ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ

 ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ

ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಕರ್ನಾಟಕ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಾಗಿ ವಿಂಗಡಿಸಬಹುದಾಗಿದೆ.

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ ಮೊದಲನೆಯ ಘಟ್ಟ

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳದ್ದು ಮೊದಲನೆಯ ಘಟ್ಟ. 1767 ರಿಂದ 1799 ರ ವರೆಗೆ ನಡೆದ 4 ಆಂಗ್ಲೋ ಮೈಸೂರು ಕದನಗಳಲ್ಲಿ ಹೈದರ್ ಅಲಿ ಮತ್ತು ಟೀಪೂ ಸುಲ್ತಾನ್ ಬ್ರಿಟಿಷರನ್ನು ಎದುರಿಸಿದರು. ಆದರೆ 1799 ರಲ್ಲಿ ನಡೆದ ಕೊನೆಯ ಆಂಗ್ಲೋ ಮೈಸೂರು ಕದನದಲ್ಲಿ ಟೀಪೂ ಸುಲ್ತಾನ್ ಸೋತು ಬ್ರಿಟಿಷರಿಂದ ಹತನಾದನು.

ಸಶಸ್ತ್ರ ಬಂಡಾಯಗಳ ಎರಡನೆಯ ಘಟ್ಟ.

1800 - ದೋಂಡಿಯಾ ವಾಘ – ಮೈಸೂರು ಪ್ರಾಂತ್ಯ (ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯವೆಬ್ಬಿಸಿದ ಮೊದಲ ಹೋರಾಟಗಾರ)ಕೋಣಗಲ್ಲಿನಲ್ಲಿ ನಡೆದ ಕದನದಲ್ಲಿ ಬ್ರಿಟಿಷ್ ಸೇನಾನಿ ಆರ್ಥರ್ ವೆಲೆಸ್ಲಿಯಿಂದ ಧೋಂಡಿಯವಾಘ್ ಹತನಾದ.

1819 - ವೀರಪ್ಪನಾಯಕ - ಕೊಪ್ಪಳ

1820 - ಶಿವಲಿಂಗಯ್ಯ ದೇಶಮುಖ್ - ಬೀದರ್

1824 - ದಿವಾಕರ ದೀಕ್ಷಿತ ಮತ್ತು ರಾವಜಿ ರಾಸ್ತೆ - ಸಿಂದಗಿ (ವಿಜಯಪುರ)

1824 –ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ – ಕಿತ್ತೂರು (ಬೆಳಗಾವಿ) – ದತ್ತು ಮಗನಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ಸರ್ಕಾರದ ನೀತಿಗೆ ಪ್ರತಿಭಟನೆ. 1824 ಡಿಸೆಂಬರ್ 24 ರಂದು ಕಾಳಗ ನಡೆದು ಚೆನ್ನಮ್ಮ ಸೋತು ಶರಣಾದಳು. ಹೋರಾಟ ಮುಂದುವರೆಸಿದ ಸಂಗೊಳ್ಳಿ ರಾಯಣ್ಣ ಸಹ 1830 ಏಪ್ರಿಲ್ 8 ರಂದು ಸೆರೆ ಸಿಕ್ಕಿದ. ರಾಯಣ್ಣನಿಗೆ ಗಲ್ಲು ಶಿಕ್ಷೆಯಾಯಿತು.

1830-31 - ಬೂದಿ ಬಸಪ್ಪ - ನಗರ ದಂಗೆ/ಬಿದನೂರು ಬಂಡಾಯ (ಶಿವಮೊಗ್ಗ)

1834 – ಕಲ್ಯಾಣಸ್ವಾಮಿ, ಸ್ವಾಮಿ ಅಪರಾಂಫರ, ಪುಟ್ಟಬಸಪ್ಪ, ಹುಲಿಕುಡಿದ ನಂಜಯ್ಯ – ಕೊಡಗು

1841 - ನರಸಿಂಗರಾವ್ ದತ್ತಾತ್ರೇಯ ಪೇಡಕರ್ - ಬಾದಾಮಿ (ಬಾಗಲಕೋಟೆ)

1857 – ಮುಧೋಳ್ ಸಂಸ್ಥಾನದ ಹಲಗಲಿ ಬೇಡರು - ಬಾಗಲಕೋಟೆ - 1857 ಸೆಪ್ಪೆಂಬರ್ 11 ರಂದು ಬ್ರಿಟಿಷ್ ಸರ್ಕಾರ ಜಾರಿಗೆ ತಂದ ಶಸ್ತ್ರಾಸ್ತ್ರ ಕಾಯ್ದೆಯ ವಿರುದ್ಧ ಪ್ರತಿಭಟನೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು.

