ವೇದಗಳ ಕಾಲದ ನಾಗರಿಕತೆ

ವೇದಗಳ ಕಾಲದ ನಾಗರಿಕತೆ

ಸಿಂಧೂ ನಾಗರಿಕತೆಯ ನಂತರ ಭಾರತದಲ್ಲಿ ಕಾಣಸಿಗುವ ಸಂಸ್ಕೃತಿಯೆಂದರೆ ವೇದಕಾಲೀನ ನಾಗರಿಕತೆ. ಈ ವೇದಕಾಲೀನ ನಾಗರಿಕತೆಯ ಸ್ಥಾಪಕರು ಆರ್ಯರು. ಈ ಆರ್ಯರು ವಿದೇಶಿಯರೆಂದು ಕೆಲವರು ವಾದಿಸಿದರೆಇನ್ನೂ ಕೆಲವರು ಅವರನ್ನು ಸ್ವದೇಶಿಯರು ಎಂದು ಪ್ರತಿಪಾದಿಸಿದ್ದಾರೆ.

ಆರ್ಯರ ಸಂಸ್ಕೃತಿಯನ್ನು ಬೂದುಬಣ್ಣದ ಮಡಕೆಗಳ ಸಂಸ್ಕೃತಿ ಎಂದು ಸಹ ಕರೆಯುತ್ತಾರೆ.

ವಿದೇಶಿ ವಾದ : ಪ್ರೊ. ಮ್ಯಾಕ್ಸ್ ಮುಲ್ಲರ್ಪೆಂಕಾನ್ಪ್ರೊ. ಗೈಲ್ಸ್ಬಾಲ ಗಂಗಾಧರ ತಿಲಕ್ಮ್ಯಾಕ್ ಡೊನಾಲ್ಡ್

ಸ್ವದೇಶೀ ವಾದ : ಎಂ.ಎಂ ಗಂಗನಾಥ ಜಾಡಿ.ಎಸ್ ತ್ರಿವೇದಿಡಾ. ಆರ್.ಬಿ ಪಾಂಡೆಕೆ.ಎಂ ಮುನ್ಷಿಡಾ. ಎಸ್ ಶ್ರೀಕಂಠಶಾಸ್ತ್ರಿ

ವೈದಿಕ ಸಮಾಜವು ಗ್ರಾಮೀಣ ಸಮಾಜವಾಗಿತ್ತು. ಈ ವೈದಿಕ ಯುಗವನ್ನು ಪೂರ್ವ ವೈದಿಕ ಕಾಲ ಮತ್ತು ಉತ್ತರ ವೈದಿಕ ಕಾಲ ಎಂದು ಎರಡು ಭಾಗಗಳಲ್ಲಿ ವಿಭಾಗಿಸಲಾಗಿದೆ.

ಪೂರ್ವ ವೈದಿಕ ಕಾಲ/ಋಗ್ವೇದ ಕಾಲ (ಕ್ರಿ.ಪೂ. 1500-1100)

ಪೂರ್ವ ವೈದಿಕ ಕಾಲ

ವೇದಗಳಲ್ಲಿ ಅತಿ ಹಳೆಯದಾದ ಋಗ್ವೇದವು ಸರಿಸುಮಾರು ಕ್ರಿ.ಪೂ. 1500 ಮತ್ತು 1100ರ ನಡುವೆ ರಚಿಸಲ್ಪಟ್ಟಿತು. ಋಗ್ವೇದ ಎಂದರೆ ದೇವರ ಕುರಿತಾದ ಪ್ರಾರ್ಥನೆಗಳ ಸಂಕಲನ.

