ಕಲ್ಯಾಣ ಚಾಲುಕ್ಯರು

 ಕಲ್ಯಾಣ ಚಾಲುಕ್ಯರು (973-1162)

ಕಲ್ಯಾಣ ಚಾಲುಕ್ಯರ ರಾಜ್ಯವನ್ನು ರಟ್ಟಸಾಡಿ ಏಳು ಕಾಲು ಲಕ್ಷ ಎಂದು ಕರೆಯುತ್ತಿದ್ದರು.

ಎರಡನೇ ತೈಲಪ (973-997)

970 ರಲ್ಲಿ ಚಾಲುಕ್ಯರ ಎರಡನೇ ತೈಲಪ ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸಿ ಚಾಲುಕ್ಯ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸಿದನು. ಇವನು ಮೊದಲು ಮಾನ್ಯಖೇಟವನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದನು.

1ನೇ ಸೋಮೇಶ್ವರ (1042-1068)

ಇವನು ರಾಜಧಾನಿಯನ್ನು ಮಾನ್ಯಖೇಟದಿಂಧ ಕಲ್ಯಾಣಕ್ಕೆ ವರ್ಗಾಯಿಸಿದನು. ಚೋಳರ ಪ್ರಸಿದ್ಧ ಅರಸ ಒಂದನೇ ರಾಜಾಧಿರಾಜನನ್ನು ಕೊಪ್ಪಂ ಯುದ್ಧದಲ್ಲಿ ಸೋಲಿಸಿದನು.

6ನೇ ವಿಕ್ರಮಾದಿತ್ಯ (1076-1126)

ಈತನು 1076 ರಲ್ಲಿ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು. ನೃತ್ಯ ವಿದ್ಯಾಧರಿ ಮತ್ತು ಅಭಿನವ ಸರಸ್ವತಿ ಎಂದು ಹೆಸರಾದ ತನ್ನ ಆಸ್ಥಾನ ನರ್ತಕಿ ಚಂದ್ರಲೇಖೆಯನ್ನು ವಿವಾಹವಾದನು.

ತನ್ನ ಆಸ್ಥಾನ ರಾಯಭಾರಿಯನ್ನು ಶ್ರೀಲಂಕಾದ ವಿಜಯಬಾಹುವಿನ ಆಸ್ಥಾನಕ್ಕೆ ಕಳುಹಿಸಿದ್ದನು. ವಿಕ್ರಮಪುರಿ ಎಂಬ ನಗರವನ್ನು ನಿರ್ಮಿಸಿದನು.

ಗದಗ ಶಾಸನ ಮತ್ತು ಲಕ್ಷ್ಮೇಶ್ವರ ಶಾಸನಗಳು ಇವನ ಆಡಳಿತ ಹಾಗೂ ದಿಗ್ವಿಜಯಗಳ ಕುರಿತು ಹೇಳುತ್ತವೆ.

3ನೇ ತೈಲಪನನ್ನು ಕಲಚೂರಿಯ ಬಿಜ್ಜಳನು ಕೊಲೆಮಾಡಿ ಸಿಂಹಾಸನ ಏರಿದನು. 4ನೇ ಸೋಮೇಶ್ವರ ಈ ವಂಶದ ಕೊನೆಯ ಅರಸ

ವಾಸ್ತುಶಿಲ್ಪ

ಆಯತಾಕಾರದ ದೇವಾಲಯಗಳ ನಿರ್ಮಾಣ ಮತ್ತು ಪ್ರದಕ್ಷಿಣಾ ಪಥ ಗರ್ಭಗುಡಿಯ ಹೊರಗೆ ಇರದೆ ಒಳಗೆ ಇರುತ್ತದೆ. ಇವು ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ಲಕ್ಷಣಗಳು

ತ್ರಿಕೂಟೇಶ್ವರ ದೇವಾಲಯ, ಲಕ್ಕುಂಡಿ ಕಾಶಿ ವಿಶ್ವೇಶ್ವರ, ಬಳ್ಳಿಗಾವೆ ತ್ರಿಪುರಾಂತಕ, ಇಟಗಿಯ ಮಹಾದೇವ ದೇವಾಲಯ (ದೇವಾಲಯಗಳ ಚಕ್ರವರ್ತಿ), ಸವಡಿಯ ಕಲ್ಲೇಶ್ವರ, ಸೋಮೇಶ್ವರ ದೇವಾಲಯ ಇವರ ಕಾಲದ ಪ್ರಮುಖ ದೇವಾಲಯಗಳು.

ಶಿಕ್ಷಣ

ಘಟಿಕಾಸ್ಥಾನ ಎಂಬುದು ವಿಶ್ವವಿದ್ಯಾಲಯಗಳಂತೆ ಚಾಲುಕ್ಯರ ಕಾಲದಲ್ಲಿದ್ದ ಉನ್ನತ ವಿದ್ಯಾಕೇಂದ್ರಗಳಾಗಿದ್ದವು. ಕಲುಬುರ್ಗಿಯ ನಾಗಾಯಿ ಪ್ರಸಿದ್ಧ ಘಟಿಕಾಸ್ಥಾನವಾಗಿತ್ತು. ಅಲ್ಲದೇ ಬಳ್ಳಿಗಾವೆಗದಗಕೋಟ ಮತ್ತು ಉಚ್ಚಗಿಗಳು ಪ್ರಸಿದ್ಧ ಅಗ್ರಹಾರಗಳಾಗಿದ್ದವು.

