ಮೊಘಲರು
ಮೊಘಲರು (1526-1857)
ಬಾಬರ್ (1526-1530)
ಬಾಬರ್ ಎಂಬುದು ಪರ್ಷಿಯನ್ ಪದವಾಗಿದ್ದು ಇದು ಹುಲಿ ಎಂಬರ್ಥವನ್ನು ಹೊಂದಿದೆ.
ಇಂದಿನ ಉಜ್ಬೇಕಿಸ್ತಾನದ ಫೆರ್ಗನ್ ಕಣಿವೆಯ ಅಂದಿಜಾನ್‌ನಗರದಲ್ಲಿ ಬಾಬರನು ಜನಿಸಿದನು. ಇವನ ತಂದೆ ಫೆರ್ಗನ್ ಕಣಿವೆಯ ರಾಜ ಒಮರ್ ಶೇಖ್ ಮಿರ್ಜಾ.
ಬಾಬರ್ ಬರ್ಲಾಸ್ ಬುಡಕಟ್ಟಿನ ಮಂಗೊಲ್ ಜನಾಂಗಕ್ಕೆ ಸೇರಿದವನಾಗಿದ್ದನು. ಚಾಘತೈ ಇವನ ಮಾತೃ ಭಾಷೆಯಾಗಿತ್ತು.
ಬಾಬರ್ ನ ಆತ್ಮರಿತ್ರೆಯಾದ ತುಜುಕ್ ಇ ಬಾಬರಿ (ಬಾಬರ್ ನ ನೆನಪುಗಳು) ಕೃತಿಯು ಇಸ್ಲಾಮಿಕ್ ಸಾಹಿತ್ಯದಲ್ಲಿ ಮೊದಲನೇ ಆತ್ಮ ಚರಿತ್ರೆ ಎಂದು ಗುರುತಿಸಲ್ಪಟ್ಟಿದೆ. ಇದನ್ನು ತುರ್ಕಿ ಭಾಷೆಯಲ್ಲಿ ಬರೆಯಲಾಗಿದೆ.
ತುಜುಕ್ ಇ ಬಾಬರಿ ಗ್ರಂಥವು ಅಬ್ದುಲ್ ರಹೀಂ ಖಾನ್ ಮತ್ತು ಪೈದಾಂ ಖಾನ್ ರಿಂದ ಬಾಬರ್ ನಾಮಾ ಎಂದು ಪರ್ಷಿಯನ್ ಭಾಷೆಗೆ ಅನುವಾದಗೊಂಡಿತು.
21 ಏಪ್ರಿಲ್ 1526 ರಂದು ಬಾಬರ್ ಮತ್ತು ಲೋಧಿ ಮನೆತನದ ಇಬ್ರಾಹಿಂ ಲೋಧಿ ನಡುವೆ ಮೊದಲನೇ ಪಾಣಿಪತ್ ಕದನ ನಡೆಯಿತು. ಈ ಮೂಲಕ ಭಾರತದಲ್ಲಿ ಬಾಬರ್ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು.
16 ಮಾರ್ಚ್ 1527 ರಲ್ಲಿ ಬಾಬರ್ ಮತ್ತು ರಜಪೂತರ ರಾಣಾಸಂಗನ ಮಧ್ಯೆ ಖಾನುವಾ (ಕಣ್ವ) ಕಾಳಗ ನಡೆಯಿತು. ಈ ಯದ್ಧದಲ್ಲಿ ಗೆದ್ದ ಬಾಬರ್ ಘಾಜಿ ಎಂಬ ಬಿರುದು ಧರಿಸಿದನು.
1528 ಜನವರಿಯಲ್ಲಿ ಚಾಂದೇರಿಯ ಮೇದಿನಿರಾಯ ಮತ್ತು ಬಾಬರ್ ನಿಗೆ ಚಾಂದೇರಿ ಕದನ ನಡೆದು ಯುದ್ಧದಲ್ಲಿ ಬಾಬರ್ ಜಯಶಾಲಿಯಾದನು.
1529 ಮೇ 6 ರಂದು ಬಾಬರ್ ಇಬ್ರಾಹಿಂ ಲೋಧಿಯ ಸಹೋದರ ಮಹಮದ್ ಲೋದಿಯನ್ನು ಗೋಗ್ರಾ ಯುದ್ಧದಲ್ಲಿ ಸೋಲಿಸಿದನು. ಈ ಯುದ್ಧದ ಮೂಲಕ ಲೋಧಿ ಮನೆತನ ಮತ್ತು ದೆಹಲಿ ಸುಲ್ತಾನರ ಸಂತತಿ ಪೂರ್ಣವಾಗಿ ನಾಶವಾಯಿತು.
ಬಾಬರನ ಸಮಾಧಿಯನ್ನು ಅಫ್ಘಾನಿಸ್ತಾನದ ಕಾಬೂಲಿನಲ್ಲಿ ಶೇರ್ ಷಾ ಸೂರಿ ನಿರ್ಮಿಸಿದನು.
ಹುಮಾಯೂನ್ (1530-40)
ನಾಸಿರ್ ಉದ್ದೀನ್ ಮಹಮ್ಮದ್ ಹುಮಾಯೂನ್ ಎಂಬುದು ಇವನ ಪೂರ್ಣ ಹೆಸರು
ಹುಮಾಯೂನ್‌ನ ಸಹೋದರಿ ಗುಲ್ಬದನ್ ಬೇಗಂ ಬರೆದ ಆತನ ಜೀವನ ಚರಿತ್ರೆ ಹುಮಾಯೂನ್ ನಾಮಾ. ಈ ಕೃತಿಯು ಪರ್ಷಿಯನ್ ಭಾಷೆಯಲ್ಲಿದೆ.
1539 ರಲ್ಲಿ ನಡೆದ ಚೌಸಾ ಕಾಳಗದಲ್ಲಿ ಹುಮಾಯೂನ್ ಶೇರ್ ಷಾ ನಿಂದ ಸೋತು ಪಲಾಯನವಾದನು
1540 ರಲ್ಲಿ ನಡೆದ ಬಿಲ್‍ಗ್ರಾಂ (ಕನೌಜ್) ಕದನದಲ್ಲಿ ಹುಮಾಯೂನ್ ಶೇರ್ ಷಾ ಸೂರಿಯಿಂದ ಸಂಪೂರ್ಣವಾಗಿ ಸೋತು ಪರ್ಷಿಯಾಕ್ಕೆ ಓಡಿ ಹೋದನು. 1540 ರಿಂದ 55 ರ ವರೆಗೆ ಪರ್ಷಿಯಾದ ಅರಸ ಷಾ ತಹ್ಮಾಸ್ಪ್ ನಲ್ಲಿ ಆಶ್ರಯ ಪಡೆದನು.
