ಭಾರತ ಪ್ರಾಗೈತಿಹಾಸಿಕತೆ

ಭಾರತದ ಪ್ರಾಗೈತಿಹಾಸಿಕತೆ

ಭಾರತದ ಭೌಗೋಳಿಕ ರಚನೆಯ ಹಂತಗಳು

ಸು 240 ದಶಲಕ್ಷ ವರ್ಷಗಳ ಹಿಂದೆ ಆರ್ಕಿಯನ್‌ ಯುಗದ ಕಾಲದಲ್ಲಿ ಗೋಂಡ್ವಾನ ಭೂಭಾಗದಿಂದ ಭಾರತದ ಭೂಭಾಗವು ಬೇರ್ಪಟ್ಟಿತು. 

ಸು 25-37 ದಶಲಕ್ಷ ವರ್ಷಗಳ ಹಿಂದೆ ಇಯೋಸಿನ್‌ ಯುಗದಲ್ಲಿ ಈ ಭಾರತ ಭೂಭಾಗವು ಟೆಥಿಸ್‌ ಸಮುದ್ರವಿದ್ದ ಸ್ಥಳವನ್ನು ಆಕ್ರಮಿಸಿ ಯೂರೇಷಿಯಾ ಭೂಖಂಡಕ್ಕೆ ಡಿಕ್ಕಿ ಹೊಡೆದು ಇಂದಿನ ಭಾರತ ಎಂಬ ಭೂಖಂಡ ಉದ್ಭವಿಸಿತು. 

ಭಾರತ ಭೂಖಂಡ ಯುರೇಷಿಯಾ ಭೂಖಂಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಉತ್ತರದಲ್ಲಿ ಹಿಮಾಲಯ ಪರ್ವತಗಳು ರಚನೆಯಾದವು. 

ಕ್ರಿಟೇಷಿಯನ್‌ ಯುಗದಲ್ಲಿ ಇಂದಿನ ಗುಜರಾತ್‌ ಭೂಭಾಗದಲ್ಲಿ ಅಗ್ನಿಪರ್ವತಗಳು ಸಿಡಿದು ಭಾರತದ ದಕ್ಷಿಣ ಭೂಭಾಗದಲ್ಲಿ ಪಶ್ಚಿಮ ಭಾಗವು ಪೂರ್ವ ಭಾಗಕ್ಕಿಂತ ಎತ್ತರದ ಪ್ರದೇಶವಾಗಿ ರೂಪುಗೊಂಡಿತು. ಪರಿಣಾಮವಾಗಿ ಪಶ್ಚಿಮದ ಎತ್ತರದ ಪ್ರದೇಶಗಳು ನೈರುತ್ಯ ಮಾನ್ಸೂನ್‌ ಮಾರುತಗಳನ್ನು ತಡೆದು ದಟ್ಟಕಾಡಿನ ಘಟ್ಟಗಳಾಗಿ ಪರಿವರ್ತಿತಗೊಂಡವು. ಇಲ್ಲಿ ಅನೇಕ ನದಿಗಳು ಜನಿಸಿ ಪೂರ್ವದ ಇಳಿಜಾರಿನ ಕಡೆಗೆ ಹರಿದು ಬಂಗಾಳಕೊಲ್ಲಿ ಸೇರುವಂತಾಯಿತು

ಭಾರತದಲ್ಲಿ ಆಧುನಿಕ ಮಾನವನ ಜೀವನ ಸುಮಾರು 73,000 ವರ್ಷಗಳ ಹಿಂದೆಯೇ ಶುರುವಾಯಿತು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಭಾರತದಲ್ಲಿ ಬರೆವಣಿಗೆಯು ಸಾ ಶ ಪೂ ಸು 3000 ವರ್ಷಗಳ ಹಿಂದೆಯೇ ಆರಂಭವಾಯಿತು

 

ಭಾರತೀಯ ಪುರಾತತ್ವ ಶೋಧನೆಯಲ್ಲಿ ಶ್ರಮಿಸಿದ ಪ್ರಮುಖ ಸಂಶೋಧಕರು

ಡಾ ಪ್ರಿಮ್‌ ರೋಸ್‌ ಎಂಬ ಬ್ರಿಟಿಷ್‌ ವಿದ್ವಾಂಸ 1842 ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಎಂಬಲ್ಲಿ ಕಲ್ಲಿನ ಚಾಕು ಬಾಣದ ಮೊನೆಗಳನ್ನು ಶೋಧಿಸಿದ. ಈ ಮೂಲಕ ಭಾರತದ ಪ್ರಾಗಿತಿಹಾಸದ ಅಧ್ಯಯಯನಕ್ಕೆ ಅಸ್ಥಿಭಾರ ಹಾಕಿದ

ನರ್ಮದಾ ನದಿಯ ದಂಡೆಯ ಮೇಲೆ ದೊರೆತ ಚಕಮಕಿ ಕಲ್ಲುಗಳನ್ನು ಕುರಿತು ಜಾನ್‌ ಇವಾನ್ಸ್‌ ಎಂಬಾತ 1856 ರಲ್ಲಿ ಲೇಖನ ಪ್ರಕಟಿಸಿದ

