ಸಿಂಧೂ ನಾಗರಿಕತೆ

 ಸಿಂಧೂ ನಾಗರಿಕತೆ

ಸಿಂಧೂ ನಾಗರಿಕತೆಯ ವಿಸ್ತೀರ್ಣ 

ಸಿಂಧೂ ನಾಗರಿಕತೆಯ ಆರಂಭಿಕ ಹಂತ

ಸಿಂಧೂ ನಾಗರಿಕತೆಯ ಉಚ್ಛಸ್ಥಿತಿ

ಸಿಂಧೂ ನಾಗರಿಕತೆಯ ಕೊನೆಯ ಹಂತ

ಸಿಂಧೂ ನಾಗರಿಕತೆಯು ಒಂದು ನಗರ ನಾಗರಿಕತೆಯಾಗಿತ್ತು. ಒಟ್ಟು 1500 ನಿವೇಶನಗಳಲ್ಲಿ 1000 ಭಾರತದಲ್ಲಿದ್ದರೆ 500 ಪಾಕಿಸ್ತಾನದಲ್ಲಿವೆ. ಈ ನಾಗರಿಕತೆಯನ್ನು ಕುರಿತು ಮೊದಲ ಬಾರಿಗೆ ಅಧ್ಯಯನ ಮಾಡಿದವರು ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ (1862).

1904 ರಲ್ಲಿ ಕಲ್ಕತ್ತಾದಲ್ಲಿ ಲಾರ್ಡ್ ಕರ್ಜನ್ ರಿಂದ ಭಾರತೀಯ ಪುರಾತತ್ವ ಇಲಾಖೆ ಪ್ರಾರಂಭವಾಯಿತು. 1920 ರಲ್ಲಿ ಸರ್ ಜಾನ್ ಮಾರ್ಷಲ್ ಈ ಪುರಾತತ್ವ ಇಲಾಖೆಯ ನಿರ್ದೇಶಕರಾದರು. ನಂತರ 1921 ರಲ್ಲಿ ದಯಾರಾಂ ಸಹಾನಿ ಹರಪ್ಪ ನಗರವನ್ನು, 1922 ರಲ್ಲಿ ಆರ್ ಡಿ ಬ್ಯಾನರ್ಜಿ ಮೊಹೆಂಜೊದಾರೊ ನಗರವನ್ನು ಪತ್ತೆಹಚ್ಚಿದರು

ಲಂಡನ್ನಿನ Illustrated (ಇಲ್ಯುಸ್ಟ್ರೇಟೆಡ್) ಪತ್ರಿಕೆ ಸಿಂಧೂ ನಾಗರಿಕತೆಯನ್ನು ಕುರಿತು ಪ್ರಕಟಿಸಿದ ಮೊದಲ ಪತ್ರಿಕೆ

ಸಿಂಧೂ ನಾಗರಿಕತೆಯನ್ನು ಚಾಲ್ಕೋಲಿಥಿಕ್ (ತಾಮ್ರ ಶಿಲಾಯುಗ) ಯುಗದೊಳಗೆ ಗುರ್ತಿಸಲಾಗಿದೆ. ಚಾಲ್ಕೋಲಿಥಿಕ್ ಎಂದರೆ ಶಿಲೆ ಹಾಗೂ ಲೋಹಗಳೆರಡರಿಂದಲೂ ಮಾಡಿದ ಸಾಧನಗಳನ್ನು ಉಪಯೋಗಿಸುತ್ತಿದ್ದ ಯುಗ. ಸಿಂಧೂ ನಾಗರಿಕತೆ ಜನರಿಗೆ ಕಂಚು ಹಾಗೂ ತಾಮ್ರದ ಬಳಕೆ ತಿಳಿದಿತ್ತು. ಆದರೆ ಕಬ್ಬಿಣದ ಬಳಕೆ ತಿಳಿದಿರಲಿಲ್ಲ.

ಇವರ ಪೂಜ್ಯ ಪ್ರಾಣಿ ಡುಬ್ಬದ ಗೂಳಿ, ಪೂಜ್ಯ ಪಕ್ಷಿ ಪಾರಿವಾಳ, ಪೂಜ್ಯ ಮರ ಅರಳಿ ಮರ (ಅಶ್ವತ್ಥ ಮರ), ಪೂಜ್ಯ ಚಿಹ್ನೆ ಸ್ವಸ್ತಿಕ್.

