ವಿಜಯನಗರ ಸಾಮ್ರಾಜ್ಯ

 ವಿಜಯನಗರ ಸಾಮ್ರಾಜ್ಯ (ಸಾ.ಶ 1336-1646)

ಹರಿಹರ ಮತ್ತು ಬುಕ್ಕರಾಯ ಈ ಸಾಮ್ರಾಜ್ಯದ ಸ್ಥಾಪಕರು. ಇವರ ಗುರುಗಳು ವಿದ್ಯಾರಣ್ಯರು

ಇವರ ಮೊದಲ ರಾಜಧಾನಿ ಆನೆಗುಂದಿ ನಂತರದ ರಾಜಧಾನಿ ಹಂಪೆ

ಹರಿಹರ ಮತ್ತು ಬುಕ್ಕರಾಯರು ಹಿಂದೆ ಹೊಯ್ಸಳರ ಸೇವೆಯಲ್ಲಿದ್ದಾಗ ತಮ್ಮನ್ನು ಮಹಾಮಂಡಲೇಶ್ವರ ಎಂಬ ಬಿರುದಿನಿಂದ ಕರೆದುಕೊಳ್ಳುತ್ತಿದ್ದರು

ಸಂಗಮ ವಂಶ (ಸಾ.ಶ 1336-1356)

1ನೇ ಹರಿಹರ (ಸಾ.ಶ 1336-1356)

ಹರಿಹರ ಮತ್ತು ಬುಕ್ಕರಾಯರು 1336 ಏಪ್ರಿಲ್ 18 ರಂದು ವಿಜಯನಗರ ಸ್ಥಾಪಿಸಿದರೆಂದು ಉಲ್ಲೇಖ.

ಇವನಿಗೆ ಪೂರ್ವ ಪಶ್ಚಿಮ ಸಮುದ್ರಾಧಿಪತಿಭಾಷೆಗೆ ತಪ್ಪದ ರಾಯರ ಗಂಡಅರಿರಾಯ ವಿಭಾಡ ಎಂಬ ಬಿರುದುಗಳಿದ್ದವು.

ಇವನ ಕಾಲದ ಬಾಗೇಪಲ್ಲಿ ಶಾಸನವು ಈ ರಾಜಮನೆತನದ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುತ್ತದೆ. ರಾಬರ್ಟ್ ಸಿವೆಲ್ ರ ಮರೆತು ಹೋದ ಸಾಮ್ರಾಜ್ಯ (ಫರ್ಗಾಟನ್ ಎಂಪೈರ್) ಎಂಬ ಪ್ರಸಿದ್ಧ ಕೃತಿ ಈ ಸಾಮ್ರಾಜ್ಯದ ಬಗ್ಗೆ ಬೆಳಕು ಚೆಲ್ಲತ್ತದೆ.

1ನೇ ಬುಕ್ಕರಾಯ (ಸಾ.ಶ 1356-1377)

1ನೇ ಬುಕ್ಕರಾಯನ ಮಗನಾದ ಕಂಪಣರಾಯನ ಮಡದಿಯು ಮಧುರಾ ವಿಜಯಂ (ವೀರಕಂಪಣರಾಯ ಚರಿತ) ಎಂಬ ಕೃತಿಯನ್ನು ಬರೆದಿದ್ದಾಳೆ

1374 ರಲ್ಲಿ ಬುಕ್ಕರಾಯನು ಚೀನಾದ ಮಿಂಗ್ ರಾಜವಂಶದ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ್ದನು.

ವೇದಗಳ ಮೇಲಿನ ಲೇಖನ ಕಾರ್ಯ ಇವನ ಕಾಲದಿಂದ ಆರಂಭವಾದ್ದರಿಂದ ಇವನಿಗೆ ವೈದಿಕಮಾರ್ಗ ಪ್ರವರ್ತಕನೆಂಬ ಬಿರುದು ಬಂದಿತು.

ಇವನ ಕಾಲದಿಂದ ಬಹಮನಿ ಸುಲ್ತಾನರೊಡನೆ ವೈಷಮ್ಯ ಶುರುವಾಯಿತು

ಜೈನರಿಗೂ ವೈಷ್ಣವರಿಗೂ ನಡೆದ ಕಲಹವನ್ನು ಅಂತ್ಯಗೊಳಿಸಿ ಧಾರ್ಮಿಕ ಸಾಮರಸ್ಯ ಮಾಡಿಸಿದನೆಂದು 1386 ರ ಶ್ರವಣಬೆಳಗೊಳ ಶಾಸನವು ಉಲ್ಲೇಖಿಸುತ್ತದೆ.