ಶೆರ್ ಷಾ ನ ಮರಣಾನಂತರ 1555 ರಲ್ಲಿ ಭಾರತಕ್ಕೆ ಮರಳಿದ ಹುಮಾಯೂನ್ ಸಿಕಂದರ್ ಸೂರಿಯನ್ನು ಸೋಲಿಸಿ ಮತ್ತೇ ದೆಹಲಿ ಸಿಂಹಾಸನವನ್ನು ಮರಳಿ ಪಡೆದನು
ತಾನೆ ಕಟ್ಟಿಸಿದ ದೀನಪನ್ನಾ ಗ್ರಂಥಾಲಯದಿಂದ ಮೆಟ್ಟಿಲು ಇಳಿದು ಬರುವಾಗ ಕಾಲುಜಾರಿ ಬಿದ್ದು 1556 ರಲ್ಲಿ ಮರಣಿಸಿದನು.
ಶೇರ್ ಶಾ ಸೂರಿ (1540-1545)
ಶೇರ್ ಷಾ ಸೂರಿಯನ್ನು ಅಕ್ಬರನ ಮುನ್ಸೂಚಕ/ಅಗ್ರಗಾಮಿ ಎಂದು ಕರೆಯಲಾಗುತ್ತದೆ. ಇವನ ಮೊದಲ ಹೆಸರು ಫರೀದ್
ದೆಹಲಿ ಸಿಂಹಾಸನ ಏರುವ ಮೊದಲು ಬಿಹಾರದ ಸುಲ್ತಾನ ಬಹ್ರಾನ್ ಖಾನ್ ನ ಅಡಿಯಲ್ಲಿ ಸೇವೆಯಲ್ಲಿದ್ದನು. ಬಹ್ರಾನ್ ಖಾನ್ ನ ಮರಣಾನಂತರ ಬಿಹಾರ ಫರೀದ್ ನ ವಶವಾಯಿತು. ಶೇರ್ ಷಾ ಸೂರಿಯು ಹಜರತ್ ಇ ಅಲ್ ಎಂಬ ಬಿರುದು ಧರಿಸಿ ಬಿಹಾರದ ಸಿಂಹಾಸನವನ್ನೇರಿದನು.
1539 ರಲ್ಲಿ ನಡೆದ ಚೌಸಾ ಕಾಳಗದಲ್ಲಿ ಹುಮಾಯೂನ್ ನನ್ನು ಸೋಲಿಸಿ ಸುಲ್ತಾನ್ ಎ ಆದಿಲ್ ಎಂಬ ಬಿರುದು ಧರಿಸಿ ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಮುದ್ರಿಸಿದನು.
1540 ರ ಬಿಲ್ ಗ್ರಾಂ/ಕನೌಜ್ ಕಾಳಗದಲ್ಲಿ ಹುಮಾಯೂನ್ ನನ್ನು ಸಂಪೂರ್ಣವಾಗಿ ಸೋಲಿಸಿದನು.
ಜೀಲಂ ನದಿಯ ದಂಡೆಯ ಮೇಲೆ ರೋಹಸ್ತಾಘರ್ ಕೋಟೆಯನ್ನು ನಿರ್ಮಿಸಿದನು.
1545 ರಲ್ಲಿ ಕಾಲಿಂಜರ್ ಕೋಟೆಯನ್ನು ವಶಪಡಿಸಿಕೊಳ್ಳುವಾಗ ಸಿಡಿಮದ್ದಿನ ಸ್ಫೋಟಕ್ಕೆ ಬಲಿಯಾಗಿ ಮರಣಿಸಿದನು. ಇವನ ಸಮಾಧಿಯನ್ನು ಬಿಹಾರದ ಸಸಾರಾಂ ಎಂಬಲ್ಲಿ ನಿರ್ಮಿಸಲಾಯಿತು.
ಶೇರ್ ಷಾ ನ ಆಡಳಿತ
ಕಂದಾಯ ನಿರ್ವಹಣೆಗಾಗಿ ಪಟ್ವಾ ಪುಸ್ತಕವನ್ನು ಜಾರಿಗೆ ತಂದನು.
ಬಂಗಾಳದ ಸೋನಾರ್ ಗಾವ್‍ಂ ಇಂದ ಸಿಂದ್ ವರೆಗೆ ಸಡಕ್ ಇ ಅಜಂ (ಗ್ರ್ಯಾಂಡ್ ಟ್ರಂಕ್ ರಸ್ತೆ) ಹಾಕಿಸಿದನು.
ಇಲಾಖೆಗಳು ಮತ್ತು ಮುಖ್ಯಸ್ಥರು
ದಿವಾನ್ ಇ ವಜರತ್ ಇಲಾಖೆಯ ಮುಖ್ಯಸ್ಥ ವಜೀರ್ - ಭೂಕಂದಾಯ ಮತ್ತು ಹಣಕಾಸಿನ ಆಡಳಿತ
ದಿವಾನ್ ಇ ಆರಿಜ್ ಇಲಾಖೆಯ ಮುಖ್ಯಸ್ಥ ಆರಿಜ್ ಇ ಮಾಮ್ಲಿಕ್ - ಸೇನಾ ನಿರ್ವಹಣೆ
ದಿವಾನ್ ಇ ರಸ್ಲತ್ ಇಲಾಖೆಯ ಮುಖ್ಯಸ್ಥ ದಿವಾನ್ ಇ ಮಹ್ತಸಿಬ್ - ವಿದೇಶಾಂಗ ವ್ಯವಹಾರ
ದಿವಾನ್ ಇ ಇನ್ಷಾ ಇಲಾಖೆಯ ಮುಖ್ಯಸ್ಥ ದಬೀರ್ ಇ ಖಾಸ್ - ರಾಜಾಜ್ಞೆಗಳನ್ನು ಜಾರಿ ಮಾಡುವುದು ಮತ್ತು ಸರ್ಕಾರದ ಕಾರ್ಯಗಳನ್ನು ರಾಜನ ಗಮನಕ್ಕೆ ತರುವುದು
ದಿವಾನ್ ಇ ಖಾಜಾ ಇಲಾಖೆಯ ಮುಖ್ಯಸ್ಥ ಮುಖ್ಯ ಖಾಜಿ - ಸುಲ್ತಾನನ ನಂತರದ ನ್ಯಾಯಾಧಿಪತಿ
ದಿವಾನ್ ಇ ಬರೀದ್ ಇಲಾಖೆಯ ಮುಖ್ಯಸ್ಥ ಬರೀದ್ ಇ ಮಾಮ್ಲಿಕ್ - ಗುಪ್ತಚರರ ಮೇಲ್ವಿಚಾರಣೆ
ಷಿಕ್ದಾರ್ ಇ ಷಿಕ್ದಾರನ್ – ಮಿಲಿಟರಿ ಅಧಿಕಾರಿಯಾಗಿ ತನ್ನ ಅಧೀನ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಕಂದಾಯ ವಸೂಲಿ.
