ಮೌರ್ಯರು
ಮೌರ್ಯರು
(ಸಾ.ಶ.ಪೂ. 324 ರಿಂದ ಸಾ.ಶ.ಪೂ. 185)
ಪಾಟಲಿಪುತ್ರ (ಇಂದಿನ ಬಿಹಾರದ ಪಾಟ್ನಾ) ಮೌರ್ಯರ ರಾಜಧಾನಿಯಾಗಿತ್ತು.
ಭಾರತದಲ್ಲೇ ಮೊದಲ ಬಾರಿಗೆ ಜನಗಣತಿ ಆರಂಭಿಸಿದವರು ಮೌರ್ಯರು.
ಚಂದ್ರಗುಪ್ತ ಮೌರ್ಯ (ಸಾ.ಶ.ಪೂ 324-300)
ನಂದರ ಕೊನೆಯ ಅರಸ ಧನನಂದನನ್ನು ಕೊಂದು ಚಂದ್ರಗುಪ್ತ ಮೌರ್ಯ ಅಧಿಕಾರಕ್ಕೆ ಬಂದನು. ಕ್ರಿ.ಪೂ. 301 ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್ ಭಾರತದ ವಾಯುವ್ಯದ ಮೇಲೆ ದಾಳಿ ಮಾಡಿದ ಆದರೆ ಯುದ್ಧದಲ್ಲಿ ಚಂದ್ರಗುಪ್ತನನ್ನು ಗೆಲ್ಲಲಾಗದೆ ಚಂದ್ರಗುಪ್ತನೊಡನೆ ಒಪ್ಪಂದ ಮಾಡಿಕೊಂಡನು. ಸೆಲ್ಯೂಕಸ್ ನ ಮಗಳು ಹೆಲನ್ ಳನ್ನು ಚಂದ್ರಗುಪ್ತ ವಿವಾಹವಾದನು.
ಸೆಲ್ಯೂಕಸ್ ನ ಆಸ್ಥಾನಿಕ ಮೆಗಾಸ್ತಾನಿಸ್ ರಾಯಭಾರಿಯಾಗಿ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದನು. ಮೆಗಾಸ್ತಾನಿಸ್ ನ ಪ್ರಸಿದ್ಧ ಕೃತಿ ಇಂಡಿಕಾ (ಈ ಕೃತಿ ದೊರೆತಿಲ್ಲ).
ವಿಶಾಖದತ್ತನ ಮುದ್ರಾರಾಕ್ಷಸ ಕೃತಿಯಿಂದ ಚಂದ್ರಗುಪ್ತ ಮೌರ್ಯನಿಗೆ ಋಷಲ ಎಂಬ ಬಿರುದಿದ್ದುದಾಗಿ ತಿಳಿದುಬರುತ್ತದೆ.
ಚಂದ್ರಗುಪ್ತ ಮೌರ್ಯನ ಗುರುವಾದ ಚಾಣಕ್ಯ (ಕೌಟಿಲ್ಯ) ಅರ್ಥಶಾಸ್ತ್ರ ಎಂಬ ಗ್ರಂಥವನ್ನು ಬರೆದಿದ್ದು ಈ ಗ್ರಂಥವು ರಾಜನ ಅಧಿಕಾರ ಕಾರ್ಯಗಳು ಹಾಗೂ ರಾಜ್ಯದ ಆಡಳಿತ ಮತ್ತು ಆರ್ಥಿಕತೆಯ ಕುರಿತು ಮಾಹಿತಿ ನೀಡುತ್ತದೆ. ಚಾಣಕ್ಯನನ್ನು ಭಾರತದ ಮೆಕೆವಲ್ಲಿ ಎಂದು ಕರೆಯುವರು. 1905 ರಲ್ಲಿ ಮೈಸೂರಿನ ಶಾಮಾಶಾಸ್ತ್ರಿಗಳು ಎಂಬುವವರು ಈ ಗ್ರಂಥವನ್ನು ಶೋಧಿಸಿ ಬೆಳಕಿಗೆ ತಂದರು.
ಭದ್ರಭಾಹುವಿನ ಕಲ್ಪಸೂತ್ರ ಗ್ರಂಥದಲ್ಲಿ ಚಂದ್ರಗುಪ್ತ ತನ್ನ ಗುರು ಭದ್ರಭಾಹುವಿನೊಡನೆ ಕರ್ನಾಟಕದ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿ ಇಲ್ಲಿಯೇ ಸಲ್ಲೇಖನ ವ್ರತ ಆಚರಿಸಿ ಮರಣ ಹೊಂದಿದನೆಂದು ಉಲ್ಲೇಖವಾಗಿದೆ. ಇವನ ಸಮಾಧಿಯ ಸ್ಥಳದಲ್ಲಿ ಚಂದ್ರಗುಪ್ತ ಬಸದಿಯನ್ನು ನಿರ್ಮಿಸಲಾಗಿದೆ.