1857 – ಮುಂಡರಗಿ ಭೀಮರಾವ್ – ಕೊಪ್ಪಳಗದಗ ಮತ್ತು ಬಳ್ಳಾರಿ ಪ್ರದೇಶಗಳಲ್ಲಿ ಪ್ರತಿಭಟನೆ

1858 - ಸುರಪುರದ ವೆಂಕಟಪ್ಪನಾಯಕ – ಯಾದಗಿರಿ - ಸುರಪುರ ಸಂಸ್ಥಾನವನ್ನು ಆರ್ಥಿಕವಾಗಿ ಶಕ್ತಗೊಳಿಸಲು ಮತ್ತು ವೆಂಕಟಪ್ಪನಾಯಕನ ವಿದ್ಯಾಭ್ಯಾಸವನ್ನು ನೋಡಿಕೊಳ್ಳಲು ಬ್ರಿಟಿಷ್ ಸರ್ಕಾರ ಮೆಡೋಸ್ ಟೇಲರ್ ಎಂಬ ಅಧಿಕಾರಿಯನ್ನು ನೇಮಿಸಿತು. ಆದರೆ ಮುಂದೆ ರಾಜ್ಯಾಡಳಿತದಲ್ಲಿ ಹಸ್ತಕ್ಷೇಪ ಮಾಡಲೆತ್ನಿಸಿದ ಗವರ್ನರ್ ಜನರಲ್ ಡಾಲ್ ಹೌಸಿಯ ನೀತಿಯನ್ನು 19 ವರ್ಷದ ದೊರೆ ವೆಂಕಟಪ್ಪನಾಯಕ ಪ್ರತಿಭಟಿಸಿದ. ಕೊನೆಗೆ ಬ್ರಿಟಿಷರು ಸಂಸ್ಥಾನವನ್ನು ವಶಪಡಿಸಿಕೊಂಡರು.

1858 - ನಾನಾಸಾಹೇಬ - ನರಗುಂದ (ಗದಗ) – ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುದ್ಧ ಪ್ರತಿಭಟನೆ.

ಅಸಹಕಾರ ಚಳುವಳಿಗಳು ಮೂರನೆಯ ಘಟ್ಟ

1885 ರಲ್ಲಿ ಕಾಂಗ್ರೆಸ್ ಪಕ್ಷ ಸ್ಥಾಪನೆಯಾಯಿತು. ಅದರ ಮೊದಲ ಅಧಿವೇಶನ ಮುಂಬೈನಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಅಧೀವೇಶನದಲ್ಲಿ ಕರ್ನಾಟಕದಿಂದ 72 ಜನ ಭಾಗವಹಿಸಿದ್ದರು.

ತಿಲಕರ ಕೇಸರಿ ಮತ್ತು ಮರಾಠ ಪತ್ರಿಕೆಗಳು ಕನ್ನಡಿಗರ ಮೇಲೆ ಪರಿಣಾಮ ಬೀರಿ ಕನ್ನಡಿಗರು ಚಳುವಳಿಯಲ್ಲಿ ಭಾಗವಹಿಸಲು ಪ್ರೇರಣೆಯಾದವು. ಅಲ್ಲದೇ ಹುಬ್ಬಳ್ಳಿಯಲ್ಲಿ ಕರ್ಮವೀರಭಾಗಲಕೋಟೆಯಲ್ಲಿ ಕನ್ನಡಿಗಬೆಂಗಳೂರಿನಲ್ಲಿ ಪ್ರಜಾಮತ ಮತ್ತು ಧಾರವಾಡದಲ್ಲಿ ವೀರ ಕನ್ನಡಿಗ ಪತ್ರಿಕೆಗಳು ಪ್ರಾರಂಭವಾಗಿ ಕನ್ನಡಿಗರು ಸ್ವಾತಂತ್ರ್ಯ ಚಳುವಳಿಗೆ ಧುಮುಕಲು ಪ್ರೇರಣೆ ನೀಡಿದವು.

