ಗಂಗರು
ಗಂಗರು (ಸಾ ಶ 350 - 1004)
ಸಾ ಶ 350ರಲ್ಲಿ ಕೊಂಗಣಿವರ್ಮ (ದಡಿಗ) ಮತ್ತು ಮಾಧವರು ಗಂಗವಂಶವನ್ನು ಸ್ಥಾಪಿಸಿದರು. ದಡಿಗನಿಗೆ ಬಾಣಕುಲನಾಶಕ / ಬಾಣವಂಶವನದವಾನಲ ಎಂಬ ಬಿರುದಿತ್ತು. ಇವನ ಕಾಲ 350 - 400. ದಡಿಗನ ಕಾಲದಲ್ಲಿ ಕುವಲಾಲ ಗಂಗರ ರಾಜಧಾನಿಯಾಗಿತ್ತು.
ರಾಜ್ಯ ಸ್ಥಾಪನೆಗೆ ದಡಿಗನಿಗೆ ನೆರವಾದವರು ಜೈನ ಸನ್ಯಾಸಿ ಸಿಂಹನಂದಿ. ಸಿಂಹನಂದಿ ಮತ್ತು ದಡಿಗನ ಕುರಿತು ವಿವರ ನೀಡುವ ಶಾಸನ ಸಾ.ಶ 963 ರ ಮಾರಸಿಂಹನ ಕಡ್ಲೂರು / ಕಡಲೂರು ಶಾಸನ.
"ಕೊಟ್ಟ ಮಾತಿಗೆ ತಪ್ಪಿ ನಡೆದರೆ, ಮದ್ಯ ಮಾಂಸ ಸೇವಿಸದರೆ, ಪರನಾರಿಯನ್ನು ಬಯಸಿದರೆ, ನೀಚನ ಸ್ನೇಹ ಬೆಳಸಿದರೆ, ಯುದ್ಧದಿಂದ ಓಡಿಹೋದರೆ, ಜಿನನ ಶಾಸನವನ್ನು ಕಡೆಗಣಿಸಿದರೆ ನಿನ್ನ ವಂಶ ನಾಶವಾಗುತ್ತದೆ" ಎಂದು ಸಿಂಹನಂದಿಯು ದಡಿಗನಿಗೆ ಎಚ್ಚರಿಕೆ ನೀಡಿರುವುದು ಕಡಲೂರು ಶಾಸನದ ಸಾರ.
ಮಾಧವ (ಸಾ ಶ 400 - 440)
ದಡಿಗನ ನಂತರ ತಡಂಗಾಲ ಮಾಧವನು ಅಧಿಕಾರಕ್ಕೆ ಬಂದನು. ಕುವಲಾಲದಿಂದ ತಲಕಾಡಿಗೆ ರಾಜಧಾನಿಯನ್ನು ವರ್ಗಾಯಿಸಿದನು.
ಹರಿವರ್ಮನ ಕಾಲದಲ್ಲಿ ತಲಕಾಡು (ಮೈಸೂರು ಜಿಲ್ಲೆ) ಅಧಿಕೃತ ರಾಜಧಾನಿಯಾಯಿತು. ಆನಂತರ ಮಾನ್ಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.
ಅವನೀತ (ಸಾ ಶ 469 - 529)
ಗಂಗ ಅವನೀತನ ಗುರುಗಳು ವಿಜಯಕೀರ್ತಿ. ಈತನು ಪುನ್ನಾಟದ ಪಲ್ಲವರ ರಾಜಕುಮಾರಿ ಜ್ಯೇಷ್ಠಾದೇವಿಯನ್ನು ವಿವಾಹವಾದನು.