ರಾಜಕೀಯ ವ್ಯವಸ್ಥೆ

ಪೂರ್ವ ವೈದಿಕ ಆರ್ಯರು ರಾಜ್ಯಗಳ ಬದಲಾಗಿ ಬುಡಕಟ್ಟುಗಳಾಗಿ ಸಂಘಟಿತವಾಗಿದ್ದರು. ಒಂದು ಬುಡಕಟ್ಟಿನ ಮುಖಂಡನನ್ನು ರಾಜ ಎಂದು ಕರೆಯಲಾಗುತ್ತಿತ್ತು. ರಾಜನ ಅಧಿಕಾರ ಸಭಾ, ಸಮಿತಿ ಮತ್ತು ವಿದಾತ ಎಂಬ ಬುಡಕಟ್ಟು ಸಮಿತಿಗಳಿಂದ ನಿಯಂತ್ರಣಕ್ಕೊಳಪಟ್ಟಿತ್ತು. ಈ ಮೂರೂ ಸಮಿತಿಗಳು ಬುಡಕಟ್ಟಿನ ಭಾಗಶಃ ಆಡಳಿತಕ್ಕೆ ಜವಾಬ್ದಾರವಾಗಿದ್ದವು. ಸಭಾ ಬುಡಕಟ್ಟಿನ ದೊಡ್ಡ ವ್ಯಕ್ತಿಗಳ, ಪುರೋಹಿತರ ಸಂಘವಾಗಿತ್ತಲ್ಲದೇ ರಾಜನನ್ನು ನೇಮಕ ಮಾಡುವ ತೆಗೆದು ಹಾಕುವ ಅಧಿಕಾರ ಸಭಾಗೆ ಇತ್ತು. ಇದರ ಸದಸ್ಯರನ್ನು ಸಭ್ಯ ಎನ್ನುತ್ತಿದ್ದರು. ಸ್ತ್ರೀಯರಿಗೆ ಸಭಾದಲ್ಲಿ ಪ್ರವೇಶವಿರಲಿಲ್ಲ. ಸಮಿತಿಯು ಸಾಮಾನ್ಯ ಸದಸ್ಯರ ಕೂಟವಾಗಿದ್ದು ಇದು ಉತ್ತರ ವೈದಿಕ ಕಾಲದಲ್ಲಿ ಸ್ಥಾಪಿತವಾಯಿತು. ಇದರ ಸದಸ್ಯರನ್ನು ವಿಷಾ ಎನ್ನುತ್ತಿದ್ದರು. ವಿದಾತವು ಪ್ರಾಚೀನವಾದ ಮತ್ತು ಒಂದು ರೀತಿಯಲ್ಲಿ ಸಭಾ ಮತ್ತು ಸಮಿತಿಗಳಿಗೆ ಪಿತೃ ಸಮಾನ ಸಂಸ್ಥೆಯಾಗಿತ್ತು. ವಿದಾತದಲ್ಲಿ ಸ್ತ್ರೀಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರವೇಶವಿತ್ತು. ಬುಡಕಟ್ಟನ್ನು ರಕ್ಷಿಸುವುದು ರಾಜನ ಮುಖ್ಯ ಜವಾಬ್ದಾರಿಯಾಗಿತ್ತು. ಅಶ್ವಮೇಧ ಮತ್ತು ವಾಜಪೇಯ ಯಾಗಗಳು ಆಚರಣೆ ಯಲ್ಲಿದ್ದು ಈ ಯಾಗಗಳ ಉದ್ದೇಶ ಅರಸ ತನ್ನ ಸಾಮ ರ್ಥ್ಯವನ್ನು ಪ್ರದರ್ಶಿಸುವುದು ಮತ್ತು ಸಾಮ್ರಾಜ್ಯ ವಿಸ್ತರಣೆ.

ಋಗ್ವೇದ ಕಾಲದಲ್ಲಿ ಇದ್ದ ಆಡಳಿತ ಘಟಕಗಳು

ಆಡಳಿತ ಘಟಕ - ಮುಖ್ಯಸ್ಥರು

ಗ್ರಾಮ - ಗ್ರಾಮಿಣಿ

ವಿಸ್ (ವಿಷ್) - ವಿಸ್ಪತಿ (ವಿಷ್ಪತಿ)

ಜನಪದ - ಗೋಪ

ಮಹಾ ಜನಪದ - ರಾಜನ್

ವೇದಗಳ ಕಾಲದಲ್ಲಿ ನಡೆಯಿತೆನ್ನಲಾದ ದಾಶರಾಜ್ಞ (ದಶರಾಜನ್) ಯುದ್ಧವು ಪರುಷ್ಣಿ (ರಾವಿ) ನದಿ ತೀರದಲ್ಲಿ ನಡೆಯಿತು.  ಈ ಯುದ್ಧದ ಬಗ್ಗೆ ಋಗ್ವೇದದ 7ನೇ ಮಂಡಲವು ವಿವರಣೆ ನೀಡುತ್ತದೆ.