ಮುನ್ಸಿಫ್ ಇ ಮುನ್ಸಿಫಾನ್ - ಸಿವಿಲ್ ಮೊಕದ್ದಮೆಗಳ ನ್ಯಾಯ ತೀರ್ಮಾನ.
ಶೇರ್ ಷಾ ಸೂರಿಯು ದಾಮ್ ಎಂಬ ಬೆಳ್ಳಿಯ ನಾಣ್ಯಗಳನ್ನು ಜಾರಿಗೆ ತಂದನು. ಇವನನ್ನು ಬಾರತದ ರೂಪಾಯಿಗಳ ಜನಕ ಎನ್ನಲಾಗುತ್ತದೆ.
ಸೂರ್ ಸಂತತಿಯ ಕೊನೆಯ ಅರಸ ಮುಬರಿಜ್ ಖಾನ್
ಅಕ್ಬರ್ (1542 –1605)
ಅಕ್ಬರನು 15 ಅಕ್ಟೋಬರ್ 1542 ರಲ್ಲಿ ಅಮರಕೋಟೆಯಲ್ಲಿ ಜನಿಸಿದನು.
ಅಕ್ಬರನು 14 ಫೆಬ್ರವರಿ 1556 ರಲ್ಲಿ ಸಿಕಂದರ್ ಷಾನೊಂದಿಗಿನ ಯುದ್ಧದ ಮಧ್ಯದಲ್ಲಿ ಸಿಂಹಾಸನವನ್ನೇರಿ ಷಹನ್ ಷಾ ಎಂಬ ಬಿರುದನ್ನು ಪಡೆದನು.
ಬಂಗಾಳದ ದೊರೆ ಮಹಮ್ದ್ ಷಾ ಅಬ್ದಾಲಿಯ ಪ್ರಧಾನಿಯಾಗಿದ್ದ ಹೇಮು ಒಬ್ಬ ಹಿಂದುವಾಗಿದ್ದನು. ರಾಜಾ ವಿಕ್ರಮಜಿತ್ ಎಂಬುದು ಇವನಿಗಿದ್ದ ಬಿರುದು. ಮಧ್ಯಕಾಲೀನ ಭಾರತದಲ್ಲಿ ದೆಹಲಿ ಸಿಂಹಾಸನವೇರಿದ ಏಕೈಕ ಹಿಂದೂ ವ್ಯಕ್ತಿ ಹೇಮು.
ಅಕ್ಬರ್ ನ ಸಂರಕ್ಷಕನಾದ ಬೈರಾಂಖಾನ್ 1556 ನವೆಂಬರ್ 5 ರಂದು ನಡೆದ ಎರಡನೇ ಪಾಣಿಪತ್ ಯುದ್ಧದಲ್ಲಿ ಹೇಮುವನ್ನು ಸೋಲಿಸಿದನು. ಈ ವಿಜಯಕ್ಕಾಗಿ ಬೈರಾಂ ಖಾನ್ ನಿಗೆ ಖಾನ್ ಎ ಖಾನ್ ಎಂಬ ಬಿರುದು ನೀಡಲಾಯಿತು.
1561 ರಂದು ಮಾಳ್ವದ ಅರಸ ಬಾಜ್ ಬಹಾದ್ದೂರ್ ನ ಮೇಲೆ ಅಕ್ಬರ್ ದಂಡೆತ್ತಿ ಹೋಗಿ ಸೋಲಿಸಿದನು. ಇದು ಅಕ್ಬರ್ ನ ಮೊದಲ ಯುದ್ಧವಾಗಿತ್ತು
1564 ರಲ್ಲಿ ಗೋಂಡ್ವಾನದ ರಾಣಿ ದುರ್ಗಾವತಿ ಮೇಲೆ ಯುದ್ಧ ಹೂಡಿ ಗೋಂಡ್ವಾನ ವಶಪಡಿಸಿಕೊಳ್ಳಲಾಯಿತು.
1567 ರಲ್ಲಿ ಮೇವಾಡದ ಉದಯಸಿಂಗ್ ನ ಮೇಲಿನ ಯುದ್ಧದಲ್ಲಿ ಮೊಘಲರು ಗೆದ್ದರಾದರೂ ಪೂರ್ತಿಯಾಗಿ ರಾಜ್ಯವನ್ನು ಗೆಲ್ಲಲಾಗಲಿಲ್ಲ.
1572-73 ಗುಜರಾತಿನ 3ನೇ ಮುಜಫರ್ ಷಹಾನ ಮೇಲೆ ಆಕ್ರಮಣ ಮಾಡಿ ಗುಜರಾತ್ಫ್ ಅನ್ನು ಗೆದ್ದುಕೊಳ್ಳಲಾಯಿತು.
ಗುಜರಾತ್ ವಿಜಯದ ನೆನಪಿಗೆ ಅಕ್ಬರ್ ಗುಜರಾತಿನ ಫತೇಪುರ್ ಸಿಕ್ರಿಯಲ್ಲಿ ಬುಲಂದ್ ದರ್ವಾಜಾ ವನ್ನು ನಿರ್ಮಿಸಿದನು.
1576 ರಲ್ಲಿ ಮೇವಾಡದ ಮೇಲೆ ದಾಳಿ ಮಾಡಿದಾಗ ಅರಸ ರಾಣಾ ಪ್ರತಾಪ್ ಮತ್ತು ಅಕ್ಬರ್ ಮಧ್ಯೆ ಹಾಲ್ದಿಘಾಟ್ ಕದನ ನಡೆಯಿತು. ಅಕ್ಬರ್ ವಿಜಯಶಾಲಿಯಾದನು.