ದುರ್ವಿನೀತ (ಸಾ ಶ 529 - 579)
ಗಂಗರ ಪ್ರಸಿದ್ಧ ಅರಸ ದುರ್ವಿನೀತ. ಈತನ ಗುರುಗಳು ಪೂಜ್ಯಪಾದ ದೇವನಂದಿ. ರೈತರಿಗೆ ನೀರಾವರಿ ವ್ಯವಸ್ಥೆ ಮಾಡಿಸಿಕೊಟ್ಟ ವಿವರ ಇವನ ನಲ್ಲಾಳ / ಹೆಬ್ಬೆಟ್ಟು ಶಾಸನದಿಂದ ತಿಳಿದುಬರುತ್ತದೆ. ಈತನಿಗೆ ಧರ್ಮಮಹಾರಾಜ ಎಂಬ ಬಿರುದಿತ್ತು
ದುರ್ವೀನೀತನು ಪೈಶಾಚಿ ಭಾಷೆಯಲ್ಲಿ ರಚಿತವಾದ ಗುಣಾಢ್ಯನ ವಡ್ಢಕತೆಯನ್ನು ಬೃಹತ್ಕಥಾ ಎಂಬ ಹೆಸರಿನಲ್ಲಿ ಸಂಸ್ಕೃತಕ್ಕೆ ಅನುವಾದಿಸಿದನು. ಅಲ್ಲದೇ ಸಂಸ್ಕೃತದಲ್ಲಿ ಶಬ್ದಾವತಾರ ಎಂಬ ಕೃತಿಯನ್ನು ಬರೆದನು. ದುರ್ವೀನೀತನು ಇವನ ಆಸ್ಥಾನದಲ್ಲಿದ್ದ ಭಾರವಿ ಕವಿಯ ಕಿರಾತಾರ್ಜುನಿಯ ಎಂಬ ಕೃತಿಯ 15 ನೇ ಸರ್ಗಕ್ಕೆ ಟೀಕೆಯನ್ನು ಬರೆದನು.
ಶ್ರೀಪುರುಷ (ಸಾ ಶ 726 - 788)
ಗಂಗರಸ ಶ್ರೀಪುರುಷನಿಗೆ ಪೆರ್ಮನಡಿ ಎಂಬ ಬಿರುದು ಇತ್ತು, ತಲಕಾಡಿನಿಂದ ಮಾಕುಂದಕ್ಕೆ ರಾಜಧಾನಿಯನ್ನು ವರ್ಗಾಯಿಸಿದನು ಹಾಗೂ ಮಣ್ಣೆಯನ್ನು ತನ್ನ ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡನು. ಸಾ ಶ 768 ರಲ್ಲಿ ಬಾಗೆಯೂರು ಮತ್ತು ಪಿಂಚನೂರುಗಳ ಬಳಿ ನಡೆದ ಕದನದಲ್ಲಿ ರಾಷ್ಟ್ರಕೂಟರನ್ನು ಸೋಲಿಸಿದನು
ಈತನು ಸಂಸ್ಕೃತದಲ್ಲಿ ಗಜಶಾಸ್ತ್ರ ಎಂಬ ಕೃತಿಯನ್ನು ಬರೆದನು.
೨ನೇ ಶಿವಮಾರ / ಸೈಗೊತ್ತ ಶಿವಮಾರ (ಸಾ ಶ 788 - 816)
ಕನ್ನಡದಲ್ಲಿ ಗಜಾಷ್ಠಕ ಎಂಬ ಕೃತಿಯನ್ನು ಬರೆದನು. ರಾಷ್ಟ್ರಕೂಟರ ಧ್ರುವನ ಮೇಲೆ ಯುದ್ಧ ಮಾಡಿ ಸೋತು ತನ್ನ ಜೀವನದ ಬಹುಪಾಲನ್ನು ಸೆರೆಯಲ್ಲಿ ಕಳೆದನು
ನೀತಿಮಾರ್ಗ ಎರೆಯಂಗ (ಸಾ ಶ 843 870)
ಸಾ ಶ 868 ರಲ್ಲಿ ರಾಜರಾಮುಡು ಕದನದಲ್ಲಿ ರಾಷ್ಟ್ರಕೂಟರ ನೃಪತುಂಗನನ್ನು ಸೋಲಿಸಿದನು. ತನ್ನ ಹಿರಿಯ ಮಗ ೨ನೇ ಬೂತುಗನಿಗೆ ನೃಪತುಂಗನ ಮಗಳಾದ ಚಂದ್ರಾಲಬ್ಬೆಯನ್ನು ತಂದು ವಿವಾಹ ಮಾಡಿದನು. ನೀತಿಮಾರ್ಗ ಎಂಬುದು ಇವನ ಬಿರುದು.