ಬಿಂದುಸಾರ (ಸಾ.ಶ.ಪೂ 299-273)
ಗ್ರೀಕ್ ಚರಿತ್ರಕಾರರು ಈತನನ್ನು ಅಮಿತ್ರಘಾತೃ ಎಂದು ಕರೆದಿದ್ದಾರೆ. ಸಿರಿಯಾದಲ್ಲಿ ಆಳುತ್ತಿದ್ದ ಗ್ರೀಕರ ಅರಸ 1ನೇ ಆಂಟಿಯೋಕಸ್ ನ ರಾಯಭಾರಿ ಡೈಮಾಕಸ್ ಮತ್ತು ಈಜಿಪ್ಟ್ ನ ಅರಸ ಟಾಲೆಮಿ ಆಸ್ಥಾನದ ರಾಯಭಾರಿ ಡಿಯೋನಿಸಿಯಸ್ ಇವರು ಬಿಂದುಸಾರನ ಆಸ್ಥಾನಕ್ಕೆ ಭೇಟಿ ನೀಡಿದ್ದರು
ಅಶೋಕ (ಸಾ.ಶ.ಪೂ 270-232)
ಚಕ್ರವರ್ತಿಯಾಗುವ ಮೊದಲು ಅವಂತಿಯ (ಉಜ್ಜೈನಿ) ರಾಜ್ಯಪಾಲನಾಗಿ ಕಾರ್ಯನಿರ್ವಹಿಸುತ್ತಿದ್ದನು. ಅಶೋಕನು ಸಾ.ಶ.ಪೂ 261 ರಲ್ಲಿ ಕಳಿಂಗದ ಅರಸ ಖಾರವೇಲನ (ಶುದ್ಧಧರ್ಮ) ಮೇಲೆ ಯುದ್ಧ ಮಾಡಿದನು. ಯುದ್ಧ ನಂತರ ಪಶ್ಚಾತ್ತಾಪಗೊಂಡು ಉಪಗುಪ್ತನಿಂದ ಬೌದ್ಧಧರ್ಮ ಸ್ವೀಕರಿಸಿದನು. ಕಳಿಂಗ ಯುದ್ಧವು ಅಶೋಕ ಕೈಗೊಂಡ ಏಕೈಕ ಯುದ್ಧವಾಗಿದೆ.
ದೇವಾಂನಾಂಪ್ರಿಯ ಮತ್ತು ಪ್ರಿಯದರ್ಶಿರಾಜ ಎಂಬುವು ಅಶೊಕನಿಗಿದ್ದ ಬಿರುದುಗಳು. ಅಶೋಕನು ಬೌದ್ದ ಧರ್ಮದ ಪ್ರಚಾರಕ್ಕಾಗಿ ಧರ್ಮಮಹಾಮಾತ್ರರು ಎಂಬ ಧರ್ಮಾಧಿಕಾರಿಗಳನ್ನು ನೇಮಿಸಿಕೊಂಡಿದ್ದನು.
ಪ್ರಮುಖ ಧರ್ಮಮಹಾಮಾತ್ರರು
ಮಹೇಂದ್ರ ಮತ್ತು ಸಂಘಮಿತ್ರೆ (ಅಶೋಕನ ಮಕ್ಕಳು) - ಶ್ರೀಲಂಕಾ.
ಮಜ್ಜಂಟಕ - ಕಾಶ್ಮೀರ ಹಾಗೂ ಗಾಂಧಾರ (ಇಂದಿನ ಅಫ್ಘಾನಿಸ್ತಾನ)
ಮಹಾರಕ್ಷಿತ - ಗ್ರೀಕ್
ಮಹಾದೇವ - ಮೈಸೂರು (ಮಹಾವಂಶ ಕೃತಿಯಲ್ಲಿ ಉಲ್ಲೇಖ)
ಸೋನ ಮತ್ತು ಉತ್ತರ - ಬರ್ಮಾ ಮತ್ತು ಇತರ ಪೂರ್ವ ದೇಶಗಳು
ಇಂದಿನ ನೇಪಾಳದ ಲುಂಬಿನಿವನ, ಉತ್ತರ ಪ್ರದೇಶದ ಸಾರನಾಥ ಮತ್ತು ಮಧ್ಯಪ್ರದೇಶದ ಸಾಂಚಿಯಲ್ಲಿ ಬೌದ್ಧ ಸ್ತೂಪಗಳನ್ನು ನಿರ್ಮಿಸಿದನು.