1592 ರಲ್ಲಿ ಅಕ್ಬರ್ ನ ಸೇನಾನಿ ಮಾನ್ ಸಿಂಗ್ ಒಡಿಶಾದ ಸುಲ್ತಾನ ನಿಸಾರ್ ಖಾನ್ ನ ಮೇಲೆ ದಾಳಿ ಮಾಡಿದನು. ಯುದ್ಧದಲ್ಲಿ ಗೆದ್ದ ಅಕ್ಬರನಿಗೆ ಪುರಿ ಜಗನ್ನಾಥ ದೇವಾಲಯವನ್ನು ಕಾಣಿಕೆಯಾಗಿ ನೀಡಲಾಯಿತು.
1595 ರಲ್ಲಿ ಪರ್ಷಿಯಾದ ಅರಸನ ಅಧೀನದಲ್ಲಿದ್ದ ಆಫ್ಘಾನಿಸ್ತಾನದ ಕಂದಹಾರ್ ಕೋಟೆಯು ಅಕ್ಬರ್ ನ ವಶವಾಯಿತು.
ಅಕ್ಬರ್ ನ ಆಡಳಿತ
ಆಡಳಿತ ಘಟಕಗಳು
ಇಖ್ತಾ (ಪ್ರಾಂತ್ಯ) - ಕೊತ್ವಾಲ್
ಸರ್ಕಾರ್- ಫೌಜುದಾರ್
ಪರಗಣ - ಶೀಕ್ದಾರ್
ಗ್ರಾಮ – ಗ್ರಾಮದ ಮುಖ್ಯಸ್ಥ
ಮೊದಲು ಆಗ್ರಾವನ್ನು ತೊರೆದು ಗುಜರಾತಿನ ಫತೇಪುರ್ ಸಿಕ್ರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ನಂತರ ಮತ್ತೇ ಫತೇಪುರ್ ಸಿಕ್ರಿಯಿಂದ ಆಗ್ರಾಕ್ಕೆ ರಾಜಧಾನಿಯನ್ನು ಬದಲಾಯಿಸಿದನು
ಅಕ್ಬರ್ ನು ಮನ್ಸಬ್ದಾರಿ ಪದ್ಧತಿಯನ್ನು ಜಾರಿಗೆ ತಂದನು ಇದರಲ್ಲಿ 10 ರಿಂದ 10000 ನಾಯಕರ ವರೆಗಿನ 33 ದರ್ಜೆಗಳಿದ್ದವು. ಇವರಿಗೆ ನಗದು ರೂಪದಲ್ಲಿ ವೇತನ ನೀಡಲಾಗುತ್ತಿತ್ತು, ಈ ಪದ್ಧತಿಯು ವಂಶಪಾರಂಪರ್ಯವಾಗಿರದೆ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತಿತ್ತು. ಈ ಪದ್ಧತಿಯನ್ನು ಪರ್ಷಿಯಾದಿಂದ ಅಳವಡಿಸಿಕೊಂಡನು.
1562 ರಲ್ಲಿ ಗುಲಾಮಗಿರಿ ಪದ್ಧತಿಯನ್ನು ರದ್ಧು ಮಾಡಿದನು.
1563 ರಲ್ಲಿ ಹಿಂದೂಗಳ ಮೇಲೆ ವಿಧಿಸುತ್ತಿದ್ದ ಯಾತ್ರಾಕರವನ್ನು ರದ್ದು ಮಾಡಿದನು.
1564 ರಲ್ಲಿ ಮುಸ್ಲಿಮೇತರರ ಮೇಲೆ ಹೇರಿದ್ದ ಜೆಜಿಯಾ ಕರವನ್ನು ರದ್ದುಪಡಿಸಿದನು.
ಅಕ್ಬರ್ 1575 ರಲ್ಲಿ ಫತೇಪುರ್ ಸಿಕ್ರಿಯಲ್ಲಿ ಇಬಾದತ್ ಖಾನವನ್ನು (ಪ್ರಾರ್ಥನಾಮಂದಿರ) ಕಟ್ಟಿಸಿದನು.
1579 ರಲ್ಲಿ ಅನುಲಂಘನೀಯ ಶಾಸನವನ್ನು ಜಾರಿಗೆ ತಂದನು. ಸುನ್ನಿ ಮುಸ್ಲಿಂ ರ ಅತಿಯಾಧ ಧರ್ಮ ವ್ಯಾಮೋಹ ರಾಜ್ಯಕ್ಕೆ ಮತ್ತು ಇತರ ಧರ್ಮೀಯರಿಗೆ ಕಂಠಕವೆಂದು ಅರಿತು ತಾನೇ ಮುಖ್ಯ ನ್ಯಾಯಾಧಿಪತಿಯಾಗಿ ಸ್ಥಾನ ವಹಿಸಿದನು. ಇದನ್ನೇ ಇತಿಹಾಸಕಾರ ವಿ.ಎ ಸ್ಮಿತ್ ಸುನಿಶ್ಚಯ ಶಾಸನ ಎಂದು ಕರೆದಿದ್ದಾನೆ
ಎಲ್ಲ ಮತಗಳ ತತ್ವ್ತಗಳನ್ನೂ ಗ್ರಹಿಸಿ ಮತೀಯ ಏಕತೆಯನ್ನು ಉಂಟುಮಾಡುವ ಗುರಿಯನ್ನು ಸಾಧಿಸಲು 1581ರಲ್ಲಿ ದೀನ್ ಇ ಇಲಾಹಿ (ತವಹಿದ್ ಇ ಇಲಾಹಿ) ಎಂಬ ಹೊಸ ಮತವನ್ನು ಸ್ಥಾಪಿಸಿದ.
ರಜಪೂತರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಅವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದನು. ಅಂಬರ್ ನ ಅರಸ ಬಾರಾಮಲ್ ನ ಮಗಳು ಜೋಧಾಬಾಯಿಯನ್ನು ವಿವಾಹವಾದನು.
ಅಕ್ಬರ್ ನ ಧಾರ್ಮಿಕ ಗುರು ಅಬ್ದುಲ್ ಲತೀಫ್ ಎಂಬಾತನು ಸುಲ್ ಇ ಕುಲ್ (ವಿಶ್ವವ್ಯಾಪಿ ಶಾಂತಿ) ಎಂಬ ತತ್ವವನ್ನು ಪ್ರತಿಪಾದಿಸಿದನು.
ಸಲೀಂ ಚಿಸ್ತಿ ಎಂಬ ಸೂಫಿ ಸಂತನ ನೆನಪಿಗಾಗಿ ಫತೇಪುರ್ ಸಿಕ್ರಿ ನಗರವನ್ನು ನಿರ್ಮಿಸಿದನು.