2ನೇ ಹರಿಹರ (ಸಾ.ಶ 1377-1404)

ವೇದಗಳ ಭಾಷ್ಯ ಲೇಖನ ಇವನ ಕಾಲದಲ್ಲಿ ಪೂರ್ಣಗೊಂಡಿತು. ಹಾಗಾಗಿ ಇವನಿಗೆ ವೇದಮಾರ್ಗ ಪ್ರತಿಷ್ಠಾಪನಾಚಾರ್ಯ ಮತ್ತು ವಿದ್ಯಾವಿಲಾಸ ಎಂಬ ಬಿರುದುಗಳು ಸಂದಿದವು. ಅಲ್ಲದೇ ಸಾರ್ವಭೌಮದ ಸಂಕೇತವಾದ ಮಹಾರಾಜಾಧಿರಾಜ ಮತ್ತು ರಾಜ ಪರಮೇಶ್ವರ ಎಂಬ ಚಕ್ರವರ್ತಿ ಸಂಕೇತವುಳ್ಳ ಬಿರುದುಗಳನ್ನು ಧರಿಸಿದ ಈ ವಂಶದ ಮೊದಲ ಅರಸನಾಗಿದ್ದಾನೆ.

ಇವನ ಕಾಲದಲ್ಲಿ ಸಿಂಗಮಭಟ್ಟನೆಂಬ ಅಭಿಯಂತರನು (ಎಂಜಿನಿಯರ್) ಹೊನ್ನಹೊಳೆಯಿಂದ ಪೆನುಗೊಂಡದವರೆಗೆ ಕಾಲುವೆಯೊಂದನ್ನು ತೋಡಿಸಿದನು

1ನೇ ದೇವರಾಯ (ಸಾ.ಶ 1406-1422)

ತುಂಗಭದ್ರಾ ನದಿಗೆ ಅಣೆಕಟ್ಟನ್ನು ಕಟ್ಟಿಸಿದನು. ರಾಬರ್ಟ್ ಸಿವೆಲ್ ಈ ಅಣೆಕಟ್ಟನ್ನು ಕುರಿತು ಭಾರತದ ಕಾಲುವೆ ನಿರ್ಮಾಣ ಕಾರ್ಯಗಳಲ್ಲಿ ಅದ್ಭುತ ಕಾರ್ಯ ಎಂದಿದ್ದಾನೆ

1420 ರಲ್ಲಿ ಇಟಲಿಯ ನಿಕೊಲೋಕಾಂಟಿ ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದನು

2ನೇ ದೇವರಾಯ (ಸಾ.ಶ 1424-1446)

ಗಜಭೇಂಟೆಕಾರ ಎಂಬುದು ಇವನಿಗಿದ್ದ ಪ್ರಸಿದ್ಧ ಬಿರುದು. ಇವನ ಆಸ್ಥಾನ ಕವಿ ಶ್ರೀನಾಥನು ದೇವರಾಯನನ್ನು ಕರ್ನಾಟಕ ಕ್ಷಿತಿನಾಥ ಎಂದು ಕರೆದಿದ್ದಾನೆ.

1443 ರಲ್ಲಿ ಪರ್ಷಿಯಾದ ರಾಯಭಾರಿ ಅಬ್ದುಲ್ ರಜಾಕ್ ನು ವಿಜಯನಗರಕ್ಕೆ ಭೇಟಿ ನೀಡಿ ವಿಜಯನಗರದಂತಹ ನಗರವನ್ನು ಕಣ್ಣು ಕಂಡಿಲ್ಲ ಇದಕ್ಕೆ ಸಮನಾದ ನಗರ ಜಗತ್ತಿನಲ್ಲಿ ಇದೆಯೆಂಬ ಸಂಗತಿಯನ್ನು ಕಿವಿ ಕೇಳಿಲ್ಲ ಎಂದಿದ್ದಾನೆ.

ತನ್ನ ಸೈನ್ಯದಲ್ಲಿ ಮುಸ್ಲಿಂ ಸೈನಿಕರನ್ನು ನೇಮಕ ಮಾಡಿಕೊಂಡ ಮೊದಲ ಅರಸ.