ಸಾಂಚಿ ಸ್ತೂಪ ಮತ್ತು ಸಾರನಾಥ ಸ್ತೂಪ ಇವರ ಕಾಲದ ಪ್ರಮುಖ ನಿರ್ಮಾಣಗಳು
ಸಾ.ಶ.ಪೂ 250 ರಲ್ಲಿ ರಾಜಧಾನಿ ಪಾಟಲಿಪುತ್ರದಲ್ಲಿ ತನ್ನ ಸಹೋದರನಾದ ತಿಸ್ಸಾ ಮೊಗ್ಗಲಿಪುತ್ರನ ಅಧ್ಯಕ್ಷತೆಯಲ್ಲಿ 3ನೇ ಬೌದ್ಧ ಸಮ್ಮೇಳವನ್ನು ನಡೆಸಿದನು
ಶಾಸನಗಳು
ಗುಜರಾತಿನ ಗಿರ್ನಾರ್ ನಲ್ಲಿರುವ ರುದ್ರದಾಮನ್ ನ ಜುನಾಗಢ ಶಾಸನದಲ್ಲಿ ಉಲ್ಲೇಖಿಸಿರುವಂತೆ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಪುಷ್ಯಗುಪ್ತ ಎಂಬ ರಾಜ್ಯಪಾಲನು ಸುದರ್ಶನ ಕೆರೆಯನ್ನು ಕಟ್ಟಿಸಿದನು.
ಅಶೋಕನ ಶಾಸನಗಳು
ಅಶೊಕನನ್ನು ಶಿಲಾ ಶಾಸನಗಳ ಪಿತಾಮಹಾ ಎಂದು ಕರೆಯುವರು. 1837 ರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬಾತ ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ಓದಿದನು.
ಅಶೊಕನ ಶಾಸನಗಳು ಭಾರತದಲ್ಲಿ ಬ್ರಾಹ್ಮಿಲಿಪಿ ಹಾಗೂ ಪ್ರಾಕೃತ ಭಾಷೆಯಲ್ಲಿವೆ. ಭಾರತದ ಗಡಿಯಾಚೆ ದೊರೆತ ಶಾಸನಗಳು ಖರೋಷ್ಟಿ ಲಿಪಿಯ ಪ್ರಾಕೃತ ಭಾಷೆ, ಅರೇಬಿಕ್ ಮತ್ತು ಗ್ರೀಕ್ ಭಾಷೆಯಲ್ಲಿವೆ.
ಚಿತ್ರದುರ್ಗದ ಬ್ರಹ್ಮಗಿರಿ ಎಂಬಲ್ಲಿ ದೊರೆತ ಶಾಸನದಿಂದ ಅಶೋಕನ ಬಹುತೇಕ ಶಾಸನಗಳನ್ನು ಕೆತ್ತಿದವನು ಚಪಡ ಎಂದು ಹೇಳಲಾಗುತ್ತದೆ.
ಬಾಬ್ರೂ ಮತ್ತು ರುಮಂಡೈ ಶಾಸನಗಳು ಅಶೋಕನು ಬೌದ್ಧಧರ್ಮ ಸ್ವೀಕರಸಿದ್ದರ ಬಗ್ಗೆ ಹೇಳುತ್ತವೆ.
ಅಶೋಕನ ಮನ್ಸೀರ್ ಮತ್ತು ಶಾಬಾಜ್‍ಗಿರಿ ಶಾಸನಗಳು ಖರೋಷ್ಟಿ ಲಿಪಿಯಲ್ಲಿವೆ
7ನೇ ಸ್ಥಂಭಶಾಸನವು ಅವನು ಮಾಡಿದ ಪ್ರಜಾಹಿತ ಕಾರ್ಯಗಳ ಬಗ್ಗೆ ಬಗ್ಗೆ ತಿಳಿಸುತ್ತದೆ.
1ನೇ ಬಂಡೆಗಲ್ಲು ಶಾಸನವು ಪ್ರಾಣಿಹತ್ಯೆ ನಿಷೇಧದ ಕುರಿತು ಹೇಳುತ್ತದೆ.
2ನೇ ಬಂಡೆಗಲ್ಲು ಶಾಸನವು ಪ್ರಾಣಿ ಮತ್ತು ಮನುಷ್ಯರಿಗಾಗಿ ಆಸ್ಪತ್ರೆಗಳನ್ನು ಕಟ್ಟಿಸಿದ್ದರ ಬಗ್ಗೆ ತಿಳಿಸುತ್ತದೆ.
