ಶಾತವಾಹನರು

 ಶಾತವಾಹನರು (ಸಾ.ಶ.ಪೂ 235 - ಸಾ.ಶ 225)

ಕರ್ನಾಟಕವನ್ನು ಆಳಿದ ಮೊದಲ ಸಾಮ್ರಾಜ್ಯ. ಅಶೋಕನ 12ನೇ ಶಿಲಾಶಾಸನವು ಶಾತವಾಹನರನ್ನು ಆಂದ್ರಭೃತ್ಯರು ಎಂದು ಉಲ್ಲೇಖಿಸಿದೆ. ಪ್ರತಿಷ್ಠಾನ/ಪೈಥಾನ್ ಅವರ ರಾಜಧಾನಿಯಾಗಿತ್ತು. ಇದು ಗೋದಾವರಿ ನದಿ ದಡದಲ್ಲಿದೆ. ವರಾಹ ಇವರ ಲಾಂಛನ.

1ನೇ ಶಾತಕರ್ಣಿಯ ಪತ್ನಿ ನಾಗನಿಕಳ (ನಯನಿಕ) ನಾನಾಘಾಟ್ ಶಾಸನವು ಈ ವಂಶದ ಅರಸರು ಆಚರಿಸಿದ ರಾಜಸೂಯ ಮತ್ತು ಅಶ್ವಮೇಧ ಯಾಗಗಳ ಬಗ್ಗೆ ತಿಳಿಸುತ್ತದೆ. ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಶಾತವಾಹನಿಹಾರ/ಶಾತವಾಹನ ಪ್ರಾಂತ್ಯ ಎಂದು ಕರೆಯುತ್ತಿದ್ದರು.

ಶಾತವಾಹನರ ಮೂಲ

ಇವರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಎರಡು ಅಭಿಪ್ರಾಯಗಳಿವೆ

ತೆಲುಗು ಮೂಲ : ಈ ಸಿದ್ದಾಂತದ ವಾದಕರು ಪ್ರೊ. ವಿ.ಎ. ಸ್ಮಿತ್ ಮತ್ತು ಭಂಡಾರಕರ್

ಕನ್ನಡ ಮೂಲ : ಕೆ.ಪಿ.ಜಯಸ್ವಾಲ. ಹಿರೇಹಡಗಲಿ ಶಾಸನವು ಶಾತಹನೀರಟ್ಟಿ (ಬಳ್ಳಾರಿ) ಶಾತವಾಹನರ ಮೂಲ ಪ್ರದೇಶ ಎಂದು ಹೇಳುತ್ತದೆ.

ಸಿಮುಖ (ಸಾ.ಶ.ಪೂ 235213)

ಸಿಮುಖ ಈ ವಂಶದ ಸ್ಥಾಪಕ. ಪ್ರತಿಷ್ಠಾನ/ಪೈಥಾನ್ ಇವನ ರಾಜಧಾನಿಯಾಗಿತ್ತು. ಸಾ.ಶ.ಪೂ 235ರಲ್ಲಿ ಇವನು ಕಣ್ವರ ಕೊನೆಯ ದೊರೆ ಸುಶರ್ಮನನ್ನು ಕೊಂದು ಸ್ವತಂತ್ರನಾದನು. ಇವನು ನಾಸಿಕ್ ನಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದನು. ಮುಂದೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಸಿಮುಖನ ರಾಜಧಾನಿಯಾಯಿತು.

ನಾನಾಘಾಟ್ ಶಾಸನ ಇವನನ್ನು ರಾಜಸಿಮುಖ ಶಾತವಾಹನ ಎಂದು ವರ್ಣಿಸಿದೆ ಮತ್ತು ಗೌತಮಿ ಪುತ್ರನ ನಾಸಿಕ ಶಾಸನದಲ್ಲಿ ಏಕಬ್ರಾಹ್ಮಣ ಎಂದು ಕರೆಯಲಾಗಿದೆ.

ಹಾಲ (ಸಾ.ಶ 20-24)

ಪ್ರಾಕೃತ ಭಾಷೆಯಲ್ಲಿ ಗಾಥಾಸಪ್ತಸತಿ (ಗಾತಾಸತ್ತಸಈ) ಕೃತಿ ಬರೆದನು. ಇದೊಂದು ಪ್ರೇಮ ಕವನಗಳ ಸಂಕಲನವಾಗಿದೆ. ಲೀಲಾವಾಣಿ ಎಂಬ ಕೃತಿಯು ಇವನ ದಂಡಯಾತ್ರೆಯನ್ನು ಕುರಿತು ವಿವರಿಸುತ್ತದೆ.

ಗೌತಮಿಪುತ್ರ ಶಾತಕರ್ಣಿ (ಸಾ.ಶ 60-84)

ಈತನ ವಿಜಯಗಳ ನೆನಪಿಗಾಗಿ ಇವನ ತಾಯಿ ಗೌತಮಿ ಬಾಲಾಶ್ರಿ ನಾಸಿಕ್ ನಲ್ಲಿ ಒಂದು ಗುಹಾ ಶಾಸನವನ್ನು ಬರೆಸಿದಳು. ಶಕ ವಂಶದ ಮೇಲಿನ ವಿಜಯದ ಸಂಕೇತವಾಗಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದನು. ಇವನು ಸಾ.ಶ 78 ರಲ್ಲಿ ಶಾಲಿವಾಹನ ಶಕೆಯನ್ನು ಜಾರಿಗೆ ತಂದನು. 

