ಗುಪ್ತ ಸಾಮ್ರಾಜ್ಯ

 ಗುಪ್ತ ಸಾಮ್ರಾಜ್ಯ (ಸಾ.ಶ 280 - 550)

ಶ್ರೀ ಗುಪ್ತ (ಸಾ.ಶ 280-300)

ಗುಪ್ತ ವಂಶದ ಸ್ಥಾಪಕ. ಇವನು ಗಯಾದ ಸಮೀಪ ಬೌದ್ಧಯಾತ್ರಿಗಳಿಗಾಗಿ ಮೃಗಶಿಖವನವನ್ನು ನಿರ್ಮಿಸಿದನು.

1ನೇ ಚಂದ್ರಗುಪ್ತ(ಸಾ. ಶ. 320335)

ಚಂದ್ರಗುಪ್ತನು ಲಿಚ್ಛವಿ ರಾಜಕುಮಾರಿ ಕುಮಾರದೇವಿಯನ್ನು ವಿವಾಹವಾದನು. ವಿಶಾಖದತ್ತನ ದೇವಿ ಚಂದ್ರಗುಪ್ತಂ ನಾಟಕವು ಈ ವಿವಾಹದ ಬಗ್ಗೆ ವಿವರ ನೀಡುತ್ತದೆ.

ಇವನಿಗೆ ಮಹಾರಾಜಾಧಿರಾಜ ಎಂಬ ಬಿರುದು ಇತ್ತು. ತಾನು ಅಧಿಕಾರಕ್ಕೆ ಬಂದ ನೆನಪಿಗೆ ಸಾ.ಶ 320 ರಲ್ಲಿ ಗುಪ್ತ ಶಖೆಯನ್ನು ಆರಂಭಿಸಿದನು.

ಸಮುದ್ರಗುಪ್ತ (ಸಾ.ಶ 335  375)

ಅಲಹಾಬಾದ್ ಸ್ಥಂಭಶಾಸನವು ಇವನನ್ನು ಸಾವಿರ ಸಮರಗಳ ನಾಯಕ ಎಂದು ವರ್ಣಿಸುತ್ತದೆ. ಹರಿಷೇಣ ಈ ಶಾಸನವನ್ನು ಕೆತ್ತಿದ್ದು ಇದು ಸಂಸ್ಕೃತ ಭಾಷೆಯಲ್ಲಿದೆ. ಎರಾನ್ ಶಾಸನ ಸಮುದ್ರಗುಪ್ತನನ್ನು ಕುರಿತು ಕೆತ್ತಲಾದ ಮತ್ತೊಂದು ಪ್ರಮುಖ ಶಾಸನವಾಗಿದೆ.

ಡಾ ವಿ.ಎ ಸ್ಮಿತ್ ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದಿದ್ದಾನೆ. ಸಂಸ್ಕೃತದಲ್ಲಿ ಕೃಷ್ಣಚರಿತೆ ಎಂಬ ಕಾವ್ಯವನ್ನು ಬರೆದು ಕವಿರಾಜ ಎಂಬ ಬಿರುದು ಪಡೆದನು.

ಗಾಂಧಾರ (ಅಫ್ಘಾನಿಸ್ತಾನ) ದೇಶದ ಅರಸ ದೇವಪುತ್ರ ಶಾಹಿ ಮತ್ತು ಶ್ರೀಲಂಕಾದ ಅರಸ ಮೇಘವರ್ಮ ಸಮುದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಯನ್ನು ಕಳುಹಿಸಿದ್ದರು.

2ನೇ ಚಂದ್ರಗುಪ್ತ (ಸಾ.ಶ 380-414)

ದೇವರ್ಷಿದೇವಗುಪ್ತದೇವರಾಜ ಎಂಬುವು ಇವನಿಗಿದ್ದ ಇನ್ನಿತರ ಹೆಸರುಗಳು. ಶಕಸತ್ರಪರ ಅರಸ ರುದ್ರಸಿಂಹನನ್ನು ಕೊಂದು ಶಕಾರಿ ಮತ್ತು ವಿಕ್ರಮಾದಿತ್ಯ ಎಂಬ ಬಿರುದುಗಳನ್ನು ಪಡೆದನು.

