ದೆಹಲಿ ಸುಲ್ತಾನರು
ದೆಹಲಿ ಸುಲ್ತಾನರು (1206-1526)
1192 ರ 2ನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಪೃಥ್ವಿರಾಜ್ ಚೌಹಾಣ್ ನನ್ನು ಕೊಂದು ದೆಹಲಿ ಸಿಂಹಾಸನವೇರಿದನು. ನಂತರ ಇಲ್ಲಿಯೇ ಉಳಿಯಲಾಗದೆ ಸ್ವದೇಶಕ್ಕೆ ವಾಪಸ್ಸಾಗುವಾಗ ತನ್ನ ನಂಬಿಕಸ್ತ ಗುಲಾಮ ಕುತುಬ್ ಉದ್ ದೀನ್ ಐಬಕ್ ನಿಗೆ ಭಾರತದಲ್ಲಿ ತಾನು ಗೆದ್ದ ಸಾಮ್ರಾಜ್ಯದ ಜವಾಬ್ದಾರಿ ವಹಿಸಿದನು. ಈ ಮೂಲಕ ಭಾರತದಲ್ಲಿ ಮುಸ್ಲಿಂ ಆಳ್ವಿಕೆ ಶುರುವಾಯಿತು.
ಗುಲಾಮಿ ಸಂತತಿ (1206-1290)
ಕುತುಬ್-ಉದ್-ದೀನ್ ಐಬಕ್ (1206-1210)
ಗುಲಾಮಿ ಸಂತತಿಯ ಸ್ಥಾಪಕ ಕುತುಬ್-ಉದ್-ದೀನ್ ಐಬಕ್. ಇವನು ಮಹ್ಮದ್ ಘೋರಿಯ ಗುಲಾಮನಾದ್ದರಿಂದ ಇವನಿಂದ ಸ್ಥಾಪನೆಯಾದ ಈ ಸಂತತಿಗೆ ಈ ಹೆಸರು ಬಂದಿತು. ಮ್ಯಾಮುಲಕ್ ಎಂಬುದು ಗುಲಾಮಿ ಸಂತತಿಯ ಮತ್ತೊಂದು ಹೆಸರು
ದಾನಧರ್ಮಗಳನ್ನು ಮಾಡುತ್ತಿದ್ದ ಕಾರಣ ಇವನಿಗೆ ಲಾಕ್ ಭಕ್ಷ್ ಎಂಬ ಬಿರುದಿತ್ತು. ಅಲ್ಲದೆ ಮಲಿಕ್ ಮತ್ತು ಸಿಪಾಹ್ ಸಾಲರ್ ಎಂಬ ಬಿರುದುಗಳನ್ನು ಸಹ ಹೊಂದಿದ್ದನು.
ಐಬಕ್ ನು ದೆಹಲಿಯಲ್ಲಿ ಕುವ್ವತ್ ಉಲ್ ಇಸ್ಲಾಂ ಮತ್ತು ರಾಜಸ್ತಾನದ ಅಜ್ಮೀರ್ ನಲ್ಲಿ ಅಡ್ಹಾ ದಿನ್ ಕಾ ಜೋಂಪ್ರಾ ಎಂಬ ಮಸೀದಿಗಳನ್ನು ನಿರ್ಮಿಸಿದನು
ವಾಸ್ತುಶಿಲ್ಪ : ಕುವ್ವತ್ ಉಲ್ ಇಸ್ಲಾಂ, ಆದ್ಹಾ ದಿನ್ ಕಾ ಜೋಂಪ್ರಾ
ಕುತ್ಬುದ್ದೀನ್ ಭಕ್ತಿಯಾರ್ ಖಾಕಿ ಎಂಬ ಸಂತನ ನೆನಪಿಗಾಗಿ ಕುತುಬ್ ಮಿನಾರ್ ನ ನಿರ್ಮಾಣ ಪ್ರಾರಂಭಿಸಿದನು. ಮುಂದೆ ಇಲ್ತಮಶ್ ನ ಕಾಲದಲ್ಲಿ ಈ ಮಿನಾರ್ ಪೂರ್ಣಗೊಂಡಿತು
ಹಸನ್ ನಿಜಾಮಿ ಮತ್ತು ಫಕ್ರೆ ಮುದಿರ್ ಎಂಬುವವರು ಐಬಕ್ ನ ಕಾಲದ ಪ್ರಮುಖ ವಿದ್ವಾಂಸರಾಗಿದ್ದರು. ಫಕ್ರೆ ಮುದಿರ್ ನು ತಾರಿಖ್ ಐ ಮುಬಾರಖ್ ಎಂಬ ಗ್ರಂಥವನ್ನು ಬರೆದನು.
ಐಬಕ್ ನು ಪೋಲೋ (ಚೌಗಾನ್) ಕ್ರೀಡೆ ಆಡುವಾಗ ಮರಣಿಸಿದನು. ಅವನ ಸಮಾಧಿ ಲಾಹೋರ್ ನಲ್ಲಿದೆ
ಇಲ್ತಮಶ್ (1210-1236)
ಇಲ್ತಮಶ್ ಇಲ್ಬರಿ ಪಂಗಡಕ್ಕೆ ಸೇರಿದವನಾಗಿದ್ದನು. ಇವನನ್ನು ದೆಹಲಿ ಸುಲ್ತಾನರ ನಿಜವಾದ ಸ್ಥಾಪಕ ಎನ್ನುವರು.
ಇಲ್ತಮಶ್ ನು ದೆಹಲಿಯ ಸುಲ್ತಾನತ್ವವನ್ನು ವಂಶಪಾರಂಪರ್ಯವಾಗಿಸಿಕೊಂಡನು ಮತ್ತು ಮೊದಲ ಬಾರಿಗೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಭಾರತದಲ್ಲಿ ಪರಿಚಯಿಸಿದನು. ನಾಣ್ಯಗಳ ಮೇಲೆ ಖಲೀಫನ ಪ್ರತಿನಿಧಿ ಎಂದು ತನ್ನ ಹೆಸರನ್ನು ಅಚ್ಚು ಹಾಕಿಸಿಕೊಂಡನು. ಬೆಳ್ಳಿಯ ಟಂಕಾ ಮತ್ತು ತಾಮ್ರದ ಜಿತಾಲ್ ಇವನು ಬಳಕೆಗೆ ತಂದ ನಾಣ್ಯಗಳಾಗಿವೆ.