ತ್ರೈಸಮುದ್ರತೋಯ ಪೀತವಾಹನಶಾತವಾಹನ ಕುಲಯಶಃ ಪ್ರತಿಷ್ಠಾಪಕರನವನಗರ ಸ್ವಾಮಿ ಮತ್ತು ಪ್ರತಿಷ್ಠಾನಪತಿ ಎಂಬುವು ಇವನಿಗಿದ್ದ ಬಿರುದುಗಳು.

ಕ್ಷತ್ರಪ ವಂಶದ ಅರಸ ನಹಪಾಣನನ್ನು ಸೋಲಿಸಿ ಅವನ ನಾಣ್ಯಗಳ ಮೇಲೆ ತನ್ನ ರಾಜಚಿಹ್ನೆಯನ್ನು ಮುದ್ರಿಸಿದನು.

ತನ್ನ ಮಗ ವಶಿಷ್ಟಪುತ್ರ ಪುಲುಮಾಯಿಯ ಜೊತೆ ಸಂಯುಕ್ತವಾಗಿ ರಾಜ್ಯಭಾರ ಮಾಡಿ ಅದರ ಸಂಕೇತವಾಗಿ ಸಂಯುಕ್ತ ನಾಣ್ಯಗಳನ್ನು ಅಚ್ಚು ಹಾಕಿಸಿದನು.

ಯಜ್ಞಶ್ರೀ ಶಾತಕರ್ಣಿ ಈ ವಂಶದ ಕೊನೆಯ ಅರಸ

ಆಡಳಿತ

ರಾಜನೇ ರಾಜ್ಯದ ಮುಖ್ಯಸ್ಥ ಅವನನ್ನು ಕುಮಾರನ್, ರಾಜನ್, ಸ್ವಾಮಿನ್ ಎಂಬ ನಾನಾ ಹೆಸರುಗಳಿಂದ ಕರೆಯುತ್ತಿದ್ದರು. ಸಾಮ್ರಾಜ್ಯವನ್ನು ಆಡಳಿತಕ್ಕನುಕೂಲವಾಗಿ ಅಹರ (ಪ್ರಾಂತ್ಯ), ನಿಗಮ ಮತ್ತು ಗ್ರಾಮಗಳಾಗಿ ವಿಭಜನೆ ಮಾಡಲಾಗಿತ್ತು.

ಮುಖ್ಯ ಅಧಿಕಾರಿಗಳು

ಅಮಾತ್ಯ- ಪ್ರಾಂತ್ಯಗಳ ರಾಜ್ಯಪಾಲ

ರಾಜಮಾತ್ಯ- ರಾಜನ ಆಪ್ತ ಸಲಹೆಗಾರ

ಭಾಂಡಗಾರಿಕ- ಸರಕು ಸರಂಜಾಮುಗಳ ಮೇಲ್ವಿಚಾರಕ

ಹೆರಣಿಕ- ಕೋಶಾಧ್ಯಕ್ಷ

ಧರ್ಮ

ಆಂದ್ರಪ್ರದೇಶದ ಅಮರಾವತಿ ಇವರ ಕಾಲದ ಪ್ರಮುಖ ಬೌದ್ಧ ವಿದ್ಯಾಕೇಂದ್ರವಾಗಿತ್ತು. ಜೈನ ದಿಗಂಬರ ಪಂಥದ ಸಂನ್ಯಾಸಿ ಕುಂದ ಕುಂದಾಚಾರ್ಯನು ಶಾತವಾಹನರ ಪ್ರಮುಖ ರಾಜಗುರುವಾಗಿದ್ದನು. ಬೌದ್ಧ ಧರ್ಮ ಮತ್ತು ಪ್ರಾಕೃತ ಭಾಷೆಗಳು ಇವರ ಕಾಲದಲ್ಲಿ ವಿಪುಲವಾಗಿ ಬೆಳೆದವು.

ಮಂಡ್ಯ ಜಿಲ್ಲೆಯ ಮಳವಳ್ಳಿ ಸ್ಥಂಭಶಾಸನದಲ್ಲಿ ಭೂದಾನದ ಕುರಿತು ಉಲ್ಲೇಖಿಸಲಾಗಿದೆ.

ಆರ್ಥಿಕ ಸ್ಥಿತಿ

ಅರಿಕಮೇಡು ಮತ್ತು ಚಂದ್ರವಳ್ಳಿಯಲ್ಲಿ ದೊರೆತ ರೋಮನ್ ನಾಣ್ಯಗಳಿಂದ ಅವರು ರೋಮ್ ನೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರೆಂದು ತಿಳಿದುಬರುತ್ತದೆ.