ಜೈನ ಧರ್ಮದ ವಿಜಯಸೂರಿ ಎಂಬ ಸಂನ್ಯಾಸಿಯ ಸಂಪರ್ಕದಿಂದ ಮಾಂಸಾಹಾರ ತ್ಯಜಿಸಿದನು
ಜೊರೋಷ್ಟ್ರಿಯನ್ ಧರ್ಮಗುರು ಧಸ್ತೂರ್ ಮಹಾಯಾರ್ಜಿಯಿಂದ ಪಾರ್ಸಿ ಧರ್ಮದ ತತ್ವಗಳನ್ನು ಅರಿತುಕೊಂಡನು
ಮೊದಲ ಬಾರಿಗೆ ಗುಜರಾತಿನಲ್ಲಿ ರಾಜಾ ತೋದರಮಲ್ಲನು (1575) ಭೂಕಂದಾಯ ಪದ್ಧತಿಯನ್ನು ಜಾರಿಗೆ ತಂದನು. ನಂತರ ತೋದರಮಲ್ಲನು 1580 ರಲ್ಲಿ ದಹ್ಸಲ್ ಪದ್ಧತಿ (ಝಬ್ತಿ ಪದ್ಧತಿ) ಜಾರಿಗೆ ತಂದನು. ಇದನ್ನು ತೋದರಮಲ್ಲನ ಬಂದೊಬಸ್ತ್ ಪದ್ಧತಿ ಎಂತಲೂ ಕರೆಯುವರು. ತೋದರಮಲ್ಲನಿಗೆ ದಿವಾನ್ ಇ ಆಶ್ರಫ್ ಎಂಬ ಬಿರುದಿತ್ತು.
ಪೋಲಜ್ - ಸತತ ಉಳುಮೆಯಲ್ಲಿರುವ ಭೂಮಿ
ಪರೋತಿ – 1 ಅಥವಾ 2 ವರ್ಷಗಳಿಗೊಮ್ಮೆ ಉಳುವ ಭೂಮಿ
ಚಚರ್ – 3 ಅಥವಾ 4 ವರ್ಷಗಳಿಗೊಮ್ಮೆ ಉಳುವ ಭೂಮಿ
ಬಂಜರ್ – 5 ವರ್ಷಗಳಿಗಿಂತಲೂ ಅಧಿಕ ಕಾಲ ಉಳುಮೆ ಮಾಡದೇ ಇರುವ ಭೂಮಿ
ಸರ್ವರಿಗೂ ಸಮಾನ ನ್ಯಾಯ, ಧಾರ್ಮಿಕ ಸಾಮರಸ್ಯ ಮುಂತಾದ ಕಾರಣಗಳಿಂದ ಅಕ್ಬರ್ ಇತಿಹಾಸದಲ್ಲಿ ರಾಷ್ಟ್ರೀಯ ದೊರೆ ಮತ್ತು ಮಹಾಶಯ ಎನಿಸಿಕೊಂಡಿದ್ದಾನೆ.
ಜವಾಹರ್ ಲಾಲ್ ನೆಹರು ಅಕ್ಬರ್ ನನ್ನು ರಾಷ್ಟ್ರೀಯತೆಯ ಜನಕ ಎಂದಿದ್ದಾರೆ.
ಅಕ್ಬರನ ಆಸ್ಥಾನದಲ್ಲಿದ್ದ ನವರತ್ನಗಳು
ಅಬುಲ್ ಫಝಲ್, ಅಬುಲ್ ಫೈಜಿ, ತಾನ್ ಸೇನ್, ಬೀರಬಲ್, ರಾಜಾ ತೋದರ್ ಮಲ್, ರಾಜಾ ಮಾನ್ ಸಿಂಗ್, ಅಬ್ದುಲ್ ರಹೀಂ ಖಾನ್, ಫಕೀರ್ ಅಝಿಯಾಓದಿನ್, ಮುಲ್ಲಾದೋ ಪ್ಯಾಝಾ
ಫತೇಪುರ್ ಸಿಕ್ರಿಯಲ್ಲಿ ಇಬಾದತ್ ಖಾನಾ, ಜೋದಾಬಾಯಿ ಅರಮನೆ, ಪಂಚಮಹಲ್, ಬೀರ್ಬಲ್ ಅರಮನೆ, ಅಕ್ಬರ್ ಮಹಲ್, ಜಹಂಗೀರ್ ಮಹಲ್ ಮುಂತಾದವುಗಳನ್ನು ಕಟ್ಟಿಸಿದ್ದಾನೆ. ಅಕ್ಬರ್ ನ ಕಾಲದಲ್ಲಿ ಹಿಂದೂ ಮತ್ತು ಪರ್ಷಿಯನ್ ಶೈಲಿಗಳು ಸಮ್ಮಿಲನಗೊಂಡ ಕಾರಣ ಇವನನ್ನು ಭಾರತ ರಾಷ್ಟ್ರೀಯ ಶೈಲಿಯ ಸಂಸ್ಥಾಪಕ ಎನ್ನುವರು.
ಆಗ್ರಾದ ಸಮೀಪ ಸಿಕಂದ್ರಾಬಾದ್ ಎಂಬ ಸ್ಥಳದಲ್ಲಿ ಅಕ್ಬರನ ಸಮಾಧಿಯಿದೆ.
ಜಹಾಂಗೀರ್ (1605-1627)
1569ರಲ್ಲಿ ಜನಿಸಿದ ಇವನ ತಾಯಿ ಒಬ್ಬ ರಜಪೂತ ಹೆಣ್ಣು. ಚಕ್ರವರ್ತಿಯಾಗುವ ಮುನ್ನ ಇವನ ಹೆಸರು ಸಲೀಮ್. ಪಟ್ಟಾಭಿಷೇಕದ ಸಮಯದಲ್ಲಿ ನೂರುದ್ದೀನ್ ಮಹಮ್ಮದ್ ಜಹಾಂಗೀರ್ ಪಾದಷಾ ಘಾಜಿ ಎಂಬ ಬಿರುದನ್ನು ಧರಿಸಿದ.