ಪ್ರಮುಖ ಅಧಿಕಾರಿಗಳು

ಭಗದುಗ - ಕಂದಾಯ ಸಂಗ್ರಹಣಾಧಿಕಾರಿ

ಸಂಘಹಿತ್ರಿ - ಖಜಾನಾಧಿಕಾರಿ

ಅಕ್ಷನಪ - ಮುಖ್ಯ ಲೆಕ್ಕಾಧಿಕಾರಿ

ಗೋವಿಕೃತ - ಅರಣ್ಯ ಮುಖ್ಯಸ್ಥ

ಸುತ - ರಾಜನ ದಾಖಲೆಗಳ ಸಂರಕ್ಷಕ

ಆರ್ಥಿಕ ವ್ಯವಸ್ಥೆ

ಋಗ್ವೇದ ಕಾಲದಲ್ಲಿನ ಆರ್ಥಿಕ ವ್ಯವಸ್ಥೆಗೆ ಕೃಷಿಯೇ ಮೂಲ ಆಧಾರವಾಗಿತ್ತು. ಕಾಡುಗಳನ್ನು ಕಡಿದು ಕೃಷಿ ಭೂಮಿಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಯುದ್ಧದ ಲೂಟಿಯೂ ಸಂಪತ್ತಿನ ಒಂದು ಪ್ರಮುಖ ಮೂಲವಾಗಿತ್ತು. ರಾಜರಿಗೆ ಬಲಿ ಮತ್ತು ಪುರೋಹಿತರಿಗೆ ದಾನದ ರೂಪದಲ್ಲಿ ಆದಾಯ ಬರುತ್ತಿತ್ತು. ಕೃಷಿ ಭೂಮಿಯನ್ನು ಕ್ಷೇತ್ರ/ಉರ್ವರ ಎಂತಲೂ, ಕೃಷಿಯನ್ನು ಚರ್ಪಾಣಿ ಎಂತಲೂ ಕರೆಯುತ್ತಿದ್ದರು. ಕೃಷಿಗಾಗಿ ನಿರ್ಮಿಸಿಕೊಂಡ ಬಾವಿಗಳನ್ನು ಅವತಸ್ ಎನ್ನುತ್ತಿದ್ದರು. ಗೋವುಗಳು ಸಂಪತ್ತಿನ ಸಂಕೇತವಾಗಿದ್ದವು. ಅಪಹರಣಗೊಂಡ ಗೋವುಗಳನ್ನು ಹುಡುಕುವುದಕ್ಕೆ ಗವಿಸ್ತಿ ಎನ್ನುತ್ತಿದ್ದರು. ಹುಲ್ಲುಗಾವಲಿಗೆ ಗೋಷ ಎನ್ನುತ್ತಿದ್ದರು.

ಪ್ರಾರಂಭದಲ್ಲಿ ವಸ್ತುವಿನಿಮಯ ಪದ್ಧತಿ ಬಳಕೆಯಲ್ಲಿತ್ತು ನಂತರ ನಿಷ್ಕ ಎಂಬ ಚಿನ್ನದ ನಾಣ್ಯ ಬಳಕೆಗೆ ಬಂದಿತು. ಜೊತೆಗೆ ಶತಮಾನಪದಾಸ್ಕೃಷ್ಣಾಲ್ಹಿರಣ್ಯ ಎಂಬ ನಾಣ್ಯಗಳು ಬಳಕೆಯಲ್ಲಿದ್ದವು.

ಅಯಸ್ ಎಂಬ ಧಾತುವಿನಿಂದ ಲೋಹದ ಉಪಕರಣಗಳನ್ನು ಮಾಡುತ್ತಿದ್ದು ಈ ಅಯಸ್ ಶಬ್ದವು ತಾಮ್ರವನ್ನು ಸೂಚಿಸುತ್ತದೆ ಧಮ್ ಹಾಗೂ ಕರ್ಮರ ಎಂಬ ಪದಗಳು ಲೋಹದ ಬೆಸುಗೆಗಾರರನ್ನು ಸೂಚಿಸುತ್ತವೆ. ಪೂರ್ವ ವೈದಿಕ ಕಾಲವು ಕಂಚಿನ ಯುಗ ಸಂಸ್ಕೃತಿಯಾದರೆ ಉತ್ತರ ವೈದಿಕ ಕಾಲವು ಕಬ್ಬಿಣ ಯುಗ ಸಂಸ್ಕೃತಿಯಾಗಿತ್ತು.

ಧರ್ಮ

ಏಷ್ಯಾ ಮೈನರ್ ನಲ್ಲಿನ ಸಾ.ಶ.ಪೂ 1400 ರ ಬೋಗಾಜ್ಕಾಯ್ ಶಾಸನವು ಆರ್ಯರ ದೇವತೆಗಳ ಬಗ್ಗೆ ತಿಳಿಸುತ್ತದೆ.