1905-06 ರಲ್ಲಿ ಲೋಕಮಾನ್ಯ ತಿಲಕರು ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ಕರ್ನಾಟಕದ ಜನರಲ್ಲಿ ಸ್ವದೇಶಿ ಚಳುವಳಿಯನ್ನು ಹರಡಿದರು. ಕರ್ನಾಟಕದ ಹಲವೆಡೆ ಸ್ವದೇಶಿ ಕೈಗಾರಿಕೆಗಳು ಸ್ದಾಪಿತವಾದವು ಕಿತ್ತೂರು ಮತ್ತು ಬಾದಾಮಿಯಲ್ಲಿ ನೇಯ್ಗೆ ಕಾರ್ಖಾನೆಧಾರವಾಡದಲ್ಲಿ ಬೆಂಕಿಕಡ್ಡಿ ಕಾರ್ಖಾನೆಲಕ್ಷ್ಮೇಶ್ವರದಲ್ಲಿ ಪಿಂಗಾಂಣಿ ಸಾಮಾನು ಕಾರ್ಖಾನೆ ಹೀಗೆ ನಾನಾ ಕಡೆಗಳಲ್ಲಿ ದಿನಬಳಕೆಯ ಸಾಮಾನು ತಯಾರಿಕೆ ಪ್ರಾರಂಭವಾಯಿತು.

1905 ರಲ್ಲಿ ಲಾರ್ಡ್ ಕರ್ಜನ್ ಬಂಗಾಳದ ವಿಭಜನೆ ಮಾಡಿದಾಗ 1907 ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಬಂಗಾಳದ ವಿಭಜನೆಯ ವಿರುದ್ಧ ಪ್ರತಿಭಟನೆ ನಡೆಯಿತು.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮುಂಬೈ ಪ್ರಾಂತೀಯ ಸಮ್ಮೇಳನಗಳು ನಡೆದವು

1903 - ಫಿರೋಜ್ ಷಾ ಮೆಹ್ತಾ – ಧಾರವಾಡ

1916 - ದೀನ್ ಷಾ ವಾಚಾ - ಬೆಳಗಾವಿ

1918 – ವಿಜಯಪುರ

ಲೋಕಮಾನ್ಯ ತಿಲಕರು ಕೇಸರಿ ಪತ್ರಿಕೆಯಲ್ಲಿ ಬರೆದಿದ್ದ ಒಂದು ಲೇಖನದಿಂದ ಬ್ರಿಟಿಷ್ ಸರ್ಕಾರ ಅವರನ್ನು ವಿಚಾರಣೆಗೊಳಪಡಿಸಿ ಆರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿಧಾಗ ದಕ್ಷಿಣ ಕನ್ನಡದಲ್ಲಿ ಅಮ್ಮೆಂಬಳ ಶ್ರೀನಿವಾಸ ಪೈಸುಬ್ಬರಾಯ ಬಾಳಿಗಬಳ್ಳಾರಿಯಲ್ಲಿ ಕೋಲಾಚಲಂ ವೆಂಕಟರಾವ್ ಮತ್ತು ಸಭಾಪತಿ ಮೊದಲಿಯಾರ್ ಮುಂತಾದವರು ಕರ್ನಾಟಕದಲ್ಲಿ ಚಳುವಳಿಯನ್ನು ಹಮ್ಮಿಕೊಂಡರು.

1916 ರಲ್ಲಿ ಹೋಮ್ ರೂಲ್ ಚಳುವಳಿ ಪ್ರಾರಂಭವಾದಾಗ ಧಾರವಾಡದಲ್ಲಿ ಕೂಡ ಹೋಂ ರೂಲ್ ಚಳುವಳಿಯ ಶಾಖೆಯನ್ನು ಪ್ರಾರಂಭಿಸಲಾಯಿತು. ಗಂಗಾಧರ ದೇಶಪಾಂಡೆಯವರೇ ಇದರ ಅಧ್ಯಕ್ಷತೆ ವಹಿಸಿಕೊಂಡರು.