೨ನೇ ಬೂತುಗ (ಸಾ ಶ 938 - 961)
ಸಾ ಶ 948 ರಲ್ಲಿ ನಡೆದ ತೆಕ್ಕೋಳಂ ಕದನದಲ್ಲಿ ಚೋಳರ ವಿರುದ್ಧ ರಾಷ್ಟ್ರಕೂಟರ ಪರವಾಗಿ ಯುದ್ಧ ಮಾಡಿದನು. ಇವನಿಗೆ ನನ್ನಿಯ ಗಂಗೆಯ ಮತ್ತು ಮಾಧವಶ್ರೇಷ್ಠ ಪ್ರಿಯ ಎಂಬ ಬಿರುದುಗಳಿದ್ದವು
೨ನೇ ಮಾರಸಿಂಹ (ಸಾ 963 - 975)
ಇವನ ಅವಧಿಯಲ್ಲಿ ಚಾವುಂಡರಾಯನು ಮಹಾಮಂತ್ರಿಯಾಗಿ ನೇಮಕವಾದನು. ಅವನಿಪ್ರಿಯ ಮಾರಸಿಂಹ ಎಂಬುದು ಮಾರಸಿಂಹನ ಬಿರುದು.
4ನೇ ರಾಚಮಲ್ಲ (ಸಾ ಶ 975 - 986)
ಇವನ ಆಡಳಿತದಲ್ಲಿ ರಾಚಮಲ್ಲನ ತಾಯಿಯ ನೆನಪಿಗಾಗಿ ರಾಚಮಲ್ಲನ ಆದೇಶದಂತೆ ಚಾವುಂಡರಾಯನು ಸಾ.ಶ 981 ರಲ್ಲಿ ಶ್ರವಣಬೆಳಗೊಳದಲ್ಲಿ ಅರಿಷ್ಟನೇಮಿ ಎಂಬ ಶಿಲ್ಪಿಯಿಂದ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಿದನು.
ಶ್ರವಣಬೆಳಗೊಳದಲ್ಲಿ ಬ್ರಹ್ಮಸ್ಥಂಭ ಮತ್ತು ಮಾನಸ್ಥಂಭಗಳನ್ನು ನಿರ್ಮಿಸಿದನು.
ಚಾವುಂಡರಾಯನ ಮೇಲಿನ ಗೌರವದಿಂದ ರಾಚಮಲ್ಲನು ಚಾವುಂಡರಾಯನನ್ನು ರಾಯ ಎಂದು ಕರೆಯುತ್ತಿದ್ದನು. ಚಾವುಂಡರಾಯನಿಗೆ ಸಮರಪರಶುರಾಮ, ಪ್ರತಿಪಕ್ಷ ರಾಕ್ಷಸ ಮತ್ತು ಸತ್ಯಯುಧಿಷ್ಠಿರ ಎಂಬ ಬಿರುದುಗಳಿದ್ದವು.
ಈ ವಂಶದ ಕೊನೆಯ ಅರಸ ರಕ್ಕಸಗಂಗ. ಚೋಳರ ರಾಜರಾಜ ಚೋಳನು ರಕ್ಕಸಗಂಗನನ್ನು ಸೋಲಿಸಿ ತಲಕಾಡನ್ನು ಗೆದ್ದನು.