ಇವನ ಆಸ್ಥಾನದಲ್ಲಿ ನವರತ್ನಗಳೆಂಬ ಕವಿಗಳಿದ್ದರು. ಕಾಳಿದಾಸ, ವರರುಚಿ, ವೇತಾಲಭಟ್ಟ, ವರಾಹಮಿಹಿರ, ಶಂಕು, ಧನ್ವಂತ್ರಿ, ಬ್ರಹ್ಮಗುಪ್ತ, ಕ್ಷಪಣಕ, ಅಮರಸಿಂಹ

ಇವನ ಆಸ್ಥಾನಕ್ಕೆ ಚೀನಾದ ಯಾತ್ರಿಕ ಫಾಹಿಯಾನ್ ಭೇಟಿ ನೀಡಿದ್ದನು. ಇವನ ಪ್ರಸಿದ್ಧ ಕೃತಿ ಘೋಕೋಕಿ

ಗದ್ವಾ ಶಾಸನಸಾಂಚಿ ಶಾಸನ ಮತ್ತು ಮೆಹ್ರೌಲಿ ಸ್ಥಂಭ ಶಾಸನಗಳು ಇವನ ಇವನ ಸಾಧನೆಗಳ ಬಗ್ಗೆ ವರ್ಣಿಸುತ್ತವೆ.

1ನೇ ಕುಮಾರಗುಪ್ತ (ಸಾ.ಶ415-455)

ಇವನ ಮಂತ್ರಿಯಾದ ನರಸಿಂಹ ಗುಪ್ತನು ನಳಂದಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದನು. ಇವನ ಕಾಲದಲ್ಲಿ ಪ್ರಥಮ ಬಾರಿಗೆ ಹೂಣರು ಭಾರತದ ಮೇಲೆ ದಾಳಿ ಮಾಡಿದರು. ಅವರನ್ನು ಸೋಲಿಸಿ ಮಹೇಂದ್ರಾದಿತ್ಯ ಎಂಬ ಬಿರುದು ಪಡೆದನು

ಸ್ಕಂದಗುಪ್ತ (ಸಾ.ಶ 455-467)

ಗುಪ್ತರ ಕೊನೆಯ ಶ್ರೇಷ್ಠ ದೊರೆ. ಮಧ್ಯ ಏಷ್ಯಾದ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿ ಕ್ರಮಾದಿತ್ಯ ಮತ್ತು ವಿಕ್ರಮಾದಿತ್ಯ ಎಂಬ ಬಿರುದುಗಳನ್ನು ಪಡೆದನು. ಜುನಾಘಡ್ ಶಾಸನವು ಸ್ಕಂದಗುಪ್ತನ ಸಾಧನೆಗಳನ್ನು ವಿವರಿಸುತ್ತದೆ.

ವಿಷ್ಣುಗುಪ್ತ ಈ ವಂಶದ ಕೊನೆಯ ದೊರೆ

ಧರ್ಮ

ಸಾಂಚಿ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿತ್ತು. ಮೊದಲನೇ ಕುಮಾರಗುಪ್ತನು ನಲಂದಾವನ್ನು ಸ್ಥಾಪಿಸಿದನು ಎಂದು ಹೇಳಲಾಗಿದೆ.

ಆಡಳಿತ

ಪಾಟಲಿಪುತ್ರ ಗುಪ್ತರ ಮೊದಲ ರಾಜಧಾನಿಯಾಗಿತ್ತು. ನಂತರ ಉಜ್ಜಯಿನಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಿಕೊಂಡರು. ಸಾಮ್ರಾಜ್ಯವನ್ನು 26 ಪ್ರಾಂತ್ಯಗಳಾಗಿ ವಿಭಜಿಸಿಲಾಗಿತ್ತು ಇದರ ಮುಖ್ಯಸ್ಥನನ್ನು ಉಪಾರಿಕ, ಗೋಪ, ಭೋಗಪತಿ ಎಂದೆಲ್ಲಾ ಕರೆಯುತ್ತಿದ್ದರು. ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಜಿಸಲಾಗಿತ್ತು ವಿಷಯಗಳು ವಿಷಯಪತಿಗಳ ನಿಯಂತ್ರಣದಲ್ಲಿದ್ದವು. ನಂತರದ ಆಡಳಿತ ವಿಭಾಗಗಳಾಗಿ ನಗರ ಮತ್ತು ಗ್ರಾಮಗಳಿದ್ದವು.

