ಜೈನ ಧರ್ಮ ಮತ್ತು ಬೌದ್ಧಧರ್ಮ

 ಜೈನ ಧರ್ಮ

ಜೈನಧರ್ಮದಲ್ಲಿ 24 ಜನ ತೀರ್ಥಂಕರನ್ನು ಆರಾಧಿಸುತ್ತಾರೆ. ತೀರ್ಥಂಕರ ಎಂದರೆ ಭವಸಾಗರವನ್ನು ದಾಟಿಸುವವನು ಎಂದರ್ಥ. ಈ ತೀರ್ಥಂಕರರನ್ನು ಜಿನ ಎನ್ನುವರು. ಜಿನ ಎಂದರೆ ಇಂದ್ರಿಯಗಳನ್ನು ಗೆದ್ದವನು ಎಂದರ್ಥ.

ಜೈನಧರ್ಮದ ಮೊದಲ ತೀರ್ಥಂಕರ ವೃಷಭನಾಥ (ಆದಿನಾಥ). ವೃಷಭ (ಗೂಳಿ) ಇವನ ಚಿಹ್ನೆಯಾಗಿತ್ತು.

ಪಾ ರ್ಶ್ವನಾಥ (ಸಾ.ಶ.ಪೂ 6ನೇ ಶ) 

ಪಾರ್ಶ್ವನಾಥ ಜೈನಧರ್ಮದ 23ನೇ ತೀರ್ಥಂಕರ. ಈತ ಕಾಶಿಯ ಅರಸ ಅಶ್ವಸೇನನ ಮಗನಾಗಿದ್ದ. ಸರ್ಪ ಇವನ ಚಿಹ್ನೆಯಾಗಿತ್ತು. ಇವನ ಅನುಯಾಯಿಗಳನ್ನು ಶ್ವೇತಾಂಬರರು ಎನ್ನುವರು. ಶ್ವೇತಾಂಬರರು ಬಿಳಿಯ ಬಟ್ಟೆಗಳನ್ನು ಧರಿಸುತ್ತಾರೆ. 

ವರ್ಧಮಾನ ಮಹಾವೀರ (ಸಾ.ಶ.ಪೂ 599-527)

ಮಹಾವೀರ ಜೈನಧರ್ಮದ 24ನೇ ತೀರ್ಥಂಕರ. ತಂದೆ ಸಿದ್ದಾರ್ಥ ತಾಯಿ ತ್ರಿಶಲಾದೇವಿ. ಮಹಾವೀರನು ಕಾಶ್ಮೀರದ ಕುಂಡಲಿವನದಲ್ಲಿ ಜನಿಸಿದನು. ಈತನಿಗೆ ಯಶೋಧಾ ಎಂಬುವಳೊಡನೆ ವಿವಾಹವಾಯಿತು. ಮಹಾವೀರನ ಮಗಳ ಹೆಸರು ಅನೋಜ್ಞಾ (ಪ್ರಿಯದರ್ಶಿನಿ). ಮಹಾವೀರನ ಚಿಹ್ನೆ ಸಿಂಹ.

ಮಹಾವೀರನಿಗೆ ಋಜುಪಾಲಿಕ ನದಿಯ ದಂಡೆಯ ಮೇಲೆ ಜ್ಞಾನೋದಯವಾಯಿತು.  ಮಹಾವೀರನ ಅನುಯಾಯಿಗಳನ್ನು ದಿಗಂಬರರು ಎನ್ನುವರು. ಇವರು ಬಟ್ಟೆಗಳನ್ನು ಧರಿಸದೆ ನಗ್ನವಾಗಿರುತ್ತಾರೆ.

ಮಹಾವೀರನು ತ್ರಿರತ್ನಗಳನ್ನು ಬೋಧಿಸಿದನು.

ಮಹಾವೀರನು ಬಿಹಾರದ ಪಾವಾಪುರಿ ಎಂಬಲ್ಲಿ ಮರಣ ಹೊಂದಿದನು

ಮಹಾವೀರನ 11 ಜನ ಶಿಷ್ಯರನ್ನು ಗಣಾಧರರು (ಗಾಂಧಾರರು) ಎನ್ನುವರು

ಜೈನರಲ್ಲಿ ಸಲ್ಲೇಖನ ವ್ರತವನ್ನು ಪಾಲಿಸಿ ದೇಹತ್ಯಾಗ ಮಾಡುವ ಪದ್ಧತಿಯಿದೆ.