ಕ್ಯಾಪ್ಟನ್ ಮೆಡೋಸ ಟೈಲರ್ ಹೈದ್ರಾಬಾದ್‌  ಪ್ರದೇಶದಲ್ಲಿ ದೊರೆತ ಬೃಹತ್‌ ಶಿಲಾಸಮಾಧಿಗಳನ್ನು ಕುರಿತು ಸಂಶೋಧನಾ ವರದಿಗಳನ್ನು ಪ್ರಕಟಿಸಿದರು

ಬ್ರಿಟಿಷ್ ವಿಜ್ಞಾನಿ ರಾಬರ್ಟ್ ಬ್ರೂಸ್ ಫುಟ್ ರು 1863 ರ ಅವಧಿಯಲ್ಲಿ ದಖ್ಖನ್ ಪ್ರಸ್ಥಭೂಮಿಯ ಅನೇಕ ಕಡೆ ಸಂಶೋಧನೆ ನಡೆಸಿದ ಕಾರಣ ಅವರನ್ನು ಭಾರತದ ಪ್ರಾಗೈತಿಹಾಸದ ಪಿತಾಮಹಾ ಎಂದು ಕರೆಯುತ್ತೇವೆ. ಇವರ ಸ್ಮರಣಾರ್ಥ ಬಳ್ಳಾರಿಯ ಸಂಗನಕಲ್ಲಿನಲ್ಲಿ ಪ್ರಾಗೈತಿಹಾಸಿಕ ವಸ್ತುಸಂಗ್ರಹಾಲಯನ್ನು ಸ್ಥಾಪಿಸಲಾಗಿದೆ

1930 ರಲ್ಲಿ ಎಂ ಸಿ ಬರ್ಕಿಟ್‌ ರವರು ಕೃಷ್ಣಾ ನದಿ ಕಣಿವೆಯ  ಪ್ರಾಗಿತಿಹಾಸಕ್ಕೆ ಸಂಬಂಧಿಸಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು

1944 ರಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಮಹಾನಿರ್ದೇಶಕರಾಗಿ ನೇಮಕಗೊಂಡ ಮಾರ್ಟಿಮರ್‌ ವ್ಹೀಲರ್‌ ಅವರು ವಾಯುವ್ಯ ಭಾರತದಲ್ಲಿನ ಪ್ರಾಚೀನ ನಿವೇಶನಗಳ ಕುರಿತು ಸಂಶೋಧನೆಯನ್ನು ಕೈಗೊಂಡರು

ಮೇಲಿನ ಸಂಶೋಧಕರಲ್ಲದೇ ಜಾನ್ ಮಾರ್ಷಲ್, ಜನರಲ್ ಕನ್ನಿಂಗ್ ಹ್ಯಾಮ್, ಡಾ ಆಲ್ಚಿನ್, ಬಿ ಕೆ ಥಾಪರ್ ರಂತಹ ಸಂಶೋಧಕರು ಭಾರತೀಯ ಪ್ರಾಗಿತಿಹಾಸದ ಅಧ್ಯಯನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಡಾ ಅನ್ಸಾರಿ, ಡಾ ಎಚ್ ಡಿ ಸಂಕಾಲಿಯಾ, ಆರ್ ಎಸ್ ಪಂಚಮುಖಿ, ಆರ್ ಡಿ ಬೆನರ್ಜಿ, ಕೃಷ್ಣಸ್ವಾಮಿ ಅಯ್ಯಂಗಾರ್, ಎಮ್ ಎಚ್ ಕೃಷ್, ಆರ್ ವಿ ಜೋಷಿ, ಡಾ ಎಂ ಶೇಷಾದ್ರಿ, ಡಾ ಎಸ್ ನಾಗರಾಜ್, ಎಸ್ ಆರ್ ರಾವ್ ಮುಂತಾದವರು

 

ಪ್ರಾಚೀನ ಶಿಲಾಯುಗ (ಪ್ಯಾಲಿಯೊಲಿಥಿಕ್)

(ಸಾ..ಪೂ 35000 20000)

ಗ್ರೀಕ್ ಭಾಷೆಯಲ್ಲಿ ಪ್ಯಾಲಿಯೊಲಿಥಿಕ್ ಎಂದರೆ ಹಳೆಯ ಶಿಲೆ ಎಂದರ್ಥ. ಆದ್ದರಿಂದ ಈ ಯುಗಕ್ಕೆ ಹಳೆಯ ಶಿಲಾಯುಗ ಎಂಬ ಹೆಸರು ಬಂದಿತು. ಪ್ಯಾಲಿಯೊಲಿಥಿಕ್ ಎಂಬ ಪದವನ್ನು ಮೊದಲಬಾರಿಗೆ ಬಳಸಿದವನು ಜಾನ್‌ ಲುಬಾಕ್

 ಕಾಲದ ಸಂಸ್ಕೃತಿಯನ್ನು ಶೋಧನಾ ಸಂಸ್ಕೃತಿ ಎನ್ನಲಾಗುತ್ತದೆ.