ಪೂರ್ವ ವೈದಿಕ ಕಾಲದಲ್ಲಿ ಪ್ರಕೃತಿ ಆರಾಧನೆಗೆ ಪ್ರಾಮುಖ್ಯತೆ ನೀಡಲಾಗಿತ್ತು. ಇಂದ್ರ, ಅಗ್ನಿ, ಮಿತ್ರ, ವರುಣ, ಆರ್ಯಮಾನ್, ಸೂರ್ಯ, ವಾಯು, ಯಮ ಮತ್ತು ಸೋಮ ವೈದಿಕ ಕಾಲದ ಮುಖ್ಯ ದೇವತೆಗಳಾಗಿದ್ದರು. ಹೆಣ್ಣು ದೇವತೆಗಳಲ್ಲಿ ಉಷಸ್, ಪೃಥ್ವಿ ಮತ್ತು ಅದಿತಿ ಸೇರಿದ್ದರು.

ಜಾತಿವ್ಯವಸ್ಥೆ

ಋಗ್ವೇದದ 10ನೇ ಮಂಡಲದಲ್ಲಿ ಪುರುಷ ಸೂಕ್ತದಲ್ಲಿ ಉಲ್ಲೇಖಿಸಿರುವಂತೆ ಪೂರ್ವ ವೈದಿಕ ಕಾಲದಲ್ಲಿ ಜಾತಿಯೆಂಬುದು ಹುಟ್ಟಿನಿಂದಾಗಿರದೇ ವ್ಯಕ್ತಿಯು ಮಾಡುವ ಕಸುಬನ್ನಾಧರಿಸಿ ನಿಗದಿಯಾಗಿತ್ತು. ಯಾರು ಯಾವ ಉದ್ಯೋಗವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಬ್ರಾಹ್ಮಣಕ್ಷತ್ರಿಯವೈಶ್ಯಶೂದ್ರ ಇವು ಋಗ್ವೇದದಲ್ಲಿ ಉಲ್ಲೇಖವಾಗಿರುವ ವರ್ಣಗಳು.

ಸ್ತ್ರೀಯರ ಸ್ಥಾನಮಾನ

ಪೂರ್ವ ವೈದಿಕ ಕಾಲದಲ್ಲಿ ಸ್ತ್ರೀ ಅನೇಕ ವಿಷಯಗಳಲ್ಲಿ ಪುರುಷನಿಗೆ ಸಮಾನವಾದ ಸ್ಥಾನಮಾನಗಳನ್ನು ಹೊಂದಿದ್ದಳು. ಪುರುಷರಂತೆ ಸ್ತ್ರೀಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇತ್ತು. ಪುರುಷರಂತೆಯೇ ವಿದ್ಯಾಭ್ಯಾಸ ಪಡೆಯುವ ಅವಕಾಶವಿತ್ತು. ಅಪಾಲಾ, ಲೋಪಮುದ್ರ, ಮುದ್ಗಲಿನಿ. ವಿಶ್ವಾವರಾ, ಮೈತ್ರೇಯಿ, ಘೋಷ, ಗಾರ್ಘಿಯಂತಹ ಅನೇಕ ಸ್ತ್ರೀ ವಿದ್ವಾಂಸರ ಕುರಿತು ಋಗ್ವೇದದಲ್ಲಿ ಉಲ್ಲೇಖವಾಗಿದೆ. ಆದರೆ ಸ್ತ್ರೀಯರಿಗೆ ಸಭೆಗೆ ಪ್ರವೇಶ ಇರಲಿಲ್ಲ. ವಿಧವಾ ಸ್ತ್ರೀಯರಿಗೆ ಮರುವಿವಾಹದ ಅವಕಾಶವಿತ್ತು. ಗಂಡ ಸತ್ತನಂತರ ಪತ್ನಿಯನ್ನು ಸುಡುವ ಸತಿಪದ್ಧತಿ ಆಚರಣೆ ಇರಲಿಲ್ಲ. ಸ್ತ್ರೀ ಧಾರ್ಮಿಕ ವಿಧಿವಿದಾನಗಳಲ್ಲಿ ಭಾಗವಹಿಸಬಹುದಿತ್ತಾದರೂ ಆಕೆ ಪುರುಷರಂತೆ ಉಪನಯನ ಸಂಸ್ಕಾರ ಮಾಡಿಸಿಕೊಳ್ಳುವ ಪದ್ಧತಿಯಿರಲಿಲ್ಲ.

