ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗಳನ್ನು ಜಾರಿಗೆ ತಂದು ಹಲವಾರು ಸಂಸ್ಥಾನಗಳನ್ನು ವಶಪಡಿಸಿಕೊಂಡರು. ಬ್ರಿಟೀಷ್ ಆಡಳಿತದ ಮೇಲಿನ ಅಸಮಾಧಾನವು 1857 ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತು. 

ಈ ಪ್ರತಿಭಟನೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಸಿಪಾಯಿ ದಂಗೆ ಮಾತ್ರ ಎಂದಿದ್ದಾರೆ. ಈ ಹೋರಾಟವನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಮೊದಲ ಬಾರಿಗೆ ಕರೆದವರು ವಿ.ಡಿ ಸಾವರ್ಕರ್

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳು

ರಾಜಕೀಯ ಕಾರಣ

ಸಹಾಯಕ ಸೈನ್ಯ ಪದ್ಧತಿ (1798) ಮತ್ತು ಬ್ರಿಟೀಷರ ದತ್ತು ಮಕ್ಕಳಿಗೆ ಹಕ್ಕಿಲ್ಲ (1848) ನೀತಿಗಳು ಭಾರತೀಯರಲ್ಲಿ ಅಸಮಾಧಾನ ಉಂಟುಮಾಡಿತ್ತು.

ಜಮೀನ್ದಾರರ ಜಮೀನ್ದಾರಿ ಭೂಮಿಯನ್ನು ವಶಪಡಿಸಿಕೊಂಡಿದ್ದು ಜಮೀನ್ದಾರರ ಆರ್ಥಿಕತೆಗೆ ಮತ್ತು ಪ್ರತಿಷ್ಟತೆಗೆ ಬಿದ್ದ ಹೊಡೆತವಾಗಿತ್ತು

ಉನ್ನತ ಹುದ್ದೆಗಳು ಕೇವಲ ಬ್ರಿಟೀಷರಿಗೆ ಮಾತ್ರ ಮೀಸಲಾಗಿದ್ದವು. ಭಾರತೀಯರಿಗೆ ಉನ್ನತ ಹುದ್ದೆಗಳನ್ನು ನೀಡುತ್ತಿರಲಿಲ್ಲ.

ಆರ್ಥಿಕ ಕಾರಣ

ಬ್ರಿಟಿಷರ ಭೂಕಂದಾಯ ನೀತಿಗಳಿಂದಾಗಿ ಭಾರತೀಯ ರೈತರು ತೆರಿಗೆಗಳನ್ನು ಕಟ್ಟಿ ತಮ್ಮ ಜೀವನ ನಡೆಸುವುದೇ ಕಷ್ಟವಾಗತೊಡಗಿತು.

ಬ್ರಿಟಿಷರ ಕೈಗಾರಿಕಾ ನೀತಿಯಿಂದಾಗಿ ಭಾರತದ ಗುಡಿ ಕೈಗಾರಿಕೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು.

ಬ್ರಿಟೀಷರು ಕಡಿಮೆ ಬೆಲೆಗೆ ಭಾರತದಿಂದ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ತೆಗೆದುಕೊಂಡು ಹೋಗಿ ಬ್ರಿಟನ್ನಿನಲ್ಲಿ ಸಿದ್ಧ ವಸ್ತುಗಳನ್ನಾಗಿ ಮಾಡಿ ಮತ್ತೇ ಭಾರತಕ್ಕೆ ಆ ಸಿದ್ಧ ವಸ್ತುಗಳನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ಭಾರತೀಯರಿಗೆ ಆರ್ಥಿಕವಾಗಿ ಅಪಾರ ನಷ್ಟವಾಗುತ್ತಿತ್ತು.

ದಾದಾಬಾಯಿ ನವರೋಜಿ ಅವರ ಸಂಪತ್ತಿನ ಸೋರಿಕೆ ಸಿದ್ದಾಂತ ಪುಸ್ತಕವು ಭಾರತೀಯರಲ್ಲಿ ಬ್ರಿಟಿಷರ ಆಡಳಿತ ವಿರುದ್ಧ ದನಿ ಎತ್ತುವ ಹಾಗೆ ಮಾಡಿತು.

ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು

1829 ರಲ್ಲಿ ಸತಿಸಹಗಮನ ರದ್ಧತಿ, 1850 ರಲ್ಲಿ ಜಾರಿ ಮಾಡಿದ ಹಿಂದೂ ಉತ್ತರಾಧಿಕಾರತ್ವ ಕಾಯ್ದೆ ಮತ್ತು 1856 ರಲ್ಲಿ ಜಾರಿಯಾದ ವಿಧವಾ ಪುನರ್ವಿವಾಹ ಕಾಯ್ದೆ ಮುಂತಾದ ಕಾಯ್ದೆಗಳು ಭಾರತೀಯರ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳಿಗೆ ಪೆಟ್ಟು ನೀಡಿದವು.

ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದ್ದು.

ಭಾರತೀಯರ ಬಗ್ಗೆ ಅವಹೇಳನಕಾರಿ ಮನೋಭಾವನೆ ಹಾಗೂ ಬ್ರಿಟಿಷರು ಹಿಂದು ಧರ್ಮದ ಆಚಾರ ವಿಚಾರಗಳನ್ನು ಅವಹೇಳನ ಮಾಡಿದ್ದು ಭಾರತೀಯರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಕಾರಣವಾಯಿತು.

ಬ್ರಿಟೀಷರು ಭಾರತದಲ್ಲಿ ಪ್ರಾರಂಭಿಸಿದ ಸಾರಿಗೆ ವ್ಯವಸ್ಥೆಗಳಿಂದ ವರ್ಗಬೇಧವಿಲ್ಲದೆ ಎಲ್ಲರೂ ಒಂದೇ ವಾಹನಗಳಲ್ಲಿ ಪ್ರಯಾಣಿಸುವಂತಾಯಿತು. ಇದು ಮಡಿವಂತ ಸಮಾಜಕ್ಕೆ ಇಷ್ಟವಾಗಲಿಲ್ಲ.

ಸೈನಿಕ ಕಾರಣ

ಬ್ರಿಟಿಷ್ ಸೈನಿಕರಿಗೆ ಭಾರತೀಯ ಸೈನಿಕರಿಗಿಂತಲೂ ಹೆಚ್ಚಿನ ವೇತನವನ್ನು ನೀಡಲಾಗುತ್ತಿತ್ತು. ಭಾರತೀಯ ಸೈನಿಕರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಉನ್ನತ ಮಟ್ಟದ ಹುದ್ದೆಗಳು ದೊರೆಯುತ್ತಿರಲಿಲ್ಲ. ಅಗತ್ಯ ಬಿದ್ದಲ್ಲಿ ಭಾರತೀಯ ಸೈನಿಕರು ಬೇರೆ ದೇಶಗಳಿಗೂ ಹೋಗಿ ಯುದ್ಧ ಮಾಡಬೇಕಿತ್ತು.

ಈ ದಂಗೆಗೆ ತಕ್ಷಣ ಕಾರಣವಾದ ಅಂಶವೆಂದರೆ ಎನ್ ಫೀಲ್ಡ್ ಬಂದೂಕುಗಳ ತೋಪುಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದು. ಕಾರಣ ಈ ತೋಪುಗಳನ್ನು ಉಪಯೊಗಿಸುವ ಮೊದಲು ಅದನ್ನು ಬಾಯಿಂದ ಕಿತ್ತು ತೆಗೆಯಬೇಕಾಗಿತ್ತು. ಈ ಬಂದೂಕುಗಳನ್ನು ಮುಟ್ಟಲು ಹಿಂದೂಗಳು ಮತ್ತು ಮುಸ್ಲಿಮರು ನಿರಾಕರಿಸಿದರು. ಹಿಂದೂಗಳಿಗೆ ಹಸು ಪವಿತ್ರ ಪ್ರಾಣಿಯಾದರೆ ಮುಸ್ಲಿಮರಿಗೆ ಹಂದಿ ನಿಷಿದ್ಧ ಪ್ರಾಣಿ. ಬ್ಯಾರಕ್ ಪುರ ನಲ್ಲಿ ಸಿಪಾಯಿಯಾಗಿದ್ದ ಮಂಗಲ್ ಪಾಂಡೆ ಎಂಬ ಸೈನಿಕನು ಇದರಿಂದ ಬ್ರಿಟಿಷ್ ಅಧಿಕಾರಿ ಲೆಫ್ಟಿನೆಂಟ್ ಬಾಗ್ ನಿಗೆ ಗುಂಡು ಹಾರಿಸಿದನು. ಈ ಕೃತ್ಯಕ್ಕಾಗಿ ಮಂಗಲಪಾಂಡೆಯನ್ನು 1857 ಏಪ್ರಿಲ್ 8 ರಂದು ಗಲ್ಲಿಗೇರಿಸಲಾಯಿತು.

ಬ್ರಿಟಿಷ್ ಅಧಿಕಾರಿ ಜನರಲ್ ಹ್ಯಾವ್ ಲಾಕ್ ನು 1857 ರ ಜೂನ್ 17 ರಂದು ಕಾನ್ಫುರವನ್ನು, ಜನರಲ್ ಜಾನ್ ನಿಕೋಲ್ಸನ್ ನು 1857 ಸೆಪ್ಟೆಂಬರ್ 21 ರಂದು ದೆಹಲಿಯನ್ನು ವಶಪಡಿಸಿಕೊಂಡರು.