ಈ ನಾಗರಿಕತೆಯು ಪಶ್ಚಿಮದಲ್ಲಿ ಈಗಿನ ಪಾಕಿಸ್ತಾನದ ಸುಕ್ತಜೆಂಡರ್ ನಿಂದ ಪೂರ್ವದಲ್ಲಿ ಈಗಿನ ಭಾರತದ ಅಲಂಗಿರಪುರವರೆಗೆ ಮತ್ತು ಉತ್ತರದ ಹಿಮಾಲಯದ ರೂಪಾರ್ ನಿಂದ ದಕ್ಷಿಣದ ಮಹಾರಾಷ್ಟ್ರದ ದೈಮಾಬಾದ್‍ವರೆಗೆ ಹರಡಿತ್ತು. ಸಿಂಧೂ ನಾಗರಿಕತೆಯ ಹೆಚ್ಚಿನ ಪ್ರಮಾಣವು ಗುಜರಾತ್ ರಾಜ್ಯದಲ್ಲಿ ಕಂಡುಬರುತ್ತದೆ.

ಈ ನಾಗರಿಕತೆಯಲ್ಲಿ ಪ್ರೋಟೋ ಆಸ್ಟ್ರೋಲಾಯ್ಡ್, ಮೆಡಿಟರೇನಿಯನ್, ಅಲ್ಡಿನಾಯ್ಡ್ ಮತ್ತು ಮಂಗೋಲಾಯ್ಡ್ ಜನಾಂಗಗಳು ಇದ್ದವು. ಆದರೆ ಅವುಗಳಲ್ಲಿ ಪ್ರೋಟೋ ಆಸ್ಟ್ರೋಲಾಯ್ಡ್ ಮತ್ತು ಮೆಡಿಟರೇನಿಯನ್ ಹೆಚ್ಚಿನ ಪ್ರಮಾಣದಲ್ಲಿ ಇದ್ದ ಜನಾಂಗಗಳಾಗಿದ್ದವು.

ಸಿಂಧೂ ಜನರ ಪ್ರಮುಖ ವೃತ್ತಿ ಕೃಷಿ, ನೇಯ್ಗೆ ಮತ್ತು ವ್ಯಾಪಾರ. ಇವರು ಮೆಸಪೊಟೋಮಿಯಾ ಮತ್ತು ಈಜಿಪ್ಟ್ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು.

ಸಿಂಧೂ ನಾಗರಿಕತೆಯ ಜನರು ಚಿತ್ರಲಿಪಿಯನ್ನು ಬಳಸುತ್ತಿದ್ದರು. ಈ ಚಿತ್ರಲಿಪಿಯ ಸಂಶೋಧಕರು ಎಸ್.ಆರ್ ರಾವ್. ಈ ಚಿತ್ರಲಿಪಿಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು. ಹಾಗಾಗಿ ಇದನ್ನು ಬೌಸ್ಟ್ರೊಫೆಡನ್ ಲಿಪಿ ಎಂದು ಕರೆಯಲಾಗುತ್ತದೆ. ಈ ಲಿಪಿಯ ಕುರಿತು ಹೆಚ್ಚಿನ ಅಧ್ಯಯನ ಮಾಡಿದ ಸಂಶೋಧಕ ಐರಾವತಮ್ ಮಹಾದೇವನ್. ಇವರು ಈ ಲಿಪಿ ಮತ್ತು ಭಾಷೆಯು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ್ದು ಎಂದಿದ್ದಾರೆ

ಚಿತ್ರಲಿಪಿ

ಈ ನಾಗರಿಕತೆಯ ದೊಡ್ಡ ರಸ್ತೆಗಳು ಸು 50ಮೀ ವರೆಗು ಅಗಲ ಹಾಗೂ ಚಿಕ್ಕ ರಸ್ತೆಗಳು 2.45 ಮೀ ವರೆಗು ಅಗಲವಾಗಿರುತ್ತಿದ್ದವು.

ರಸ್ತೆಗಳು 

ಬಾರ್ಲಿ, ಗೋದಿ, ಅಕ್ಕಿ, ರಾಗಿ, ಖರ್ಜೂರ ಪ್ರಮುಖ ಆಹಾರ ಪದಾರ್ಥಗಳಾಗಿದ್ದವು. ಎಣ್ಣೆಗಾಗಿ ಸಾಸಿವೆ ಹಾಗೂ ಎಳ್ಳನ್ನು ಬಳಸುತ್ತಿದ್ದರು. ಹತ್ತಿಯ ಉಡುಪುಗಳನ್ನು ಬಳಸುತ್ತಿದ್ದರು.