ಕುಟುಂಬ

ಪೂರ್ವ ವೈದಿಕ ಕಾಲವು ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನೊಳಗೊಂಡಿತ್ತು. ಅನೆಕ ತಲೆಮಾರುಗಳನ್ನೊಳಗೊಂಡ ಅವಿಭಕ್ತ ಕುಟುಂಬ ಪದ್ಧತಿಯಿತ್ತು. ಏಕ ಪತ್ನಿತ್ವ ಜನಪ್ರಿಯವಾದ ವಿವಾಹ ಪದ್ಧತಿಯಾಗಿತ್ತಾದರೂ ರಾಜರಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿತ್ತು. ಕೆಲವೊಮ್ಮೆ ಸ್ತ್ರೀಯರು ಸಹ ಬಹುಪತಿತ್ವ ಆಗುವ ಅವಕಾಶವಿತ್ತು. ಗಾಂಧರ್ವ ವಿವಾಹ (ಪ್ರೇಮ ವಿವಾಹ) ಅಂದಿನ ಜನಪ್ರಿಯ ವಿವಾಹ ಪ್ರಕಾರಗಳಲ್ಲೊಂದು. ಆರ್ಯರು ಅನಾರ್ಯರ (ದ್ರಾವಿಡ) ಜೊತೆ ವೈವಾಹಿಕ ಸಂಪರ್ಕ ಹೊಂದಿರಲಿಲ್ಲ. ವರದಕ್ಷಿಣೆ ಮತ್ತು ವಧುದಕ್ಷಿಣೆಗಳೆರಡು ಅಂದಿನ ಸಮಾಜದಲ್ಲಿ ರೂಢಿಯಲ್ಲಿದ್ದವು. ಗಂಡುಮಗುವನ್ನು ಪಡೆಯುವುದು ವಿವಾಹದ ಅತ್ಯಂತ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಬಾಲ್ಯವಿವಾಹ ಪದ್ಧತಿ ಉತ್ತರ ವೈದಿಕ ಕಾಲದಲ್ಲಿ ಆಚರಣೆಗೆ ಬಂದಿತು.

ಶಿಕ್ಷಣ

ಪೂರ್ವ ವೈದಿಕ ಕಾಲದ ಶಿಕ್ಷಣ ಮೌಖಿಕ ರೂಪದಲ್ಲಿತ್ತು. ಗುರುಕುಲ ಶಿಕ್ಷಣ ಮತ್ತು ಚಾರಣ ಶಿಕ್ಷಣ ಎಂಬ ಪದ್ಧತಿಗಳು ಪ್ರಚಲಿತದಲ್ಲಿದ್ದವು. ಖಗೋಳಶಾಸ್ತ್ರ, ಔಷಧ ವಿಜ್ಞಾನ, ಆಯುರ್ವೇದ, ಶಸ್ತ್ರ ಚಿಕಿತ್ಸೆ ಮುಂತಾದ ವಿಜ್ಞಾನ ವಿಷಯಗಳ ಕುರಿತು ಬೋಧನೆ ಮಾಡಲಾಗುತ್ತಿತ್ತು. ಗ್ರಹಣ, ಗ್ರಹಗಳ ಪರಿಭ್ರಮಣೆ ಮತ್ತು ಭ್ರಮಣೆ, ಜೀವಿಗಳ ಅಂಗರಚನೆ, ಬೆಳಕು, ಶಬ್ಧ, ಗಾಳಿ ಇತ್ಯಾದಿ ಭೌತ ವಿಜ್ಞಾನದ ಬಗ್ಗೆ ಸಹ ಜ್ಞಾನವಿತ್ತು.

ಆಹಾರ ಪದ್ಧತಿ

ಗೋಧಿಬಾರ್ಲಿಅಕ್ಕಿಬಳಕೆಯಲ್ಲಿದ್ದ ಪ್ರಮುಖ ಆಹಾರ ಧಾನ್ಯಗಳಾಗಿದ್ದವು. ಕುದುರೆಹಸುಕುರಿಮೇಕೆ ಇತ್ಯಾದಿ ಮಾಂಸಾಹಾರವನ್ನು ಸೇವಿಸುತ್ತಿದ್ದರು. 

ಉತ್ತರ ವೈದಿಕ ಕಾಲ (ಕ್ರಿ.ಪೂ 1100 - 500)

ಸಾಮಾಜಿಕ ವ್ಯವಸ್ಥೆ

ಯಜುರ್ವೇದಸಾಮವೇದ ಮತ್ತು ಅಥರ್ವಣವೇದಗಳ ಕಾಲವನ್ನು ಉತ್ತರ ವೈದಿಕ ಕಾಲ ಎನ್ನುವರು. ಈ ಯುಗದಲ್ಲಿ ಜಾತಿ ಆಧಾರಿತ ವರ್ಣ ವ್ಯವಸ್ಥೆ ಜಾರಿಯಲ್ಲಿತ್ತು. ಬ್ರಾಹ್ಮಣಕ್ಷತ್ರಿಯವೈಶ್ಯಶೂದ್ರ ಇವು ಜಾತಿ ಆಧಾರಿತ ವೃತ್ತಿಗಳಾಗಿ ಮಾರ್ಪಟ್ಟವು. ಶೂದ್ರರ ಹೊರತಾಗಿ ಇನ್ನುಳಿದ ವರ್ಣದವರೆಲ್ಲರೂ ಆಸ್ತಿಯನ್ನು ಹೊಂದಬಹುದಿತ್ತು.