ಇವನ ಸೇನಾಪತಿ ಲಕ್ಕಣ್ಣ ದಂಡೇಶನು ಸಿಲೋನಿನ ಮೇಲೆ ದಂಡೆಯಾತ್ರೆ ಕೈಗೊಂಡು ದಕ್ಷಿಣ ಸಮುದ್ರಾಧಿಪತಿ ಎಂಬ ಬಿರುದನ್ನು ಪಡೆದನು.

ದೇವರಾಯನು ಸಂಸ್ಕೃತದಲ್ಲಿ ಮಹಾನಾಟಕ ಸುಧಾನಿಧಿ ಮತ್ತು ಬ್ರಹ್ಮಸೂತ್ರವೃತ್ತಿ ಎಂಬ ಕೃತಿಗಳನ್ನು ಬರೆದಿದ್ದಾನೆ.

1470 ರಲ್ಲಿ 2ನೇ ವಿರೂಪಾಕ್ಷರಾಯನು ಆಡಳಿತ ನಡೆಸುವಾಗ ರಷ್ಯಾದ ನಿಕಿಟಿನ್ ಎಂಬ ಪ್ರವಾಸಿಗ ವಿಜಯನಗರಕ್ಕೆ ಭೇಟಿ ನೀಡಿದ್ದನು.

ಸಾಳ್ವ ವಂಶ (ಸಾ.ಶ 1485-1503)

ಸಾ.ಶ 1485-1491 ರ ವರೆಗೆ ಆಳಿದ ಸಾಳ್ವ ನರಸಿಂಹನೇ ಈ ಸಂತತಿಯ ಸ್ಥಾಪಕ ಆದರೆ ಇವನ ನಂತರದ ಅಧಿಕಾರಿಗಳು ದುರ್ಬಲರಾಗಿ ಈ ವಂಶವು ಅವನತಿಯಾಯಿತು. ಇವನು ರಾಮಾಭ್ಯುದಯಂ ಎಂಬ ಕೃತಿಯನ್ನು ಬರೆದಿದ್ದಾನೆ

ತುಳುವ ವಂಶ (ಸಾ.ಶ 1503-1570)

ತುಳುವ ನರಸನಾಯಕ (ಸಾ.ಶ 1491-1503)

ಸಾಳ್ವ ನರಸಿಂಹನ ಕೊನೆಗಾಲದಲ್ಲಿ ತುಳುವ ನರಸನಾಯಕ ರಾಜಪ್ರತಿನಿಧಿಯಾಗಿ ಅಧಿಕಾರ ವಹಿಸಿಕೊಂಡನು. ನರಸಿಂಹನ ಮರಣಾನಂತರ ತಾನೇ ಅಧಿಕಾರ ಹಿಡಿದು 1503 ರಲ್ಲಿ ಅಧಿಕೃತವಾಗಿ ಸಿಂಹಾಸನವೇರಿ ತುಳುವ ವಂಶದ ಸ್ಥಾಪನೆಗೆ ಕಾರಣವಾದನು.

ನರಸನಾಯಕನ ನಂತರ ವೀರ ನರಸಿಂಹರಾಯ ಸಾ.ಶ 1503-1509 ರವರೆಗೆ ಆಳ್ವಿಕೆ ನಡೆಸಿದನು.

ಕೃಷ್ಣದೇವರಾಯ (ಸಾ.ಶ 1509-1530)

1510 ರಲ್ಲಿ ಬೀದರ್ ನ 2ನೇ ಮಹ್ಮದ್ ಷಾ ಮತ್ತು ವಿಜಯಪುರದ ಆದಿಲ್ ಷಾಹಿ ವಂಶದ ಸ್ಥಾಪಕನಾದ ಯೂಸುಫ್ ಆದಿಲ್ ಷಾ ನ ವಿರುದ್ಧ ಮೊದಲ ಯುದ್ಧವನ್ನು ಕೈಗೊಂಡನು

1510 ರಲ್ಲಿ ವಿಜಯಪುರದ ಆದಿಲ್ ಷಾಹಿಗಳಿಂದ ಗೋವಾವನ್ನು ಗೆದ್ದುಕೊಳ್ಳಲು ಪೋರ್ಚುಗೀಸರಿಗೆ ಸಹಾಯ ಮಾಡಿದನು.