ಪ್ರಮುಖ ಅಧಿಕಾರಿಗಳು

ಕಂಚುಕಿ  ಅರಸನ ಆಪ್ತ

ಅಮಾತ್ಯ  ಪ್ರಧಾನಮಂತ್ರಿ

ಮಹಾಸಂಧಿ ವಿಗ್ರಹಕ  ಯುದ್ಧ ಮತ್ತು ಶಾಂತಿ

ಮಹಾಕ್ಷಪಾಟಲಿಕ  ದಾಖಲೆಗಳ ಉಸ್ತುವಾರಿ

ಸಾಮಾಜಿಕ ವ್ಯವಸ್ಥೆ

ವರಾಹಮಿಹಿರನ ಬೃಹತ್ ಸಂಹಿತಾ ಗ್ರಂಥದಲ್ಲಿ ಗುಪ್ತರ ಕಾಲದ ವರ್ಣ ವ್ಯವಸ್ಥೆಯ ಬಗ್ಗೆ ಉಲ್ಲೇಖವಾಗಿದೆ. ಅಂತರ್ಜಾತೀಯ ವಿವಾಹಗಳು ನಡೆಯುತ್ತಿದ್ದವು. ಮತ್ತು ಅಸ್ಪೃಶ್ಯತಾ ಆಚರಣೆಯೂ ಸಹ ಇತ್ತು.

ಆರ್ಥಿಕ ವ್ಯವಸ್ಥೆ

ಮಥುರಾ ಹತ್ತಿ ಬಟ್ಟೆಗೆ ಮತ್ತು ಬನಾರಸ್ (ಕಾಶಿ) ರೇಷ್ಮೆ ಬಟ್ಟೆಗೆ ಪ್ರಸಿದ್ಧಿಯಾಗಿತ್ತು.

ಘಂಟಸಾಲಕುದುರಾ ಮತ್ತು ಬಂಗಾಳದ ತಾಮ್ರಲಿಪ್ತಿಗಳು ಪೂರ್ವ ಕರಾವಳಿಯ ಪ್ರಸಿದ್ಧ ಬಂದರು ಪ್ರದೇಶಗಳಾಗಿದ್ದವು.

ಚೌಲ್ಕಲ್ಯಾಣ ಮತ್ತು ಗುಜರಾತಿನ ಬ್ರೋಚ್ಕ್ಯಾಂಬೆ ಪಶ್ಚಿಮ ತೀರದ ಪ್ರಮುಖ ಬಂದರುಗಳಾಗಿದ್ದವು.

ಮಸಾಲೆ ಪದಾರ್ಥಗಂಧ ಮತ್ತು ಗಿಡಮೂಲಿಕೆಗಳನ್ನು ರಫ್ತು ಮಾಡುತ್ತಿದ್ದರು.

ಚೀನಾದಿಂದ ರೇಷ್ಮೆಅರೇಬಿಯಾ ಮತ್ತು ಪರ್ಷಿಯಾದಿಂದ ಕುದುರೆಗಳುಇಥಿಯೋಪಿಯಾದಿಂದ ಪಚ್ಚೆ ಮತ್ತು ದಂತಗಳನ್ನು ತರಿಸಿಕೊಳ್ಳುತ್ತಿದ್ದರು.

ಬಲಿಭೋಗಹಿರಣ್ಯಶುಲ್ಕ ಮುಂತಾದವು ಇವರ ಕಾಲದ ಪ್ರಮುಖ ತೆರಿಗೆಗಳಾಗಿದ್ದವು.

