ಹೊಯ್ಸಳರು
ಹೊಯ್ಸಳರು (ಸಾ.ಶ 998-1346)
ಹೊಯ್ಸಳರ ಲಾಂಛನ - ಹುಲಿಯನ್ನು ಕೊಲ್ಲುತ್ತಿರುವ ಸಳ
ಹೊಯ್ಸಳ ವಂಶದ ಸ್ಥಾಪಕ ಸಳ (ನೃಪಕಾಮ) ಇವನ ಗುರು ಜೈನ ಮುನಿ ಸುದತ್ತಾಚಾರ್ಯ. ಸೊಸೆಯೂರು (ಚಿಕ್ಕಮಗಳೂರಿನ ಅಂಗಡಿ) ಇವನ ರಾಜಧಾನಿಯಾಗಿತ್ತು.
ವಿನಯಾದಿತ್ಯ ಸೊಸೆಯೂರಿನಿಂದ ದ್ವಾರಸಮುದ್ರಕ್ಕೆ (ಇಂದಿನ ಹಳೇಬೀಡು) ರಾಜಧಾನಿಯನ್ನು ಬದಲಾಯಿಸಿದನು.
ವಿನಯಾದಿತ್ಯನ ನಂತರ ಎರೆಯಂಗನು ರಾಜಧಾನಿಯನ್ನು ಬೇಲೂರಿಗೆ (ವೇಲಾಪುರಕ್ಕೆ) ವರ್ಗಾಯಿಸಿದನು
ಇವರ ಕಾಲದಲ್ಲಿ ಗರುಡರು ಎಂಬ ರಾಜನ ವಿಶೇಷ ಅಂಗರಕ್ಷಕ ಪಡೆ ಇತ್ತು. ಇವರು ರಾಜ ಮರಣಿಸಿದಾಗ ಅವನೊಂದಿಗೇ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದರು.
ವಿಷ್ಣುವರ್ಧನ (ಸಾ.ಶ 1110-1142)
ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ/ಬಿಟ್ಟಿದೇವ. ನಂತರ ರಾಮಾನುಜಚಾರ್ಯರಿಂದ ವೈಷ್ಣವ ದೀಕ್ಷೆ ಪಡೆದು ವಿಷ್ಣುವರ್ಧನ ಎಂದು ಹೆಸರು ಬದಲಾಯಿಸಿಕೊಂಡನು. ಈತನ ಪತ್ನಿ ಶಾಂತಲೆ ನಾಟ್ಯರಾಣಿ ಎಂದು ಹೆಸರಾಗಿದ್ದಳು.
ವಿಷ್ಣುವರ್ಧನ 1118 ರ ಕನ್ನೆಗಾಲ ಯುದ್ಧದಲ್ಲಿ ಚಾಲುಕ್ಯರ ಪ್ರಸಿದ್ಧ ಅರಸ 6ನೇ ವಿಕ್ರಮಾದಿತ್ಯನನ್ನು ಸೋಲಿಸಿದನು.
ತಲಕಾಡುಗೊಂಡ, ಕಂಚಿಗೊಂಡ, ನೊಳಂಬವಾಡಿಗೊಂಡ ಎಂಬುವು ಇವನ ಬಿರುದುಗಳು. ತಲಕಾಡಿನಲ್ಲಿ ಕೀರ್ತಿನಾರಾಯಣ, ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯಗಳನ್ನು (ವಿಜಯನಾರಾಯಣ) ಕಟ್ಟಿಸಿದನು. ಇವನ ಸೇನಾನಿ ಕೇತುಮಲ್ಲ ಚೆನ್ನಕೇಶವ (ಹೊಯ್ಸಳೇಶ್ವರ) ದೇವಾಲಯವನ್ನು ಕಟ್ಟಿಸಿದನು. ಫರ್ಗ್ಯುಸನ್ ಎಂಬಾತನು ಚೆನ್ನಕೇಶವ ದೇವಾಲಯವನ್ನು ಭಾರತೀಯ ವಾಸ್ತುಶಿಲ್ಪದ ರತ್ನ ಎಂದಿದ್ದಾನೆ. ಈ ಚೆನ್ನಕೇಶವ ದೇವಾಲಯವನ್ನು ಶಿಲೆಯಲ್ಲಿನ ಭಾವಗೀತೆ ಎಂತಲೂ ಕರೆಯುವರು.