ಈ ಕಾಲದ ಮೊದಲ ಕುರುಹುಗಳು ಪಾಕಿಸ್ತಾನದ ಸೋಹನ್ ನದಿ ಕಣಿವೆಯಲ್ಲಿ ಪತ್ತೆಯಾಗಿವೆ. ಆದ್ದರಿಂದ ಇದನ್ನು ಸೋಹನ್ ಉದ್ಯಮ ಎಂದು ಕರೆಯಲಾಗಿದೆ

ಮದ್ರಾಸ್ ಪ್ರಾಂತ್ಯದಲ್ಲಿ ಈ ಕಾಲದ ಮಾನವನು ಬೆಣಚುಕಲ್ಲನ್ನು ಬಳಸಿದ ಗುರುತುಗಳು ಕಂಡುಬಂದ ಕಾರಣ ಇದನ್ನು ಮದ್ರಾಸ್ ಉದ್ಯಮ ಎಂತಲೂ ಕರೆದಿರುವರು.

Advanced History ಕೃತಿಯ ಲೇಖಕರಾದ ಆರ್ ಸಿ ಮುಜುಂದಾರ್, ಎಚ್ ಸಿ ರಾಯ್ ಚೌದರಿ ಮತ್ತು ಕಲಿಕಿಂಕರ್ ದತ್ತ ಅವರು ಈ ಯುಗದ ಮಾನವರು ನೀಗ್ರಿಟೋ ಜನಾಂಗಕ್ಕೆ ಸೇರಿದವರೆಂದು ಅಭಿಪ್ರಾಯಪಟ್ಟಿದ್ದಾರೆ.

ಕುಳ್ಳಗಿನ ದೇಹ, ಕಪ್ಪು ಚರ್ಮ, ಚಪ್ಪಟೆ ಮೂಗು ಮತ್ತು ಹೆಚ್ಚು ರೋಮಗಳನ್ನು ಹೊಂದಿದ್ದ ಇಂಡೋ ನೀಗ್ರಾಯ್ಡ್ ಮಾನವರು ಮುಖ್ಯ ಕಸುಬು ಬೇಟೆ ಮತ್ತು ಆಹಾರ ಸಂಗ್ರಹಣೆ.

ಅಲೆಮಾರಿಗಳಾಗಿದ್ದ ಈ ಕಾಲದ ಮನುಷ್ಯರು ಮರದ ಪೊಟರೆ ಮತ್ತು ಗುಹೆಗಳಲ್ಲಿ ವಾಸಮಾಡುತ್ತಿದ್ದರು.

ಇವರಿಗೆ ಶವಸಂಸ್ಕಾರ, ಮಡಕೆ ತಯಾರಿಕೆ, ಕೃಷಿ ಮತ್ತು ಪಶುಪಾಲನೆಯ ಬಗ್ಗೆ ತಿಳಿದಿರಲಿಲ್ಲ

ಈ ಯುಗದ ಮಾನವರಿಗೆ ಬೆಂಕಿಯ ಬಳಕೆ ತಿಳಿದಿರಲಿಲ್ಲ. ಆದರೆ ಆಂದ್ರಪ್ರದೇಶದ ಕರ್ನೂಲಿನ ಗುಹೆಗಳಲ್ಲಿ ಈ ಯುಗದ ಕೊನೆಯಲ್ಲಿ ಮತ್ತು ಮಧ್ಯಶಿಲಾಯುಗದ ಪ್ರಾರಂಭದಲ್ಲಿ ಬೆಂಕಿಯನ್ನು ಬಳಸಿರುವ ಕುರುಹುಗಳು ಕಂಡುಬರುತ್ತವೆ

ಈ ಕಾಲದ ಮಾನವನು ಬೆಣಚುಕಲ್ಲಿನಿಂದ ಮಾಡಿದ ಆಯುಧಗಳಿಂದ ಬೇಟೆಯಾಡುತ್ತಿದ್ದ ಕಾರಣ ಬೆಣಚುಕಲ್ಲಿನ ಮಾನವ (Quartizila man) ಎಂದು ಕರೆಯುತ್ತಿದ್ದರು.

1855 ರಲ್ಲಿ ಆರ್ ವಿ ಜೋಶಿ ಮಲಪ್ರಭಾ ನದಿಯ ದಂಡೆಯಲ್ಲಿ ಈ ಕಾಲದ ನಿವೇಶನಗಳನ್ನು ಪತ್ತೆಹಚ್ಚಿದರು

ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿ ಇತ್ತೀಚಿಗೆ ಬೂದಿಯ ಕುರುಹು ಕಂಡುಬಂದಿದೆ

 