ಆಡಳಿತ ಮತ್ತು ಅಧಿಕಾರಗಳು
ಗಂಗರ ಸಾಮ್ರಾಜ್ಯವನ್ನು ತೊರೆನಾಡು / ಅಸಂಡಿನಾಡು ಎಂತಲೂ ಕರೆಯುತ್ತಿದ್ದರು ಇದರ ಮುಖ್ಯಸ್ಥ ರಾಜ
ಆಡಳಿತ ಅನುಕೂಲಕ್ಕಾಗಿ ಪಂಚಮಹಾಪ್ರಧಾನರನ್ನು ನೇಮಿಸಲಾಗಿತ್ತು
೧ ಧರ್ಮಾಧ್ಯಕ್ಷ (ಪುರೋಹಿತ) ಮತ್ತು ರಾಜ್ಯಾಧ್ಯಕ್ಷ (ಅರಸ) ಎಂಬ ಎರಡು ಪ್ರಕಾರದ ನ್ಯಾಯಂಗ ವ್ಯವಸ್ಥೆಗಳಿದ್ದವು.
೨ ಪ್ರಧಾನಮಂತ್ರಿ - ಅಮಾತ್ಯ
೩ ದಂಡನಾಯಕ - ಸೇನಾಧಿಪತಿ
೪ ಭಂಡಾರಿಕ - ಖಜಾನೆ ಅಧಿಕಾರಿ
೫ ಸಂಧಿ ವಿಗ್ರಹಿಕ - ವಿದೇಶಾಂಗ ಸಚಿವ
ಮನೆವೆರ್ಗಡೆ ಅರಮನೆಯ ಉಸ್ತುವಾರಿ ಅಧಿಕಾರಿಯಾಗಿದ್ದನು
ರಾಜ್ಯವನ್ನು ವಿಭಾಗಿಸಿ ಆಡಳಿತಕ್ಕೆ ಅನುಕೂಲವಾಗಿ ಅಧಿಕಾರಿಗಳನ್ನು ನೇಮಿಸಲಾಗಿತ್ತು
ವಿಷಯ - ವಿಷಯಪತಿ
ಕಂಪಣ - 12-30 ಗ್ರಾಮಗಳಿಗೆ ಒಂದು ಕಂಪಣ
ಗ್ರಾಮ - ಪ್ರಭುಗಾವುಂಡ / ಪ್ರಜೆಗಾವುಂಡ
ಸಾಹಿತ್ಯ
ಭಾರವಿ : ಕಿರಾತಾರ್ಜುನಿಯ
ಗುಣಾಢ್ಯ : ವಡ್ಡಕಥಾ
ದೇವನಂದಿ : ಶಬ್ದಾವತಾರ
೧ನೇ ಮಾಧವ : ದತ್ತಕ ಸೂತ್ರಕ್ಕೆ ಟಿಪ್ಪಣಿ
ಶಿವಮಾರ : ಶಿವಮಾರ ತರ್ಕ
ಹೇಮಸೇನ : ರಾಘವ ಪಾಂಡವೀಯ
ವಾದೀಬ ಸಿಂಹ : ಗದ್ಯ ಚಿಂತಾಮಣಿ ಮತ್ತು ಕ್ಷಾತ್ರ ಚೂಡಾಮಣಿ
1ನೇ ನಾಗವರ್ಮ : ಛಂದೋಂಬುದಿ, ಕಾದಂಬರಿ
ನೇಮಿಚಂದ್ರ : ದ್ರವ್ಯಸಾರ ಸಂಗ್ರಹ
ಪೂಜ್ಯಪಾದರು : ಶಬ್ದಾವತಾರ (ಸಂಸ್ಕೃತ ವ್ಯಾಕರಣ)
ಒಂದನೇ ಚಾವುಂಡರಾಯ : ಚರಿತ್ರಸಾರ (ಸಂಸ್ಕೃತ)
ಎರಡನೇ ಚಾವುಂಡರಾಯ : ಕನ್ನಡದಲ್ಲಿ ಚಾವುಂಡರಾಯ ಪುರಾಣ (ತ್ರಿಷಷ್ಟಿ ಲಕ್ಷಣ ಮಹಾಪುರಾಣ)
ಚಾಚಲಾದೇವಿ ಎಂಬಾಕೆ ಪ್ರಸಿದ್ಧ ನೃತ್ಯಗಾರ್ತಿಯಾಗಿದ್ದು ಇವಳಿಗೆ ಪಾತ್ರಜಗದವಳೆ ಎಂಬ ಬಿರುದು ಇತ್ತು.