ಧರ್ಮ

ಗುಪ್ತರು ವೈದಿಕ ಧರ್ಮದ ಅನುಯಾಯಿಗಳಾಗಿದ್ದರೂ ಅವರ ಕಾಲದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಸಹ ಒಳ್ಳೆಯ ಸ್ಥಾನದಲ್ಲಿದ್ದವು. ಗುಪ್ತರ ಕಾಲಾವಧಿಯಲ್ಲಿ ಗುಜರಾತಿನ ವಲ್ಲಭಿ ಎಂಬಲ್ಲಿ ಸಾ.ಶ 512 ರಲ್ಲಿ 2ನೇ ಜೈನ ಧರ್ಮ ಸಮ್ಮೇಳನ ನಡೆಯಿತು. ದೇವರ್ಷಿ ಕ್ಷಮಾಶ್ರವಣ ಎಂಬಾತ ಇದರ ಅಧ್ಯಕ್ಷತೆ ವಹಿಸಿದ್ದನು.

ಸಾಹಿತ್ಯ

ಗುಪ್ತರ ಕಾಲವನ್ನು ಸುವರ್ಣಯುಗ ಎನ್ನುವರು. ಅದು ವಿಶೇಷವಾಗಿ ಸಾಹಿತ್ಯದ ಸುವರ್ಣಯುಗ ಎನ್ನಬಹುದು.

ಕಾಳಿದಾಸ (ಭಾರತದ ಶೇಕ್ಸ್ಪಿಯರ್) - ನಾಟಕಗಳು : ಅಭೀಜ್ಞಾನ ಶಾಕುಂತಲೆ, ಮಾಳವಿಕಾಗ್ನಿ ಮಿತ್ರ, ವಿಕ್ರಮೋರ್ವಶೀಯಮ. ಕಾವ್ಯಗಳು : ರಘುವಂಶ, ಕುಮಾರ ಸಂಭವ, ಮೇಘದೂತ, ಋತುಸಂಹಾರ, ಸೇತುಬಂಧ

ವಿಶಾಖದತ್ತ : ಮುದ್ರಾರಾಕ್ಷಸ, ದೇವಿಚಂದ್ರಗುಪ್ತಂ (ನಾಟಕಗಳು)

ಭಾರವಿ - ಕಿರಾತಾರ್ಜುನೀಯ

ವರರುಚಿ  ವ್ಯಾಕರಣ

ಭಾಸ : ಊರುಭಂಗ, ಮಧ್ಯಮವ್ಯಾಯೋಗ, ಕರ್ಣಭಾರ, ಪಂಚರಾತ್ರ, ದೂತ ಘಟೋತ್ಕಚ, ದೂತವಾಕ್ಯ, ಪ್ರತಿಮಾ, ಅಭಿಷೇಕ, ಬಾಲ ಚರಿತ, ಪ್ರತಿಜ್ಞಾ ಯೌಗಂಧರಾಯಣ, ಅವಿಮಾರಕ , ಸ್ವಪ್ನವಾಸವದತ್ತ, ಚಾರುದತ್ತ (ಈ ನಾಟಕವು ಅಪೂರ್ಣವಾಗಿದ್ದು ಇದನ್ನು ಶೂದ್ರಕ ಕವಿಯು ಪೂರ್ಣಗೊಳಿಸಿ ಮೃಚ್ಛಕಟಿಕ ಎಂದು ಹೆಸರಿಟ್ಟನು.)

ಶೂದ್ರಕ  ಮೃಚ್ಚಕಟಿಕ (ನಾಟಕ)

ದಂಡಿ  ಕಾವ್ಯಾದರ್ಶಅವಂತಿ ಸುಂದರ ಕಥಾದಶಕುಮಾರ ಚರಿತೆ

ವಿಷ್ಣಶರ್ಮ - ಪಂಚತಂತ್ರ

ಅಮರಸಿಂಹ  ಅಮರಕೋಶ/ನಾಮಲಿಂಗಾನು ಶಾಸನಂ (ನಿಘಂಟು)