ಇವನ ಕಾಲದಲ್ಲಿ 1221 ರಲ್ಲಿ ಚಂಗೀಸ್ ಖಾನ್ ನ ಮುಂದಾಳತ್ವದಲ್ಲಿ ಮಂಗೋಲರು ಮೊದಲ ಬಾರಿಗೆ ಭಾರತದ ಮೇಲೆ ದಾಳಿ ಮಾಡಿದರು. ಅವರೊಂದಿಗೆ ಸಂಧಿ ಮಾಡಿಕೊಂಡು ಸಾಮ್ರಾಜ್ಯವನ್ನು ಕಾಪಾಡಿಕೊಂಡನು
ಇಲ್ತಮಶ್ ನು 1229 ರಲ್ಲಿ ಟರ್ಕಿಯ ಖಲೀಫನಿಂದ ಅಧಿಕಾರ ಲಾಂಛನ ಸ್ವೀಕರಿಸಿ ಅಧಿಕೃತವಾಗಿ ದೆಹಲಿಯ ಸುಲ್ತಾನನೆಂದು ಅನುಮೋದನೆ ಪಡೆದು ಸಿಂಹಾಸನ ಏರಿದ ಮೊದಲ ಅರಸನಾಗಿದ್ದಾನೆ. ಖಲೀಫನು ಇಲ್ತಮಶ್ ನಿಗೆ ಸುಲ್ತಾನ್ ಇ ಅಜ್ಹಮ್ ಎಂಬ ಬಿರುದು ನೀಡಿದನು. ಇಲ್ತಮಶ್ ನ ಮೂಲಕ ದೆಹಲಿ ಸುಲ್ತಾನರ ಸಾಮ್ರಾಜ್ಯವು ಸಹ ಸ್ವತಂತ್ರ ಸಾಮ್ರಾಜ್ಯವೆಂದು ಮನ್ನಣೆ ಪಡೆಯಿತು
ಖಲೀಫನ ವಿಶ್ವಾಸಕ್ಕೆ ಪಾತ್ರನಾದ ಇಲ್ತಮಶ್ ನು ಖಲೀಫನ ರಕ್ಷಣೆ ಮತ್ತು ತುರ್ತುಸಮಯಕ್ಕಾಗಿ 40ರ ಕೂಟವನ್ನು (ತುರ್ಕನ್ ಐ ಚಹಲ್ಗಾನಿ) ರಚಿಸಿದನು.
ಇವನು ಸಾಮ್ರಾಜ್ಯವನ್ನು ಇಖ್ತಾಗಳಾಗಿ ವಿಂಗಡಿಸುವ ಮೂಲಕ ಇಖ್ತಾ ವ್ಯವಸ್ಥೆಯನ್ನು ಜಾರಿಗೆ ತಂದನು. ಇಖ್ತಾಗಳ ಮುಖ್ಯಸ್ಥರಾದ ಇಖ್ತಾದಾರರು ತಮ್ಮ ಅಧಿನ ಪ್ರದೇಶಗಳಲ್ಲಿ ಕಂದಾಯ ವಸೂಲಿ ಮಾಡಬೇಕಿತ್ತು. ತಮ್ಮದೇ ಸ್ವಂತ ಸೈನ್ಯ ಹೊಂದಿರುತ್ತಿದ್ದ ಇಖ್ತಾದಾರರು ಆವಶ್ಯವಾದಾಗ ಸುಲ್ತಾನನಿಗೆ ನೆರವಾಗುತ್ತಿದ್ದರು
ಮಿನ್ಹಾಜ್ ಉಸ್ ಸಿರಾಜ್ ಮತ್ತು ತಾಜ್ ಉದ್ ದೀನ್ ಇಲ್ತಮಶ್ ನ ಆಸ್ಥಾನದಲ್ಲಿದ್ದ ಪ್ರಮುಖ ವಿದ್ವಾಂಸರರಾಗಿದ್ದರು. ಮಿನ್ಹಾಜ್ ಉಸ್ ಸಿರಾಜ್ ನು ತಬಕತ್ ಇ ನಾಸರಿ ಎಂಬ ಗ್ರಂಥವನ್ನು ಬರೆದನು.
ರಜಿಯಾ ಬೇಗಂ (1236-1240)
ರಜಿಯಾ ಮಧ್ಯಕಾಲಿನ ಭಾರತ ಇತಿಹಾಸದಲ್ಲಿ ದೆಹಲಿ ಸಿಂಹಾಸನವನ್ನೇರಿದ ಮೊದಲ ಮಹಿಳೆ ಎನಿಸಿದ್ದಾಳೆ. ತನ್ನ ಸಹೋದರ ರುಕ್ನುದ್ದೀನ್ ಫಿರೋಜ್ ಷಾನನ್ನು ಸಿಂಹಾಸನದಿಂದಿಳಿಸಿ ತಾನು ಸಿಂಹಾಸನವೇರಿದಳು.
1238 ರಲ್ಲಿ ಘಜ್ನಿಯ ಮಲಿಕ್ ಹಸನ್ ಎಂಬಾತನು ಮಂಗೋಲರ ವಿರುದ್ಧ ಹೋರಾಡಲು ಸಹಾಯ ಕೇಳಿದಾಗ ನಿರಾಕರಿಸಿ ಮಂಗೋಲರ ದಾಳಿಯಿಂದ ತನ್ನ ರಾಜ್ಯ ರಕ್ಷಿಸಿಕೊಂಡಳು
ಈಕೆಯ ಆಡಳಿತ ಮತ್ತು ಅವನತಿಯ ಕುರಿತು ಇತಿಹಾಸಕಾರರಾದ ಮಿನ್ ಹಾಜ್ ಹಾಗೂ ಇಬ್ನಬತೂತ್ ರು ತಮ್ಮ ಬರವಣಿಗೆಗಳಲ್ಲಿ ದಾಖಲಿಸಿದ್ದಾರೆ. ಗುಲಾಮಿ ನೋಬೆಲ್ ಟರ್ಕರನ್ನು ಕೈಬಿಟ್ಟು, ಗುಲಾಮೇತರ ವಿದೇಶೀ ನೋಬೆಲ್ ಟರ್ಕರನ್ನು ಉನ್ನತಾಧಿಕಾರಿಗಳಾಗಿ ನೇಮಿಸಿದ್ದು ಗುಲಾಮಿ ನೋಬೆಲ್ ಟರ್ಕರಿಗೆ ಅಸಮಾಧಾನವುಂಟಾಗಿ ಅದೇ ಅವಳ ಪತನಕ್ಕೆ ಕಾರಣವಾಯಿತು
ರಜಿಯಾಳ ಮರಣದ ತರುವಾಯ ಅವಳ ತಮ್ಮ ಬಹರಾಂನನ್ನು ದೆಹಲಿ ಸಿಂಹಾಸನ ಏರಿಸಲಾಯಿತು
ಘಿಯಾಸ್ ಉದ್ ದೀನ್ ಬಲ್ಬನ್ (1246-1265)
ಬಹ್ರಾಮ್ ನ ನಂತರ ಆಡಳಿತಕ್ಕೆ ಬಂದವನು ನಾಸಿರುದ್ದೀನ್ ಮಹ್ಮದ್. ನಾಸಿರುದ್ದೀನ್ ಮಕ್ಕಳಿಲ್ಲದೇ ಮರಣಿಸಿದ ಕಾರಣ ನಾಸಿರುದ್ದೀನ್ ನ ಹೆಂಡತಿಯ ತಂದೆಯಾದ ಘಿಯಾಸುದ್ದೀನ್ ಬಲ್ಬನ್ ನು ಅಧಿಕಾರಕ್ಕೆ ಬಂದನು. ಬಲ್ಬನ್ ನ ಮೊದಲ ಹೆಸರು ಬಹಾ ಉದ್ ದೀನ್