ತನ್ನ ಮಗ ಖುಸ್ರು ತನ್ನ ವಿರುದ್ಧ ದಂಗೆ ಏಳಲು ಸಿಕ್ಖರ ಐದನೆಯ ಗುರು ಅರ್ಜುನ ಸಿಂಗ್ ಕಾರಣ ಎಂದು ಅರ್ಜುನ ಸಿಂಗ್ ನನ್ನು ಜಹಾಂಗೀರ್ ಗಲ್ಲಿಗೇರಿಸಿದನು.
ಯಮುನಾ ನದೀ ತೀರ ಮತ್ತು ಆಗ್ರದ ಕೋಟೆಯ ನಡುವೆ ಒಂದು ನ್ಯಾಯದ ಗಂಟೆಯನ್ನು ಸ್ಥಾಪಿಸಿದ.
ತುಜುಕ್ ಇ ಜಹಾಂಗಿರಿ ಎಂಬ ಅತ್ಮಕತೆಯನ್ನು ಪರ್ಷಿಯನ್ ಭಾಷೆಯಲ್ಲಿ ಬರೆದಿದ್ದಾನೆ
ಲಾಹೋರ್ ನಲ್ಲಿ ಜಾಮಿಯಾ ಮಸೀದ್, ಕಾಶ್ಮೀರ ಹಾಗೂ ಲಾಹೋರ್ ಗಳಲ್ಲಿ ಶಾಲಿಮಾರ್ ಉದ್ಯಾನವನಗಳನ್ನು ನಿರ್ಮಿಸಿದನು
ಇವನ ಪತ್ನಿಯ ಹೆಸರು ಮೆಹರುನ್ನಿಸಾ. ಈಕೆಗೆ ಜಹಾಂಗೀರ್ ನೂರ್ ಮಹಲ್ (ಅರಮನೆಯ ದೀಪ) ಮತ್ತು ನೂರ್ ಜಹಾನ್ (ವಿಶ್ವದ ದೀಪ) ಎಂಬ ಬಿರುದುಗಳನ್ನು ನೀಡಿದನು.
ಈಕೆ ನೂರ್ ಜಹಾನ್ ಜುಂಟಾ ಎಂಬ ತನ್ನದೇ ಪರಿವಾರದವರನ್ನು ಒಳಗೊಂಡ ಒಂದು ಕೂಟವನ್ನು ರಚಿಸಿಕೊಂಡಿದ್ದಳು.
ಜಹಾಂಗೀರ್ ಆಡಳಿತದಲ್ಲಿ ಭೇಟಿಕೊಟ್ಟ ಯುರೋಪಿಯನ್ನರು
ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ 1609-1611
ಕ್ಯಾಪ್ಟನ್ ಬಿಸ್ಟ್ 1612
ಸರ್ ಥಾಮಸ್ ರೋ 1615 ( ಭಾರತದಲ್ಲಿ ಬ್ರಿಟೀಷರು ವ್ಯಾಪಾರ ವಸಾಹತು ಸ್ಥಾಪಿಸಲು ಅನುಮತಿ ಪಡೆದನು)
ಜಹಾಂಗೀರ್ ನ ಸಮಾಧಿ ಲಾಹೋರ್ ನ ಶಾದರ್ ಎಂಬಲ್ಲಿದೆ.
ಷಾ ಜಹಾನ್ (1627-1658)
ಷಾ ಜಹಾನ್ ನ ಮೊದಲ ಹೆಸರು ಖುರ್ರಂ. 14 ಫೆಬ್ರವರಿ 1628 ರಂದು ದೆಹಲಿ ಸಿಂಹಾಸನವನ್ನೇರಿದನು.
ಇವನ ಕಾಲವನ್ನು ಮೊಘಲರ ಕಾಲದ ವಾಸ್ತುಶಿಲ್ಪದ ಸುವರ್ಣಯುಗ ಎಂದು ಕರೆಯಲಾಗಿದೆ. ಹಾಗೂ ಷಾ ಜಹಾನ್ ನನ್ನು ಸೌಧಗಳ ನಿರ್ಮಾಪಕ ರಾಜ ಎನ್ನುವರು
1632 ರಲ್ಲಿ ಗುಜರಾತ್ ಮತ್ತು ದಕ್ಷಿಣ ಭಾರತದಲ್ಲಿ ಕ್ಷಾಮ ತಲೆದೋರಿದಾಗ ಆ ಭಾಗದ ಕಂದಾಯ ರದ್ದುಪಡಿಸಿ, ಜನರ ಯೋಗಕ್ಷೇಮಕ್ಕೆ ಆಹಾರ ಮತ್ತು ವೈದ್ಯ ಸೇವೆಯನ್ನು ಒದಗಿಸಿದನು.
1632 ರಲ್ಲಿ ಪೋರ್ಚುಗೀಸರೊಡನೆ ಯುದ್ಧ ಮಾಡಿ ಹೂಗ್ಲಿಯನ್ನು ವಶಪಡಿಸಿಕೊಂಡನು.
ವಾಯುವ್ಯ ಗಡಿಯಲ್ಲಿದ್ದ ಕಂದಹಾರ್ ಅನ್ನು ಪರ್ಷಿಯಾದ ಅರಸ 2ನೇ ಅಬ್ಬಾಸ್ ನಿಂದ ಗೆದ್ದುಕೊಳ್ಳಲು ಮಾಡಿದ ಯುದ್ಧದಲ್ಲಿ ಷಾ ಜಹಾನ್ ಅಪಾರ ನಷ್ಟ ಅನುಭವಿಸಿದನು. ಮೊಘಲ್ ಸಾಮ್ರಾಜ್ಯದಲ್ಲಿ ಆರ್ಥಿಕ ದಿವಾಳಿಯುಂಟಾಯಿತು.
ಎಡ್ವರ್ಡ್ ಮತ್ತು ಗ್ಯಾರೆಟ್ ಎಂಬ ಇತಿಹಾಸಕಾರರು ಹೇಳುವಂತೆ ಷಾ ಜಹಾನನ ಆಳ್ವಿಕೆಯು ಮೊಘಲ್ ಸಾಮ್ರಾಜ್ಯ ಮತ್ತು ಅದರ ಆರ್ಥಿಕ ವ್ಯವಸ್ಥೆಯ ಅವಸಾನದ ನಾಂದಿಯಾಗಿತ್ತು.