1ನೇ ನರಸಿಂಹ ಬಲ್ಲಾಳ (ಸಾ.ಶ 1142-1173)
1ನೇ ನರಸಿಂಹನ ಕಾಲದಲ್ಲಿ ಗರುಡ ಪದ್ಧತಿ ಪ್ರಾರಂಭವಾಯಿತು. ಗರುಡರು ರಾಜನ ಅಂಗರಕ್ಷಕ ಪಡೆಯವರಾಗಿದ್ದು ರಾಜನು ಯುದ್ಧದಲ್ಲಿ ಸತ್ತರೆ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದರೆ ರಾಜನ ಜೊತೆಗೆ ಆತ್ಮಾಹುತಿ ಮಾಡಿಕೊಳ್ಳುತ್ತಾರೆ.
ಸ್ವತಃ ಕವಿಯಾಗಿದ್ದ ಇವನು ಕನ್ನಡದಲ್ಲಿ ದೀಕ್ಷಾಬೋಧೆ ಮತ್ತು ಸಂಸ್ಕೃತದಲ್ಲಿ ಸದಾನಂದ ಚರಿತೆ ಕೃತಿಯನ್ನು ಬರೆದನು.
2ನೇ ಬಲ್ಲಾಳ (ಸಾ.ಶ 1173-1220)
ಇವನಿಗೆ ಗಿರಿದುರ್ಗ ಹಾಗೂ ಶನಿವಾರ ಸಿದ್ಧಿ ಎಂಬ ಬಿರುದುಗಳಿದ್ದವು. ಇವನು ಲಕ್ಕುಂಡಿಯನ್ನು ತನ್ನ 2ನೇ ರಾಜಧಾನಿಯನ್ನಾಗಿ ಮಾಡಿಕೊಂಡನು.
2ನೇ ವೀರ ಬಲ್ಲಾಳ ಕರ್ನಾಟಕದ ಚಕ್ರವರ್ತಿ ಎಂಬ ಬಿರುದು ಹೊಂದಿದ್ದನು. ಪಾಂಡ್ಯರಿಂದ ಚೋಳರನ್ನು ರಕ್ಷಿಸಿದ್ದಕ್ಕಾಗಿ ಈತನಿಗೆ ಚೋಳರಾಜ್ಯ ಪ್ರತಿಷ್ಟಾಪನಾಚಾರ್ಯ ಎಂಬ ಬಿರುದು ದೊರೆತಿತು.
2ನೇ ಬಲ್ಲಾಳನು ಮರಣಿಸಿದಾಗ ಇವನ ಗರುಡನಾದ ಕುವರ ಲಕ್ಷ್ಮಣನು ತನ್ನ ಅನುಯಾಯಿಗಳೊಂದಿಗೆ ಆತ್ಮಾಹುತಿ ಮಾಡಿಕೊಂಡನು.
2ನೇ ನರಸಿಂಹ (ಸಾ.ಶ 1220-1235)
2ನೇ ನರಸಿಂಹನು ಚೋಳರಾಜ್ಯ ಪ್ರತಿಷ್ಟಾನಿರತ ಎಂಬ ಬಿರುದು ಹೊಂದಿದ್ದನು. ತಮಿಳುನಾಡಿನ ಶ್ರೀರಂಗದ ಹತ್ತಿರ ಕಾವೇರಿ ನದಿಯ ದಡದ ಮೇಲೆ ಕಣ್ಣಾನೂರು ಎಂಬ ರಾಜಧಾನಿಯನ್ನು ಸ್ಥಾಪಿಸಿದನು.
ವಿದ್ವಾಂಸನಾದ ಈತನಿಗೆ ಸರ್ವಜ್ಞ ಮತ್ತು ಸಾಹಿತ್ಯ ರತ್ನಾಕರ ಎಂಬ ಬಿರುದುಗಳಿದ್ದವು.