ಬಲ್ಬನ್ ನನ್ನು ಅಲ್ಲಾವುದ್ದೀನ್ ಖಿಲ್ಜಿಯ ಮುನ್ಸೂಚಕ ಮತ್ತು ದೆಹಲಿ ಸುಲ್ತಾನರ ಮರುಸ್ಥಾಪಕ ಎಂದು ಕರೆಯುತ್ತಾರೆ
ಬಲ್ಬನ್ ಗುಲಾಮತನದಿಂದ ಬಿಡುಗಡೆ ಹೊಂದಿರದ ಕಾರಣ ತಾನು ಸುಲ್ತಾನನಾದ ಮೇಲೆ ಯಾರು ಪ್ರಶ್ನಿಸದಿರಲು ನಾಯಿಬ್ ಏಕ್ ಖುದೈ (ಸುಲ್ತಾನನು ದೇವರ ಪ್ರತಿನಿಧಿ) ಎಂಬ ಶಾಸನ ಜಾರಿಗೆ ತಂದನು
ಕ್ರೂರಿಗಳ ಕ್ರೌರ್ಯವನ್ನು ತಡೆದು ನ್ಯಾಯದ ಮುಂದೆ ಎಲ್ಲರೂ ಒಂದಾಗುವಂತೆ ನಾನು ಮಾಡಬಲ್ಲೆ, ರಾಜ್ಯದ ಘನತೆ ಅದರ ಪ್ರಜೆಗಳ ಸುಖ ಸಂತೋಷದಲ್ಲಿದೆ ಎಂದು ಹೇಳಿದ್ದಾನೆ
ಆಸ್ಥಾನಕ್ಕೆ ಬಂದವರು ಸುಲ್ತಾನನಿಗೆ ತಲೆಬಾಗಿ ನಮಸ್ಕರಿಸುವ ಸಿಜ್ದಾ ಮತ್ತು ಸುಲ್ತಾನನ ಪಾದಕ್ಕೆ ಮುತ್ತಿಡುವ ಪೈಬೋಸ್ ಎಂಬ ಆಚರಣೆಗಳನ್ನು ಜಾರಿಗೆ ತಂದನು
ಸಾಮ್ರಾಜ್ಯದಲ್ಲೆಲ್ಲಾ ನವರೌಜ್ ಉತ್ಸವವನ್ನು ವೈಭವಯುತವಾಗಿ ಆಚರಿಸುವಂತೆ ಜಾರಿ ಮಾಡಿದನು
ದೆಹಲಿಯಲ್ಲಿ ಕೆಂಪು ಅರಮನೆಯನ್ನು ನಿರ್ಮಿಸಿದನು
ಭಾರತದ ಗಿಳಿ ಅಮಿರ್ ಖುಸ್ರೋ ಬಲ್ಬನ್ ನ ಸಮಕಾಲೀನನಾಗಿದ್ದನು
ಇಲ್ತಮಶ್ ಜಾರಿಗೆ ತಂದಿದ್ದ 40ರ ಕೂಟ (ತುರ್ಕನ್ ಐ ಚಹಲ್ಗಾನಿ) ಬಲ್ಬನ್ ನ ಪ್ರಬಲ ವಿರೋಧಿಯಾಗಿ ಕಂಡುಬಂದಿದ್ದರಿಂದ ಬಲ್ಬನ್ ನು 40ರ ಕೂಟವನ್ನು ನಾಶಗೊಳಿಸಿದನು.
1285 ರಲ್ಲಿ ತೈಮೂರನ ನೇತೃತ್ವದಲ್ಲಿ ಮಂಗೋಲರು ಬಲ್ಬನ್ ನ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದಾಗ, ಬಲ್ಬನ್ ನು ದಿವಾನ್ ಇ ಆರಿಜ್ ಎಂಬ ಸೈನ್ಯವನ್ನು ಸ್ಥಾಪಿಸಿ ಮಂಗೋಲರ ದಾಳಿಯನ್ನು ಸಮರ್ಥವಾಗಿ ಎದುರಿಸಿದನು.
ಬಲ್ಬನ್ ಗುಲಾಮರ ಯೋಗಕ್ಷೇಮಕ್ಕಾಗಿ ದಿವಾನ್ ಇ ಬಂದೆ ಎಂಬ ಇಲಾಖೆಯನ್ನು ಸ್ಥಾಪಿಸಿದನು
ಬಲ್ಬನ್ ಆಡಳಿತದಲ್ಲಿ ರಕ್ತ ಮತ್ತು ಉಕ್ಕಿನ ನೀತಿಯನ್ನು ಅನುಸರಿಸಿದನು. ಇವನ ಆಡಳಿತವನ್ನು ಕುರಿತು ಡಾ. ಈಶ್ವರಿ ಪ್ರಸಾದ್ ರು ಅರೆ ನಾಗರಿಕ ಮತ್ತು ಅರೆ ಸೈನಿಕ ಆಡಳಿತ ಎಂದಿದ್ದಾರೆ
ಈ ಸಂತತಿಯ ಕೊನೆಯ ಅರಸ ಕೈಮೂರ್.
ಖಿಲ್ಜಿ ಸಂತತಿ (1290-1320)
ಮೂಲತಃ ಟರ್ಕರಾದ ಇವರು ಅಫ್ಘಾನಿಸ್ತಾನದಲ್ಲಿ ಖಲ್ಜ್ ಎಂಬ ಪ್ರದೇಶದಲ್ಲಿ ನಿವಾಸವಿದ್ದ ಕಾರಣ ಈ ವಂಶಕ್ಕೆ ಖಿಲ್ಜಿ ಎಂದು ಹೆಸರು ಬಂದಿತು. ಖಿಲ್ಜಿ ಎಂದರೆ ಖಡ್ಗಧಾರಿ ಪುರುಷ ಎಂದರ್ಥ.
ಜಲಾಲುದ್ದೀನ್ ಫಿರೋಜ್ ಷಾ (1290-1296)
ಖಿಲ್ಜಿ ವಂಶದ ಸ್ಥಾಪಕನಾದ ಇವನನ್ನು ನವ ಮುಸಲ್ಮಾನ ಎಂದು ಕರೆಯುತ್ತಾರೆ.
ಫಿರೋಜ್ ಷಾ ನು ಹಿಂದೂಗಳ ಬಗ್ಗೆ ಉದಾರವಾದ ಭಾವನೆಯನ್ನು ಹೊಂದಿದ್ದನು
ಅಲ್ಲಾವುದ್ದೀನ್ ಖಿಲ್ಜಿ (1296-1320)
ಇವನ ಮೊದಲ ಹೆಸರು ಅಲಿ ಗುರ್ಷಾಪ್. ಯಾರ ಪ್ರಭಾವಕ್ಕೂ ಒಳಗಾಗದೆ ಆಡಳಿತ ಮಾಡಿದ ಪ್ರಥಮ ಸುಲ್ತಾನ.