ಉಡುಪುಗಳು (ಮಾದರಿ ಚಿತ್ರ)

ಇವರು ದಶಮಾಂಶ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು ಎಂದು ತಿಳಿದು ಬರುತ್ತದೆ.

ಮೂಳೆ, ಮೃದುಶಿಲೆ ಮತ್ತು ಟೆರ್ರಕೋಟ ಮಣ್ಣನ್ನು ಬಳಸಿ ಮುದ್ರೆಗಳನ್ನು ತಾಯಾರಿಸುತ್ತಿದ್ದರು.

ಮುದ್ರೆಗಳು

ಪ್ರತಿ ಮನೆಗೂ ಪ್ರತ್ಯೇಕ ಸ್ನಾನದ ಗೃಹಗಳು, ಶೌಚಾಲಯಗಳು ಇದ್ದು ಎಲ್ಲಾ ಮನೆಗಳಿಗೂ ಒಳಚರಂಡಿ ಸೌಕರ್ಯ ಕಲ್ಪಿಸಲಾಗಿತ್ತು.

ಒಳಚರಂಡಿ ಸೌಕರ್ಯ

ಸಂಶೋಧಕರ ಹೇಳಿಕೆಗಳು

ಜಾನ್ ಮಾರ್ಷಲ್ ಹರಪ್ಪ ಸಂಸ್ಕೃತಿ

ವಿ ಎ ಮಾರ್ಷಲ್ ಇಂಡೋ ಸುಮೇರಿಯನ್ ಸಂಸ್ಕೃತಿ

ಆರ್ ಡಿ ಬ್ಯಾನರ್ಜಿ ಇಂಡೋ ಕ್ರಿಡಾನ್ ಸಂಸ್ಕೃತಿ

ಅಮಲಾನಂದ್ ಘೋಷ್ ಸೋದಿ ಸಂಸ್ಕೃತಿ

ಕೆ ಎನ್ ದೀಕ್ಷಿತ್ ಪ್ರೋಟೊ ಇಂಡಕ್ ಸಂಸ್ಕೃತಿ

ವ್ಯಾಪಾರ (ಆಮದು)

ಚಿನ್ನ - ಪರ್ಷಿಯಾ, ಅಫ್ಘಾನಿಸ್ತಾನ ಮತ್ತು ಕರ್ನಾಟಕ

ಬೆಳ್ಳಿ ಅಫ್ಘಾನಿಸ್ತಾನ, ಮೆಸಪಟೋಮಿಯಾ

ತಾಮ್ರ - ರಾಜಸ್ತಾನದ ದೇಬರಿ ಮತ್ತು ಖೇತ್ರಿ, ಬಲೂಚಿಸ್ತಾನ್

ತವರ - ಝಾರ್ಖಾಂಡ್‍ನ ಹಝಾರಿಬಾಗ್, ಅಫ್ಘಾನಿಸ್ತಾನ

ಜೇಡ್ ಶಿಲೆ - ಟಿಬೆಟ್‍

ಪ್ರಮುಖ ನಗರಗಳು

ಹರಪ್ಪ

ಹರಪ್ಪ ಮೊಟ್ಟಮೊದಲು ಶೋಧಿಸಲ್ಪಟ್ಟ ನಗರ. ಇದು ಪಾಕಿಸ್ತಾನದ ಮಾಂಟೆಗೊಮರಿ ಜಿಲ್ಲೆಯಲ್ಲಿದ್ದು, ರಾವಿ ನದಿಯ ದಂಡೆಯ ಮೇಲಿದೆ. ಇದನ್ನು ಕಣಜಗಳ ನಗರ  ಮತ್ತು ಸಿಂಧೂ ನಾಗರಿಕತೆಯ ಹೆಬ್ಬಾಗಿಲು ಎನ್ನುವರು.

ಇಲ್ಲಿ ಕಂಡುಬಂದ ವಸ್ತುಗಳು ಮತ್ತು ವಿಶೇಷತೆಗಳು : H ಆಕಾರದ ಸಮಾಧಿಗಳು, ಕಲ್ಲಂಗಡಿ ಬೀಜ, ಕೆಲಸಗಾರರ ನಿವೇಶನಗಳು, ಶಿವಲಿಂಗ, ಪಶುಪತಿ ವಿಗ್ರಹ, ತಾಮ್ರದ ಅಳತೆಪಟ್ಟಿ, ಕಂಚಿನ ಕನ್ನಡಿ, ಕಂಚಿನ ಕೊಡಲಿ