14 ಪೂರ್ವಗಳು ಹಾಗೂ 12 ಅಂಗಗಳು (ದ್ವಾದಶಾಂಗಗಳು) ಜೈನಧರ್ಮದ ಪ್ರಮುಖ ಗ್ರಂಥಗಳಾಗಿವೆ. 12 ಉಪಾಂಗಗಳು, 10 ಪ್ರಕೀರ್ಣಗಳು, 4 ಮೂಲಸೂತ್ರಗಳು ಇತರ ಪ್ರಮುಖ ಧಾರ್ಮಿಕ ಗ್ರಂಥಗಳು.

ಉತ್ತರ ಭಾರತದಲ್ಲಿ ಸ್ಥೂಲಬಾಹು ಶ್ವೇತಾಂಬರ ಪಂಥವನ್ನು ಪ್ರಚಾರ ಮಾಡಿದನು. ದಕ್ಷಿಣ ಭಾರತದಲ್ಲಿ ಭದ್ರಬಾಹು ದಿಗಂಬರ ಪಂಥವನ್ನು ಪ್ರಚಾರ ಮಾಡಿದನು.

ಸರ್ಮಿಣಿ ಮತ್ತು ಸರವಿಕರು ಎಂಬುವು ಸ್ತ್ರೀ ಜೈನ ಸಂಘಗಳಾಗಿದ್ದವು.

ಕರ್ನಾಟಕದಲ್ಲಿ ಗಂಗರ ಯುಗವನ್ನು ಜೈನ ಸುವರ್ಣಯುಗ ಎನ್ನುವರು. ಭಾರತದಲ್ಲಿ ರಾಜಸ್ತಾನ ಅತಿ ಹೆಚ್ಚು ಜೈನರನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಅತಿ ಹೆಚ್ಚು ಜೈನರು ಕಂಡುಬರುತ್ತಾರೆ.

ಪ್ರಮುಖ ದೇವಾಲಯಗಳು

ಉದಯಗಿರಿಯ ಹುಲಿಗುಹೆ, ಎಲ್ಲೋರದ ಇಂದ್ರಸಭೆ, ಗಿರ್ನಾರಿನ ಲಕ್ಕುಂಡಿ, ಪುಲಿತಾನ್, ಮೌಂಟ್ ಅಬು, ಬುಂದೇಲ್ ಖಂಡದ ಖಜುರಾಹೋ, ಚಿತ್ತೂರಿನ ಆದಿನಾಥ ದೇಗುಲ ಇವು ಜೈನ ಧರ್ಮದ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.

ಜೈನ ಧರ್ಮ ಸಮ್ಮೇಳನಗಳು

ಕ್ರ ಸಂ

ಸ್ಥಳ

ಅಧ್ಯಕ್ಷ

ಕಾಲ

ಮುಖ್ಯಾಂಶ

1

ಪಾಟಲಿಪುತ್ರ

ಸ್ಥೂಲಭದ್ರ

ಸಾ.ಶ.ಪೂ 300

12 ಅಂಗಗಳ ರಚನೆ

2

ವಲ್ಲಭೀನಗರ

(ಗುಜರಾತ್)

 

ಮಥುರಾ

(ಉತ್ತರ ಪ್ರದೇಶ)

ನಾಗಾರ್ಜುನ

 

 

ದೇವರ್ಷಿ ಕ್ಷಮಾಶ್ರವಣ

ಸಾ.ಶ.ಪೂ 512

ಜೈನ ಧರ್ಮಗ್ರಂಥಗಳ ಮರುಪರಿಶೀಲನೆ ಮತ್ತು ಜೈನಧರ್ಮದ ಇಬ್ಬಾಗ

ಶ್ರವಣಬೆಳಗೊಳ ಮತ್ತು ಮೂಡಬಿದಿರೆಗಳು ಜೈನ ಕಾಶಿ ಎಂದೇ ಖ್ಯಾತವಾಗಿವೆ

ಬೌದ್ಧಧರ್ಮ (ಸಾ.ಶ.ಪೂ 567-487)