5ನೇ ಬಂಡೆಗಲ್ಲು ಶಾಸನವು ಧರ್ಮಮಹಾಮಾತ್ರರ ಕುರಿತು ಹೇಳುತ್ತದೆ.
13ನೇ ಬಂಡೆಗಲ್ಲು ಶಾಸನವು ಕಳಿಂಗ ಯುದ್ಧದ ಕುರಿತು ತಿಳಿಸುತ್ತದೆ.
ಕರ್ನಾಟಕದ ಶಾಸನಗಳು
ಚಿತ್ರದುರ್ಗ : ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ಅಶೋಕ ಸಿದ್ದಾಪುರ (ಬಿ.ಎಲ್ ರೈಸ್ 1892)
ರಾಯಚೂರು : ಮಸ್ಕಿ (ಡಾ. ಸಿ ಬೀಡನ್ 1915)
ಕೊಪ್ಪಳ : ಗವಿಮಠ, ಪಾಲ್ಕಿಗುಂಡು, ಕೊಪ್ಪಳ (1931 ನಾರಾಯಣರಾವ್ ಶಾಸ್ತ್ರಿ ಮತ್ತು ಯಜ್ದಾನಿ)
ಬಳ್ಳಾರಿ : ನಿಟ್ಟೂರು, ಉದೇಗೊಳ್ಳಂ (ಶ್ರೀನಾಥ 1977)
ಕಲುಬುರ್ಗಿ : ಸನ್ನತಿ (ದೇವನಾಂಪ್ರಿಯ ಮತ್ತು ಪ್ರಿಯದರ್ಶಿರಾಜ ಎಂಬ ಬಿರುದುಗಳು ಅಶೋಕನವು ಎಂಬುದು ಈ ಶಾಸನದಿಂದ ತಿಳಿದುಬಂದಿದೆ)
ಮೌರ್ಯರ ಆಡಳಿತ
ತಕ್ಷಶಿಲೆ, ಉಜ್ಜೈನಿ, ಕಳಿಂಗ ಮತ್ತು ಸುವರ್ಣಗಿರಿ ಇವು ನಾಲ್ಕು ಪ್ರಮುಖ ಪ್ರಾಂತ್ಯಗಳಾಗಿದ್ದವು
ಬೃಹದ್ರಥ ಮೌರ್ಯ ವಂಶದ ಕೊನೆಯ ಅರಸ. ಶುಂಗವಂಶದ ಪುಷ್ಯಮಿತ್ರ ಶುಂಗನು ಬೃಹದ್ರಥನನ್ನು ಕೊಂದು ಶುಂಗ ವಂಶ ಸ್ಥಾಪಿಸಿದನು. ಈ ಘಟನೆಯನ್ನು ಶುಂಗಕ್ರಾಂತಿ ಎಂದು ಉಲ್ಲೇಖಿಸಲಾಗಿದೆ.
ಅಪರಾಧಿ ನ್ಯಾಯಾಲಯವನ್ನು (ಕ್ರಿಮಿನಲ್ ಕೋರ್ಟ್) ಕಂಟಕಶೋಧನ ಎಂದು, ನಾಗರಿಕ ನ್ಯಾಯಾಲಯವನ್ನು (ಸಿವಿಲ್ ಕೋರ್ಟ್) ಧರ್ಮಸ್ಥಾನೀಯ ಎಂದು ಕರೆಯಲಾಗುತ್ತಿತ್ತು. ಇವುಗಳಲ್ಲದೇ ಜನಪದ ಸಂಧಿ ಮತ್ತು ದ್ರೋಣಮುಖ ಸಂಗ್ರಹ ಎಂಬ ಇತರ ನ್ಯಾಯಾಲಯಗಳು ಸಹ ಅಸ್ಥಿತ್ವದಲ್ಲಿದ್ದವು.