ಭವಭೂತಿ  ಉತ್ತರ ರಾಮಚರಿತೆ

ವೇತಾಲಭಟ್ಟ  ಮಂತ್ರಶಾಸ್ತ್ರ

ಕಾಮಂಡಕ - ನೀತಿಸಾರ

ಶುಕ್ಲ - ನೀತಿಸಾರ

ಸುಬಂಧು  ವಾಸವದತ್ತ

ವಾತ್ಸಾಯಾನ - ಕಾಮಸೂತ್ರನ್ಯಾಯಭಾಷ

ಮಾಘಕವಿ - ಶಿಶುಪಾಲ ವಧೆ

ಭತೃಹರಿ - ಶೃಂಗಾರ ಶತಕ

ದಿನ್ನಾಗ - ಪ್ರಮಾಣ ಸಮುಚ್ಚಯ

ಪಾಣಿನಿ - ಅಷ್ಟಾಧ್ಯಾಯ

ಗುಣಾಢ್ಯ - ಬೃಹತ್ಕಥಾ

ವಿಜ್ಞಾನ ಮತ್ತು ತಂತ್ರಜ್ಞಾನ

ಚರಕ  ಚರಕ ಸಂಹಿತೆ

ವಾಗ್ಭಟ - ಅಷ್ಟಾಂಗ ಸಂಗ್ರಹ (ವೈದ್ಯಶಾಸ್ತ್ರ)

ಸುಶೃತ - ಸುಶೃತ ಸಂಹಿತೆ

2ನೇ ನಾಗಾರ್ಜುನ  ರಸವೈದ್ಯ

ಶಂಕು - ಶಿಲ್ಪಶಾಸ್ತ್ರ

ಕ್ಷಪಣಕ  ಜ್ಯೋತಿಷ್ಯಶಾಸ್ತ್ರ

ವರಾಹಮಿಹಿರ - ಪಂಚಸಿದ್ಧಾಂತಿಕ (ಖಗೋಳಶಾಸ್ತ್ರದ ಬೈಬಲ್), ಬೃಹತ್ ಸಂಹಿತಾ, ಬೃಹತ್ ಜಾತಕ, ಲಘು ಜಾತಕ

ಆರ್ಯಭಟ (ಭಾರತದ ನ್ಯೂಟನ್)  ಆರ್ಯಭಟೀಯಂಸೂರ್ಯ ಸಿದ್ಧಾಂತದಶಮಾಂಶಶೂನ್ಯ ಸಿದ್ಧಾಂತಜ್ಯೋತಿಷ್ಯ ಸಂಹಿತೆ. ಇವನು ಸೊನ್ನೆಯನ್ನು ಕಂಡುಹಿಡಿದನಲ್ಲದೇ ಮೊದಲ ಬಾರಿಗೆ ಗ್ರಹಣಗಳ ಪರಿಕಲ್ಪನೆಯನ್ನು ನೀಡಿದನು. ಬೀಜಗಣಿತದ ಬಗ್ಗೆ ಮೊದಲಿಗೆ ತಿಳಿಸಿದವನು ಸಹ ಇವನೇ.

ಬ್ರಹ್ಮಗುಪ್ತ - ಬ್ರಹ್ಮಸ್ಪುಟ ಸಿದ್ಧಾಂತಖಂಡವಾದ್ಯಕ

ಕಲೆ ಮತ್ತು ವಾಸ್ತುಶಿಲ್ಪ

ಮಥುರಾ ಮತ್ತು ಗಾಂಧಾರ (ಅಫ್ಘಾನಿಸ್ತಾನ) ಶಿಲ್ಪಕಲೆಯ ಎರಡು ಮಹಾನ್ ಕೇಂದ್ರಗಳಾಗಿದ್ದವು. ಗಂಧಾರ ಗ್ರೀಕ್-ಬೌದ್ಧ ಕಲೆಯ ಕೇಂದ್ರವಾಗಿತ್ತು.

ಪ್ರಮುಖ ವಾಸ್ತುಶಿಲ್ಪ ರಚನೆಗಳು : ಅಲಹಾಬಾದ್ ಸ್ಥಂಭಶಾಸನ, ಮೆಹ್ರೌಲಿ ಕಬ್ಬಿಣದ ಕಂಬ ಶಾಸನ, ಉದಯಗಿರಿ ಗುಹೆಗಳು, ದಶಾವತಾರ ದೇವಸ್ಥಾನ ದೇವಗಢ್‍, ಸಾರಾನಾಥ ಬುದ್ಧ, ಎಲಿಫೆಂಟಾ ಗುಹೆ ತ್ರಿಮೂರ್ತಿ

ಚಿತ್ರಕಲೆ : ಅಜಂತಾ ಪದ್ಮಪಾಣಿಯ ವರ್ಣಚಿತ್ರ

ಕಾಮೆಂಟ್‌ಗಳು