ಬುದ್ಧ ನೇಪಾಳದ ಕಪಿಲವಸ್ತುವಿನ ಲುಂಬಿಣೀವನದಲ್ಲಿ ಜನಿಸಿದನು. ಕಮಲವು ಸಿದ್ದಾರ್ಥನ ಜನನದ ಸಂಕೇತವಾಗಿದೆ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಬುದ್ಧನ ಮೊದಲ ಹೆಸರು ಸಿದ್ದಾರ್ಥ. ಸಿದ್ದಾರ್ಥನು ಶಾಖ್ಯ ಎಂಬ ಕ್ಷತ್ರಿಯ ವಂಶಕ್ಕೆ ಸೇರಿದವನು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಮಾಯಾದೇವಿಯ ಸಹೋದರಿ ಮಹಾಪ್ರಜಾಪತಿ ಗೌತಮಿ ಸಾಕಿದಳು ಆದ್ದರಿಂದ ಸಿದ್ದಾರ್ಥ ಗೌತಮನೆಂದು ಹೆಸರಾದನು. ಯಶೋಧರೆ ಎಂಬ ಕನ್ಯೆಯೊಂದಿಗೆ ಸಿದ್ಧಾರ್ಥನ ವಿವಾಹವಾಗಿ ಅವರಿಗೆ ರಾಹುಲ ಎಂಬ ಮಗನು ಹುಟ್ಟಿದನು.

ಸಿದ್ಧಾರ್ಥನು ಮುಂದೆ ಮಹಾಸಾಮ್ರಾಟನಾಗುವನು ಇಲ್ಲವೇ ಪರಮ ವೈರಾಗಿಯಾಗುವನು ಎಂದು ಅಸಿತ ಮುನಿಯು ಭವಿಷ್ಯ ನುಡಿದಿದ್ದನು.

ಸಿದ್ದಾರ್ಥನು ತನ್ನ 29ನೇ ವಯಸ್ಸಿನಲ್ಲಿ ವೈರಾಗ್ಯ ಹೊಂದಿ ಅರಮನೆಯನ್ನು ತೊರೆದನು. ಇದನ್ನೇ ಮಹಾಪರಿತ್ಯಾಗ ಎಂದು ಕರೆಯಲಾಗಿದೆ. ಕುದುರೆ ಮಹಾಪರಿತ್ಯಾಗದ ಸಂಕೇತವಾಗಿದೆ

ರಾಜಗೃಹದಲ್ಲಿ ರುದ್ರಕ ರಾಮಪುತ್ರ ಮತ್ತು ಅಲಾರಕ ರಾಮ ಇವರನ್ನು ಮೊದಲ ಗುರುಗಳನ್ನಾಗಿ ಸ್ವೀಕರಿಸಿದನು. ಮುಂದೆ ಉರುವೇಲ ಗ್ರಾಮದ ಸುಜಾತ ಎಂಬಾಕೆಯಿಂದ ಮೊದಲ ಭಿಕ್ಷಾನ್ನವನ್ನು ಪಡೆದು ತಪಸ್ಸಿಗೆ ತೆರಳಿದನು. ಗಯಾದ ಅಶ್ವತ್ಥ ಮರದ ಕೆಳಗೆ ಅವನಿಗೆ ಜ್ಞಾನೋದಯವಾಯಿತು. ಜ್ಞಾನೋದಯದ ನಂತರ ತಥಾಗತ ಎಂದು ಹೆಸರಾದನು. ತಥಾಗತ ಎಂದರೆ ಸತ್ಯವನ್ನು ಕಂಡುಕೊಂಡವನು ಎಂದರ್ಥ. ಬುದ್ಧನು ಜ್ಞಾನೋದಯ ಪಡೆದ ಸ್ಥಳವು ಬುದ್ಧಗಯಾ ಎಂದು ಹೆಸರಾಯಿತು. ಬೋಧಿವೃಕ್ಷವು ಜ್ಞಾನೋದಯದ ಸಂಕೇತವಾಗಿದೆ.