1512 ರಲ್ಲಿ ಬಹುಮನಿ ಸುಲ್ತಾನರ ಮೇಲೆ ಯುದ್ದಮಾಡಿ ಪ್ರಧಾನಿ ಖಾಸಿಂ ಬರೀದ್ ನಿಂದ ಬಂಧಿಯಾಗಿದ್ದ ಮಹ್ಮದ್ ಷಾನನ್ನು ಬಿಡಿಸಿ ಅವನಿಗೆ ಮತ್ತೇ ಪಟ್ಟಕಟ್ಟಿ ಯವನರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಪಡೆದನು.

1514 ರಲ್ಲಿ ಒಡಿಶಾದ ಮೇಲೆ ದಂಡೆತ್ತಿ ಹೊಗಿ ಪ್ರತಾಪರುದ್ರನನ್ನು ಸೋಲಿಸಿ ಅವನ ಮಗಳನ್ನು ವಿವಾಹವಾಗಿ ವೈವಾಹಿಕ ಸಂಬಂಧ ಬೆಳೆಸಿದನು. ಈ ವಿಜಯದ ಸಂಕೇತವಾಗಿ ಮಹಾನವಮಿ ದಿಬ್ಬವನ್ನು ನಿರ್ಮಿಸಿದನು.

1520 ರಲ್ಲಿ ವಿಜಯಪುರದ ಇಸ್ಮಾಯಿಲ್ ಆದಿಲ್ ಷಾನನ್ನು ಸೋಲಿಸಿ ರಾಯಚೂರು ಕೋಟೆಯನ್ನು ಗೆದ್ದುಕೊಂಡನು

ಉದಯಗಿರಿ ಕೋಟೆಯನ್ನು ಗೆಲ್ಲುವಾಗ ನಾನು ಗೆಲ್ಲಲಾರದಂತಹ ಪ್ರಬಲ ಕೋಟೆಯಿದು ಇದನ್ನು ಗೆಲ್ಲದೇ ಬಿಡೆನು” ಎಂದು ಹೇಳಿದ್ದಾನೆ.

ತನ್ನ ತಾಯಿ ನಾಗಲಾಂಬಿಕೆಯ ನೆನಪಿನಲ್ಲಿ ನಾಗಲಾಪುರವನ್ನು ಮತ್ತು ಪತ್ನಿ ತಿರುಮಲಾದೇವಿಯ ಹೆಸರಿನಲ್ಲಿ ಹೊಸಪಟ್ಟಣ (ಹೊಸಪೇಟೆ) ನಿರ್ಮಿಸಿದನು.

ಕರ್ನಾಟಾಕಾಂಧ್ರ ಭೋಜಕರ್ನಾಟಕ ರಾಜ್ಯ ರಮಾರಮಣ ಎಂಬುವು ಕೃಷ್ಣದೇವರಾಯನಿಗಿದ್ದ ಬಿರುದುಗಳು

ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜರೆಂಬ ಕವಿಗಳಿದ್ದರು

1512 ರಲ್ಲಿ ಟಾಮ್ ಪೀರೆಸ್, 1516 ರಲ್ಲಿ ಡ್ಯುರೆಟ್ ಬಾರ್ಬೋಸ್ ಮತ್ತು 1520 ರಲ್ಲಿ ಡೊಮಿಂಗೊ ಪಯಾಸ್ ಎಂಬ ಪೋರ್ಚುಗೀಸ್ ಪ್ರವಾಸಿಗಳು ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದರು

ಕೃಷ್ಣದೇವರಾಯ 1530 ರಲ್ಲಿ ಮರಣಿಸಿದನು ಇವನ ಸಮಾಧಿ ಆನೆಗುಂದಿಯಲ್ಲಿದೆ.

ಅಚ್ಯುತರಾಯ (ಸಾ.ಶ 1529-1542)

ಕೃಷ್ಣದೇವರಾಯನ ನಂತರ ಪಟ್ಟವೇರಿದ ಅಚ್ಯುತರಾಯ ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯವನ್ನು ವಿಸ್ತರಿಸದೇ ಹೋದರೂ ಯಶಸ್ವಿಯಾಗಿ ಕಾಪಾಡಿಕೊಂಡನು.