ರಾಜಕೀಯ ವ್ಯವಸ್ಥೆ

ಉತ್ತರ ವೈದಿಕ ಕಾಲದಲ್ಲಿಬುಡಕಟ್ಟುಗಳು ರಾಜಧಾನಿಗಳನ್ನು ಹೊಂದಿ ಸಣ್ಣ ರಾಜ್ಯಗಳಾಗಿ ಏಕೀಕರಣಗೊಂಡವು. ರಾಜನನ್ನು ಸಮಾಜ ವ್ಯವಸ್ಥೆಯ ಪಾಲಕ ಮತ್ತು ರಾಷ್ಟ್ರದ ರಕ್ಷಕನಾಗಿ ಕಾಣಲಾಯಿತು. ಪೂರ್ವವೈದಿಕ ಕಾಲದಲ್ಲಿ ರಾಜನು ಜನರಿಂದ ಚುನಾವಣೆಗೊಂಡರೆ ಉತ್ತರ ವೈದಿಕ ಕಾಲದಲ್ಲಿ ರಾಜತ್ವ ಎಂಬುದು ವಂಶಪಾರಂಪರ್ಯವಾಯಿತು. ಬಲಿ ಕಡ್ಡಾಯವಾಗಿ ಕಟ್ಟಲೇ ಬೇಕಾದ ತಲೆಗಂದಾಯವಾಗಿ ಮಾರ್ಪಾಡಾಯಿತು. ರಾಜನ ಹೆಚ್ಚುತ್ತಿರುವ ಅಧಿಕಾರದಿಂದ ಸಭೆ ಮತ್ತು ಸಮಿತಿಗಳ ಪ್ರಭಾವ ಇಳಿಯಿತು. ಕ್ರಿ.ಪೂ. 6ನೇ ಶತಮಾನದ ವೇಳೆಗೆ ಮಹಾಜನಪದಗಳು ಅಸ್ಥಿತ್ವಕ್ಕೆ ಬಂದವು. 16 ಮಹಾಜನಪದಗಳು ಇದ್ದವು.

ಮಹಾಜನಪದಗಳು

ಆರ್ಥಿಕ ವ್ಯವಸ್ಥೆ

ಉತ್ತರ ವೈದಿಕ ಕಾಲದಲ್ಲಿ ಗಂಗಾ ನದಿಯ ಬಯಲು ಪ್ರದೇಶ ಕೃಷಿ ಪ್ರಧಾನ ಆರ್ಥಿಕ ಕೇಂದ್ರವಾಗಿತ್ತು. ಕಬ್ಬಿಣದ ಉಪಕರಣಗಳ (ಕೃಷ್ಣ ಅಯಸ್ ಅಥವಾ ಶ್ಯಾಮ ಅಯಸ್) ಬಳಕೆ ಹೆಚ್ಚಾಯಿತು. ತಾಮ್ರಕಂಚುಮತ್ತು ಚಿನ್ನವಲ್ಲದೇ ತವರಸೀಸಮತ್ತು ಬೆಳ್ಳಿಯ ಲೊಹಗಳ ಬಳಕೆ ಸಹ ಮಾಡಲಾಗುತ್ತಿತ್ತು. ವಸ್ತುವಿನಿಮಯ ಪದ್ಧತಿ ಮತ್ತು ನಾಣ್ಯಗಳ ಚಲಾವಣೆ ಎರಡೂ ರೀತಿಯಲ್ಲಿ ವ್ಯಾಪರ ವಹಿವಾಟುಗಳು ಸಾಗುತ್ತಿದ್ದವು.

ವಾರಣಾಸಿ ರೇಷ್ಮೆ ಬಟ್ಟೆಗೆಗಾಂಧಾರ ಉಣ್ಣೆ ಬಟ್ಟೆಗೆಮಥುರಾ ಹತ್ತಿ ಬಟ್ಟೆಗೆ ಹೆಸರುವಾಸಿಯಾಗಿದ್ದವು.