ಬಳ್ಳಿಗಾವೆಯು ಬೌದ್ಧಧರ್ಮದ ಮಹಾಯಾನ ಪಂಗಡದ ಕೇಂದ್ರವಾಗಿತ್ತು

ಸಾಹಿತ್ಯ

  • ರನ್ನ (ಕವಿ ಚಕ್ರವರ್ತಿ, ಸತ್ಯಾಶ್ರಯ ಇರಿವಬೆಡಂಗನ ಆಶ್ರಯದಲ್ಲಿದ್ದನು) – ಅಜಿತನಾಥ ಪುರಾಣ, ಸಾಹಸಭೀಮ ವಿಜಯ (ಗದಾಯುದ್ಧ), ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ರನ್ನಕಂದ
  • ಒಂದನೇ ನಾಗವರ್ಮ – ಕರ್ನಾಟಕ ಕಾದಂಬರಿ, ಛಂದೋಂಬುಧಿ
  • ಚಾವುಂಡರಾಯ - ಲೋಕೋಪಕಾರ (ವೈದ್ಯಶಾಸ್ತ್ರ), ಚಾವುಂಡರಾಯ ಪುರಾಣ (ತ್ರಿಷಷ್ಟಿ ಲಕ್ಷಣ ಮಹಾಪುರುಷ ಚರಿತ)
  • ಚಂದ್ರರಾಜ – ಮದನತಿಲಕ
  • ಶಾಂತಿನಾಥ - ಸುಕುಮಾರ ಚರಿತೆ
  • ನಾಗವರ್ಮಾಚಾರ್ಯ – ಚಂದ್ರಚೂಡಾಮಣಿ ಶತಕ (ಕನ್ನಡದ ಮೊದಲ ಶತಕ ಕೃತಿ)
  • ಶ್ರೀಧರಾಚಾರ್ಯ – ಜಾತಕ ತಿಲಕ (ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ)
  • 2ನೇ ನಾಗವರ್ಮ – ಕರ್ನಾಟಕ ಭಾಷಾಭೂಷಣ (ವ್ಯಾಕರಣ), ಅಭಿದಾನ ವಸ್ತುಕೋಶ (ಕನ್ನಡದ ಮೊದಲ ನಿಘಂಟು), ಕಾವ್ಯಾವಲೋಕನ,
  • ದುರ್ಗಸಿಂಹ - ಪಂಚತಂತ್ರ
  • ಜಗದ್ದಳ ಸೋಮನಾಥ – ಕರ್ನಾಟಕ ಕಲ್ಯಾಣಕಾರಕ
  • ಪಾರ್ಶ್ವನಾಥ - ಸಂಗೀತಮಯ ಸಾರ
  • ನಯಸೇನ – ಧರ್ಮಾಮೃತ
  • ಬ್ರಹ್ಮಶಿವ - ಸಮಯಪರೀಕ್ಷೆ
  • ಕೀರ್ತಿವರ್ಮ – ಗೋವೈದ್ಯ
  • 2ನೇ ಜಯಸಿಂಹ - ಸಂಗೀತ ಚೂಡಾಮಣಿ
  • ದಯಪಾಲ - ರೂಪಸಿದ್ಧಿ
  • ಬಿಲ್ಹಣ – ವಿಕ್ರಮಾಂಕದೇವ ಚರಿತ (6ನೇ ವಿಕ್ರಮಾದಿತ್ಯನ ಕುರಿತು)
  • 3ನೇ ಸೋಮೇಶ್ವರ – ಮಾನಸೋಲ್ಲಾಸ/ಅಭಿಲಾಷತಾರ್ಥ ಚಿಂತಾಮಣಿ (ಸಂಸ್ಕೃತ ವಿಶ್ವಕೋಶ), ವಿಕ್ರಮಾಂಕಾಭ್ಯುದಯ
  • ವಾದಿರಾಜ - ಪಾರ್ಶ್ವನಾಥ ಚರಿತ, ಯಶೋಧರ ಚರಿತ,
  • ಉದಯಾದಿತ್ಯ - ಉದಯಾದಿತ್ಯ ಅಲಂಕಾರ
  • ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತಾ (ಹಿಂದೂ ಕಾನೂನು ಸಂಹಿತೆ)
  • ನಾಗಚಂದ್ರ (ಅಭಿನವ ಪಂಪ) – ಮಲ್ಲಿನಾಥ ಪುರಾಣ, ರಾಮಚಂದ್ರ ಚರಿತ ಪುರಾಣ (ಪಂಪ ರಾಮಾಯಣ)
  • ರಾಜಾದಿತ್ಯ - ಕ್ಷೇತ್ರ ಗಣಿತ, ವ್ಯವಹಾರ ಗಣಿತ
  • ಜಗದೇಕ ಮಲ್ಲ - ಸಂಗೀತ ಚೂಡಾಮಣಿ

ಆರ್ಥಿಕತೆ

ಕಡಿತವೆರ್ಗಡೆ ಎಂಬುದು ಇವರ ಕಾಲದ ಪ್ರಮುಖ ತೆರಿಗೆಯಾಗಿತ್ತು.

ಲಕ್ಕುಂಡಿ (ಗದಗ)ಶಿವಮಲೆ (ಬಳ್ಳಾರಿ) ಹಾಗೂ ಸುಂಡಿ ಎಂಬಲ್ಲಿ ನಾಣ್ಯ ಮುದ್ರಿಸುವ ಠಂಕಸಾಲೆಗಳಿದ್ದವು. ದಮ್ಮಗದ್ಯಾಣಕಲಂಜುಕಾಸುಅಕ್ಕಂ ಇವುಗಳು ಇವರ ಕಾಲದ ಪ್ರಮುಖ ನಾಣ್ಯಗಳಾಗಿದ್ದವು.

ಕಾಮೆಂಟ್‌ಗಳು