ಬುದ್ಧ ತನ್ನ ಮೊದಲ ಪ್ರವಚನವನ್ನು ಸಾರನಾಥದ ಜಿಂಕೆವನದಲ್ಲಿ ನೀಡಿದನು. ಇದನ್ನು ಧರ್ಮಚಕ್ರ ಪ್ರವರ್ತನ ಎನ್ನುವರು. ಧರ್ಮಚಕ್ರವು ಮೊದಲ ಉಪದೇಶದ ಸಂಕೇತವಾಗಿದೆ. ಬುದ್ಧನು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ ಬೋಧಿಸಿದನು. ಬುದ್ಧನ ಬೋಧನೆಗಳಲ್ಲಾ ಪಾಲಿ ಭಾಷೆಯಲ್ಲಿದ್ದವು. ಇದನ್ನೆ ಅವನು ಪಾಲಿ ಭಾಷೆಯಲ್ಲಿ ಧಮ್ಮ ಎಂದು ಕರೆದನು. ಆಸೆಯೇ ದುಃಖಕ್ಕೆ ಮೂಲ ಎಂಬುದು ಅವನ ಪ್ರಸಿದ್ಧ ತತ್ವ. ಬುದ್ಧನು ಜೀವನದ ಸಾರ್ಥಕತೆಗಾಗಿ ಅಷ್ಟಾಂಗ ಮಾರ್ಗವನ್ನು ಬೋಧಿಸಿದನು.

ಬುದ್ಧನು ಇಂದಿನ ಉತ್ತರ ಪ್ರದೇಶದ ಕುಶೀನಗರದಲ್ಲಿ ನಿಧನ ಹೊಂದಿದನು. ಸ್ಥೂಪವು ಮಹಾಪರಿನಿರ್ವಾಣದ ಸಂಕೇತವಾಗಿದೆ.

ಸುಜಾತ, ಆಮ್ರಪಾಲಿ, ಆನಂದ, ಅಶ್ವಜಿತ್, ಉರುವೇಲ, ಸಾರಿಪುತ್ರ ಮುಂತಾದವರು ಬುದ್ಧನ ಪ್ರಮುಖ ಶಿಷ್ಯರಾಗಿದ್ದರು.

ಬೌದ್ಧಧರ್ಮದ ಪಂಗಡಗಳು

ಹೀನಾಯಾನ : ಈ ಪಂಥದವರು ಬುದ್ಧನನ್ನು ದೇವರೆಂದು ಭಾವಿಸುವುದಿಲ್ಲ ಮತ್ತು ಬುದ್ಧನ ಮೂರ್ತಿಯನ್ನ ಸಹ ಪೂಜಿಸುವುದಿಲ್ಲ. ಬುದ್ಧನ ಚಿಹ್ನೆಗಳಾದ ಕಮಲಧರ್ಮಚಕ್ರಗಳನ್ನು ಪೂಜಿಸುತ್ತಾರೆ. ಈ ಪಂಥವು ಭಾರತಶ್ರೀಲಂಕಾದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಹೀನಾಯಾನದ ಕೃತಿಗಳೆಲ್ಲವೂ ಹೆಚ್ಚಾಗಿ ಪಾಲಿ ಭಾಷೆಯಲ್ಲಿ ರಚನೆಯಾದವು. ಮಹಾವಸ್ತು ಹೀನಾಯಾನ ಪಂಥಕ್ಕೆ ಸಂಬಂಧಿಸಿದ ಗ್ರಂಥವಾಗಿದೆ.

ಮಹಾಯಾನ : ಈ ಪಂಥದವರು ಬುದ್ಧನನ್ನು ದೇವರೆಂದು ಭಾವಿಸುತ್ತಾರೆ ಮತ್ತು ಬುದ್ಧನ ಮೂರ್ತಿಯನ್ನ ಪೂಜಿಸುತ್ತಾರೆ. ಈ ಪಂಥವು ಚೀನಾಜಪಾನ್ಮಲೇಷಿಯಾಬರ್ಮಾ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಲಲಿತ ವಿಸ್ತಾರ ಗ್ರಂಥವು ಮಹಾಯಾನದ ಕುರಿತಾದ ಪುಸ್ತಕವಾಗಿದೆ.