ಪಶುಪತಿ ವಿಗ್ರಹ

ಲೋಥಾಲ್

ಲೋಥಾಲ್ ಹಡಗುಕಟ್ಟೆ ಹೊಂದಿದ್ದ ನಗರ. ಇದು ಗುಜರಾತ್ ರಾಜ್ಯದ ಬೋಗಾವೊ ನದಿಯ ದಂಡೆಯ ಮೇಲಿದೆ. ಗುಜರಾತಿ ಭಾಷೆಯಲ್ಲಿ ಲೋಥಾಲ್ ಎಂದರೆ ಸತ್ತವರ ದಿಬ್ಬ. ಈ ನಗರವನ್ನು ಸಿಂಧೂ ನಾಗರಿಕತೆಯ ಮ್ಯಾಂಚೆಸ್ಟರ್ ಎನ್ನುವರು.

ಇಲ್ಲಿ ಕಂಡುಬಂದ ವಸ್ತುಗಳು ಮತ್ತು ವಿಶೇಷತೆಗಳು : ದಂತದ ಅಳತೆ ಪಟ್ಟಿ, ಯಜ್ಞಕುಂಡ, ಪತಿ - ಪತ್ನಿ ಸಮಾಧಿ, ನರಿಯ ಚಿತ್ರ, ಸೌಂದರ್ಯ ವರ್ಧಕಗಳು, ಚದುರಂಗ

ಮೊಹೆಂಜೊದಾರೊ

ಸಿಂಧ್ ಭಾಷೆಯಲ್ಲಿ ಮೊಹೆಂಜೊದಾರೋ ಎಂದರೆ ಸತ್ತವರ ದಿಬ್ಬ ಎಂದರ್ಥ. ಅಂದು ಸಿಂಧೂ ನದಿ ಪ್ರದೇಶಕ್ಕೆ ಮೆಲುಹ ಎಂದು ಕರೆಯುತ್ತಿದ್ದರು. ಪಾಕಿಸ್ತಾನದ ಲರ್ಕಾನ ಜಿಲ್ಲೆಯಲ್ಲಿ ಸಿಂಧೂನದಿಯ ದಂಡೆಯ ಮೇಲಿದೆ. ಮೊದಲ ಬಾರಿಗೆ ಶವಪೆಟ್ಟಿಗೆ ಕಂಡುಬಂದ ಸ್ಥಳ

1925 ರಲ್ಲಿ ಸರ್ ಜಾನ್ ಮಾರ್ಷಲ್ ಈಜುಕೊಳ / ಸ್ನಾನದ ಕೊಳವನ್ನು ಪತ್ತೆಹಚ್ಚಿದರು.

1980 ರಲ್ಲಿ ಇದನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ

ಇಲ್ಲಿ ಕಂಡುಬಂದ ವಸ್ತುಗಳು ಮತ್ತು ವಿಶೇಷತೆಗಳು : ಇಟ್ಟಿಗೆ ಭಟ್ಟಿಗಳು, ಅತಿದೊಡ್ಡ ಉಗ್ರಾಣ, ತಾಮ್ರದ ಕೊಡಲಿ, ಖರ್ಜೂರದ ಬೀಜ, ಗಡ್ಡದ ಮನುಷ್ಯ, ಕಂಚಿನ ಅಳತೆಪಟ್ಟಿ, ಸ್ನಾನದ ಕೊಳ, ಪಶುಪತಿ ಮತ್ತು ಮಾತೃದೇವತೆ ವಿಗ್ರಹ, ತೂಕದ ಕಲ್ಲುಗಳು, ಶವಪೆಟ್ಟಿಗೆ, ಕಂಚಿನ ನರ್ತಕಿಯ ವಿಗ್ರಹ

ಗಡ್ಡದ ಮನುಷ್ಯ
ಕಂಚಿನ ನರ್ತಕಿ
ಸ್ನಾನದ ಕೊಳ
ಉಗ್ರಾಣ

ಚಾನ್ಹುದಾರೋ

ಪಾಕಿಸ್ತಾನದ ಲರ್ಕಾನ ಜಿಲ್ಲೆಯಲ್ಲಿ ಸಿಂಧೂನದಿಯ ದಂಡೆಯ ಮೇಲಿದೆ. ಚಾನ್ಹುದಾರೋ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು ಇದು ಆಟದ ಸಾಮಾನುಗಳ ತಯಾರಿಕಾ ಕೇಂದ್ರವಾಗಿತ್ತು.

