಠ ನಾಯಕರು ಸಹ ಬಾಜಿರಾಯನೊಡನೆ ಕೈ ಜೋಡಿಸಿದರು.

ಆದರೆ ಬ್ರಿಟೀಷರಿಗೆ ಬಾಜಿರಾಯನ ಒಳಸಂಚು ಅರ್ಥವಾಗುತ್ತಿದ್ದಂತೆ ಬಾಜಿರಾಯನು ಹೆದರಿ ಬ್ರಿಟೀಷರೊಂದಿಗೆ 13 ಜೂನ್ 1817 ರಂದು ಪೂನಾ ಒಪ್ಪಂದ ಮಾಡಿಕೊಂಡನು. ಒಪ್ಪಂದದಂತೆ ಬಾಜಿರಾಯ ಪೇಶ್ವೆ ಹುದೆಯನ್ನು ತೊರೆದನು.

ಮೇಲಿಂದ ಮೇಲೆ ಆದ ಅವಮಾನಗಳನ್ನು ಸಹಿಸಲಾಗದೆ ಬಾಜಿರಾಯನು ನಾಗ್ಪುರದ ಅಪ್ಪಾಸಾಹೇಬನ ಜೊತೆ ಸೇರಿ ಬ್ರಿಟೀಷರ ವಾಸಸ್ಥಾನಗಳ ಮೇಲೆ ದಾಳಿ ಮಾಡಿ ಲೂಟಿ ಮಾಡಿದನು.

ಮರಾಠರಲ್ಲಿದ್ದ ಅಪಾರ ಜಾತಿಪದ್ದತಿ ಮತ್ತು ಊಳಿಗಮಾನ್ಯ ಪದ್ದತಿಯು ಕೆಳವರ್ಗದವರ ಶೋಷಣೆ ನಡೆಸುತ್ತಿತ್ತು. ಇದರಿಂದ ಅಪಾರ ನೋವು ಕಂಡಿದ್ದ ಕೆಳವರ್ಗದವರು ಬ್ರಿಟೀಷರ ಪರ ಸೇರಿ ಪೇಶ್ವೆಗಳ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿತು.

ಬ್ರಿಟೀಷರ ಸೇನಾಧಿಪತಿಗಳಾದ ಜಾನ್ ಮ್ಯಾಲ್ಕಮ್, ಚಾರ್ಲ್ಸ್ ನೇಪಿಯರ್ ಹಾಗೂ ಮರಾಠರ ನಡುವೆ ಅಷ್ಟಿ ಮತ್ತು ಕೋರೆಗಾವ್ ಗಳಲ್ಲಿ 18 ಜೂನ್ 1818 ರಲ್ಲಿ ಯುದ್ಧ ನಡೆಯಿತು. ಯುದ್ದದಲ್ಲಿ ಬಾಜಿರಾಯ ಮತ್ತು ಮರಾಠರುಜಾನ್ ಮ್ಯಾಲ್ಕಮ್ ನಿಗೆ ಪೂರ್ಣವಾಗಿ ಸೋತು ಶರಣಾದರು. ಈ ಯುದ್ಧದ ನಂತರ ಗವರ್ನರ್ ಜನರಲ್ ಲಾರ್ಡ್ ಹೇಸ್ಟಿಂಗ್ಸ್ ಪೇಶ್ವೆ ಸ್ಥಾನವನ್ನು ತೆಗೆದು ಹಾಕಿದನು.

ಕಾಮೆಂಟ್‌ಗಳು