ವಜ್ರನೀಲಮುತ್ತುಬೆಳ್ಳಿಆಭರಣಗಳುಮೆಣಸುಶ್ರೀಗಂಧಏಲಕ್ಕಿಸಾಂಬಾರ್ ಪದಾರ್ಥಗಳು ರಫ್ತಾಗುತ್ತಿದ್ದು

ಮದ್ಯತಾಮ್ರಸೀಸೆಗಾಜುಕುದುರೆಚಿನ್ನಔಷಧ ಮುಂತಾದವುಗಳು ಆಮದಾಗುತ್ತಿದ್ದವು.

ಬ್ರೋಚ್ಕಲ್ಯಾಣಗೋವಾವೈಜಯಂತಿಹೊನ್ನಾವರ ಇವರ ಕಾಲದ ಪ್ರಮುಖ ಬಂದರು ಪ್ರದೇಶಗಳಾಗಿದ್ದವು.

ಶಾತವಾಹನರಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಹ ಇದ್ದು ವೃತ್ತಿ ಸಂಘಗಳ ಹಿಡಿತದಲ್ಲಿರುತ್ತಿದ್ದವು. ಈ ಸಂಘಗಳು ವಾರ್ಷಿಕ ಬಡ್ಡಿಗೆ ಸಾಲವನ್ನು ನೀಡುತ್ತಿದ್ದವು.

ನಾಣ್ಯಗಳು

ಶಾತವಾಹನರು ದಿನಾರಸುವರ್ಣಗದ್ಯಾಣ ಎಂಬ ಚಿನ್ನದ ನಾಣ್ಯಗಳನ್ನುಕುಷಣ ಮತ್ತು ಕರ್ಷಪಣ ಎಂಬ ಬೆಳ್ಳಿಯ ನಾಣ್ಯಗಳನ್ನು ಮತ್ತು ದ್ರಮ್ಮಪಣ ಎಂಬ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದರು. ಅವು ಹಡಗು ಮತ್ತು ರಾಜರ ಚಿತ್ರಗಳನ್ನೊಳಗೊಂಡಿವೆ. ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ಶಾತವಾಹನರ ನಾಣ್ಯಗಳು ದೊರೆತಿವೆ.

ಸಾಹಿತ್ಯ

ಪ್ರಾಕೃತ ಇವರ ಆಡಳಿತ ಭಾಷೆಯಾಗಿತ್ತು. ಹಾಗಾಗಿ ಪ್ರಾಕೃತ ಸಾಹಿತ್ಯ ಇವರ ಕಾಲದಲ್ಲಿ ಯಥೇಚ್ಛವಾಗಿ ಬೆಳೆದುಬಂದಿತು. ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಇವರ ಶಾಸನಗಳು ಕೆತ್ತಲ್ಪಟ್ಟಿವೆ.

ಗುಣಾಢ್ಯ - ಬೃಹತ್ ಕಥಾ (ಪೈಶಾಚಿ ಭಾಷೆ)

ಸರ್ವವರ್ಮ  ಕಾತಂತ್ರ ವ್ಯಾಕರಣ

ಕುಂದ ಕುಂದಾಚಾರ್ಯ - ಪ್ರಭೃತಸಾರ, ಸಮಯಸಾರ, ಪ್ರವಚನಸಾರ

ವಾಸ್ತುಶಿಲ್ಪ

ಇವರ ಕಾಲದಲ್ಲಿ ಕಟ್ಟಡಗಳಿಗೆ ಕೆಂಪು ಶಿಲೆಯನ್ನು ಬಳಸುತ್ತಿದ್ದರು.

ಸಿಮುಖನು ನಾಸಿಕ್ ನಲ್ಲಿ ಬೌದ್ಧ ದೇವಾಲಯ ನಿರ್ಮಿಸಿದನು

ಅಮರವಾತಿಯ ಸ್ತೂಪ ಇವರ ಪ್ರಸಿದ್ಧ ಕೊಡುಗೆಯಾಗಿದೆ. ಈ ಸ್ಥೂಪವು ಗಾಂಧಾರ ಮತ್ತು ಮಥುರಾ ಶೈಲಿಗಳ ಮಿಶ್ರಣವಾಗಿದೆ. ಅಮರಾವತಿ  (ಶಾಸನಗಳಲ್ಲಿ ಧಾನ್ಯಕಟಕಟವೆಂದು ಉಲ್ಲೇಖಗೊಂಡಿದೆ)

ಜೊತೆಗೆ ಜಗ್ಗಯ್ಯಪೇಟೆ ಮತ್ತು ಭಟ್ರಿಪೋಲು ಎಂಬುವು ಸಹ ಪ್ರಮುಖ ಸ್ಥೂಪಗಳಾಗಿವೆ. 

ಕಾರ್ಲೆಯಲ್ಲಿನ ಚೈತ್ಯಾಲಯ ಇದು ಸಿಂಹಗುಹೆಗಳಲ್ಲಿಯೇ (ಲಯನ್ ಕೇವ್ಸ್) ಅತಿ ಪ್ರಮುಖವಾದುದು. 

ಕಾಮೆಂಟ್‌ಗಳು