ರಾಷ್ಟ್ರಕೂಟರು (ಸಾ.ಶ 735 – 973)
ರಾಷ್ಟ್ರಕೂಟರು (ಸಾ.ಶ 735 – 973)
ಗರುಡ ಮತ್ತು ಹಲಾಯುಧ ಇವರ ಲಾಂಛನಗಳಾಗಿದ್ದವು. ಲಟ್ಟಲೂರು ಮತ್ತು ಕಂಧಾರ ಮಾನ್ಯಖೇಟಕ್ಕಿಂತ ಮುಂಚಿನ ರಾಜಧಾನಿಗಳಾಗಿದ್ದವು. ನೃಪತುಂಗನ ಕಾಲದಲ್ಲಿ ಮಾನ್ಯಖೇಟ (ಕಲುಬುರ್ಗಿ) ರಾಷ್ಟ್ರಕೂಟರ ರಾಜಧಾನಿಯಾಯಿತು
ರಾಷ್ಟ್ರಕೂಟರನ್ನು ಅಶೋಕನ ಶಾಸನಗಳಲ್ಲಿ ರಥಿಕರು/ರಟ್ಟರು ಎಂದು ಉಲ್ಲೇಖಿಸಲಾಗಿದೆ.
ದಂತಿದುರ್ಗ (ಸಾ.ಶ 735-756)
ಚಾಲುಕ್ಯರ ಕೊನೆಯ ಅರಸ ಇಮ್ಮಡಿ ಕೀರ್ತಿವರ್ಮನನ್ನು ಸೋಲಿಸಿ ಅಧಿಕಾರಕ್ಕೆ ಬಂದನು. ಎಲ್ಲೋರ ಶಾಸನದಲ್ಲಿ ಪೃಥ್ವೀವಲ್ಲಭ ಎಂದು ಮತ್ತು ಸಾಮನಗಡ ಶಾಸನದಲ್ಲಿ ಪೃಥ್ವೀವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಪರಮಭಟ್ಟಾರಕ, ಖಡ್ಗಾವಲೋಕ ಎಂಬ ಬಿರುದುಗಳನ್ನು ಧರಿಸಿರುವುದು ಉಲ್ಲೇಖವಾಗಿದೆ.
ಒಂದನೆಯ ಕೃಷ್ಣ (ಸಾ.ಶ 756-775)
ಇವನು ಸಾ.ಶ 757ರಲ್ಲಿ ಚಾಲುಕ್ಯ ಇಮ್ಮಡಿ ಕೀರ್ತಿವರ್ಮನನ್ನು ಸಂಪೂರ್ಣವಾಗಿ ಸೋಲಿಸಿ ಚಾಲುಕ್ಯ ವಂಶವನ್ನು ಕೊನೆಗೊಳಿಸಿದ.
ಕೃಷ್ಣರಾಜ ಪರಮ ಮಹೇಶ್ವರ, ಶುಭತುಂಗ, ಅಕಾಲವರ್ಷ ಎಂಬುವು ಈತನಿಗಿದ್ದ ಬಿರುದುಗಳು.
ಇವನು ಎಲ್ಲೋರಾದಲ್ಲಿ ಕೈಲಾನಾಥ ದೇವಾಲಯವನ್ನು ಕಟ್ಟಿಸಿದನು. ಒಂದು ಇಡೀ ಬೆಟ್ಟವನ್ನು ಕೊರೆದು ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು 1ನೇ ಕೃಷ್ಣನು ಗುರುವಾರದ ಮಹಾವೃತ್ತಿ ಎಂಬಾತನಿಗೆ ಸಮರ್ಪಿಸಿದನೆಂದು ತಿಳಿದುಬಂದಿದೆ. ಕೈಲಾಸನಾಥ ದೇವಾಲಯವನ್ನು ಕುರಿತು ವಿ.ಎ ಸ್ಮಿತ್ ಭಾರತೀಯ ವಾಸ್ತುಶಿಲ್ಪದ ಅತ್ಯಂತ ಅಮೋಘ ಮತ್ತು ಅದ್ಭುತ ಕೃತಿ ಜಗತ್ತಿನ ಅಚ್ಚರಿಗಳ ಲ್ಲಿ ಒಂದು ಎಂದು ಶ್ಲಾಘಿಸಿದ್ದಾರೆ.