ಭಾರತದ ಪ್ರಮುಖ ನೆಲೆಗಳು

ಕಾಶ್ಮೀರ - ಕಣಿವೆ ಪ್ರದೇಶಗಳು

ಪಂಜಾಬ್ - ಸೋಹನ್

ರಾಜಸ್ತಾನ - ಬುಂಡಿ, ಜೈಪುರ

ಮಧ್ಯಪ್ರದೇಶ - ಭೀಮ್ ಭೇಟ್ಕಾ ಗುಹೆಗಳು, ಭೂಪಾಲ್, ನರ್ಮದಾ ಕಣಿವೆ

ಝಾರ್ಖಂಡ್ - ಛೋಟಾ ನಾಗ್ಪುರ್

ಗುಜರಾತ್ - ಸಬರಮತಿ ಕಣಿವೆಯ ಪದಾಮಿ ಅಡಾಲ್, ಮದುಬನ್‌, ಉಮ್ರಾರೇಬಿ

ಮಹಾರಾಷ್ಟ್ರ - ಸಾಲ್ಸೇಟ್

ಉತ್ತರ ಪ್ರದೇಶ - ಸಿಂಗ್ರೌಲಿ ಬೇಸಿನ್

ಪಶ್ಚಿಮ ಬಂಗಾಳ - ಸೋಹನ್ ಕಣಿವೆ

ಬಿಹಾರ

ಒಡಿಶಾ ಮಾಯರ್‌ ಭಂಜ್

ಆಂಧ್ರಪ್ರದೇಶ - ಕರ್ನೂಲ್, ಅನಂತಪುರ, ಬೇತಂಚೆರ್ಲಾ, ಗುಂಟೂರು, ಕಡಪ, ನಾಗಾರ್ಜುನಕೊಂಡ,

ತಮಿಳುನಾಡು - ಅತ್ತಿರಂಪಕ್ಕಂ, ತಿರುನಲ್ವೇಲಿ, ಮಧುರೈ, ತಿರುಚನಾಪಲ್ಲಿ, ಚಂಗಲ್ ಪೇಟೆ, ತಲಚೇರಿ, ಉತ್ತರ ಮತ್ತು ದಕ್ಷಿಣ ಅರ್ಕಾಟ್, ಆದಿಚನೆಲ್ಲೂರು

ತೆಲಂಗಾಣ - ಹೈದ್ರಾಬಾದ್

ದಕ್ಷಿಣ ಭಾರತದಲ್ಲಿ ನರ್ಮದಾ, ಗೋದಾವರಿ ಮತ್ತು ಕೃಷ್ಣಾ ನದಿತೀರಗಳು ಪ್ರಾಚೀನ ಶಿಲಾಯುಗದ ಮಾನವನ ವಾಸಸ್ಥಾನಗಳಾಗಿದ್ದವು.

 

ಭಾರತದ ಹೊರಗಿನ ಪ್ರಮುಖ ನೆಲೆಗಳು

ಪಾಕಿಸ್ತಾನ - ಬಲೂಚಿಸ್ತಾನ್, ಮೆಹ್ರ್ ಘರ್

 

ಕರ್ನಾಟಕದ ಪ್ರಮುಖ ನೆಲೆಗಳು

ಬಳ್ಳಾರಿ - ನಿಟ್ಟೂರು, ಗಾದಿಗನೂರು, ಹಲಕುಂದಿ, ದರೋಜಿ, ಸಂಗನಕಲ್ಲು

ಕಲ್ಬುರ್ಗಿ - ಗುಣಬಾಳ, ದೇವಪುರ, ಕೃಷ್ಣಸೇತುವೆ, ಮರಳಬಾವಿ

ಯಾದಗಿರಿ - ಹುಣಸಗಿ

ಬಾಗಲಕೋಟೆ - ಅನಗವಾಡಿ, ಕೋವಳ್ಳಿ

ವಿಜಯಪುರ - ಖ್ಯಾಡ, ಸಾಲ್ವಡಿಗಿ

ಬೆಳಗಾವಿ ಯಾದವಾಡ, ಘಟಪ್ರಭಾ ಕಣಿವೆ

ರಾಯಚೂರು - ಲಿಂಗಸುಗೂರು (ಭಾರತದಲ್ಲಿ1842 ರಲ್ಲಿ ಹಳೇ ಶಿಲಾಯುಗದ ಮಾನವನ ಮೊದಲ ನೆಲೆ ಪತ್ತೆಯಾಯಿತು).

ತುಮಕೂರು - ಬಾಣಸಂದ್ರ (ಕೈಕೊಡಲಿಗಳ ಅವಶೇಷ), ಕಿಬ್ಬನಹಳ್ಳಿ, ಕರಡಿಗುಡ್ಡ, ಬಿಳಿಕೆರೆ

ಚಿಕ್ಕಮಗಳೂರು - ನಿಡಘಟ್ಟ, ಲಿಂಗದಹಳ್ಳಿ, ಕಡೂರು

ದಾವಣಗೆರೆ - ನ್ಯಾಮತಿ

ಚಿತ್ರದುರ್ಗ - ಜಾನಕಲ್, ತಾಳ್ಯ

ಧಾರವಾಡ - ಕಂಬಿಗೇರಿ

ಬೆಂಗಳೂರು - ಜಾಲಹಳ್ಳಿ

ಮೈಸೂರು

 