1916 ರಲ್ಲಿ ಆಲೂರು ವೆಂಕಟರಾಯರು ಮತ್ತು ಕಡಪೆ ರಾಘವೇಂದ್ರರಾಯರು ಸೇರಿ ಕರ್ನಾಟಕ ಸಭಾವನ್ನು ಸ್ಥಾಪಿಸಿದರು.

ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್

1920 ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಷನದಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಕಾಂಗ್ರೆಸ್ಸನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಗಂಗಾಧರ ದೇಶಪಾಂಡೆಯವರು ಇದರ ಮೊದಲ ಅಧ್ಯಕ್ಷರಾದರು. ದೇಶಪಾಂಡೆಯವರು ಬೆಂಗಳೂರಿನಲ್ಲಿ ಚರಕ ಸಂಘವನ್ನು ಸ್ಥಾಪಿಸಿದರು.

ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮ್ಮೇಳನಗಳು

1922 - ಮಂಗಳೂರು - ಸರೋಜಿನಿ ನಾಯ್ಡು

1923 – ವಿಜಯಪುರ - ಸಿ ರಾಜಗೋಪಾಲಚಾರಿ

1926 - ಬಳ್ಳಾರಿ - ಶ್ರೀನಿವಾಸ್ ಅಯ್ಯಂಗಾರ್

ಅಸಹಕಾರ ಚಳುವಳಿ

1920 ರಲ್ಲಿ ಭಾರತಾದ್ಯಂತ ಅಸಹಕಾರ ಚಳುವಳಿ ಪ್ರಾರಂಭವಾದಾಗ ಕರ್ನಾಟಕದಲ್ಲಿ ಸಹ ಹಲವೆಡೆ ಅಸಹಕಾರ ಚಳುವಳಿಯ ಭಾಗವಾಗಿ ಹೋರಾಟಗಳು ನಡೆದವು.

ವಿಜಯಪುರ - ಶ್ರೀನವಾಸ ಕೌಜಲಗಿ ಮತ್ತು ಹನುಮಂತರಾವ್ ಕೌಜಲಗಿ

ಬಾಗಲಕೋಟೆ – ಜಯರಾಂ ನರಗುಂದ

ಮಂಗಳೂರು – ಕಾನಾಡ್ ಸದಾಶಿವರಾವ್

ಬಳ್ಳಾರಿ – ಕೋಲಾಚಲಂ ವೆಂಕಟರಾವ್

ಕರ್ನಾಟಕದ ಪ್ರಮುಖ ಸತ್ಯಾಗ್ರಹ ಸಂಘಗಳು

ಹಿಂದೂಸ್ತಾನ್ ಸೇವಾದಳ - 1923 ಡಿಸೆಂಬರ್ 28 - ನಾ.ಸು ಹರ್ಡೇಕರ್.

ಬಸವದಳ - ಹರ್ಡೇಕರ ಮಂಜಪ್ಪ

ಯುವಕ ಸಂಘ – ಖಜಾರಿಸ್ವಾಮಿ ಮತ್ತು ಹಳ್ಳಿಕೆರಿ

ರಾಷ್ಟ್ರೀಯ ಶಾಲೆಗಳು

ಶೈಕ್ಷಣಿಕ ಅಬಿವೃದ್ಧಿ ಮತ್ತು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಕರ್ನಾಟಕದಲ್ಲಿ ರಾಷ್ಟ್ರೀಯ ವಿದ್ಯಾಶಾಲೆಗಳು ಸ್ಥಾಪಿತವಾದವು.