ಅಲ್ಲಾವುದ್ದೀನ್ ಖಿಲ್ಜಿ ಸುಲ್ತಾನನಾಗುವ ಮೊದಲು ಉತ್ತರ ಪ್ರದೇಶದ ಪ್ರಯಾಗರಾಜ್ ನ ಕರಾ ಎಂಬ ಪ್ರದೇಶದ ಜಹಗೀರನಾಗಿದ್ದನು.
ಜಲಾಲುದ್ದೀನ್ ನು ಅಲ್ಲಾವುದ್ದೀನ್ ನಿಗೆ ಅಮೀರ್ ಐ ತುಜುಕ್ ಎಂಬ ಬಿರುದು ನೀಡಿದ್ದನು
ತನ್ನ ಆಳ್ವಿಕೆಯನ್ನು ಕುರಿತು ಅಲ್ಲಾವುದ್ದೀನ್ ನು “ನನಗೆ ಯಾವುದು ನ್ಯಾಯ ಅಥವಾ ಅನ್ಯಾಯ ಎಂಬುದು ತಿಳಿದಿಲ್ಲ ಆದರೆ ರಾಜ್ಯಕ್ಕೆ ಯಾವುದು ಹಿತವೋ? ಅಥವಾ ತುರ್ತುಪರಿಸ್ಥಿತಿಗೆ ಅವಶ್ಯಕವೋ ಅದನ್ನು ಮಾಡುತ್ತೇನೆ” ಎಂದು ಹೇಳಿದ್ದಾನೆ.
ಅಲ್ಲಾವುದ್ದೀನ್ ಗೆ ಸಿಕಂದರ್ ಐ ಸಾನಿ (2ನೇ ಅಲೆಗ್ಸಾಂಡರ್) ಎಂಬ ಬಿರುದಿತ್ತು.
ಉತ್ತರ ಭಾರತ ದಂಡಯಾತ್ರೆಗಳು (1297-1305)
ಉತ್ತರ ಭಾರತದ ದಂಡಯಾತ್ರೆಗಳ ನಾಯಕತ್ವ ವಹಿಸಿಕೊಂಡಿದ್ದವನು ಉಲುಘ್ ಖಾನ್
ಗುಜರಾತ್ ನ ರಾಜ ಕರ್ಣದೇವನ ಮೇಲೆ ದಾಳಿ
1300-01 ರಾಜಸ್ತಾನದ ರಣಥಂಬೋರ್ ನ ಆರಸ ಹಮ್ಮೀರದೇವನ ಮೇಲೆ ದಾಳಿ
1303 ರಾಜಸ್ತಾನದ ಮೇವಾರದ ಅರಸ ರತನ್ ಸಿಂಗ್ ನ ಪತ್ನಿ ಪದ್ಮಾವತಿಯನ್ನು ಪಡೆಯಲು ಯುದ್ಧ ಮಾಡಿದನು. ಈ ಯುದ್ಧವನ್ನು ಕುರಿತು ಮಲಿಕ್ ಮಹ್ಮದ್ ಜೈಸಿಯು ಪದ್ಮಾವತ್ ಎಂಬ ಕೃತಿಯನ್ನು ಬರೆದನು.
1305 ಮಾಳ್ವದ ಅರಸ ರಾಯ್ ಮಲ್ಹೋಕ್ ದೇವ, ಮತ್ತು ಜಲಾರ್ ಅರಸ ಕರ್ಣದೇವನ ಶರಣಾಗತಿ
ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಮಂಗೋಲರು ಅತಿಹೆಚ್ಚು ಬಾರಿ ಭಾರತದ ಮೇಲೆ ದಾಳಿ ಮಾಡಿದರು. ಮಂಗೋಲರು ಭಾರತದ ಮೇಲೆ ದಾಳಿ ಮಾಡಿದಾಗ ಮಂಗೋಲರನ್ನು ಎದುರಿಸಲು ಅಲ್ಲಾವುದ್ದೀನ್ ಖಿಲ್ಜಿಯು ಜಾಫರ್ ಖಾನ್ ಎಂಬ ಸೈನ್ಯಾಧಿಕಾರಿಯನ್ನು ಕಳುಹಿಸಿದನು.
ದಕ್ಷಿಣ ಭಾರತ ದಂಡಯಾತ್ರೆಗಳು (1305-1312)
ಮಲ್ಲಿಕಾಫರ್ ನು ದಕ್ಷಿಣ ಭಾರತ ದಂಡಯಾತ್ರೆಗಳ ನಾಯಕತ್ವ ವಹಿಸಿದ್ದನು. ಈ ದಾಳಿಯ ಮೂಲಕ ದಕ್ಷಿಣ ಭಾರತದ ಮೇಲೆ ಯುದ್ಧ ಸಾರಿದ ಮೊದಲ ಮುಸ್ಲಿಂ ಅರಸನಾಗಿದ್ದ.
1306-07 ರಲ್ಲಿ ಮಹಾರಾಷ್ಟ್ರದ ದೇವಗಿರಿಯ ಯಾದವರ ಅರಸ ರಾಮಚಂದ್ರದೇವನ ಮೇಲೆ ದಾಳಿ
1308 ತೆಲಂಗಾಣದ ವಾರಂಗಲ್ ನ ಕಾಕತೀಯರ ಅರಸ ಪ್ರತಾಪರುದ್ರನ ಮೇಲೆ ದಾಳಿ. ಪ್ರತಾಪರುದ್ರದೇವನು ಕೊಹಿನೂರ್ ವಜ್ರವನ್ನು ಮಲಿಕಾಫರ್ ನಿಗೆ ನೀಡಿದನು
1310 ದೋರಸಮುದ್ರದ ಹೊಯ್ಸಳರ ಅರಸ ಮೂರನೇ ಬಲ್ಲಾಳನ ಮೇಲೆ ದಾಳಿ
1311 ತಮಿಳುನಾಡಿನ ಮಧುರೈನ ಪಾಂಡ್ಯರ ಅರಸರಾದ ಸುಂದರಪಾಂಡ್ಯ ಮತ್ತು ವೀರ ಪಾಂಡ್ಯರ ಮೇಲೆ ದಾಳಿ
ಆಡಳಿತದ ಮೇಲೆ ಧರ್ಮ ಪ್ರಭಾವ ಬೀರಬಾರದೆಂದು ಇಡೀ ಸಾಮ್ರಾಜ್ಯವನ್ನು ಪೂರ್ಣವಾಗಿ ಕೇಂದ್ರೀಕರಿಸಿಕೊಂಡು ಆಡಳಿತ ನಡೆಸಿದ ಮೊದಲ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ.
ಇವನ ಆವಧಿಯಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯನ್ನು ನಿಷೇಧಿಸಲಾಯಿತು
ಕುತುಬ್ ಮಿನಾರ್ ಗೆ ಅಲೈದರ್ವಜಾ ಎಂಬ ಬಾಗಿಲನ್ನು, ಸಿರಿಕೋಟೆ ಮತ್ತು ಅಲೈಮಿನಾರ್ ಗಳನ್ನು ನಿರ್ಮಿಸಿದನು.