ಇಲ್ಲಿ ಕಂಡುಬಂದ ವಸ್ತುಗಳು ಮತ್ತು ವಿಶೇಷತೆಗಳು : ಒಳಚರಂಡಿ ಮತ್ತು ಕೋಟೆಗಳಿಲ್ಲದ ಏಕೈಕ ನಗರ. ಮಳೆ ನೀರಿನ ಪೈಪ್ ವ್ಯವಸ್ಥೆ. ಮುತ್ತುಗಳ ಕಾರ್ಖಾನೆ, ಮಸಿಯ ಡಬ್ಬಿ, ಜೋಡಿಶವಗಳ ಸಮಾಧಿ

ಲೋಥಾಲ್ ಹಾಗೂ ಚಾನ್ಹುದಾರೋ ನಗರಗಳು ಮಣಿ ತಯಾರಿಕೆಗೆ ಹೆಸರುವಾಸಿಯಾಗಿದ್ದವು.

ಕಾಲಿಬಂಗನ್

ಕಾಲಿಬಂಗನ್ ಬಳೆಗಳನ್ನು ತಯಾರಿಸುವ ಕೇಂದ್ರವಾಗಿದ್ದು, ರಾಜಸ್ಥಾನದ ಸರಸ್ವತಿ (ಘಗ್ಗರ್) ನದಿಯ ದಂಡೆಯ ಮೇಲಿತ್ತು. ಸಿಂಧ್ ಭಾಷೆಯಲ್ಲಿ ಕಾಲಿಬಂಗಾನ್ ಎಂದರೆ ಕಪ್ಪುಬಳೆ

ಇಲ್ಲಿ ಕಂಡುಬಂದ ವಸ್ತುಗಳು ಮತ್ತು ವಿಶೇಷತೆಗಳು : ಒಂಟೆಯ ಅಸ್ಥಿಪಂಜರ, ಮಾತೃದೇವತೆ ವಿಗ್ರಹ, ಮಾರ್ಬಲ್ ಕಲ್ಲಿನ ನೆಲ, ಉಳುಮೆ ಮಾಡಿದ ಹೊಲದ ಕುರುಹು

ದೋಲವಿರ

ಭಾರತದಲ್ಲಿ ದೊರೆತ ಸಿಂಧೂ ಸಂಸ್ಕೃತಿಯ ನಗರಗಳಲ್ಲೇ ಅತಿ ದೊಡ್ಡದು. ಇದು ಗುಜರಾತಿನ ಮನ್ಹಾರ್ ನದಿ ದಂಡೆಯ ಮೇಲಿತ್ತು. 2021 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ

ಇಲ್ಲಿ ಕಂಡುಬಂದ ವಸ್ತುಗಳು ಮತ್ತು ವಿಶೇಷತೆಗಳು :  ಅಣೆಕಟ್ಟು, ಬೃಹತ್ ಶಿಲಾಸಮಾಧಿ, ಕ್ರೀಡಾಂಗಣ

ರೂಪಾರ್

ರೂಪಾರ್ ಪಂಜಾಬ್ ರಾಜ್ಯದ ಸಟ್ಲೇಜ್ ನದಿಯ ದಂಡೆಯ ಮೇಲಿತ್ತು.

ಮನುಷ್ಯನ ಜೊತೆಗೆ ಸಾಕುಪ್ರಾಣಿ (ನಾಯಿ) ಇರುವ ಸಮಾಧಿ

ಇತರ ಪ್ರಮುಖ ನಗರಗಳು

ಸುರ್ಕೋಟ್ಡ : ಸುರ್ಕೋಟ್ಡದಲ್ಲಿ ಕುದುರೆಯ ಅವಶೇಷಗಳು ದೊರೆತಿವೆ.

ಆಮ್ರಿ : ಇಲ್ಲಿ ಜಿಂಕೆಯ ಅವಶೇಷಗಳು ದೊರೆತಿವೆ.