ಧ್ರುವ (ಸಾ.ಶ 780-793)
ಕರ್ಡಾ ಶಾಸನವು ಧ್ರುವನ ಉತ್ತರ ಭಾರತದ ದಿಗ್ವಿಜಯದ ಕುರಿತು ಹೇಳುತ್ತದೆ.
3ನೇ ಗೋವಿಂದ (793-814)
"ಹಿಮಾಲಯದ ತಪ್ಪಲಿನ ನೀರನ್ನು ಗೋವಿಂದನ ಕುದುರೆಗಳು ಕುಡಿದವು" ಎಂದು 3ನೇ ಗೋವಿಂದನ ಉತ್ತರ ಭಾರತದ ದಿಗ್ವಿಜಯವನ್ನು ಕುರಿತು ಅಮೋಘವರ್ಷ ನೃಪತುಂಗನ ಸಂಜನ ತಾಮ್ರ ಶಾಸನವು ಹೇಳುತ್ತದೆ.
ಅಮೋಘವರ್ಷ ನೃಪತುಂಗ (ಸಾ.ಶ 814-878)
ರಾಷ್ಟ್ರಕೂಟರ ಪ್ರಸಿದ್ಧ ದೊರೆ. ಶರ್ವ ಎಂಬುದು ಇವನ ಮೊದಲ ಹೆಸರು. ಅಮೋಘವರ್ಷನು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅವನ ಚಿಕ್ಕಪ್ಪ ಕರ್ಕ ಸುವರ್ಣವರ್ಷನು ಅವನಿಗೆ ರಕ್ಷಣೆಯಾಗಿ ನಿಂತನು. ಬಂಕೇಶ ಎಂಬಾತನು ಅಮೋಘವರ್ಷನ ನೆಚ್ಚಿನ ಸೇನಾನಿಯಾಗಿದ್ದನು.
ಇವನ ಕಾಲಾವಧಿಯಲ್ಲಿ ಕನ್ನಡದ ಮೊದಲ ಲಕ್ಷಣ (ಅಲಂಕಾರ) ಗ್ರಂಥ ಕವಿರಾಜಮಾರ್ಗವು ಶ್ರೀವಿಜಯನಿಂದ ರಚಿತವಾಯಿತು.
ನೃಪತುಂಗನ ಕಾಲಾವಧಿಯಲ್ಲಿ ಮಾನ್ಯಖೇಟವು ರಾಷ್ಟ್ರಕೂಟರ ರಾಜಧಾನಿಯಾಯಿತು.
ಅತಿಶಯ ಧವಳ, ವೀರನಾರಾಯಣ, ಶ್ರೀವಲ್ಲಭ ಎಂಬುವು ಇವನ ಬಿರುದುಗಳು.
ಸಾ.ಶ 815 ರಲ್ಲಿ ಅರೇಬಿಯಾದ ವರ್ತಕ ಸುಲೇಮಾನ್ ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿದನು. ಪ್ರಪಂಚದ ನಾಲ್ಕು ಸಾಮ್ರಾಟರಲ್ಲಿ ಅಮೋಘವರ್ಷನು ಒಬ್ಬ ಎಂದು ಈತನು ಕೊಂಡಾಡಿದ್ದಾನೆ.