ಇದಲ್ಲದೆ ಟಿಬೆಟ್‍ನಲ್ಲಿ ವಜ್ರಯಾನ ಮತ್ತು ಇನ್ನೂ ಹಲವೆಡೆ ಮಂತ್ರಯಾನ ಎಂಬ ಪಂಥಗಳು ಪ್ರಚಲಿತದಲ್ಲಿವೆ. ಮಂಜುಶ್ರೀ ಮೂಲಕಲ್ಪವು ವಜ್ರಯಾನಕ್ಕೆ ಸಂಬಂಧಿಸಿದ ಪುಸ್ತಕವಾಗಿದೆ.

ಸರ್ ಎಡ್ವಿನ್ ಅರ್ನಾಲ್ಡ್ ರು ಬುದ್ಧನನ್ನು ಎಷ್ಯಾದ ಜ್ಞಾನದೀಪ (ಬೆಳಕು) ಎಂದಿದ್ದಾರೆ.

ಯಾದಗಿರಿಯಲ್ಲಿ ಮಲಗಿರುವ ಬುದ್ಧನ ಮಾದರಿಯ ಬೆಟ್ಟವಿದೆ

ಬೌದ್ಧ ಸಾಹಿತ್ಯ

ತ್ರಿಪೀಟಕಗಳು 

ಸುತ್ತಪೀಟಕ : ಬೌದ್ಧ ಧರ್ಮದ ತತ್ವಗಳನ್ನು ಒಳಗೊಂಡಿದೆ

ವಿನಯ ಪೀಟಕ : ಬುದ್ದನ ಬೋಧನೆಗಳನ್ನು ಒಳಗೊಂಡಿದೆ

ಅಭಿದಮ್ಮ ಪೀಟಕ : ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಪ್ರಚಾರದ ಕುರಿತು ಹೇಳುತ್ತದೆ.

ಧಮ್ಮ ಪದ ಮತ್ತು ಸುತ್ತ ನಿಪಾತ ಎಂಬೆರೆಡು ಗ್ರಂಥಗಳನ್ನು ಸಹ ಕಾಣಬಹುದು. ಬೌದ್ಧ ಧರ್ಮದ ಗ್ರಂಥಗಳೆಲ್ಲವೂ ಪಾಲಿ ಮತ್ತು ಪ್ರಾಕೃತ ಭಾಷೆಯಲ್ಲಿ ರಚನೆಯಾಗಿವೆ.

ದೀಪವಂಶ ಮತ್ತು ಮಹಾವಂಶ ಕೃತಿಗಳು ಶ್ರೀಲಂಕಾದಲ್ಲಿ ಬೌದ್ದಧರ್ಮದ ಇತಿಹಾಸವನ್ನು ಕುರಿತು ಹೇಳುತ್ತವೆ.

ಕಾಶ್ಯಪ ಮತ್ತು ಮಾತಂಗ ಎಂಬುವವರು ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ಭಾಷಾಂತರಿಸಿದರು.

ತಮಿಳಿನ ಮಣಿಮೇಖಲೈ ಕಾವ್ಯವು ಬೌದ್ಧಧರ್ಮದ ಕುರಿತಾದ ಕಾವ್ಯವಾಗಿದೆ.

ಬೌದ್ಧಧರ್ಮದ ಅನುಯಾಯಿಗಳು ಭಾರತದಲ್ಲಿ ಸ್ತೂಪ, ಸ್ತಂಭ ಮತ್ತು ಗುಹಾಂತರ ದೇವಾಲಯಗಳನ್ನು ನಿರ್ಮಿಸುವ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ವಾಸ್ತುಶಿಲ್ಪವನ್ನು ಪರಿಚಯ ಮಾಡಿಕೊಟ್ಟರು.

ಬುದ್ಧನ ಜನನಜ್ಞಾನೋದಯ ಮತ್ತು ಮರಣ ಇವು ಮೂರೂ ವೈಶಾಖ ಹುಣ್ಣಿಮೆಯಂದೇ ನಡೆದವು ಹಾಗಾಗಿ ವೈಶಾಖಿ ಹುಣ್ಣಿಮೆ ಬೌದ್ಧರಿಗೆ ಪವಿತ್ರ ದಿನವಾಗಿದೆ.