ಮಧ್ಯ ಶಿಲಾಯುಗ (ಮೆಸೊಲಿಥಿಕ್)

(ಸಾ  ಪೂ 20000 10000)

ಈ ಯುಗದಲ್ಲಿ ಸೂಕ್ಷ್ಮವಾದ ಕಲ್ಲಿನ ಆಯುದಗಳನ್ನು ಬಳಸುತ್ತಿದ್ದ ಕಾರಣ ಈ ಯುಗವನ್ನು ಸೂಕ್ಷ್ಮಶಿಲಾಯುಗ (ಮೈಕ್ರೋಲಿಥಿಕ್)‌ ಎಂತಲೂ ಕರೆಯುವರು

ಬೆಣಚುಕಲ್ಲಿಗೆ ಬದಲಾಗಿ ಕ್ಯಾಲ್ಸೆಡೆನಿ ಎಂಬ ಪ್ರಶಸ್ತಶಿಲೆಯನ್ನು ಬೇಟೆಗಾಗಿ ಬಳಸುತ್ತಿದ್ದರು

 ಯುಗದಲ್ಲಿ ಬೆಂಕಿಯ ಬಳಕೆ, ಮಣ್ಣಿನ ಮಡಕೆಗಳ ಬಳಕೆ ಪ್ರಮುಖ ಸಂಶೋಧನೆಗಳು ಎನಿಸಿದವು

ಮಧ್ಯ ಪ್ರದೇಶದ ರಾಜಧಾನಿ ಭೂಪಾಲ್‍ನ ಭಿಂಬೆಟ್ಕಾ ಎಂಬಲ್ಲಿ ದೊರೆತ ಒಂದು ಗುಹೆಯಲ್ಲಿ  ಯುಗದ ಮಾನವ ಬಿಡಿಸಿದ ಗುಹಾಚಿತ್ರಗಳು ಕಂಡುಬಂದಿವೆ

 ಯುಗದ ಕೊನೆಯಲ್ಲಿ ಮಾನವ ಅಲೆಮಾರಿ ಜೀವನವನ್ನು ತೊರೆದು ಒಂದೆಡೆ ನಿಲ್ಲುವ ರೂಢಿ ಮಾಡಿಕೊಂಡ. ಈ ಯುಗದ ಕೃಷಿಯ ಮೊದಲ ಕುರುಹುಗಳು ಕಂಡುಬರುವುದು ಪಾಕಿಸ್ತಾನದ ಮೆಹ್ರ್‌ ಘರ್‌ ನಲ್ಲಿ

ಬೇಟೆಯ ಜೊತೆಗೆ ವ್ಯವಸಾಯ, ಪಶುಸಂಗೋಪನೆ ಸಹ ವೃತ್ತಿಗಳಾದವು

ಬೆಂಕಿಯ ಬಳಕೆ, ಮಡಿಕೆ ತಯಾರಿಕೆ, ಪ್ರಾಣಿ ಸಾಕಾಣಿಕೆ, ಶವಸಂಸ್ಕಾರ ಮತ್ತು ಗುಹಾ ಚಿತ್ರಕಲೆ ಈ ಯುಗದ ಪ್ರಮುಖ ಶೋಧಗಳೆನಿಸಿದವು

 

ಭಾರತದ ಪ್ರಮುಖ ನೆಲೆಗಳು

ಪಂಜಾಬ್ - ಧಿಲ್ವಾನ್

ರಾಜಸ್ತಾನ - ಬಾಗೋರ್‌ (ಈ ಯುಗದ ಅತಿದೊಡ್ಡ ನಿವೇಶನ), ತಿವಾರಿ, ಗಣೇಶ್‌, ಅಜ್ಮೀರ್‌

ಉತ್ತರಪ್ರದೇಶ - ಮಹಾದಹ, ಸಾರಾಯ್‌ ಮತ್ತು ಸಹರ್‌ ರಾಯ್

ಮಧ್ಯಪ್ರದೇಶ - ಆಧಂಘರ್, ಭೀಮ್ ಭೇಟ್ಕಾ ಗುಹೆಗಳು

ಝಾರ್ಖಂಡ್ - ಛೋಟಾನಾಗ್ಪುರ್

ಗುಜರಾತ್ - ಲಂಘಾನ, ರಂಗಪುರ್‌, ಸಬರಮತಿ, ಅಹ್ಮದಾಬಾದ್

ಪಶ್ಚಿಮ ಬಂಗಾಳ - ಬಿರಭಾನ್‍ಪುರ

ಆಂಧ್ರಪ್ರದೇಶ - ಕರ್ನೂಲ್, ನಾಗಾರ್ಜುನಕೊಂಡ

ನರ್ಮದಾ, ಕೃಷ್ಣ, ತುಂಗಭದ್ರಾ ನದಿಯ ದಂಡೆಗಳು

ಭಾರತದ ಹೊರಗಿನ ಪ್ರಮುಖ ನೆಲೆಗಳು

ಪಾಕಿಸ್ತಾನ - ಮೆಹ್ರ್ ಘರ್ (ಒಣಗಿಸಿದ ಇಟ್ಟಿಗೆಗಳ ಮನೆ)