3ನೇ ಕೃಷ್ಣ (939-966)
ಗಂಗರ ಬೂತುಗನೊಡನೆ ಸೇರಿ ಚೋಳರ ಒಂದನೇ ಪರಾಂತಕ ಚೋಳನನ್ನು ತಕ್ಕೋಳಮ್ ಯುದ್ಧದಲ್ಲಿ ಸೋಲಿಸಿ ಕಂಚಿಗೊಂಡ ಎಂಬ ಬಿರುದು ಪಡೆದನು.
ಈತನು ಕವಿಚಕ್ರವರ್ತಿ ಪೊನ್ನನಿಗೆ ಆಶ್ರಯ ನೀಡಿದ್ದನು.
ಇವನು ಉತ್ತರ ಭಾರತದ ದಂಡಯಾತ್ರೆಯ ನೆನಪಿಗಾಗಿ ಮಧ್ಯಪ್ರದೇಶದ ಜಬ್ಬಲ್‍ಪುರ ಬಳಿಯ ಜೂರಾ ಎಂಬಲ್ಲಿ ಶಾಸನ ಕೆತ್ತಿಸಿದನು. ಈ ಶಾಸನವು 3ನೇ ಕೃಷ್ಣನ ಪರನಾರಿ ಸೋದರ ಗುಣದ ಬಗ್ಗೆ ತಿಳಿಸುತ್ತದೆ. ಇದೇ ಮಧ್ಯಪ್ರದೇಶದ ನೀಲಕಂಠಿ ಎಂಬಲ್ಲಿ ಇವನು ಸಂಸ್ಕøತ ಶಾಸನವೊಂದನ್ನು ಕೆತ್ತಿಸಿದ್ದಾನೆ.
ಕಲ್ಯಾಣಿ ಚಾಲುಕ್ಯರ ಇಮ್ಮಡಿ ತೈಲಪನು ಸಾ.ಶ 973 ರಲ್ಲಿ ಇಮ್ಮಡಿ ಕರ್ಕನನ್ನು ಸೋಲಿಸಿ ರಾಷ್ಟ್ರಕೂಟರ ಆಡಳಿತವನ್ನು ಅಂತ್ಯಗೊಳಿಸಿದನು.
ರಾಷ್ಟ್ರಕೂಟರ ಆಡಳಿತ
ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ), ವಿಷಯ, ನಾಡು, ಭುಕ್ತಿ, ಗ್ರಾಮಗಳಾಗಿ ವಿಭಜಿಸಲಾಗಿತ್ತು.
ರಾಷ್ಟ್ರಗಳಲ್ಲಿ ರಾಷ್ಟ್ರಪತಿ, ವಿಷಯಗಳಲ್ಲಿ ವಿಷಯಪತಿ, ನಾಡುಗಳಲ್ಲಿ ನಾಡಗಾವುಂಡ, ಭುಕ್ತಿಗಳನ್ನು ಭೋಗಪತಿ ಎಂಬ ಅಧಿಕಾರಿಗಳು ಆಳುತ್ತಿದ್ದರು. ಕೊನೆಯ ಆಡಳಿತ ಘಟಕವಾದ ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು.
ವಿದೇಶಿ ವ್ಯವಹಾರ ನೋಡಿಕೊಳ್ಳಲು ಮಹಾಸಂದಿ ವಿಗ್ರಹಿ ಎಂಬ ಅಧಿಕಾರಿಯಿದ್ದನು.
ವ್ಯಾಪಾರ ಮತ್ತು ಆರ್ಥಿಕತೆ
ಭಾಗಕರ, ಉಪಾರಿಕ, ಉದ್ರಂಗ ಎಂಬುವು ಮುಖ್ಯ ತೆರಿಗೆಗಳಾಗಿದ್ದವು. ತೆರಿಗೆಯನ್ನು ಬಾಧಾ ಎಂದು ಸಹ ಕರೆಯಲಾಗುತ್ತಿತ್ತು.
ಬ್ರೋಚ್, ಕಲ್ಯಾಣ, ನೌಸಾರಿ, ಸೋಪಾರ, ಠಾಣಾ, ಸೈಮೂರ್, ದಾಬೋಲ್, ಜಯಗಡ ಮತ್ತು ದೇವಗಡ ಮುಂತಾದವು ಮುಖ್ಯ ಬಂದರುಗಳಾಗಿದ್ದವು.