ಪ್ರಮುಖ ವಾಸ್ತುಶಿಲ್ಪಗಳು : ಅಲೈದರ್ವಜಾ, ಸಿರಿಕೋಟೆ
ಇವನ ಕಾಲದಲ್ಲಿ ಆರಿಜ್ ಎ ಮಾಮುಲಕ್ ಎಂಬ ಸೈನಿಕ ಮಂತ್ರಿಯು ಸೈನ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದನು
ಕುದುರೆಗಳಿಗೆ ದಾಗ್ ಮತ್ತು ಚಹರಾ ಹಾಕುವ ಪದ್ಧತಿಯನ್ನು ಜಾರಿಗೆ ತಂದನು
ಸೈನಿಕರಿಗೆ ಹಣದ ರೂಪದಲ್ಲಿ ವೇತನ ನೀಡುವ ಪದ್ಧತಿಯನ್ನು ಮೊದಲು ಜಾರಿಗೆ ತಂದವನು ಅಲ್ಲಾವುದ್ದೀನ್ ಖಿಲ್ಜಿ
ಮಾರುಕಟ್ಟೆ ಸುಧಾರಣೆಯ ಭಾಗವಾಗಿ ಷಹನಾ ಇ ಮಂಡಿ ಎಂಬ ಇಲಾಖೆಯನ್ನು ಸ್ಥಾಪಿಸಿದನು. ಈ ಇಲಾಖೆಯು ದಿನಸಿ ವಸ್ತುಗಳ ಬೆಲೆ ಏರದಂತೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಸಿಗುವ ಹಾಗೆ ಮಾಡುತ್ತಿತ್ತು.
ಜಕಾತ್ ಎಂಬುದು ಮಾರುಕಟ್ಟೆಗೆ ಸಂಬಂಧಿಸಿದ ತೆರಿಗೆಯಾಗಿತ್ತು. ಮಾರುಕಟ್ಟೆಯ ನಿಯಂತ್ರಣಕ್ಕಾಗಿ ದಿವಾನ್ ಇ ರಿಯಾಸತ್ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು.
ಕಂದಾಯದ ಹಳೆಯ ಬಾಕಿ ವಸೂಲಿಗಾಗಿ ದಿವಾನ್ ಇ ಮುಸ್ತಕರಾಜ್ ಎಂಬ ಇಲಾಖೆಯನ್ನು ಸ್ಥಾಪಿಸಿದನು. ಅದರ ನಿರ್ವಹಣೆಗಾಗಿ ಷರಾಫ್ ಖೈನಿ ಎಂಬ ಕಂದಾಯ ಮಂತ್ರಿಯಿದ್ದನು.
ಹಿಂದೂಗಳ ಮೇಲೆ ಜೆಜಿಯಾ ತಲೆಗಂದಾಯವನ್ನು ಹೇರಿದ್ದನು. ಇದೊಂದು ಧಾರ್ಮಿಕ ಕಂದಾಯವಾಗಿತ್ತು.
ಅಲ್ಲಾವುದ್ದೀನ್ ಜಲೋಧರ ರೋಗದಿಂದ ಮರಣಿಸಿದನು. ಇವನ ಸಮಾಧಿಯು ದೆಹಲಿಯಲ್ಲಿದೆ.
ಖಿಲ್ಜಿ ಮನೆತನದ ಕೊನೆಯ ಅರಸ ನಾಸಿರುದ್ದೀನ್ ಖುಸ್ರಾವ್ ಷಾ
ತುಘಲಕ್ ಸಂತತಿ (1320-1414)
ದೆಹಲಿ ಸುಲ್ತಾನರಲ್ಲಿಯೇ ಅತಿ ದೀರ್ಘಾವಧಿಯ ಆಳ್ವಿಕೆ ನಡೆಸಿದ ಸಂತತಿ ಇದಾಗಿದೆ
ಘಿಯಾಸುದ್ದೀನ್ ತುಘಲಕ್ (1320-1325)
ಘಿಯಾಸುದ್ದೀನ್ ತುಘಲಕ್ ನ ಮೊದಲ ಹೆಸರು ಘಾಜಿ ಮಲಿಕ್
ಬೇರೆಯವರು ವರ್ಷಗಳವರೆಗೆ ಮಾಡುತ್ತಿದ್ದ ಕೆಲಸವನ್ನು ಈತನು ಕೆಲವು ದಿನಗಳಲ್ಲಿ ಮುಗಿಸಿ ಶಾಂತಿ ಕಾಪಾಡಿದನು ಎಂದು ಬದೌನಿ ಎಂಬ ವಿದ್ವಾಂಸ ಹೇಳಿದ್ದಾನೆ.
ದೆಹಲಿಯಲ್ಲಿ ತುಘಲಕಾಬಾದ್ ಎಂಬ ನಗರವನ್ನು ನಿರ್ಮಿಸಿ ಅದಕ್ಕೆ ಕೋಟೆಯನ್ನು ನಿರ್ಮಿಸಿದನು
ಮಹ್ಮದ್ ಬಿನ್ ತುಘಲಕ್ (1325-1351)
ಇವನ ಮೊದಲ ಹೆಸರು ಜುನಾಖಾನ್
ಸಂಪದ್ಭರಿತವಾದ ದೋ ಅಬ್ ಪ್ರದೇಶದಲ್ಲಿ ಹೆಚ್ಚಿನ ತೆರಿಗೆ ವಿಧಿಸಿದನು. ಕಾನೂನು ಜಾರಿಯಾದ ವರ್ಷದೊಳಗೆ ಆ ಪ್ರದೇಶದಲ್ಲಿ ಕ್ಷಾಮ ತಲೆದೋರಿ ಜನ ತೆರಿಗೆ ಕಟ್ಟಲಾಗದೆ ದಂಗೆಯೆದ್ದರು.
ಕೃಷಿಯ ಅಭಿವೃದ್ಧಿಗಾಗಿ ದಿವಾನ್ ಇ ಕೊಹಿ ಎಂಬ ಇಲಾಖೆಯನ್ನು ಸ್ಥಾಪಿಸಿದನು. ಕೃಷಿಯ ಅಭಿವೃದ್ಧಿಗಾಗಿ ಅನೇಕ ಪ್ರಯೋಗಗಳನ್ನು ಕೈಗೊಂಡನು. ಆದರೆ ರಾಜನ ಅದಕ್ಷತೆಯ ಕಾರಣ ಮತ್ತು ಅಧಿಕಾರಿಗಳ ದುರಾಸೆಯಿಂದ ಈ ಪ್ರಯೋಗಗಳು ಯಶಸ್ವಿಯಾಗದೆ ಅಪೂರ್ಣವಾದವು
ಉತ್ತರ ಭಾರತದಲ್ಲಿ ಪದೇ ಪದೇ ಮಂಗೋಲರ ಆಕ್ರಮಣವಾಗುತ್ತಿದ್ದರಿಂದ ಮತ್ತು ದಕ್ಷಿಣ ಭಾರತದ ಅಧೀನ ರಾಜ್ಯಗಳ ಮೇಲೆ ಹಿಡಿತ ಸಾಧಿಸಿಕೊಳ್ಳಲು ರಾಜಧಾನಿಯು ಸಾಮ್ರಾಜ್ಯದ ಮಧ್ಯದಲ್ಲಿ ಇದ್ದರೆ ಉತ್ತಮವೆಂದು ಬಗೆದು 1326-27 ರ ನಡುವೆ ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್) ರಾಜಧಾನಿಯನ್ನು ಬದಲಾಯಿಸಿದನು.