ತನ್ನ ಪತ್ನಿಯಾದ ಮುಮ್ತಾಜ್ ಬೇಗಂ ಳ ನೆನಪಿಗೆ ಆಗ್ರಾದಲ್ಲಿ ಜಗದ್ವಿಖ್ಯಾತ ತಾಜ್ ಮಹಲ್ ಅನ್ನು ನಿರ್ಮಿಸಿದನು. ಈಕೆಯ ಮೊದಲ ಹೆಸರು ಅರ್ಜುಮಂದ್ ಬೇಗಂ. ಇದನ್ನು ನಿರ್ಮಿಸಿದ ಪ್ರಧಾನ ಶಿಲ್ಪಿ ಉಸ್ತಾದ್ ಅಹ್ಮದ್ ಲಾಹೋರಿ. ಷಹಜಹಾನ್ ಮುಮ್ತಾಜ್ ಬೇಗಂಳಿಗೆ ಮಲಿಕಾ ಇ ಜುಮಾನಿ ಎಂಬ ಬಿರುದು ನೀಡಿದ್ದನು. ತಾಜ್ ಮಹಲ್ ಅನ್ನು 1983 ರಲ್ಲಿ ವಿಶ್ವ ಪಾರಂಪರಿಕ ತಾಣವಾಗಿ ಗುರ್ತಿಸಿ ಸೇರಿಸಲಾಯಿತು.
ಮಯೂರ ಸಿಂಹಾಸನ ಇವನ ಕಾಲದ ಶ್ರೇಷ್ಟ ಕಲಾಕೃತಿ, ಬಾದಲ್ ಖಾನ್ ಇದರ ನಿರ್ಮಾಪಕ. 1739 ರಲ್ಲಿ ಪರ್ಷಿಯಾದ ದಾಳಿಕೋರ ನಾದಿರ್ ಷಾ ನು ಕರ್ನಾಲ್ ಯುದ್ಧದಲ್ಲಿ ಮೊಘಲ್ ಅರಸ ಮಹ್ಮದ್ ಷಾ ಸೋಲಿಸಿ ಇದನ್ನು ಅಪಹರಿಸಕೊಂಡು ಹೋದನು.
ಷಹಜಹಾನ್ ದೆಹಲಿಯ ಬಳಿ ಷಹಜಾನಾಬಾದ್ ಎಂಬ ಹೊಸ ನಗರವನ್ನು ನಿರ್ಮಿಸಿ ಆಗ್ರಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದನು.
ಜಾಮಿಯಾ ಮಸೀದ್, ದಿವಾನಿ ಇ ಖಾಸಾ, ದಿವಾನಿ ಇ ಆಮ್, ಮೋತಿ ಮಸೀದ್, ಕೆಂಪು ಕೋಟೆ, ಹೀರಾ ಮಹಲ್, ರಂಗೀನ್ ಮಹಲ್, ಷೀಷ್ ಮಹಲ್ ಇವನ ಕಾಲದ ಪ್ರಮುಖ ವಾಸ್ತುಶಿಲ್ಪದ ರಚನೆಗಳು
ಫ್ರಾನ್ಸ್ ನ ಬರ್ನಿಯರ್ ಮತ್ತು ಟವೆರ್ನಿಯರ್ ಷಹಜಹಾನ್ ಆಸ್ಥಾನಕ್ಕೆ ಭೇಟಿ ನೀಡಿದ್ದರು.
ಔರಂಗಜೇಬ್ (1658 – 1707)
ತನ್ನ ಸಹೋದರರಾದ ದಾರಾಷುಕೋ, ಷಾ ಶುಜಾ ಮತ್ತು ಮುರಾದ್ ಬಕ್ಷ್ ರನ್ನು ಕೊಂದು ಔರಂಗಜೇಬ್ 1659 ಜೂನಿನಲ್ಲಿ ಅಲಂಗೀರ್ (ವಿಶ್ವವಿಜೇತ) ಎಂಬ ಬಿರುದು ಧರಿಸಿ ಸಿಂಹಾಸನ ಏರಿದನು
ಪ್ರಜೆಗಳ ಅಹವಾಲುಗಳನ್ನು ಕೇಳಲು ಇದ್ದ ಜರೋಕಾ ದರ್ಶನವನ್ನು ನಿಲ್ಲಿಸಿದನು. ಆಸ್ಥಾನದಲ್ಲಿ ಸಂಗೀತ ನೃತ್ಯ ಪ್ರದರ್ಶನಗಳನ್ನು ನಿಲ್ಲಿಸಿದನು.
1564 ರಲ್ಲಿ ಅಕ್ಬರ್ ರದ್ದುಮಾಡಿದ್ದ ಜೆಸಿಯಾ ಕಂದಾಯವನ್ನು ಈತ 1679 ರಲ್ಲಿ ಮತ್ತೆ ವಿಧಿಸಿದ. ಉನ್ನತ ಹುದ್ದೆಗಳಿಗೆ ಹಿಂದೂಗಳನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಿದ. ಹಿಂದೂಗಳ ಮೇಲೆ ವ್ಯಾಪಾರ ಸುಂಕ ಹಾಗೂ ಯಾತ್ರಾ ಸುಂಕ ಹೇರಲಾಯಿತು.
ಸಾಮ್ರಾಜ್ಯದಾದ್ಯಂತ ಜೂಜು, ಗಾಂಜಾ, ಮದ್ಯಪಾನ ಮುಂತಾದವುಗಳನ್ನು ನಿಷೇಧಿಸಲು ಮುಹ್ತಸಿಬ್ ರೆಂಬ ಅಧಿಕಾರಿಗಳನ್ನು ನೇಮಿಸಿದನು. ಇವನಿಗೆ ಜಿಂದಾಪೀರ್ (ಜೀವಂತ ಸಂತ) ಎಂಬ ಬಿರುದಿತ್ತು
ಅದಬ್ ಎ ಅಲಂಗಿರಿ ಮತ್ತು ರುಖಾತ್ ಎ ಅಲಂಗಿರಿ ಇವು ಔರಂಗಜೇಬ್ ನ ಗ್ರಂಥಗಳು
ಜಾಟ್ ಸಮುದಾಯದ ಗೋಕುಲ್ ಎಂಬುವವನು ಮೊದಲ ಬಾರಿಗೆ ಔರಂಗಜೇಬನ ಧಾರ್ಮಿಕ ತಾರತಮ್ಯ ನೀತಿಯ ವಿರುದ್ಧ ಬಂಡಾಯವೆದ್ದನು. ಗೋಕುಲ್ ನನ್ನು ಮೊಘಲರು ಕೊಂದುಹಾಕಿದರು. ನಂತರ ಜಾಟರ ಬಂಡಾಯವು ರಾಜಾರಾಮ್ ನೇತೃತ್ವದಲ್ಲಿ ಅವನ ನಂತರ ಚುರಾಮನ್ ರ ನೇತೃತ್ವದಲ್ಲಿ ಮುಂದುವರೆಯಿತು.