1535 ರಲ್ಲಿ ಪೋರ್ಚುಗಲ್ ನ ಫೆರ್ನಾವ್ ನ್ಯೂನಿಜ್ ಮತ್ತು ಗಾರ್ಸಿಯಾಡ ಓರ್ಟಾ ಎಂಬ ಪ್ರವಾಸಿಗರು ವಿಜಯನಗರಕ್ಕೆ ಭೇಟಿ ನೀಡಿದ್ದರು.

ಅರವೀಡು ವಂಶ (ಸಾ.ಶ 1542-1646)

ರಾಮರಾಯ (ಸಾ.ಶ 1542-1565)

ಅಚ್ಯುತರಾಯನ ನಂತರ ಸದಾಶಿವರಾಯನು 1542 ರಲ್ಲಿ ಪಟ್ಟಕ್ಕೇರಿದನು. ಆದರೆ ರಾಮರಾಯನು ಆಡಳಿತವೆಲ್ಲಾ ತಾನೇ ವಹಿಸಿಕೊಂಡನು. ಉತ್ತಮ ಆಡಳಿತಗಾರನಾಗಿದ್ದರೂ ಕೆಲವು ಕಾರಣಗಳಿಂದ ಬಹುಮನಿ ಸುಲ್ತಾನರು ಹಾಗೂ ಪೋರ್ಚುಗೀಸರೊಡನೆ ಸಂಬಂಧ ಹದಗೆಡಿಸಿಕೊಂಡನು.

ಕರಾವಳಿ ತೀರದಲ್ಲಿ ಕ್ಯಾಥೋಲಿಕ್ ರ ಮತಾಂತರವನ್ನು ತಡೆಗಟ್ಟಲು ಪ್ರಯತ್ನಿಸಿದ್ದು ಪೋಚುಗೀಸರೊಂದಿಗಿನ ವೈರತ್ವಕ್ಕೆ ಕಾರಣವಾಯಿತು. ತಮಿಳುನಾಡಿನಲ್ಲಿದ್ದ ಪೂರ್ವ ಕರಾವಳಿ ತೀರದ ಸ್ಯಾನ್ ಥೋಂ ಅನ್ನು ವಶಪಡಿಸಿಕೊಂಡು ಪೋರ್ಚುಗೀಸರಿಂದ ಕಪ್ಪ ಪಡೆದುಕೊಂಡನು.

1546 ರಲ್ಲಿ ಪೋರ್ಚುಗೀಸ್ ವೈಸ್ರಾಯ್ ಜಾವೋಡಿ ಕ್ಯಾಸ್ಟ್ರೋನೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡನು.

ರಾಮರಾಯನ ಕುತಂತ್ರಗಳಿಂದ ವಿಜಯನಗರಕ್ಕೂ ಬಹುಮನಿ ಸುಲ್ತಾನರಿಗೂ ಕದನವಾಗಿ ರಾಮರಾಯ ಮತ್ತು ಸದಾಶಿವರಾಯರು 1565 ಜನವರಿ 23 ರಂದು ನಡೆದ ತಾಳಿಕೋಟೆ (ರಕ್ಕಸತಂಗಡಗಿ) ಕದನದಲ್ಲಿ ಮರಣಿಸಿದರು. ಇದನ್ನು ಬನ್ನಿಹಟ್ಟಿ ಕಾಳಗ ಎಂತಲೂ ಕರೆಯುವರು.

1567 ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ಇಟಲಿಯ ಪ್ರವಾಸಿಗ ಫ್ರೆಡ್ರಿಕ್ ನೀಜರ್ ತಾಳಿಕೋಟೆ ಕದನಾನಂತರ ಹಂಪೆಯು ಹೇಗೆ ನಾಶವಾಗಿತ್ತು ಎಂದು ಉಲ್ಲೇಖಿಸಿದ್ದಾನೆ.

ತಿರುಮಲದೇವರಾಯ (ಸಾ.ಶ 1565-1572)

ತಾಳಿಕೋಟೆ ಕದನದ ನಂತರ ರಾಮರಾಯನ ತಮ್ಮನಾದ ತಿರುಮಲರಾಯನು 1570 ರಲ್ಲಿ ಅರವೀಡು ವಂಶವನ್ನು ಸ್ವತಂತ್ರವಾಗಿ ಸ್ಥಾಪಿಸಿ ಪೆನುಗೊಂಡವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.