ಧಾರವಾಡ – ಆಲೂರು ವೆಂಕಟರಾಯರು

ಕಲುಬುರ್ಗಿ – ದೇವಳ ಗಾಂವಕರ್

ರಾಯಚೂರು - ಪಂಡಿತ ತಾರಾನಾಥ

ಬೆಳಗಾವಿ - ಗಂಗಾಧರ್ ರಾವ್ ದೇಶಪಾಂಡೆ

ಬೆಳಗಾವಿ ಕಾಂಗ್ರೆಸ್ ಅಧೀವೇಶನ (1924)

1924 ರಲ್ಲಿ ಬೆಳಗಾವಿಯಲ್ಲಿ 39 ನೇ ಆಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ಇದಾಗಿತ್ತು. ಗಂಗೂಬಾಯಿ ಹಾನಗಲ್ ಈ ಅಧಿವೇಶನದಲ್ಲಿ ವಂದೇಮಾತರಂ ಗೀತೆಯನ್ನು ಹಾಡಿದರು.

ಈ ಸಂದರ್ಭದಲ್ಲಿ ಗಾಂಧೀಜಿ ಮಧ್ಯಪಾನ ನಿಷೇಧ ಮತ್ತು ಅಸ್ಪೃಶ್ಯತಾ ವಿವಾರಣೆಗೆ ಕರೆಕೊಟ್ಟರು.

ಗಾಂಧಿ ಖಾದಿಯ ಪ್ರಚಾರವನ್ನು ಮಾಡುತ್ತಾ ಭಾರತಾದ್ಯಂತ ಸಂಚರಿಸುವಾಗ 1927 ಮಾರ್ಚ್ 31 ರಂದು ಬೆಳಗಾವಿಯ ನಿಪ್ಪಾಣಿಗೂ ಭೇಟಿ ನೀಡಿದ್ದರು. 1927 ಏಪ್ರಿಲ್ 20 ರಂದು ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಇಲ್ಲಿ ಸುಮಾರು 45 ದಿನಗಳ ಕಾಲ ತಂಗಿದ್ದರು.

ಕಾನೂನುಭಂಗ ಚಳವಳಿ (1930)

ಗಾಂಧೀಜಿಯವರು 1930 ಎಪ್ರಿಲ್ 6 ರಂದು ದಂಡಿಯಾತ್ರೆ ಪ್ರಾರಂಭಿಸಿದರು. ಕರ್ನಾಟಕದಿಂದ ಮೈಲಾರ ಮಹದೇವಪ್ಪ ಈ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಅಂಕೋಲಾದಲ್ಲಿ ಎಂ.ಪಿ ನಾಡಕರ್ಣಿ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. ಆದ್ದರಿಂದ ಅಂಕೋಲಾವನ್ನು ಕರ್ನಾಟಕದ ಬಾರ್ಡೋಲಿ ಮತ್ತು ಕರ್ನಾಟಕದ ದಂಡಿ ಎಂದು ಕರೆಯುವರು.

ಇದೇ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎನ್ ಬಿ ಕಬ್ಬೂರ ಅವರ ನೇತೃತ್ವದಲ್ಲಿ ಅರಣ್ಯ ಸತ್ಯಾಗ್ರಹ ನಡೆಯಿತು.

1931 ರಲ್ಲಿ ಹಾವೇರಿಯಲ್ಲಿ ಮತ್ತು 1932 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕಂದಾಯ ನೀತಿಯನ್ನು ವಿರೋಧಿಸಿ ವೀರನ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಸತ್ಯಾಗ್ರಹಗಳು ನಡೆದವು

1937 ರಲ್ಲಿ ಬೆಳಗಾವಿಯ ಹುದಲಿ ಎಂಬಲ್ಲಿ ಖಾದಿ ವಸ್ತು ಪ್ರದರ್ಶನಾಲಯವನ್ನು ಗಾಂಧೀಜಿಯವರು ಉದ್ಘಾಟಿಸಿದರು.

ಶಿವಪುರ ಧ್ವಜ ಸತ್ಯಾಗ್ರಹ (1938)

1938 ಏಪ್ರಿಲ್ 9 ರಂದು ಮಂಡ್ಯದ ಶಿಂಷಾ ನದಿಯ ದಂಡೆಯ ಮೇಲಿರುವ ಶಿವಪುರದ ಬಳಿ ಈ ಧ್ವಜ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಟಿ ಸಿದ್ದಲಿಂಗಯ್ಯನವರು ಇದರ ಅಧ್ಯಕ್ಷತೆ ವಹಿಸಿದ್ದರು.