ಜಾಟರು ಮಾತ್ರವಲ್ಲದೆ ಸತ್ನಾಮಿಗಳು, ಛತ್ರಸಾಲನ ನೇತೃತ್ವದಲ್ಲಿ ಬುಂದೇಲರು, ಗುರು ತೇಜ್ ಬಹಾದ್ದೂರ್ ನ ನೇತೃತ್ವದಲ್ಲಿ ಸಿಖ್ಖರು ಔರಂಗಜೇಬ್ ನ ವಿರುದ್ಧ ದಂಗೆಯೆದ್ದರು. ಔರಂಗಜೇಬ್ ಸಿಖ್ಖರ ಗುರು ತೇಜ ಬಹಾದ್ದೂರ್ ನನ್ನು ಕೊಲ್ಲಿಸಿದನು. ತೇಜ್ ಬಹಾದೂರ್ ನ ಮಗ ಗುರು ಗೋವಿಂದ್ ಸಿಂಗ್ ಮೊಘಲರ ವಿರುದ್ಧ ಹೋರಾಡಲು ಖಾಲ್ಸಾ ಪಡೆಯನ್ನು ಕಟ್ಟಿದನು.
ತನ್ನ ವಿರುದ್ದ ದಂಗೆ ಎದ್ದ ತನ್ನ ಮಗ ಅಕ್ಬರ್ ನನ್ನು ಕುರಿತು “ಘೋರ ತಂದೆಗೆ ಘೋರ ಮಗ ಭಾರತದ ಪೀಡಕ ಎಂದಿದ್ದಾನೆ.
ಔರಂಗಜೇಬ್ ತನ್ನ ಪತ್ನಿಯ ನೆನಪಿಗಾಗಿ ಔರಂಗಾಬಾದ್ಬಿ ನಲ್ಲಿ ಬಿಬಿಕಾ ಮಕ್ಬರಾ ಎಂಬ ಕಟ್ಟಡ ನಿರ್ಮಿಸಿದನು.
ಔರಂಗಜೇಬ್ ನ ಸಮಾಧಿ ದೌಲತಾಬಾದ್ ನಲ್ಲಿದೆ.
ಮೊಘಲರ ದೊರೆ ಫರೂಕ್ಸಿಯಾರ್ ಬ್ರಟೀಷರಿಗೆ ಸುಂಕರಹಿತ ವ್ಯಾಪಾರ ಮಾಡಿಕೊಳ್ಳಲು ಅನುಮತಿ ನೀಡಿದನು.
1764 ರಲ್ಲಿ ನಡೆದ ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೊಘಲ್ ಅರಸ 2ನೇ ಷಾ ಆಲಂ. ಈತನು ಬ್ರಿಟೀಷರಿಂದ ವಿಶ್ರಾಂತಿ ವೇತನ ಪಡೆದ ಮೊದಲ ಮೊಘಲ್ ಅರಸನಾಗಿದ್ದಾನೆ
ಮೊಘಲ್ ಅರಸರಿಗೆ ಬ್ರಿಟಿಷರು ನೀಡುತ್ತಿದ್ದ ವಿಶ್ರಾಂತಿ ವೇತನ ಹೆಚ್ಚಿಸುವ ಸಲುವಾಗಿ ಮೊಘಲರ ಅರಸ 2ನೇ ಅಕ್ಬರ್ ನು ರಾಮ್ ಮೋಹನ್ ರಾಯ್ ರನ್ನು ಲಂಡನ್ ಗೆ ಕಳುಹಿಸಿದನು. ರಾಮ್ ಮೋಹನ ರಾಯರು ಸುಲ್ತಾನನ ಪರವಾಗಿ ನಿವೇದನೆ ನೀಡಿ ವೇತನವನ್ನು ಹೆಚ್ಚಿಸಿದ್ದರಿಂದ. ಅಕ್ಬರ್ ರಾಮ್ ಮೋಹನ ರಾಯ್ ರಿಗೆ ರಾಜಾ ಎಂಬ ಬಿರುದು ನೀಡಿ ಗೌರವಿಸಿದನು.
2ನೇ ಬಹಾದ್ದೂರ್ ಷಾ ಜಫರ್ ಮೊಘಲರ ಕೊನೆಯ ಅರಸ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಹಾದ್ದೂರ್ ಷಾನನ್ನು ದೆಹಲಿಯ ಅರಸನನ್ನಾಗಿ ಮಾಡಲಾಯಿತು.
ಸಾಹಿತ್ಯ
ಬದೌನಿ - ತಾರೀಖ್ ಇ ಬದೌನಿ (ಪರ್ಷಿಯನ್), ಮಹಾಭಾರತ ಮತ್ತು ರಾಮಾಯಣಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದನು.
ನಿಜಾಮುದ್ದೀನ್ ಅಹ್ಮದ್ – ತಬಕತ್ ಇ ಅಕ್ಬರಿ (ಪರ್ಷಿಯನ್)
ಅಬುಲ್ ಫೈಜಿ - ಲೀಲಾವತಿ ಮತ್ತು ನಳ ದಮಯಂತಿ ಕೃತಿಗಳನ್ನು ಪರ್ಷಿಯನ್ ಗೆ ಭಾಷಾಂತರಿಸಿದನು
ಅಬುಲ್ ಫಜಲ್ – ಐನ್ ಇ ಅಕ್ಬರಿ, ಅಕ್ಬರ್ ನಾಮಾ (ಪರ್ಷಿಯನ್)
ಷಾ ಮಹ್ಮದ್ ಸಹ್ಬಾದಿ - ಕಲ್ಹಣನ ರಾಜತರಂಗಿಣಿ ಕೃತಿಯನ್ನು ಪರ್ಷಿಯನ್ ಗೆ ಭಾಷಾಂತರಿಸಿದನು
ಇನಾಯತ್ ಖಾನ್ - ಷಾ ಜಹಾನ್ ನಾಮಾ
ಮಿರ್ಜಾ ಮೊಹಮ್ಮದ್ ಖಾಜಿಂ – ಆಲಂಗಿರ್ ನಾಮಾ
ದಾರಾಶುಕೋ - ಭಗವದ್ಗೀತೆ ಮತ್ತು ಉಪನಿಷತ್ತು ಮತ್ತು ಪಂಚತಂತ್ರಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದನು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