2ನೇ ವೆಂಕಟಾದ್ರಿ (ಸಾ.ಶ 1586-1614)

ಅರವೀಡು ವಂಶದ ಪ್ರಸಿದ್ಧ ದೊರೆಯಾಗಿದ್ದ ಈತನು ಪೆನುಗೊಂಡದಿಂದ ತಿರುಪತಿ ಬಳಿಯ ಚಂದ್ರಗಿರಿಗೆ ರಾಜಧಾನಿಯನ್ನು ಬದಲಾಯಿಸಿದನು. ಇವನ ಸಮರ್ಥ ಆಡಳಿತಕ್ಕೆ ನೆರವಾದವನು ಎಚ್ಚಮ್ಮನಾಯಕ

4ನೇ ಶ್ರೀರಂಗ ಅರವೀಡು  ವಂಶದ ಮತ್ತು ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ

ಆಡಳಿತ ವ್ಯವಸ್ಥೆ

ಕೃಷ್ಣದೇವರಾಯನು ತೆಲುಗು ಭಾಷೆಯಲ್ಲಿ ಬರೆದ ತನ್ನ ಅಮುಕ್ತಮೌಲ್ಯದ ಕೃತಿಯಲ್ಲಿ ರಾಜನ ಕರ್ತವ್ಯಗಳ ಬಗ್ಗೆ ವಿವರಿಸಿದ್ದಾನೆ

ಇವರ ಆಡಳಿತ ವ್ಯವಸ್ಥೆಯನ್ನು ನಾಯಂಕರ ಪದ್ಧತಿ ಎನ್ನುತ್ತಿದ್ದರು

ಪ್ರಧಾನಮಂತ್ರಿಗೆ ಶಿರಪ್ರಧಾನ/ಮಹಾಪ್ರಧಾನ ಎನ್ನುತ್ತಿದ್ದರು

ಗ್ರಾಮಗಳಲ್ಲಿ ಆಯಗಾರರು ಎಂಬ ವಂಶಪಾರಂಪರ್ಯ ಆಡಳಿತಗಾರರಿದ್ದರು.

ಹೊಯ್ಸಳರಂತೆ ಇವರಲ್ಲಿಯೂ ಸಹ ಕಂದಾಚಾರವೆಂಬ ಸೈನ್ಯವಿಭಾಗವಿತ್ತು

ಸುಸಭ್ಯ ಎಂಬುದು ರಾಜನ ಅಂಗರಕ್ಷಕ ಪಡೆಯಾಗಿತ್ತು

ಆರ್ಥಿಕತೆ

ಗೇಣಿಗುತ್ತಿಗೆಸಿದ್ಧಾಯವಾರ ಮತ್ತು ಗಡಿ ಎಂಬ 5 ಬಗೆಯ ಭೂ ಹಿಡುವಳಿ ಪದ್ಧತಿಗಳಿದ್ದವು.

ಸಿಸ್ತು ಎಂಬ ಭೂಕಂದಾಯ ರಾಜ್ಯದ ಪ್ರಮುಖ ಆದಾಯವಾಗಿತ್ತು. ಅಥವನಿ ಎಂಬ ಇಲಾಖೆಯು ಕಂದಾಯ ವಸೂಲಿ ಮಾಡುತ್ತಿತ್ತು.

ವರಾಹ ಎಂಬುದು ಇವರ ಕಾಲದ ಪ್ರಮಾಣಬದ್ದ ನಾಣ್ಯವಾಗಿತ್ತು.

ಕೃಷ್ಣದೇವರಾಯನು ರಾಜ್ಯಾದ್ಯಂತ ವಿವಾಹ ತೆರಿಗೆಯನ್ನು ರದ್ಧಪಡಿಸಿದನು

ಅನಂತಪುರದ ವಜ್ರಕರೂರ್ ಎಂಬುದು ವಜ್ರದ ಕೇಂದ್ರವಾಗಿತ್ತು. ಕೇರಳದ ಕ್ಯಾಲಿಕಟ್ನಲ್ಲಿ ನೀಲಗಳು ಸಿಗುತ್ತಿದ್ದವು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಭ್ಭಿಣದ ಅದಿರು ಸಿಗುತ್ತಿತ್ತು.