ಸಾಮ್ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ ಕಾರಣ ಇದೇ ಕಾಲದಲ್ಲಿ ಮಂಗೋಲಿಯಾದ ಕುಬ್ಲಾಯ್ ಖಾನ್ ಜಾರಿಗೆ ತಂದ ಕಾಗದದ ಹಣದ ಪ್ರಯೋಗವನ್ನು ತನ್ನ ಸಾಮ್ರಾಜ್ಯದಲ್ಲಿಯೂ ಜಾರಿಗೆ ತರಲು ಚಿಂತಿಸಿ 1329-32 ರ ಸಮಯದಲ್ಲಿ ಸಾಂಕೇತಿಕ ನಾಣ್ಯಗಳನ್ನು ಜಾರಿಗೆ ತಂದನು.
ಈ ಮೂಲಕ ಚಿನ್ನದ ನಾಣ್ಯಗಳಿಗೆ ಬದಲಾಗಿ ತಾಮ್ರ ಮತ್ತು ಹಿತ್ತಾಳೆಯ ನಾಣ್ಯಗಳನ್ನು ಬದಲಾಯಿಸಿಕೊಳ್ಳಬಹುದೆಂದು ಆದೇಶಿಸಿದನು. ಆದರೆ ನಾಣ್ಯಗಳನ್ನು ಟಂಕಿಸುವ ಅಧಿಕಾರ ಸರ್ಕಾರ ಮಾತ್ರ ಮಾಡದೇ ಖಾಸಗಿಯವರಿಗೂ ನೀಡಿದ್ದರಿಂದ ರಾಜ್ಯದಲ್ಲಿ ಖೋಟಾ ನಾಣ್ಯಗಳ ಹಾವಳಿ ಹೆಚ್ಚಾಯಿತು.
ವರ್ಷಕ್ಕೆ ಇಷ್ಟೇ ನಾಣ್ಗಳನ್ನು ಮುದ್ರಿಸಬೇಕೆಂಬ ನಿಯಮ ಇರಲಿಲ್ಲವಾದ್ದರಿಂದ ಖಾಸಗಿಯವರು ಯಥೇಚ್ಛವಾಗಿ ನಾಣ್ಯಗಳನ್ನು ಮುದ್ರಿಸಿಕೊಂಡು ವಸ್ತುಗಳನ್ನು ಖರೀದಿಸುತ್ತಿದ್ದರು. ಅಸಲಿ ಮತ್ತು ನಕಲಿ ನಾಣ್ಯಗಳ ನಡುವೆ ವ್ಯತ್ಯಾಸ ಗುರ್ತಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಆರ್ಥಿಕ ವ್ಯವಸ್ಥೆಯು ಮತ್ತಷ್ಟು ಕುಸಿಯಿತು.
ಅಫ್ಘನ್ನಿನ ಖುರಾಸಾನ್ ಮತ್ತು ಚೀನಾದ ಕರಜಲ್ ಪ್ರದೇಶದ ಮೇಲೆ ದಾಳಿ ಮಾಡಿ ಯಶಸ್ವಿಯಾಗದೆ ಅಪಾರ ನಷ್ಟ ಅನುಭವಿಸಿದನು
ಮಂಗೋಲರ ದಾಳಿಯನ್ನು ಎದುರಿಸಿದ ತುಘಲಕ್ ನ ಸೇನಾನಿ ಭುಗ್ರಾಖಾನ್. ಆದರೆ ಫೆರಿಸ್ತಾನು “ಅಪಾರ ಸಂಪತ್ತು ನೀಡಿ ಮಂಗೋಲರನ್ನು ವಾಪಸ್ಸು ಕಳಿಸಲಾಯಿತೆಂದು” ಹೇಳಿದ್ದಾನೆ.
ಮಹ್ಮದ್ ಬಿನ್ ತುಘಲಕ್ ನ ಕಾಲದಲ್ಲಿ ಭಾರತಕ್ಕೆ ಭೇಟಿ ನಿಡಿದ್ದ ವಿದೇಶಿ ಪ್ರವಾಸಿಗ ಇಬ್ನಬತೂತ. ಇವನ ಕೃತಿ ರೆಹ್ಲಾ
ಮಹ್ಮದ್ ಬಿನ್ ತುಘಲಕ್ ನ ಕುರಿತು ಇತಿಹಾಸಕಾರರ ಮಾತುಗಳು
ಮಹ್ಮದ್ ಬಿನ್ ತುಘಲಕ್ ಸತ್ತಾಗ “ಸುಲ್ತಾನನು ತನ್ನ ಪ್ರಜೆಗಳಿಂದ ಪಾರಾದನು ಮತ್ತು ಪ್ರಜೆಗಳು ಸುಲ್ತಾನನ ದಬ್ಬಾಳಿಕೆಯಿಂದ ಪಾರಾದರು” ಎಂದು ಬದೌನಿ ಹೇಳಿದ್ದಾನೆ.
ಇ ಥಾಮಸ್ ಎಂಬಾತ ಮಹ್ಮದ್ ಬಿನ್ ತುಘಲಕ್ ನನ್ನು ಹಣಗಾರರ ರಾಜ ಎಂದು ಕರೆದಿದ್ದಾನೆ
ಡಾ. ವಿ.ಎ ಸ್ಮಿತ್ ರು ಇವನನ್ನು ಬುದ್ಧಿವಂತ ಮೂರ್ಖ, ವಿರುದ್ಧ ಗುಣಗಳ ಆಶ್ಚರ್ಯಕರ ಸಮಾವೇಶ ಎಂದಿದ್ದಾರೆ.
ಫಿರೋಜ್ ಷಾ ತುಘಲಕ್ (1351-1388)
ಫಿರೋಜ್ ಷಾ ನು ಖರಾಜ್ ಎಂಬ ಭೂಕಂದಾಯ, ಮುಸ್ಲಿಂರ ಮೇಲಿನ ಜಕಾತ್ ಎಂಬ ಆಸ್ಥಿಯ ಕಂದಾಯ, ಮತ್ತು ಹಿಂದೂಗಳ ಮೇಲಿನ ಜೆಜಿಯಾ ತಲೆಗಂದಾಯಗಳನ್ನು ಮಾತ್ರ ಬಿಟ್ಟು ಉಳಿದೆಲ್ಲಾ ತೆರಿಗೆಗಳನ್ನು ರದ್ಧು ಪಡಿಸಿ, ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡಿದನು.