ಸುಕ್ತಜೆಂಡರ್ : ಕುದುರೆ ಅವಶೇಷ

ಬನವಾಲಿ : 11 ಕೋಣೆಗಳ ಬೃಹತ್ ಮನೆ

ರಂಗಪುರ : ಗುಜರಾತ್ ನ ಮೀದಾರ್ ನದಿಯ ದಂಡೆಯ ಮೇಲಿತ್ತು

ರಾಖಿಗರ್ಹಿ : ಸಿಂಧೂನಾಗರಿಕತೆಯ ಅತಿ ದೊಡ್ಡ ನಗರವಾಗಿತ್ತು. (2014 ಕ್ಕೂ ಮೊದಲು ಮೊಹೆಂಜೊದಾರೊ)

ಆಡಳಿತ ವ್ಯವಸ್ಥೆ

ಪಾಲ, ಪಾಲಕ, ಮಹಾಪಾಲಾ ಈ ಪದಗಳಿಂದ ವಂಶಪಾರಂಪರ್ಯವಾದ ಆಡಳಿತ ಇದ್ದಿರಬಹುದೆಂದು ಊಹಿಸಲಾಗಿದೆ.

ಪುರೋಹಿತಶಾಹಿ ಆಡಳಿತ ಡಿ ಡಿ ಕೋಸಂಬಿ

ವ್ಯಾಪಾರಿಗಳ ಆಡಳಿತ ಆರ್ ಎಸ್ ಶರ್ಮಾ

ಚುನಾಯಿತ ಪ್ರತಿನಿಧಿಗಳ ಸಭೆ ಗೋರ್ಡನ್ ಚಿಲ್ಡ್

ಕೇಂದ್ರೀಕೃತ ಆಡಳಿತ ಎ ಎಲ್ ಭಾಷ್ಯಂ

ನಗರಗಳು ಮತ್ತು ಸಂಶೋಧಕರು

ಪ್ರಮುಖ ನಿವೇಶನಗಳು

ಪಾಕಿಸ್ತಾನ

ಹರಪ್ಪ  ದಯಾರಾಂ ಸಹಾನಿ - 1921

ಮೊಹೆಂಜೊದಾರೊ  ಆರ್.ಡಿ ಬ್ಯಾನರ್ಜಿ  1922

ಚಾನ್ಹುದಾರೊ  ಎನ್.ಜಿ ಮುಜುಂದಾರ್ ಮತ್ತು ಎನ್.ಗೋಪಾಲ್  1935

ಕೋಟ್‍ಡಿಜಿ  ಎಫ್.ಎ ಖಾನ್  1955

ಸುತ್ಕಜೆಂಡರ್  ಅರಲ್‍ಸ್ಟೀನ್ ಮತ್ತು ಡೇಲ್ಸ್ - 1962

ಭಾರತ

ರಂಗಪುರ  ಎನ್.ಜಿ ಮುಜುಂದಾರ್ - 1953

ರೂಪರ್  ವೈ.ಡಿ ಶರ್ಮಾ  1956

ಅಲಂಗಿರ್ ಪುರ್ - ವೈ.ಡಿ ಶರ್ಮಾ  1958

ಲೋಥಾಲ್  ಎಸ್.ಆರ್ ರಾವ್  1959

ಕಾಲಿಬಂಗನ್ - ಬಿ.ಕೆ ದಾಪರ್ ಮತ್ತು ಘೋಷ್  1969

ಸುರ್ಕೋತ್ಹಾ  ಜಿ.ಪಿ ಜೋಷಿ - 1972

ಬನವಾಲಿ - ಆರ್.ಎನ್ ಬಿಸ್ತ್  1974

ದೋಲವೀರ  ಆರ್.ಎನ್ ಬಿಸ್ತ್  1990

ದೇಸಲ್‍ಪುರ್ - ಪಿ.ಪಿ ಪಾಂಡೆ 1991

ರಾಖಿಗಿರಿ  ಆರ್.ಎನ್ ಬಿಸ್ತ್

ಸಿಂಧೂನಾಗರಿಕತೆಯ ಅವನತಿಗೆ ತಜ್ಞರ ಕಾರಣಗಳು

ಸರ್ ಜಾನ್ ಮಾರ್ಷಲ್, ಜೆ ಎಫ್ ಡೇಲ್ಸ್ - ನದಿಯ ಪ್ರವಾಹ

ಪ್ರೊ ರಾಬರ್ಟ್ ಐಕಿಸ್, ಪಿಗ್ಗೆಟ್ - ಭೂ ಕಂಪನ

ಆರ್ ಎಲ್ ಸ್ಟೀನ್ - ಹವಾಮಾನ ಬದಲಾವಣೆ

ಪ್ರೊ ಮಾರ್ಟಿಮರ್ ವ್ಹೀಲರ್ - ಆರ್ಯರ ದಾಳಿ

ಡಿ ಡಿ ಕೋಸಾಂಬಿ - ಅಣೆಕಟ್ಟುಗಳ ನಾಶ

ಕಾಮೆಂಟ್‌ಗಳು