ಭಟ್ಕಳಹೊನ್ನಾವರಮಂಗಳೂರು ವಿಜಯನಗದ ಪ್ರಮುಖ ಬಂದರುಗಳಾಗಿದ್ದವು. ಇವರು ಚೀನಾ ಮತ್ತು ಪೋರ್ಚುಗಲ್ ಜೊತೆಗೆ ವ್ಯಾಪಾರ ಸಂಬಂಧ ಹೊಂದಿದ್ದರು.

ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ

ವರದಕ್ಷಿಣೆ ಪದ್ಧತಿ ಮತ್ತು ಬಾಲ್ಯವಿವಾಹಗಳು ರೂಢಿಯಲ್ಲಿದ್ದವು

ಸಹಗಮನ ಪದ್ಧತಿ ರೂಢಿಯಲ್ಲಿತ್ತಾದರೂ ಅದು ಕಡ್ಡಾಯವಾಗಿರಲಿಲ್ಲ

ದೇವದಾಸಿ ಪದ್ಧತಿ ಅಥವಾ ವೇಶ್ಯಾವಾಟಿಕೆಯು ಸಹ ಇವರ ಕಾಲದಲ್ಲಿ ಕಾನೂನು ಬದ್ದವಾಗಿತ್ತು.

ಪೋರ್ಚುಗೀಸ್ ಪ್ರವಾಸಿ ಬಾರ್ಬೋಸ್ ವಿಜಯನಗರದಲ್ಲಿ ಯಾರು ಯಾವುದೇ ಧರ್ಮವನ್ನು ನಿರ್ಭಯವಾಗಿ ಪಾಲಿಸಬಹುದು ಎಂದು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಹೇಳಿದ್ದಾನೆ.

ಶಿಕ್ಷಣ ಮತ್ತು ಸಾಹಿತ್ಯ

ಧೂಳಾಕ್ಷರ (ಮರಳಿನ ಮೇಲೆ ಬರೆದು ವಿದ್ಯೆ ಕಲಿಯುವುದು) ಎಂಬುದು ವಿಜಯನಗರ ಅರಸರ ಕಾಲದ ಶಿಕ್ಷಣ ಪದ್ಧತಿಯಾಗಿತ್ತು 

ಕೃಷ್ಣದೇವರಾಯನ ಕಾಲ ಸಾಹಿತ್ಯಿಕ ಸುವರ್ಣಯುಗ ಎಂದು ಕರೆಸಿಕೊಂಡಿದೆ. ಇವನ ಕಾಲದಲ್ಲಿ ಕನ್ನಡ ತೆಲುಗು ಮತ್ತು ಸಂಸ್ಕøತ ಭಾಷೆಗಳಲ್ಲಿ ಉತ್ತಮ ಸಾಹಿತ್ಯ ರಚನೆಯಾಯಿತು. ಕೃಷ್ಣದೇವರಾಯನ ಕಾಲವನ್ನು ಸಾಹಿತ್ಯದಲ್ಲಿ ರೋಮ್ ನ ಅಗಸ್ಟಸ್ ಮತ್ತು ಇಂಗ್ಲೇಂಡ್ ನ ಎಲಿಜಬೆತ್ ಳ ಕಾಲಕ್ಕೆ ಹೋಲಿಸಲಾಗಿದೆ.

ಕೃಷ್ಣದೇವರಾಯ : ಸಂಸ್ಕೃತದಲ್ಲಿ ಜಾಂಬವತಿ ಕಲ್ಯಾಣ, ಮದಾಲಸ ಚರಿತ, ರಸಮಂಜರಿ, ಉಷಾ ಪರಿಣಯ, ಜ್ಞಾನ ಚಿಂತಾಮಣಿ ಕೃತಿಗಳನ್ನು ಹಾಗೂ ತೆಲುಗಿನಲ್ಲಿ ಅಮುಕ್ತ ಮೌಲ್ಯದ ಕೃತಿಯನ್ನು ಬರೆದಿದ್ದಾನೆ