1938 ರಲ್ಲಿ ಶಿವಪುರದಲ್ಲಿ ಮೈಸೂರು ಕಾಂಗ್ರೆಸ್ ನ ಮೊದಲ ಅಧಿವೇಶನವನ್ನು ನಡೆಸಲಾಯಿತು.

ವಿಧುರಾಶ್ವತ್ಥ ದುರಂತ (1938)

ವಿಧುರಾಶ್ವತ್ಥವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್) ನದಿ ದಂಡೆಯ ಮೇಲಿರುವ ಗ್ರಾಮ. 1938 ಏಪ್ರಿಲ್ 25 ರಂದು ಸತ್ಯಾಗ್ರಹಿಗಳು ಈ ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಚಳುವಳಿ ನಡೆಸಿದಾಗ ಚಳುವಳಿಯ ವಿರುದ್ಧ ಪೊಲೀಸರು ಗೋಲಿಬಾರ್ ಮಾಡಿದರು. ಈ ದುರಂತವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎನ್ನಲಾಗಿದೆ.

ಈಸೂರು ದುರಂತ (1942)

ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಗ್ರಾಮ. 1942 ಚಳವಳಿಗೆ ಬೆಂಬಲಿಸಿ ಈಸೂರಿನ ಜನತೆ ಹೋರಾಟಕ್ಕಿಳಿದರು. ತಮ್ಮ ಹಳ್ಳಿಗೆ ಸ್ವತಂತ್ರಹಳ್ಳಿ ಎಂಬ ಹೆಸರಿಟ್ಟುಕೊಂಡು ಬ್ರಿಟಿಷ್ ಅಧಿಕಾರಿಗಳನ್ನು ಗ್ರಾಮದಿಂದ ಹೊರಹಾಕಿ ತಮ್ಮದೇ ಆಡಳಿತವನ್ನು ಸ್ಥಾಪಿಸಿಕೊಂಡರು. ಭಾರತದಲ್ಲಿಯೇ ಮೊದಲ ಬಾರಿಗೆ ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು. ಏಸೂರು ಕೊಟ್ಟರು ಈಸೂರು ಬಿಡೆವು ಎಂಬ ವಾಕ್ಯವನ್ನು ಘೋಷಣೆಯಾಗಿಸಿಕೊಂಡು ಹೋರಾಟಕ್ಕಿಳಿದರು. ಕೊನೆಗೆ ಬ್ರಿಟಿಷ್ ಅಧಿಕಾರಿಗಳಿಂದ ಹತ್ಯಾಕಾಂಡ ನಡೆದು ಈಸೂರು ಪ್ರತಿಭಟನೆ ಕೊನೆಗೊಂಡಿತು.

ಮೈಸೂರು ಚಲೋ ಚಳುವಳಿ (1947)

ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರದ ರಚನೆಗಾಗಿ ಕೆ ಚೆಂಗಲರಾಯ ರೆಡ್ಡಿ (ಕೆ.ಸಿ ರೆಡ್ಡಿ) ಅವರ ನೇತೃತ್ವದಲ್ಲಿ ಮೈಸೂರು ಚಲೋ ಚಳುವಳಿ ನಡೆಯಿತು. 1947 ಆಗಸ್ಟ್ 9 ರಂದು ಅಂದಿನ ಮೈಸೂರಿನ ಒಡೆಯರಾಗಿದ್ದ ಜಯಚಾಮರಾಜ ಒಡೆಯರು ಭಾರತ ಒಕ್ಕೂಟಕ್ಕೆ ಸೇರಲು ಸಹಿ ಹಾಕಿದರು.

1947 ಅಕ್ಟೋಬರ್ 27 ರಂದು ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಯಿತು. ಕೆ.ಸಿ ರೆಡ್ಡಿ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜಯಚಾಮರಾಜ ಒಡೆಯರು ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದರು.

ಕಾಮೆಂಟ್‌ಗಳು