ಭತ್ತಬಾರ್ಲಿಗೋಧಿಬೀನ್ಸ್ಎಳ್ಳುಹಾಗೂ ಹತ್ತಿ ಪ್ರಮುಖ ಬೆಳೆಗಳಾಗಿದ್ದು ರಾಜಸಾರಿ ಎಂಬುದು ವಿಶೇಷವಾದ ಭತ್ತದ ತಳಿಯಾಗಿತ್ತು.

ಹಸುವನ್ನು ಸಂಪತ್ತಿನ ಸಂಕೇತವಾಗಿ ಕಾಣಲಾಗುತ್ತಿತ್ತು. ಹಸುವನ್ನು ಕೊಲ್ಲಬಾರದೆಂಬ ನಿಯಮದ ಸಂಕೇತವಾಗಿ ಅಗನ್ಯ ಎಂಬ ಪದವನ್ನು ಬಳಸುತ್ತಿದ್ದರು. ಗೋಘನ ಎಂಬುದು ಅತಿಥಿಗಳಿಗೆ ನೀಡುತ್ತಿದ್ದ ಆಕಳು ಮಾಂಸಕ್ಕಿದ್ದ ಹೆಸರಾಗಿದೆ.

ತಾಮ್ರಲಿಪ್ತಿ ಮತ್ತು ಭರುಕಚ್ ಗಳು ಪ್ರಮುಖ ಬಂದರು ಪ್ರದೇಶಗಳಾಗಿದ್ದವು

ಧಾರ್ಮಿಕ ವ್ಯವಸ್ಥೆ

ಯಜ್ಞ ಯಾಗಗಳ ಆಚರಣೆ ಕಡ್ಡಾಯವೆಂಬಂತಾಗಿ ಪುರೋಹಿತ ವರ್ಗದ ಪ್ರಾಬಲ್ಯ ಹೆಚ್ಚಾಯಿತು. ಉಪನಿಷತ್ಅರಣ್ಯಕಬ್ರಾಹ್ಮಣಕಗಳು ರಚನೆಯಾದವು. ಪೂರ್ವ ವೈದಿಕ ಕಾಲದಲ್ಲಿದ್ದ ಇಂದ್ರಅಗ್ನಿವರುಣಮಿತ್ರ ಮುಂತಾದ ಪ್ರಕೃತಿ ದೇವತೆಗಳು ಮರೆಯಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರಾಮುಖ್ಯತೆಗೆ ಬಂದರು. ಪಶುಗಳ ಸಂರಕ್ಷಕನಾದ ಪುಶಾನ್ ಶೂದ್ರರ ದೇವರಾದನು. ಹಸು ಇವರ ಪೂಜನೀಯ ಪ್ರಾಣಿಯಾಗಿತ್ತು.

ಸ್ತ್ರೀ ಸ್ಥಾನಮಾನ

ಬಹುಪತ್ನಿತ್ವವು ಹೆಚ್ಚಾಗಿ ಬಹುಪತಿತ್ವವೇ ಇಲ್ಲದಂತಾಯಿತು. ತೈತ್ತಿರೀಯ ಸಂಹಿತೆಯು ಮುಟ್ಟಾದ ಸ್ತ್ರೀಯರಿಗೆ ವಿಧಿಸಬೇಕಾದ ನಿಬಂಧನೆಗಳ ಬಗ್ಗೆ ಹೇಳುತ್ತದೆ. ಗಂಡನ ಮರಣಾನಂತರ ಸ್ತ್ರೀಯನ್ನು ಬೆಂಕಿಯಲ್ಲಿ ಸುಡುವ ಸತಿಪದ್ಧತಿ ಕಟ್ಟುನಿಟ್ಟಾದ ವ್ಯವಸ್ಥೆಯಾಯಿತು. ಸ್ರ್ತೀಯರಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿರಲಿಲ್ಲ. ಆಕೆ ಶಿಕ್ಷಣ ಮತ್ತು ಇತರ ಸವಲತ್ತುಗಳಿಂದ ವಂಚಿತಳಾದಳು.

ವೈದಿಕ ಸಾಹಿತ್ಯ

ವಾರಣಾಸಿಮಥುರಾತಕ್ಷಶಿಲಾ ಮತ್ತು ವಿಕ್ರಮಶಿಲಾ ಇವು ಪ್ರಮುಖ ವಿದ್ಯಾ ಕೇಂದ್ರಗಳಾಗಿದ್ದವು.