ಖುರಾನಿನ ಆಧಾರದ ಮೇಲೆ ಆಡಳಿತ ಇರಬೇಕೆಂದು ಕಾನೂನು ಜಾರಿ ಮಾಡಿದನು. ರಾಜ್ಯಾಡಳಿತದ ಕುರಿತು ಇವನು ಬರೆದ ಗ್ರಂಥ ಫತ್ವಾ
ನಗರಗಳ ನಿರ್ಮಾಪಕ ರಾಜನೆಂದು ಖ್ಯಾತನಾದ ಫಿರೋಜ್ ನು ಫಿರೋಜ್ ಪುರ, ಹಿಸ್ಸಾರ, ಜಾನ್ ಪುರ್, ಫತೇಬಾದ್ ಹೀಗೆ 300 ಕ್ಕೂ ಹೆಚ್ಚು ನಗರಗಳನ್ನು ನಿರ್ಮಿಸಿದನು. ಹಾಗಾಗಿ ಇವನಿಗೆ ಮಹಾಶಿಲ್ಪಕಲಾರ ಎಂಬ ಬಿರುದಿತ್ತು
ಇವನ ಆಸ್ಥಾನದಲ್ಲಿದ್ದ ಜಿಯಾವುದ್ದೀನ್ ಬರನಿಯು ಫಿಲ್ತಾ ಐ ಜಹಾಂದರಿ ಮತ್ತು ತಾರೀಖ್ ಐ ಫಿರೋಜ್ ಷಾಹಿ ಕೃತಿಗಳನ್ನು ಬರೆದನು. ಸ್ವತಃ ಫಿರೋಜ್ ಷಾ ನು ಫುತುಹತ್ ಐ ಫಿರೋಜ್ ಷಾಹಿ ಎಂಬ ಗ್ರಂಥವನ್ನು ಬರೆದನು.
ಬಡವರಿಗೆ ಅನುಕೂಲವಾಗಲೆಂದು ಜಿತಾಲ್ ನ ಅರ್ಧಭಾಗದಷ್ಟು ಆದಾ ಮತ್ತು ಕಾಲುಭಾಗದಷ್ಟು ಬಿಖ್ ಎಂಬ ನಾಣ್ಯಗಳನ್ನು ಜಾರಿಗೆ ತಂದನು. ತಾನು ಹೊರಡಿಸಿದ ನಾಣ್ಯಗಳ ಮೇಲೆ ಸುಲ್ತಾನನು ಖಲೀಫನ ಬಲಗೈ ಎಂದು ಮುದ್ರಿಸಿದನು.
ಕೃಷಿ ಸಮಸ್ಯೆಯನ್ನು ಹೋಗಲಾಡಿಸಲು ಅನೇಕ ಕಾಲುವೆಗಳನ್ನು ತೋಡಿಸಿದ ಕಾರಣ ಇವನನ್ನು ನೀರಾವರಿಯ ಪಿತಾಮಹಾ ಮತ್ತು ಕಾಲುವೆಗಳ ನಿರ್ಮಾಪಕ ರಾಜ ಎನ್ನುವರು. ರೈತರ ಮೇಲಿನ ತಕ್ಕಾವಿ ಸಾಲವನ್ನು ರದ್ಧುಮಾಡಿದನು.
ಬಡರೋಗಿಗಳಿಗಾಗಿ ದಾರ್ ಉಲ್ ಷಫಾ ಎಂಬ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದನು. ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ದಿವಾನ್ ಇ ಖೈರಾತ್ ಎಂಬ ಇಲಾಖೆಯನ್ನು ಸ್ಥಾಪಿಸಿದನು.
ಅಶೋಕನ ತೋಪಾರ ಮತ್ತು ಮೀರತ್ ಶಿಲಾಶಾಸನಗಳನ್ನು ತನ್ನ ಹೊಸ ರಾಜಧಾನಿ ಫಿರೋಜಾಬಾದಿನಲ್ಲಿ ಪ್ರತಿಷ್ಟಾಪಿಸಿದನು.
ಈ ವಂಶದ ಕೊನೆಯ ಅರಸ ನಾಸಿರದ್ದೀನ್ ಮಹ್ಮದ್ ಷಾ ತುಘಲಕ್ ನ ಕಾಲದಲ್ಲಿ ಮಂಗೋಲರ ಅರಸ ತೈಮೂರ್ ದೆಹಲಿಯ ಮೇಲೆ ದಾಳಿ ಮಾಡಿ ತುಘಲಕ್ ವಂಶವನ್ನು ಕೊನೆಗೊಳಿಸಿದನು.
ಸಯ್ಯದ್ ಸಂತತಿ (1414-1451)
ಸಯ್ಯದ್ ಎಂದರೆ ಇಸ್ಲಾಂ ಧರ್ಮದಲ್ಲಿಯೇ ಶ್ರೇಷ್ಟ ಸಂತತಿ ಎಂದರ್ಥ
ಖಿಜರ್ ಖಾನ್ ಈ ಸಂತತಿಯ ಸ್ಥಾಪಕ. ತೈಮೂರ್ ಖಿಜರ್ ಖಾನ್ ನನ್ನು ತನ್ನ ಪ್ರತಿನಿಧಿಯಾಗಿ ದೆಹಲಿಯ ಸಿಂಹಾಸನದಲ್ಲಿ ಕೂರಿಸಿದನು. ಆ ಮೂಲಕ ಸಯ್ಯದ್ ಸಂತತಿ ಸ್ಥಾಪನೆಯಾಯಿತು.
ಈ ವಂಶದ ಕೊನೆಯ ಅರಸ ಅಲ್ಲಾವುದ್ದೀನ್ ಆಲಂ ಷಾ.
ದೆಹಲಿ ಸುಲ್ತಾನರಲ್ಲಿಯೇ ಅತಿ ಕಡಿಮೆ ಅವಧಿಯ ಆಳ್ವಿಕೆ ನಡೆಸಿದ ಸಂತತಿಯಾಗಿದೆ.
ಲೋಧಿ ಸಂತತಿ (1451-1526)
ದೆಹಲಿ ಸಿಂಹಾಸನವನ್ನೇರಿದ ಮೊದಲ ಅಫ್ಘನ್ ಸಂತತಿ ಮತ್ತು ಪಠಾಣ ಜನಾಂಗವಾಗಿದೆ
ಬಹಲೂಲ್ ಖಾನ್ ಲೋದಿ ಈ ಸಂತತಿಯ ಸ್ಥಾಪಕ
ಸಿಕಂದರ್ ಷಾ ಲೋದಿ (1489-1517)
ಇವನ ಮೊದಲ ಹೆಸರು ನಿಜಾಂ ಖಾನ್
ಆಗ್ರಾ ನಗರವನ್ನು ನಿರ್ಮಾಣ ಮಾಡಿದನು
ಗುತರುಖೀ ಎಂಬ ಕಾವ್ಯನಾಮದಿಂದ ಅನೇಕ ಪರ್ಷಿಯನ್ ಪದ್ಯಗಳನ್ನು ಬರೆದಿದ್ದಾನೆ.