ಹರಿಹರದ ಹರಿಹರೇಶ್ವರ, ಬೇಲೂರಿನ ಮೂಲ ಸಂಗಮೇಶ್ವರ, ಭದ್ರಾವತಿಯ ಲಕ್ಷ್ಮೀ ನರಸಿಂಹ, ಹೆಗ್ಗರೆಯ ಕಲ್ಲೇಶ್ವರ ದೇವಾಲಯಗಳನ್ನು ನಿರ್ಮಿಸಿದನು.
3ನೇ ಬಲ್ಲಾಳ (ಸಾ.ಶ 1291-1343)
ಮೂರನೇ ಬಲ್ಲಾಳ ಹೊಯ್ಸಳರ ಕೊನೆಯ ಶ್ರೇಷ್ಟ ಅರಸ. ಅವನ ಕಾಲದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಣವಾಯಿತು. ಇವನ ನಂತರ ಬಂದ 4ನೇ ಬಲ್ಲಾಳ ದುರ್ಬಲನಾದ್ದರಿಂದ ಮಹ್ಮದ್ ಬಿನ್ ತುಘಲಕ್ ನಿಂದ ಹೊಯ್ಸಳ ವಂಶವು ಕೊನೆಗೊಂಡಿತು.
ಆಡಳಿತ
ಪಂಚಪ್ರಧಾನರೆಂಬ ಮಂತ್ರಿವರ್ಗವು ಇವರ ಆಡಳಿತದಲ್ಲಿ ಸಹಾಯಕವಾಗಿತ್ತು.
ಮಹಾಪಸಾಕಿ - ಪ್ರಧಾನ ಮಂತ್ರಿ
ಸಂಧಿ ವಿಗ್ರಹಿ - ವಿದೇಶಾಂಗ
ಮಹಾಭಂಡಾರಿ – ಖಜಾನೆ
ಆರ್ಥಿಕ ವ್ಯವಸ್ಥೆ
ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷಧೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಗೆ ರಫ್ತಾಗುತ್ತಿತ್ತು.
ಐಹೊಳೆ, ಲಕ್ಕುಂಡಿ, ಗದಗ, ಅರಸಿಕೆರೆ, ಬಾಣಾವರ ಇವರ ಕಾಲದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು.
ಸಿದ್ಧಾಯ ಎಂಬುದು ಪ್ರಮುಖ ತೆರಿಗೆಯಾಗಿತ್ತು
ಧರ್ಮ
ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡು ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ಜೈನಧರ್ಮೀಯಳಾಗಿದ್ದರೂ ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದಳು,
ಸಾಹಿತ್ಯ
ಅಭಿನವ ಪಂಪ ನಾಗಚಂದ್ರ – ರಾಮಚಂದ್ರಚರಿತ ಪುರಾಣ (ಪಂಪ ರಾಮಾಯಣ), ಮಲ್ಲಿನಾಥ ಪುರಾಣ. ಇವನು 1ನೇ ಬಲ್ಲಾಳನಲ್ಲಿ ಆಶ್ರಯ ಪಡೆದಿದ್ದನು,
ಕವಿ ಚಕ್ರವರ್ತಿ ಜನ್ನ – ಯಶೋಧರಚರಿತೆ, ಅನುಭವ ಮುಕುರ ಮತ್ತು ಅನಂತನಾಥ ಪುರಾಣ. 2ನೇ ವೀರ ಬಲ್ಲಾಳನಲ್ಲಿ ಆಶ್ರಯ ಪಡೆದಿದ್ದನು.
ನೇಮಿಚಂದ್ರ – ಅರ್ಧನೇಮಿ ಪುರಾಣ
ರುದ್ರಭಟ್ಟ - ಜಗನ್ನಾಥ ವಿಜಯ. ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ ಚಂದ್ರಮೌಳಿಯ ಆಶ್ರಯದಲ್ಲಿದ್ದನು
ಹರಿಹರ – ಗಿರಿಜಾ ಕಲ್ಯಾಣ, ರಗಳೆಗಳು, ಪಂಪಾಶತಕ, ರಕ್ಷಾಶತಕ ಮುಂತಾದವು. ಈತನು ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದನು.