 

ಕರ್ನಾಟಕದ ಪ್ರಮುಖ ನೆಲೆಗಳು

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಬ್ರಹ್ಮಗಿರಿ ಎಂಬಲ್ಲಿ ಎಂ ಎಚ್ ಕೃಷ್ಣಯ್ಯ ಎಂಬುವವರು ಕಲ್ಲಿನ ಆಯುಧಗಳನ್ನು ಹಾಗೂ ಬೂದು ಬಣ್ಣದ ಪಾತ್ರೆಗಳನ್ನು ಸಂಶೋಧಿಸಿದ್ದಾರೆ.

ಡಾ ಶೇಷಾದ್ರಿಯವರು ವಿಜಯಪುರ ಜಿಲ್ಲೆಯ ಸಾಲ್ವಡಗಿಯಲ್ಲಿ ಕಲ್ಲಿನ ಆಯುಧಗಳು ಹಾಗೂ ಬೀಸುವ ಕಲ್ಲುಗಳನ್ನು ಸಂಶೋಧಿಸಿದ್ದಾರೆ.

ಬಳ್ಳಾರಿ - ಸಂಗನಕಲ್ಲು

ಯಾದಗಿರಿ - ಹುಣಸಗಿ

ತುಮಕೂರು - ಕಿಬ್ಬನಹಳ್ಳಿ

ಕಲಬುರ್ಗಿ - ಸನ್ನತಿ

ಬೆಂಗಳೂರು - ಜಾಲಹಳ್ಳಿ (ಡಿ ಎಚ್ ಗೋರ್ಡನ್)

ಕನಗನಹಳ್ಳಿ

ಕೃಷ್ಣಾ ಮತ್ತು ಗೋದಾವರಿ ನದಿ ಬಯಲು ಪ್ರದೇಶಗಳು

 

ನವ ಶಿಲಾಯುಗ (ಸಾ..ಪೂ 10000 4000)

ಗ್ರೀಕ್ ನ ನಿಯೋಲಿಥಿಕ್ ಎಂಬುದು ಕನ್ನಡದ ಹೊಸ ಶಿಲೆ ಎಂಬ ಪದಕ್ಕೆ ಸಮಾನಾರ್ಥವಾದುದು.

ಈ ಯುಗದಲ್ಲಿ ಒಣಗಿಸಿದ ಇಟ್ಟಿಗೆಗಳಿಂದ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಕಾಶ್ಮೀರದ ಬುರ್ಜಾಹೋಮ್‌ ನಲ್ಲಿ ಮಣ್ಣಿನೊಳಗೆ ಗುಹಾಮನೆಗಳನ್ನು ನಿರ್ಮಿಸಿರುವುದು ಪತ್ತೆಯಾಗಿದೆ

 ಕಾಲದಲ್ಲಿ ನುಣುಪಾದ ಮತ್ತು ಗಟ್ಟಿಯಾದ ಕಪ್ಪುಕಲ್ಲಿನ ಆಯುಧಗಳು ಬಳಕೆಗೆ ಬಂದವು. ಜೊತೆಗೆ ಮೂಳೆಗಳಿಂದ ಆಯುಧಗಳನ್ನು ಮಾಡುವುದನ್ನು ಈ ಯುಗದ ಮಾನವ ಬಳಸುತ್ತಿದ್ದನು.

ಈ ಯುಗದ ಮತ್ತೊಂದು ವಿಶೇಷತೆ ಬೂದಿದಿಬ್ಬಗಳು. ವಾಸವಿರುವ ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗುವ ಮುನ್ನ ಹಸುವಿನ ಬೆರಣಿಯನ್ನು ಒಂದೆಡೆ ಸೇರಿಸಿ ಸುಟ್ಟು ಬೂದಿ ಮಾಡಿ ಪ್ರದೇಶವನ್ನು ಸ್ವಚ್ಚಗೊಳಿಸಿ ಮತ್ತೊಮ್ಮೆ ಆ ಸ್ಥಳಕ್ಕೆ ವಾಪಸ್ಸು ಬರಲು ಅನುಕೂಲ ಮಾಡಿ ಹೋಗುತ್ತಿದ್ದರು.

ಚಕ್ರಗಳ ಬಳಕೆ ಪ್ರಾರಂಭಗೊಂಡಿತು, ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದರು

ಕಲ್ಲು, ಮೂಳೆ, ದಂತಗಳಿಂದ ತಯಾರಿಸಿದ ಆಭರಣಗಳನ್ನು ಬಳಸುತ್ತಿದ್ದರು

ದೋಣಿಗಳ ತಯಾರಿಕೆಯಿಂದ ಸಮುದ್ರಯಾನ ಆರಂಭವಾಯಿತು.