ಸಾಯಣಾಚಾರ್ಯರು : ವೇದಾರ್ಥ ಪ್ರಕಾಶ

ಗಂಗಾಂಬಿಕೆ : ಮಧುರಾ ವಿಜಯಂ/ವೀರಕಂಪಣರಾಯ ಚರಿತ

ಡಿಂಡಿಮ : ಅಚ್ಯುತರಾಯಾಭ್ಯುದಯಂ ಮತ್ತು ಸಾಳ್ವಾಭ್ಯುದಯಂ

ವಿದ್ಯಾರಣ್ಯ : ಜೀವನ್ಮುಕ್ತಿ ವಿವೇಕಪಂಚದಶಿಪರಾಶರ ಮಾಧವೀಯಸಂಗೀತಸಾರ

ಅಪ್ಪಯ್ಯದೀಕ್ಷಿತ : ವೇದಾಂತ ಕಲ್ಪತರು, ವೇದಾಂತ ದೇಶಿಕರ, ಮೀಮಾಂಸ ಪಾದುಕಾ, ತಾತ್ಪರ್ಯ ಚಂದ್ರಿಕಾ

ತಿರುಮಲಾಂಬ : ವರದಾಂಬಿಕಾ ಪ್ರಣಯಂ

ರತ್ನಾಕರವರ್ಣಿ : ಭರತೇಶ ವೈಭವ

ಭೀಮಕವಿ : ಬಸವಪುರಾಣ

ಸಿಂಗಿರಾಜ : ಸಿಂಗಿರಾಜ ಪುರಾಣ

ಚಾಮರಸ : ಪ್ರಭುಲಿಂಗಲೀಲೆ

ಲಕ್ಕಣ್ಣ ದಂಡೇಶ : ಶಿವತತ್ವ ಚಿಂತಾಮಣಿ

ಗುಬ್ಬಿಯ ಮಲ್ಲಣಾರ್ಯ : ಭಾವಚಿಂತಾರತ್ನ ಮತ್ತು ವೀರಶೈವಾಮೃತ

ಕುಮಾರವ್ಯಾಸ : ಗದುಗಿನ ಭಾರತ/ಕರ್ಣಾಟ ಭಾರತ ಕಥಾಮಂಜರಿ

ತಿಮ್ಮಣ್ಣ : ಕೃಷ್ಣರಾಯ ಭಾರತ

ನರಹರಿ (ಕುಮಾರ ವಾಲ್ಮೀಕಿ) : ತೊರವೆ ರಾಮಾಯಣ

ಕಲೆ ಮತ್ತು ವಾಸ್ತುಶಿಲ್ಪ

1986 ರಲ್ಲಿ ಹಂಪೆಯನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. ಇವರ ವಾಸ್ತುಶಿಲ್ಪದ ಮೇಲೆ ಪ್ರಾಚೀನ ತಂಜಾವೂರು ಶೈಲಿಯ ಪ್ರಭಾವ ಕಾಣಿಸುತ್ತದೆ.

ಇವರ ಶೈಲಿಯನ್ನು ಕುರಿತು ಡಾ ಪರ್ಸಿಬ್ರೌನ್ ರು ದ್ರಾವಿಡ ಶೈಲಿಯ ಶ್ರೇಷ್ಟ ವಿಕಸಿತ ರೂಪ ಎಂದಿದ್ದಾರೆ. ಎತ್ತರವಾದ ರಾಯ ಗೋಪುರಗಳು ಇವರ ವಾಸ್ತುಶಿಲ್ಪದ ಪ್ರಮುಖ ಆಕರ್ಷಣೆ.

ದ್ರಾವಿಡ ಶೈಲಿಯ ಪ್ರಮುಖ ದೇವಾಲಯಗಳು : ವಿರೂಪಾಕ್ಷ ದೇವಾಲಯ, ಹಜಾರ ರಾಮಸ್ವಾಮಿ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಕಡಲೆಕಾಳು ಹಾಗೂ ಸಾಸಿವೆ ಕಾಳು ಗಣಪತಿ, ಪಟ್ಟಾಭಿರಾಮ ದೇವಾಲಯ, ಮಹಾನವಮಿ ದಿಬ್ಬ, ಉಗ್ರನರಸಿಂಹ

ಇಂಡೋ ಇಸ್ಲಾಮಿಕ್ ಶೈಲಿ : ಕಮಲ ಮಹಲ್, ಗಜಶಾಲೆ, ರಾಣಿ ಸ್ನಾನಗೃಹ

ಲೇಪಾಕ್ಷಿಯನ್ನು ಶೈವರ ಅಜಂತಾ ಎಂದು ಕರೆಯುವರು.

ಕಾಮೆಂಟ್‌ಗಳು