ಷಟ್ಪದಿ ಬ್ರಹ್ಮ ರಾಘವಾಂಕ - ಹರಿಶ್ಚಂದ್ರ ಕಾವ್ಯ, ಸೋಮನಾಥ ಚಾರಿತ್ರ್ಯ, ಶರಭ ಚಾರಿತ್ರ್ಯ, ಹರಿಹರ ಮಹಾತ್ಮೆ, ವೀರೇಶ ಚರಿತೆ (ಉದ್ದಂಡ ಷಟ್ಪದಿ) ಮುಂತಾದವು
ವಾಸ್ತುಶಿಲ್ಪ
ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಇವರ ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಮೃದುವಾದ ಬಳಪದ ಕಲ್ಲನ್ನು ದೇಗುಲಗಳನ್ನು ಕಟ್ಟಲು ಉಪಯೋಗಿಸುತ್ತಿದ್ದರು.
ದೇವಾಲಯಗಳನ್ನು 4 ರಿಂದ 5 ಅಡಿ ಎತ್ತರದ ಜಗಲಿಯ ಮೇಲೆ ಕಟ್ಟತ್ತಿದ್ದರು. ಈ ದೇವಾಲಯಗಳು ನಕ್ಷತ್ರಾಕಾರದಲ್ಲಿಇರುತ್ತಿದ್ದವು. ಇವರ ನಿರ್ಮಾಣಗಳಲ್ಲಿ ದೇವಾಲಯದಲ್ಲಿರುವ ಗರ್ಭಗುಡಿಗಳನ್ನು ಆಧರಿಸಿ ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ ಮತ್ತು ಪಂಚಕೂಟಗಳೆಂಬ ಪ್ರಕಾರಗಳಿದ್ದವು. ಕೇದಾರೋಜ, ದಾಸೋಜ, ಜಕ್ಕಣ್ಣ, ಮಲ್ಲಿತಮ್ಮ ಮುಂತಾದವರು ಪ್ರಸಿದ್ದಧ ಶಿಲ್ಪಿಗಳಾಗಿದ್ದರು.
ಪ್ರಮುಖ ದೇವಾಲಯಗಳು : ಬೇಲೂರಿನ ಚೆನ್ನಕೇಶವ ದೇವಸ್ಥಾನ (ಏಕಕೂಟ), ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ (ದ್ವಿಕೂಟ), ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ (ತ್ರಿಕೂಟ), ದೊಡ್ಡಗದ್ದವಳ್ಳಿಯ ಮಹಾಲಕ್ಶ್ಮಿಯ ದೇವಾಲಯ (ಚತುಷ್ಕೂಟ), ಹಳೆಬೀಡು ಕೇದಾರೇಶ್ವರ ದೇವಾಲಯ, ತಲಕಾಡು ಕೀರ್ತಿನಾರಾಯಣ, ಅಮೃತಾಪುರ ಅಮೃತೇಶ್ವರ, ಹೆಗ್ಗರೆಯ ಕಲ್ಲೇಶ್ವರ ದೇವಾಲಯ, ವೀರ ನಾರಾಯಣ, ಅರಸೀಕರೆ ಬಲ್ಲಾಳೇಶ್ವರ, ಶಿವಗಂಗೆ ಗಂಗಾಧರೇಶ್ವರ, ಸವತಿ ಗಂಧವಾರಣ ಜೈನ ಬಸದಿ, ಎಳೇಶಪುರದ ಎಳ್ಳೇಶ್ವರ ದೇವಾಲಯ, ಹುಲಿಯೂರು ರಂಗನಾಥ, ಹುಲಿಯೂರು ಮಲ್ಲಿಕಾರ್ಜುನ, ಮೊಸಳೆಯ ಚೆನ್ನಕೇಶವ ನಾಗೇಶ್ವರ ಜೋಡಿ ದೇವಾಲಯ, ಬೇಲೂರಿನ ಮೂಲ ಸಂಗಮೇಶ್ವರ, ಹರಿಹರದ ಹರಿಹರೇಶ್ವರ, ಕೊರಮಂಗಲದ ಬೂಚೇಶ್ವರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