ಗಜ್ ಇ ಸಿಕಂದರಿ ಎಂಬ ಹೊಸ ಭೂ ಮಾಪನ ಅಳತೆಯನ್ನು ಜಾರಿಗೆ ತಂದನು.
ಇಬ್ರಾಹಿಂ ಲೋದಿ (1517-1526)
ದೆಹಲಿ ಸಿಂಹಾಸನವನ್ನೇರಿದ ದೆಹಲಿ ಸುಲ್ತಾನರ ಹಾಗೂ ಲೂದಿ ಸಂತತಿಯ ಕೊನೆಯ ಅರಸ
1526 ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು ದೆಹಲಿ ಸುಲ್ತಾನರ ಮತ್ತು ಆಳ್ವಿಕೆಯನ್ನು ಕೊನೆಗಾಣಿಸಿದನು.
ಆಡಳಿತ
ಸುಲ್ತಾನರು ತಮ್ಮ ಆಪ್ತ ವರ್ಗದವರನ್ನು ಮಾತ್ರ ಒಳಗೊಂಡಿದ್ದ ಮಜ್ಲಿಸ್ ಐ ಖಿಲತ್ ಎಂಬ ಸಭೆಯನ್ನು ಹೊಂದಿದ್ದರು.
ಸಾಮ್ರಾಜ್ಯವನ್ನು ಇಖ್ತಾಗಳನ್ನಾಗಿ ಮಾಡಿ (ಪ್ರಾಂತ್ಯ) ನಾಯಿಬ್ ಸುಲ್ತಾನರೆಂಬ ಅಧಿಕಾರಿಗಳ ಅಧಿನಕ್ಕೆ ನೀಡಲಾಗಿತ್ತು.
ಇಖ್ತಾಗಳನ್ನು ಸರ್ಕಾರಗಳನ್ನಾಗಿ ವಿಂಗಡಿಸಿ ಮುಖ್ತಾಸ್ (ಅಮೀಲ್ಸ್) ರ ಅಧೀನಕ್ಕೆ ನೀಡುತ್ತಿದ್ದರು.
ಸರ್ಕಾರಗಳನ್ನು ಪರಗಣಗಳಾಗಿ ವಿಂಗಡಿಸಿ ಷೀಖ್ದಾರ್ ಗಳ ಅಧೀನಕ್ಕೆ ನೀಡುತ್ತಿದ್ದರು.
ಗ್ರಾಮಗಳು ಆಡಳಿತದ ಕೊನೆಯ ಘಟಕಗಳಾಗಿದ್ದವು.
ಮುಸ್ಲಿಮರಿಗಾಗಿ ಷರಿಯತ್ ಕಾನೂನು ಹಾಗೂ ಹಿಂದೂಗಳಿಗೆ ಗೈರತಶ್ರೀ ಕಾನೂನನ್ನು ಅಳವಡಿಸಲಾಗಿತ್ತು
ಆರ್ಥಿಕತೆ
ಬಂಗಾಳ ಮತ್ತು ಗುಜರಾತ್ ರಾಜ್ಯಗಳು ಬಟ್ಟೆ ಉತ್ಪಾದನೆ ಮತ್ತು ರಫ್ತಿಗೆ ಪ್ರಸಿದ್ಧಿಯಾಗಿದ್ದವು
ಕುದುರೆ, ಹೇಸರಗತ್ತೆ, ಸುಗಂಧ ದ್ರವ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು
ಆಹಾರ ಧಾನ್ಯಗಳು, ಅಪೀಮು, ಬಟ್ಟೆ ನೀಲಿ ಮುಂತಾದವುಗಳನ್ನು ರಫ್ತು ಮಾಡುತ್ತಿದ್ದರು.
ಮುಸ್ಲಿಂ ರು ಖುಷ್ರ್ (ಉಷ್ರ್) ಎಂಬ 1/5 ಭಾಗದಷ್ಟು ಭೂಕಂದಾಯ ಕಟ್ಟಬೇಕಿತ್ತು
ಖಮ್ಸ್ ಎಂಬುದು ಯುದ್ಧ ಮತ್ತು ಗಣಿಗಾರಿಕೆಯಿಂದ ಬಂದ ಸಂಪತ್ತಿನ 1/5 ಭಾಗವಾಗಿತ್ತು.
ಖರಜ್ ಎಂಬುದು ಮುಸ್ಲಿಮೇತರರ ಮೇಲೆ ನಿಗದಿ ಪಡಿಸಿದ 1/3 ಭಾಗದಷ್ಟು ಭೂಕಂದಾಯವಾಗಿತ್ತು
ಮುಸ್ಲಿಮೇತರರು ಜೆಜಿಯಾ ಎಂಬ ತಲೆಗಂದಾಯವನ್ನು ಕಟ್ಟಬೇಕಿತ್ತು
ಸಾಮಾಜಿಕ ಜೀವನ
ಗುಲಾಮ ಪದ್ಧತಿ ಮತ್ತು ಸ್ತ್ರೀಯರು ಕಡ್ಡಾಯವಾಗಿ ಧರಿಸಲೇಬೇಕಾದ ಪರ್ದಾ ಪದ್ಧತಿ ಜಾರಿಯಲ್ಲಿತ್ತು.
ಬಾಲ್ಯವಿವಾಹ ಮತ್ತು ಸತಿಸಹಗಮನಗಳು ಸಹ ಜಾರಿಯಲ್ಲಿದ್ದವು
ಸಾಹಿತ್ಯ
ಅಲ್ಬೆರೂನಿ - ತಾರೀಕ್ ಉಲ್ ಹಿಂದ್
ಉತ್ಬಿ – ತಾರೀಖ್ ಇ ಯಾಮನಿ
ಹಸನ್ ನಿಜಾಮಿ – ತಾಜುಲ್ ಮಾಸಿಖ್
ಜಿಯಾವುದ್ದೀನ್ ಬರೌನಿ - ತಾರೀಕ್ ಇ ಫಿರೋಜ್ ಷಾಹಿ
ಫಿರೋಜ್ ಷಾ ತುಘಲಕ್ - ಪುತುಹತ್ ಇ ಫಿರೋಜ್ ಷಾಹಿ
ಅಮೀರ್ ಖುಸ್ರೋ – ಖಜ್ಯಾನ್, ಉಲ್ ಫುತುಹ್, ತಾರೀಖ್ ಇ ಅಲೈ
ಕಲೆ ಮತ್ತು ವಾಸ್ತುಶಿಲ್ಪ
ಭಾರತದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯನ್ನು ಪರಿಚಯಿಸಿದರು
ಕಮಾನು, ಗುಮ್ಮಟ, ಹಜಾರ, ಬೃಹತ್ ಬಾಗಿಲು ಈ ಶೈಲಿಯ ಪ್ರಮುಖ ಲಕ್ಷಣಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