ವೇದಗಳು

ಋಗ್ವೇದ  ದೇವರಿಗೆ ಬಲಿಕೊಡುವಾಗ ಪಠಿಸುವ ಮಂತ್ರಗಳ ಸಂಗ್ರಹಮುಖ್ಯ ಪುರೋಹಿತ ಹೋತ್ರಿ

ಯಜುರ್ವೇದ  ಯಜ್ಞ ಯಾಗಗಳನ್ನು ಮಾಡುವಾಗ ಪಠಿಸಬೇಕಾದ ಮಂತ್ರಗಳ ಸಂಗ್ರಹವಾಗಿದೆ. ಇದರಲ್ಲಿ ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದ ಎಂಬ ಎರಡು ವಿಧಗಳಿವೆ. ಮುಖ್ಯ ಪುರೋಹಿತ ಅಧ್ವರ್ಯ

ಸಾಮವೇದ - ಸಾಮವೇದ ಪದವು ಸಾಮನ್ ಎಂಬ ಪದದಿಂದ ಬಂದಿದೆ. ಸಾಮನ್ ಎಂದರೆ ಇಂಪಾದ ಸಂಗೀತ. ಸಂಗೀತಶಾಸ್ತ್ರಕ್ಕೆ ಸಂಬಂಧಿಸಿದ ವೇದವಾಗಿದೆ. ಮುಖ್ಯ ಪುರೋಹಿತ ಉದ್ಗೋತ್ರಿ

ಅಥರ್ವಣವೇದ  ವಿಜ್ಞಾನಔಷಧತಂತ್ರ-ಮಂತ್ರಗಳನ್ನು ಒಳಗೊಂಡ ವೇದವಾಗಿದೆ.

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ತ್ರಯಿ ಎನ್ನುವರು.

ಬ್ರಾಹ್ಮಣಕಗಳು - ಶ್ಲೋಕ ರೂಪದಲ್ಲಿರುವ ವೇದಗಳನ್ನು ಗದ್ಯರೂಪದಲ್ಲಿ ಬರೆದು ಅವುಗಳಿಗೆ ಬ್ರಾಹಣಗಳೆಂದು ಕರೆಯಲಾಯಿತು.

ಅರಣ್ಯಕಗಳು  ಅರಣ್ಯಗಳಲ್ಲಿ ಋಷಿಮುನಿಗಳು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದ ಬೋಧನೆಗಳ ಸಂಗ್ರಹವಾಗಿದೆ.

ಉಪನಿಷತ್  ಗುರುವಿನ ಬಳಿ ಹೋಗು ಎಂಬುದು ಈ ಪದದ ಅರ್ಥ. ಜೀವನದ ಔನ್ನತ್ಯಕ್ಕಾಗಿ ರಚನೆಯಾದ ಸಾಹಿತ್ಯ. ಸತ್ಯಮೇವ ಜಯತೇ ಎಂಬ ವಾಕ್ಯವನ್ನು ಮುಂಡಕ ಉಪನಿಷತ್‍ನಿಂದ ಪಡೆಯಲಾಗಿದೆ.

ಷಡ್ದರ್ಶನಗಳು - ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸೆ, ವೇದಾಂತ

ವೇದಾಂಗಗಳು  ಛಂದಸ್ಸು. ಶಿಕ್ಷಾ, ಕಲ್ಪ, ನಿರುಕ್ತ, ಜ್ಯೋತಿಷ್ಯ, ವ್ಯಾಕರಣ

ಇವರಲ್ಲಿ ವಿಫುಲವಾದ ಸಾಹಿತ್ಯವಿದ್ದರೂ ಬರವಣಿಗೆಯ ಪರಚಯವಿರಲಿಲ್ಲ ನಂತರದ ಕಾಲದಲ್ಲಿ ಅವನ್ನೆಲ್ಲಾ ಬರವಣಿಗೆಯಲ್ಲಿ ಸಂಗ್ರಹಿಸಿಡಲಾಯಿತು.

ವೇದಗಳಲ್ಲಿ ಉಲ್ಲೇಖಿತವಾದ ನದಿಗಳು ಅವುಗಳ ಈಗಿನ ಹೆಸರುಗಳು

ಸಿಂಧೂ – ಇಚಿಡಸ್, ಪರುಶ್ನಿ – ರಾವಿ, ಸತುದ್ರಿ - ಸಟ್ಲೇಜ್, ದೃಶದ್ವತಿ – ಘಗ್ಗರ್, ವಿತಸ್ತ – ಝೀಲಂ, ಅಸಿಕಿನಿ - ಚಿನಾಬ್, ವಿಪಾಸ್ - ಬಿಯಾಸ್, ಕುಭು – ಕಾಬೂಲ್, ಗೋಮತಿ – ಗೋಮಾಲ, ಕ್ರುನಾ – ಕುರ್ರಮ್ ಮುಂತಾದವು

ಕಾಮೆಂಟ್‌ಗಳು