ಈ ಘಟನೆಯ ನಂತರ 1858 ಮೇ 10 ರಂದು ಮೀರತ್ ನಲ್ಲಿನ ಭಾರತೀಯ ಸೈನ್ಯ ದಂಗೆಯೆದ್ದು ದೆಹಲಿಯತ್ತ ಸಾಗಿ ಕೆಂಪುಕೋಟೆಯಲ್ಲಿ ಎರಡನೇ ಬಹದ್ದೂರ್ ಷಾ ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿತು. ಈ ಸೈನ್ಯದ ನಾಯಕತ್ವ ವಹಿಸಿದವನು ಕದಂ ಸಿಂಗ್.

ಆದರೆ ಕರ್ನಲ್ ಹಡ್ಸನ್ 2ನೇ ಬಹಾದ್ದೂರ್ ಷಾ ಜಾಫರ್ ನನ್ನು 1857 ಸೆಪ್ಟೆಂಬರ್ 21 ರಂದು ಸೆರೆಹಿಡಿದನು. ಹೆನ್ರಿ ರೋಲಿಸ್ ಎಂಬ ಬ್ರಿಟಿಷ್ ಅಧಿಕಾರಿ ರಾಣಿ ಲಕ್ಷ್ಮಿಬಾಯಿಯನ್ನು ಕೊಲೆ ಮಾಡಿದನು.

ದಂಗೆಯ ಸ್ಥಳಗಳು ಮತ್ತು ನಾಯಕತ್ವ

ಕಾನ್ಪುರ (ಉತ್ತರ ಪ್ರದೇಶ) - ನಾನಾಸಾಹೇಬ ಮತ್ತು ತಾತ್ಯಾಟೊಪೆ

ಬರೇಲಿ (ಉತ್ತರ ಪ್ರದೇಶ) - ಖಾನ್ ಬಹಾದ್ದೂರ್

ಲಕ್ನೋ (ಉತ್ತರ ಪ್ರದೇಶ) - ಹಜರತ್ ಬೇಗಂ

ಮಥುರಾ (ಉತ್ತರ ಪ್ರದೇಶ)  ದೇವಿಸಿಂಗ್

ಅಲಹಾಬಾದ್ (ಪ್ರಯಾಗ್ ರಾಜ್) (ಉತ್ತರ ಪ್ರದೇಶ) - ಲಿಯಾಖತ್ ಅಲಿ

ಫೈಜಾಬಾದ್ (ಉತ್ತರ ಪ್ರದೇಶ)  ಮೌಲಾಲಿ ಅಹ್ಮದ್ ಉಲ್ಲಾ

ದೆಹಲಿ - ಭಕ್ತಖಾನ್

ಬಿಹಾರ  ಕನ್ವರ್ ಸಿಂಗ್

ಅಸ್ಸಾಂ  ಮಣಿರಾಂ ದತ್

ಒಡಿಶಾ - ಸುರೇಂದ್ರ ಸ್ವಾಮಿ

ಸುರಪುರ  ವೆಂಕಟಪ್ಪನಾಯಕ

ನರಗುಂದ - ಬಾಬಾಸಾಹೇಬ

ಮುಂಡರಗಿ - ಭೀಮರಾವ್

ದಂಗೆಯ ಪರಿಣಾಮಗಳು

ಡಾಲ್ ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯು ರದ್ಧಾಯಿತು.

1858 ನವೆಂಬರ್ 1 ರಂದು ವಿಕ್ಟೋರಿಯಾ ರಾಣಿಯು ಭಾರತದ ಮ್ಯಾಗ್ನಾಕಾರ್ಟವನ್ನು ಹೊರಡಿಸಿ ಇನ್ನು ಮುಂದೆ ಬ್ರಿಟೀಷ್ ಆಡಳಿತವು ಭಾರತೀಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲವೆಂದು ಆಶ್ವಾಸನೆ ನಿಡಿದಳು.

1858 ನವೆಂಬರ್ 1 ರಂದು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಮುಕ್ತಾಯವಾಗಿ. ಬ್ರಿಟಿಷ್ ಸರ್ಕಾರದ ಆಡಳಿತ ಜಾರಿಗೆ ಬಂದಿತು.