ಬೆಲೆಬಾಳುವ ರತ್ನ, ವಜ್ರ, ಸುಗಂಧದ್ರವ್ಯ, ನೀಲಿ, ಹತ್ತಿಯ ನೂಲು, ಬಟ್ಟೆ, ಉತ್ತಮ ಮಸ್ಲಿನ್ ಬಟ್ಟೆ, ಹದಮಾಡಿದಚರ್ಮ, ದಂತದ ವಸ್ತುಗಳು, ಶ್ರೀಗಂಧ, ತೇಗ ಮುಂತಾದ ಮರಗಳ ಗುಡಿಕೈಗಾರಿಕೆಯ ವಸ್ತುಗಳು ರಫ್ತಾಗುತ್ತಿದ್ದವು.
ಖರ್ಜೂರ, ದ್ರಾಕ್ಷಾರಸ, ಮದ್ಯ, ಜೇಡ್, ಗಾಜು, ತವರ, ಸೀಸ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.
ವಸ್ತು ವಿನಿಮಯ ಪದ್ಧತಿಯ ಜೊತೆಗೆ ನಾಣ್ಯಪದ್ಧತಿ ಬಳಕೆಯಲ್ಲಿತ್ತು. ಸುವರ್ಣ, ಪುಷ್ಪ, ಗದ್ಯಾಣ ಎಂಬ ಚಿನ್ನದ ನಾಣ್ಯಗಳು ದ್ರಮ್ಮ ಕಾಸು, ಕಳಂಜು, ಮಜಾಡಿ ಮತ್ತು ಅಕ್ಕಂ ಎಂಬ ಇತರ ನಾಣ್ಯಗಳು ಬಳಕೆಯಲ್ಲಿದ್ದ ಉಲ್ಲೇಖಗಳು ದೊರೆತಿವೆ.
ರಾಷ್ಟ್ರಕೂಟರ ಸಾಹಿತ್ಯ
ಕಳಸ (ಧಾರವಾಡ), ಇಂಡಿ ಮತ್ತು ಸಾಲೊಟಗಿ (ವಿಜಯಪುರ) ಮತ್ತು ಮಾನ್ಯಖೇಟಗಳು (ಕಲುಬುರ್ಗಿ) ಇವರ ಕಾಲದ ಉನ್ನತ ವಿದ್ಯಾಕೇಂದ್ರಗಳಾಗಿದ್ದವು.
ತ್ರಿವಿಕ್ರಮನ ನಳಚಂಪು ಸಂಸ್ಕೃತದಲ್ಲಿ ದೊರೆತ ಮೊದಲ ಚಂಪೂಕೃತಿಯಾಗಿದೆ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನು ಸಹ ಬರೆದಿದ್ದಾನೆ.
ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು.