ಸ್ಥೂಪಗಳು - ಬೌದ್ಧ ದೇವಾಲಯಗಳು

ಚೈತ್ಯಾಲಯಗಳು - ಪ್ರಾರ್ಥನಾ ಮಂದಿರಗಳು

ವಿಹಾರಗಳು - ವಿಶ್ರಾಂತಿ ಮಂದಿರಗಳು

ಸಂಗಾರಾಮಗಳು -  ಶಿಕ್ಷಣ ಕೇಂದ್ರಗಳು

ಬೌದ್ಧ ಮಹಾ ಸಮ್ಮೇಳನಗಳು

ಕ್ರ ಸಂ

ಸ್ಥಳ

ರಾಜ

ಅಧ್ಯಕ್ಷ

ಕಾಲ

ಮುಖ್ಯಾಂಶ

1

ರಾಜಗೃಹ

ಅಜಾತಶತೃ

ಮಹಾಕಶ್ಯಪ

ಸಾ ಪೂ 480

ವಿನಯ ಪೀಟಕ ಮತ್ತು ಸುತ್ತಪೀಟಕಗಳ ರಚನೆ .

2

ವೈಶಾಲಿ

ಕಾಲಾಶೋಕ

ಸಭಾಕಾಮಿ

ಸಾ..ಪೂ 380

ಸ್ಥವಿರವಾದಿನ್ (ತೇರವಾದಿನ್) ಮತ್ತು ಮಹಾಸಾಂಘಿಕ ಎಂಬ ಎರಡು ವರ್ಗಗಳುಂಟಾದವು.

3

ಪಾಟಲಿಪುತ್ರ

ಅಶೋಕ

ತಿಸ್ಸಾ ಮೊಗ್ಗಲಿಪುತ್ರ

ಸಾ..ಪೂ 250

ಅಭಿಧಮ್ಮ ಪೀಟಕ ರಚನೆ

4

ಕುಂಡಲೀವನ

ಕನಿಷ್ಕ

ವಸುಮಿತ್ರ

ಸಾ. 100

ಬೌದ್ಧಧರ್ಮ ಹೀನಾಯಾನ ಮತ್ತು ಮಹಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆ

5

ಕನೌಜ್

ಹರ್ಷವರ್ಧನ

ಹ್ಯೂಯೆನ್ ತ್ಸಾಂಗ್

ಸಾ. 643

----

 ಬೌದ್ಧ ಮತ್ತು ಜೈನ ಧರ್ಮಗಳ ಬೋಧನೆಗಳು

ಈ ಎರಡು ಧರ್ಮಗಳು ರಾಜರಿಂದ ಶುರುವಾದವು.

ಪುರೋಹಿತಶಾಹಿಯನ್ನು ವಿರೋಧಿಸಿದವು

ಸರಳ ಮತ್ತು ಸಾತ್ವಿಕ ಜೀವನಕ್ಕೆ ಪ್ರೋತ್ಸಾಹ ನೀಡಿದವು

ಪುನರ್ಜನ್ಮದಲ್ಲಿ ನಂಬಿಕೆ ಇಟ್ಟಿದ್ದವು

ಬೌದ್ಧಧರ್ಮವು ದೇವರಲ್ಲಿ ನಂಬಿಕೆ ಇಟ್ಟಿರಲಿಲ್ಲ, ಜೈನ ಧರ್ಮವು ಜಿನನನ್ನು ದೇವರಿಗಿಂತಲೂ ಹಿರಿದಾದ ಸ್ಥಾನದಲ್ಲಿ ಇರಿಸಿ ಪೂಜಿಸಿತು

ಬೌದ್ಧ ಧರ್ಮವು ವರ್ಣವ್ಯವಸ್ಥೆಯನ್ನು ವಿರೋಧಿಸಿತು. ಜೈನ ಧರ್ಮವು ವರ್ಣವ್ಯವಸ್ಥೆಯನ್ನು ಒಪ್ಪಿಕೊಂಡಿತು

ಕಾಮೆಂಟ್‌ಗಳು