ಪ್ರಮುಖ ಅಧಿಕಾರಿಗಳು
ಕುಮಾರ : ಪ್ರಾಂತಗಳ ಮೇಲ್ವಿಚಾರಣ ಅಧಿಕಾರಿ
ಸಮಹರ್ತ : ಜನಪದ ಅಧಿಕಾರಿ (ಕಂದಾಯ ವಸೂಲಿಗಾರ)
ವ್ಯಭಾರಿಕ : ಮುಖ್ಯ ನ್ಯಾಯಾಧೀಶ
ಪ್ರಶಸ್ತಿ : ಕಾರಾಗೃಹಗಳ ಮುಖ್ಯಸ್ಥ
ಗೋಪ : 10 ಗ್ರಾಮಗಳ ಮೇಲ್ವಿಚಾರಕ
ಗ್ರಾಮಿಕ : ಗ್ರಾಮದ ಅಧಿಕಾರಿ
ವಜ್ರಭೂಮಿಕ: ಸಾರ್ವಜನಿಕ ಬಾವಿ, ರಸ್ತೆ, ತೋಪುಗಳ ನಿರ್ಮಾಣದ ಉಸ್ತುವಾರಿ ಸಚಿವ
ಆರ್ಥಿಕತೆ
ಸನ್ನಿಧಾತ : ಖಜಾನೆಯ ಮುಖ್ಯಸ್ಥ
ರಜ್ಜುಕ: ಹಗ್ಗ(ರಜ್ಜು)ದಿಂದ ಭೂಮಾಪನ ಮಾಡಿ ಕಂದಾಯ ನಿಶ್ಚಯಿಸುವ ಅಧಿಕಾರಿ
ಸೀತಾಧ್ಯಕ್ಷ : ಕೃಷಿಯ ಮೇಲ್ವಿಚಾರಕ
ಸಂಸ್ಥಾಧ್ಯಕ್ಷ : ಮಾರುಕಟ್ಟೆಯ ಮೇಲ್ವಿಚಾರಕ
ಪೌತವಾಧ್ಯಕ್ಷ : ತೂಕ ಮತ್ತು ಅಳತೆಯ ಮೇಲ್ವಿಚಾರಕ
ಶುಲ್ಕಾಧ್ಯಕ್ಷ : ಆಮದು ಮತ್ತು ರಫ್ತು ತೆರಿಗಗಳನ್ನು ಸಂಗ್ರಹಿಸುವವನು
ಲಕ್ಷಣಾಧ್ಯಕ್ಷ : ಟಂಕಸಾಲೆಯ ಮುಖ್ಯಸ್ಥ
ನಿಷ್ಕ (ಬಂಗಾರ), ಪುರಾಣ (ಬೆಳ್ಳಿ) ಮತ್ತು ಕರ್ಷಪಣ (ತಾಮ್ರ) ಎಂಬ ನಾಣ್ಯಗಳನ್ನು ಮುದ್ರಣ ಮಾಡುತ್ತಿದ್ದರು. ಅಲ್ಲದೇ ಆಮದು ರಫ್ತಿಗಾಗಿ ಕಾನೂನು ಸಮ್ಮತ ನಾಣ್ಯಗಳನ್ನು ಮತ್ತು ದಿನನಿತ್ಯದ ಬಳಕೆಗಾಗಿ ಸಾಂಕೇತಿಕ ನಾಣ್ಯಗಳನ್ನು ಬಳಸುತ್ತಿದ್ದರು.
ಬಂಗಾಳದ ತಾಮ್ರಲಿಪ್ತಿ ಪ್ರಮುಖ ಬಂದರು ಆಗಿತ್ತು.
ರಫ್ತು : ಮುತ್ತು, ಅಕ್ಕಿ, ದಂತ, ವೈದ್ಯಕೀಯ ವಸ್ತುಗಳು, ಹತ್ತಿ, ಸಾಂಬಾರ ಪದಾರ್ಥಗಳು, ರೇಷ್ಮೆ, ಮಸ್ಲಿನ್ ಬಟ್ಟೆ, ರತ್ನಗಳು, ಗಿಡಮೂಲಿಕೆಗಳು, ಮುಂತಾದವು
ಆಮದು : ಗಾಜಿನ ವಸ್ತುಗಳು, ಹಣ್ಣುಗಳು ಮತ್ತು ದ್ರಾಕ್ಷಾರಸ ಮುಂತಾದವು
ಪ್ರಮುಖ ತೆರಿಗೆಗಳು
ಭಾಗ - ಬೆಳೆಯ ಆರನೆ ಒಂದು ಭಾಗ
ಬಲಿ - ಅಧಿಕಾರಿಗಳ ಖರ್ಚುವೆಚ್ಚಕ್ಕಾಗಿ ಹಾಕುತ್ತಿದ್ದ ತೆರಿಗೆ
ತೈತ್ – ಇತರ ಚಟುವಟಿಕೆಗಳ ಮೇಲಿನ ಹತ್ತನೇ ಒಂದು ಭಾಗದ ತೆರಿಗೆ
ಶುಲ್ಕ – ಮಾರುಕಟ್ಟೆಯ ತೆರಿಗೆ
ಕರ - ಹಣ್ಣು ಮತ್ತು ತೋಟಗಳ ಮೇಲಿನ ತೆರಿಗೆ
ಪ್ರಣಯ – ತುರ್ತುಪರಿಸ್ಥಿತಿಯ ತೆರಿಗೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