ಮಾಣಿಕ್ಯ ನಂದಿ - ಪರೀಕ್ಷಾ ಮುಖಶಾಸ್ತ್ರ (ಜೈನ ನ್ಯಾಯಶಾಸ್ತ್ರ)
ಪ್ರಭಾಚಂದ್ರ – ನ್ಯಾಯಕುಮುದ ಚಂದ್ರೋದಯ (ಜೈನ ನ್ಯಾಯಶಾಸ್ತ್ರ)
ಮಲ್ಲವಾದಿನ್ – ನ್ಯಾಯಬಿಂದು ಟೀಕಾ
ಒಂದನೆಯ ಜಿನಸೇನ - ಹರಿವಂಶ ಪುರಾಣ
ಪ್ರಾಕೃತ ಮಹಾಕವಿ ಸ್ವಯಂಭೂ - ಪಉಮಚರಿಉ, ಅರಿಷ್ಟ ನೇಮಿಚರಿವು
ವೀರಸೇನ - ಧವಲಾ
ಜಿನಸೇನರು – ಜಯಧವಲಾ, ಪೂರ್ವಪುರಾಣ
ಗುಣಭದ್ರ ಮತ್ತು ಲೋಕಸೇನ - ಉತ್ತರ ಪುರಾಣ
ಶಾಕಟಾಯನನ (ಪಾಲ್ಯಕರ್ತಿ) - ಅಮೋಘವೃತ್ತಿ (ವ್ಯಾಕರಣ)
ಪುಷ್ಪದಂತ - ಮಹಾಪುರಾಣ, ಸಣಾಯಕುಮಾರಚರಿತ, ಯಶೋಧರ ಚರಿತ
ಶ್ರೀವಿಜಯ – ಕವಿರಾಜಮಾರ್ಗ (ಕನ್ನಡದ ಮೊದಲ ಲಕ್ಷಣ ಗ್ರಂಥ)
ಪೊನ್ನ - ಶಾಂತಿಪುರಾಣ, ಭುವನೈಕ ರಾಮಾಭ್ಯುದಯ
ಶಾಕಟಾಯನ - ಶಬ್ದಾನುಶಾಸನ (ಸಂಸ್ಕೃತ ವ್ಯಾಕರಣ), ಅಮೋಘವೃತ್ತಿ
ಮಹಾವೀರಚಾರ್ಯ – ಗಣಿತಸಾರ ಸಂಗ್ರಹ
ಕುಮುದೇಂದು - ಸಿರಿಭೂವಲಯ (ಗಣಿತ ಗ್ರಂಥ)
ಜಿನಸೇನಾಚಾರ್ಯ - ಹರಿವಂಶ, ಧವಳ, ಜಯಧವಳ, ಪಾರ್ಶ್ವಾಭ್ಯುದಯ
ಉಗ್ರಾದಿತ್ಯ – ಕಲ್ಯಾಣಕಾರಕ
ಪಾತ್ರಕೇಸರಿ ವಿದ್ಯಾನಂದಿ - ತತ್ವಾರ್ಥ ಶ್ಲೋಕವಾರ್ಧಿಕಾ, ಆಪ್ತ ಪರೀಕ್ಷೆ ಮತ್ತು ಪಾತ್ರ ಪರೀಕ್ಷೆ
ಅಮೋಘವರ್ಷ ನೃಪತುಂಗ - ಪ್ರಶ್ನೋತ್ತರಾ ರತ್ನಮಾಲಾ (ಸಂಸ್ಕೃತ)
ಹಲಾಯುಧ - ಕವಿರಹಸ್ಯ (ವ್ಯಾಕರಣ ಕೃತಿ) ಪಿಂಗಳನ ಛಂದಶಾಸ್ತ್ರಕ್ಕೆ (ಛಂದಸ್ಸೂತ್ರ) ಟೀಕೆ.
ವಾಸ್ತುಶಿಲ್ಪ ಕಲೆ
ಕೈಲಾಸನಾಥ ದೇವಾಲಯ
ಎಲಿಫೆಂಟಾ ಗುಹಾಲಯಗಳು : ಎಲಿಫೆಂಟಾ ಗುಹಾಲಯದ ಮೊದಲ ಹೆಸರು ಗೊರವಪುರಿಯಾಗಿತ್ತು. ಪೋರ್ಚುಗೀಸರು ಇದರ ಆನೆಯ ಆಕಾರವನ್ನು ಕಂಡು ಇದಕ್ಕೆ ಎಲಿಫೆಂಟಾ ಎಂದು ಹೆಸರಿಟ್ಟರು.
ತ್ರಿಮೂರ್ತಿ ದೇವಾಲಯ
ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟ, ತ್ರಿಕೂಟಾಚಲಗಳು ಇವರ ದೇವಾಲಯಗಳ ವೈಶಿಷ್ಟ್ಯಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