ಗವರ್ನರ್ ಜನರಲ್ ಹುದ್ದೆಯನ್ನು ರದ್ದುಪಡಿಸಿ ವೈಸ್ರಾಯ್ ಹುದ್ದೆಯನ್ನಾಗಿ ಪರಿವರ್ತಿಸಲಾಯಿತು. ಲಾರ್ಡ್ ಕ್ಯಾನಿಂಗ್ ಮೊದಲ ವೈಸ್ರಾಯ್ ಆಗಿ ನೇಮಕಗೊಂಡನು. ವೈಸ್ರಾಯ್ ನ ಮೇಲ್ವಿಚಾರಣೆಗೆ ಬ್ರಿಟನ್ನಿನ ಸಂಸತ್ತಿನಲ್ಲಿ ಭಾರತ ವ್ಯವಹಾರಗಳ ಕಾರ್ಯದರ್ಶಿಯೊಬ್ಬರನ್ನು ನೇಮಿಸಲಾಯಿತು.

ದಂಗೆಯ ವಿಫಲತೆಗೆ ಕಾರಣಗಳು

ಭಾರತೀಯ ಸೈನ್ಯಕ್ಕೆ ಸರಿಯಾದ ಮುಂದಾಳತ್ವ ಇರಲಿಲ್ಲ. ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ನಾಯಕರು ಅವರ ಅಡಿಯಲ್ಲಿದ್ದ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದರು. ಎಲ್ಲರಿಗೂ ಏಕರೂಪದ ಯೋಜನೆಯಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕಿಂತಲೂ ತಮ್ಮ ತಮ್ಮ ಪ್ರದೇಶಗಳು ಸ್ವತಂತ್ರವಾಗುವುದೇ ಮುಖ್ಯವಾಗಿತ್ತು. ಒಬ್ಬರಿಗೊಬ್ಬರು ನೆರವು ಕೊಟ್ಟುಕೊಂಡು ಹೊರಾಡುವುದಕ್ಕಿಂತಲೂ ವೈಯಕ್ತಿಕವಾಗಿ ಹೊರಾಟಗಳನ್ನು ಮಾಡಿದರು. ಆದರೆ ಬ್ರಿಟೀಷರಲ್ಲಿ ಒಂದು ವ್ಯವಸ್ಥೆಯಿತ್ತು ಸೈನ್ಯಕ್ಕೆ ನಿರ್ದಿಷ್ಟ ಗುರಿ ನೀಡುವ ಸಮರ್ಥ ನಾಯಕರಿದ್ದರು.

ಬ್ರಿಟೀಷ್ ಸೈನ್ಯದ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದವು. ಸಾರಿಗೆ ಸಂಪರ್ಕ ವ್ಯವಸ್ಥೆಯಿತ್ತು. ಬೇಕಾದಾಗ ಬೇಕಾದಲ್ಲಿಗೆ ಸೈನ್ಯವನ್ನು ಕಳುಹಿಸುವ ಮತ್ತು ಸಂದೇಶ ಕಳುಹಿಸುವ ವ್ಯವಸ್ಥೆಯಿತ್ತು. ಆದರೆ ಭಾರತೀಯ ಸೈನ್ಯ ಮತ್ತು ಅವರ ನಾಯಕರಿಗೆ ಇಂತಹ ವ್ಯವಸ್ಥೆಯಿರಲಿಲ್ಲ. ಬ್ರಿಟೀಷ್ ಸರ್ಕಾರಕ್ಕೆ ಹೆದರಿ ಅವಿತು ಹೋರಾಟ ನಡೆಸಬೇಕಿತ್ತು. ಸಾರಿಗೆ ಸಂಪರ್ಕಗಳ ವ್ಯವಸ್ಥೆಯನ್ನು ಬಳಸಿಕೊಳ್ಳುವ ಅವಕಾಶವೂ ಸಹ ಇರಲಿಲ್ಲ.

ಬ್ರಿಟೀಷರಿಗೆ ಯುದ್ಧ ಮಾಡಲು ಅಗತ್ಯ ಸಾಮಗ್ರಿಗಳು ಮತ್ತು ಹಣಕಾಸಿನ ನೆರವು ಇತ್ತು. ಆದರೆ ಭಾರತೀಯ ಸೈನ್ಯಕ್ಕೆ ಹಣಕಾಸಿನ ನೆರವಿರಲಿಲ್ಲ ಹೊಟ್ಟೆ ಹೊರೆಯಲು ಭಾರತಿಯ ಸೈನಿಕರು ದರೋಡೆಗಿಳಿದಿದ್ದು ಭಾರತೀಯ ನಾಗರಿಕರಿಗೆ ಭಾರತೀಯ ಸೈನಿಕರ ಮೇಲೆ ಅಪನಂಬಿಕೆ ಮೂಡುವಂತೆ ಮಾಡಿತು.

ಕಾಮೆಂಟ್‌ಗಳು