ತಲಕಾಡು, ಶ್ರವಣಬೆಳಗೊಳ ಮತ್ತು ಮಾನ್ಯಪುರಗಳು ಗಂಗರ ಕಾಲದ ಪ್ರಮುಖ ವಿದ್ಯಾಕೇಂದ್ರಗಳಾಗಿದ್ದವು
ಆರ್ಥಿಕತೆ
ಮದಗಜದ ಚಿತ್ರವಿದ್ದ ಗದ್ಯಾಣ ಎಂಬುದು ಇವರ ಕಾಲದ ಚಿನ್ನದ ನಾಣ್ಯವಾಗಿತ್ತು.
ಭೂಮಿಯನ್ನು ಮಾಪನ ಮಡಲು ಗಂಗಕೋಲು / ಭೇರುಂಡ ಕೋಲನ್ನು ಬಳಸುತ್ತಿದ್ದರು
ಬೆಂಗಳೂರಿನ ಸಮೀಪದ ಜಾಲಹಳ್ಳಿ ಮತ್ತು ಘಟ್ಟವಾಡಿ ಎಂಬಲ್ಲಿ ಇವರ ಕಾಲದಲ್ಲಿ ತೋಡಿಸಲಾದ ಎರಡು ಕೆರೆಗಳಿವೆ.
ಬೆಂಗಳೂರು ಸಮೀಪದ ವಿಜಯಪುರ ಎಂಬುದು ಇವರ ಕಾಲದಲ್ಲಿ ನೇಕಾರಿಕೆ ವೃತ್ತಿಗೆ ಪ್ರಸಿದ್ಧಿಯಾಗಿತ್ತು
ವಾಸ್ತುಶಿಲ್ಪ
ಶ್ರವಣಬೆಳಗೊಳದ ಮಾನಸ್ಥಂಭ ಮತ್ತು ಬ್ರಹ್ಮಮಾನಸ್ಥಂಭಗಳು
ತಲಕಾಡಿನ ಪಾತಾಳೇಶ್ವರ ದೇವಾಲಯ, ಮರಳು ಸಿದ್ಧೇಶ್ವರ ದೇವಾಲಯ, ಪಂಚಲಿಂಗೇಶ್ವರ ದೇವಾಲಯ
ಮಣ್ಣೆಯ ಕಪಿಲೇಶ್ವರ ದೇವಾಲಯ
ಶ್ರವಣಬೆಳಗೊಳದ ಬ್ರಹ್ಮೇಶ್ವರ ದೇವಾಲಯ, ಚಾವುಂಡರಾಯ ಬಸದಿ, ಪ್ರಭಾಚಂದ್ರ ಬಸದಿ, ಪಾರ್ಶ್ವನಾಥ ಬಸದಿ
ಕೋಲಾರದ ಕೋಲಾರಮ್ಮ ದೇವಾಲಯ, ಮಹಾಲಿಂಗೇಶ್ವರ ದೇವಾಲಯ, ಸೋಮನಾಥ ದೇವಾಲಯ
ನರಸಮಂಗಲದ ರಾಮಲಿಂಗೇಶ್ವರ ದೇವಾಲಯ
ಶಿವಮೊಗ್ಗ ಸಮೀಪದ ದುಂಡಲಿ ಎಂಬಲ್ಲಿ ದಡಿಗನು ಒಂದು ಜಿನಾಲಯ ನಿರ್ಮಿಸಿದನು.
ಬೇಗೂರಿನ ನಗರೇಶ್ವರ ದೇವಾಲಯ
ಶಾಸನಗಳು
ಗುಮ್ಮಾರೆಡ್ಡಿ ಶಾಸನ, ಉಮ್ಮತ್ತೂರಿನ ಶಾಸನ, ಹೆಬ್ಬಂಡೆ ಶಾಸನ, ಮಲ್ಲೋಹಳ್ಳಿ ಶಾಸನ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