ಶವಗಳನ್ನು ಹೂಳುವ ಪದ್ಧತಿಯನ್ನು ಅಳವಡಿಸಿಕೊಂಡರು. ಕೆಲವೆಡೆ ದೊಡ್ಡ ಮಡಕೆಗಳಲ್ಲಿ ಶವಗಳನ್ನು ಹೂತಿರುವ ಅವಶೇ಼ಗಳು ದೊರೆತಿವೆ. ತಮಿಳುನಾಡಿನ ತಿರುನಲ್ವೇಲಿಯ ಆದಿಚೆಲ್ಲೂರಿನಲ್ಲಿ ಶವದ ಬೂದಿಯನ್ನು ಮಡಕೆಗಳಲ್ಲಿ ತುಂಬಿ ಹೂತಿರುವ ಅವಶೇ಼ಗಳು ದೊರೆತಿವೆ.

ದೊಡ್ಡಗಾತ್ರದ ಬಂಡೆಗಳಿಂದ ನಿರ್ಮಾಣ ಮಾಡಿದ ಡಾಲ್ಮೆನ್ಸ್‌ ಎಂಬ ಸಮಾಧಿಗಳನ್ನು ನಿರ್ಮಿಸಿರುವ ಕುರುಹುಗಳು ದೊರೆತಿವೆ.

ಉಣ್ಣೆ ಮತ್ತು ಹತ್ತಿಯ ಬಟ್ಟೆಗಳನ್ನು ಬಳಸುವುದನ್ನು ಕಲಿತಿದ್ದರು

ಬರೆವಣಿಗೆ ಈ ಯುಗದ ಕೊನೆಯಲ್ಲಾದ ಮತ್ತೊಂದು ಪ್ರಮುಖ ಆವಿಷ್ಕಾರ

ಈ ಯುಗವನ್ನು ಗೋರ್ಡೋನ್ ಚೈಲ್ಡ್ ರು ನವಶಿಲಾಯುಗದ ಕ್ರಾಂತಿ ಎಂದು ಕರೆದಿದ್ದಾರೆ.

 

ಭಾರತದ ಪ್ರಮುಖ ನೆಲೆಗಳು

ಕಾಶ್ಮೀರ – ಬುರ್ಜಾಹೋಮ (ಶವದ ಜೊತೆ ಸಾಕುಪ್ರಾಣಿ ನಾಯಿಯ ಶವ), ಬುಫ್ರಾಲ್, ಗುಪ್ರಕಲ್, ಚಿರಾಂದ್‌ (ಅತಿ ಹೆಚ್ಚು ಮೂಳೆಗಳಿಂದ ತಯಾರಿಸಿದ ಉಪಕರಣಗಳು ದೊರೆತ ಸ್ಥಳ)

ಅಸ್ಸಾಂ - ದಾವೋಜಿಲಿ ಮತ್ತು ಹಾಡಿಂಗ್

ಮೇಘಾಲಯ - ಗಾರೋ ಪರ್ವತಶ್ರೇಣಿ

ಉತ್ತರ ಪ್ರದೇಶ – ಮಿರ್ಜಾಪುರ, ಅಲಹಾಬಾದ್‌ (ಭತ್ತದ ಕೃಷಿಯ ಕುರುಹು)

ಬಿಹಾರ - ಚಿರಾಂದ್ (ಮೂಳೆಗಳ ಆಯುಧಗಳು)‌, ಚೆಚಾರ್

ಗುಜರಾತ್ - ಕಾಥೇವಾಡ

ಕೇರಳ - ಮಲಬಾರ್

ಆಂದ್ರಪ್ರದೇಶ - ಕಡಪ, ಗುಂಟೂರು, ಅನಂತಪುರ, ಕರ್ನೂಲು, ಉತ್ತನೂರು

ತೆಲಂಗಾಣ - ಹೈದ್ರಾಬಾದ್, ಆದಿಲಾಬಾದ್

ತಮಿಳುನಾಡು - ಸೇಲಂ, ಆದಿಚೈನಲ್ಲೂರು, ತಿರುನೈಲ್ವೇಲಿ, ಉತ್ತರ ಆರ್ಕಾಟ್, ಚಂಗಲ್ ಪೇಟೆ

ನರ್ಮದಾ ನದಿಕಣಿವೆ

 

ಭಾರತದ ಹೊರಗಿನ ಪ್ರಮುಖ ನೆಲೆಗಳು

ಪಾಕಿಸ್ತಾನ - ಬಲೂಚಿಸ್ತಾನ, ಮೆಹ್ರ್ ಘರ್

 

ಕರ್ನಾಟಕದ ಪ್ರಮುಖ ನೆಲೆಗಳು

 ಬಳ್ಳಾರಿ - ಸಂಗನಕಲ್ಲು, ತೆಕ್ಕಲಕೋಟೆ

ರಾಯಚೂರು - ಲಿಂಗಸಗೂರು, ಪಿಕ್ಲಿಹಾಳ್ ಮತ್ತು ಮಸ್ಕಿ

ಹಾವೇರಿ - ಹಲ್ಲೂರು

ಚಿತ್ರದುರ್ಗ - ಬ್ರಹ್ಮಗಿರಿ

 

ಲೋಹಯುಗ (ಸಾ..ಪೂ 4000 ರಿಂದ ಆರಂಭ)

ಮಾನವನು ಕಂಡುಕೊಂಡ ಮೊದಲ ಲೋಹ ತಾಮ್ರ. ಆದರೆ ಉತ್ತರ ಭಾರತದಲ್ಲಿ ಮೊದಲು ತಾಮ್ರದ ಬಳಕೆ ಆರಂಭಗೊಂಡರೆ, ದಕ್ಷಿಣ ಭಾರತದಲ್ಲಿ ಮೊದಲಿಗೆ ಕಬ್ಬಿಣದ ಬಳಕೆ ಆರಂಭಗೊಂಡಿತು.

ಗೃಹ, ಸ್ಮಾರಕಗಳ ನಿರ್ಮಾಣ, ಹೊಸ ಧಾತುಗಳ ಸಂಶೋಧನೆ, ಸುಧಾರಿತ ಬರೆವಣಿಗೆಯ ಬಳಕೆ  ಯುಗದ ಪ್ರಮುಖ ಸಂಗತಿಗಳು

 

ಭಾರತದ ಪ್ರಮುಖ ನೆಲೆಗಳು

ಸಿಂದ್ (ಚಾನ್ಹುದಾರೋ ಮತ್ತು ಆಮ್ರಿ)

ಪಂಜಾಬ್ (ರೂಪಾರ್ ಮತ್ತು ಬಾರಾ)

ಕರ್ನಾಟಕ (ಬ್ರಹ್ಮಗಿರಿ, ಮಸ್ಕಿ, ಟಿ.ನರಸಿಪುರ ಮತ್ತು ಖಿಲ್ಲಮಾರನಗುಡ್ಡ)

ತಮಿಳುನಾಡು (ಪಾಯಂಪಲ್ಲಿ ಮತ್ತು ಮಂಗಲಂ)

 

ತಾಮ್ರಶಿಲಾಯುಗ / ಚಾಲ್ಕೋಲಿಥಿಕ್

(ಸಾ. ಶ ಪೂ 1800 - 1000)

ಈ ಯುಗದಲ್ಲಿ ಶವಗಳನ್ನು ಮನೆಯಲ್ಲಿಯೇ ಹೂಳುವ ಪದ್ಧತಿ ಇತ್ತು

ಇದು ಗ್ರಾಮೀಣ ಸಂಸ್ಕೃತಿಯಾಗಿತ್ತು. ಗೋದಿ, ಬಾರ್ಲಿ, ಉದ್ದು, ಹತ್ತಿ, ರಾಗಿ, ಜೋಳ ಮುಂತಾದವು ಪ್ರಮುಖ ಬೆಳೆಗಳಾಗಿದ್ದವು

ಮಡಕೆಗಳಿಗೆ ಬಣ್ಣ ಹಾಕುವುದನ್ನು ಕಲಿತರು

 

ಕರ್ನಾಟಕದ ನೆಲೆಗಳು

ಹಾವೇರಿ - ಹಲ್ಲೂರು

ಬೆಂಗಳೂರು - ಬನಹಳ್ಳಿ

ಚಿತ್ರದುರ್ಗ - ಬ್ರಹ್ಮಗಿರಿ

ರಾಯಚೂರು - ಮಾಸ್ಕಿ

ಬಳ್ಳಾರಿ – ಸಂಗನಕಲ್ಲು

 

ಕಂಚಿನ ಯುಗ (ಸಾ. ಶ ಪೂ 1000 ದಿಂದ)

ತಾಮ್ರ ಮತ್ತು ಸತುವಿನ ಮಿಶ್ರಲೋಹವೇ ಕಂಚು. ಇದು ತಾಮ್ರದಷ್ಟು ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ

 

ಕಬ್ಬಿಣದ ಯುಗ (ಸಾ. ಶ ಪೂ 1000 ದಿಂದ)

ಕಬ್ಬಿಣದ ಬಳಕೆ ಮೊದಲು ಪ್ರಾರಂಭವಾಗಿದ್ದೇ ದಕ್ಷಿಣ ಭಾರತದಲ್ಲಿ.

 

ಭಾರತದ ಪ್ರಮುಖ ನೆಲೆಗಳು

ಉತ್ತರ ಪ್ರದೇಶ

ಗುಜರಾತ್

ಪಂಜಾಬ್

ಕಾಶ್ಮೀರ

ಮಹಾರಾಷ್ಟ್ರ

ತಮಿಳುನಾಡು - ತಲಚೇರಿ, ಆದಿಚೈನೆಲ್ಲೂರು

 

ಕರ್ನಾಟದ ಪ್ರಮುಖ ನೆಲೆಗಳು

ಚಿತ್ರದುರ್ಗ - ಬ್ರಹ್ಮಗಿರಿ

ರಾಯಚೂರು - ಮಸ್ಕಿ

ಹಾವೇರಿ - ಹಲ್ಲೂರು

ಕಾಮೆಂಟ್‌ಗಳು