ಭಾರತೀಯ ಸ್ವಾತಂತ್ರ್ಯ ಹೋರಾಟ ಭಾಗ 1

 ಭಾರತೀಯ ಸ್ವಾತಂತ್ರ್ಯ ಹೋರಾಟ - ಭಾಗ 1

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (1885)

1857 ರ ಸ್ವಾತಂತ್ರ್ಯ ಸಂಗ್ರಾಮದಂತಹ ಘಟನೆ ಮತ್ತೇ ಮರಕುಳಿಸಬಾರದೆಂದು 1885 ರಲ್ಲಿ ಬ್ರಿಟಿಷ್ ಸರ್ಕಾರವು ಅಲೆನ್ ಆಕ್ಟೇವಿಯನ್ ಹ್ಯೂಮ್ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ಸ್ಥಾಪಿಸಿತು. ಈ ಸಮಯದಲ್ಲಿ ಲಾರ್ಡ್ ಡಫರಿನ್ ವೈಸ್ರಾಯ್ ಆಗಿದ್ದರು. 

1885 ಡಿಸೆಂಬರ್ 28 ರಂದು ಮುಂಬೈನ ಗೋಕುಲ್ ದಾಸ್ ತೇಜ್‍ಪಾಲ್ ಸಂಸ್ಕೃತ ವಿದ್ಯಾ ಆವರಣದಲ್ಲಿ ಕಾಂಗ್ರೆಸ್ ಪ್ರಥಮ ಸಭೆ ನಡೆಸಿತು. ಈ ಸಭೆಯಲ್ಲಿ 72 ಜನ ಭಾರತೀಯರು ಭಾಗವಹಿಸಿದ್ದರು. ಈ ಸಭೆಯ ಅಧ್ಯಕ್ಷತೆ ವಹಿಸಿಕೊಂಡವರು ಉಮೇಶ್ ಚಂದ್ರ ಬ್ಯಾನರ್ಜಿ.

ಭಾರತದಲ್ಲಿ ಆಡಳಿತದ ಸುಧಾರಣೆಭಾರತೀಯ ಗೃಹ ಕೈಗಾರಿಕೆಗಳ ವಸ್ತುಗಳಿಗೆ ಬೆಲೆ ಮತ್ತು ಬೇಡಿಕೆ ದೊರಕಿಸುವುದುಭಾರತೀಯರ ಮೇಲೆ ವಿಧಿಸಿದ ಅತಿಯಾದ ತೆರಿಗೆಗಳ ರದ್ಧುಭಾರತದಾಚೆ ಕೆಲಸ ಮಾಡುತ್ತಿರುವ ಕಾರ್ಮಿಕರ ರಕ್ಷಣೆಭಾರತೀಯರಿಗೆ ಕ್ರಮೇಣವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದು ಮುಂತಾದ ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೇಸ್ ಅನ್ನು ಸ್ಥಾಪಿಸಲಾಯಿತು.

ಪಟ್ಟಾಭಿ ಸೀತಾರಾಮಯ್ಯನವರು ಕಾಂಗ್ರೆಸ್ ಅನ್ನು ಗೂಢತೆಯಲ್ಲಿ ಮುಸುಕಿರುವ ಅಂಶ ಎಂದು ಕರೆದಿದ್ದಾರೆ. ಲಾರ್ಡ್ ಕರ್ಜನ್ ಸಹ  ಕಾಂಗ್ರೆಸ್ಸನ್ನು ಕೊಳಕು ವಸ್ತು ಎಂದಿದ್ದಾರೆ.

ಪ್ರಮುಖ ಕಾಂಗ್ರೆಸ್ ಅಧಿವೇಶನಗಳು

1885 - ಮುಂಬೈ (ಮಹಾರಾಷ್ಟ್ರ) - ಉಮೇಶ್ ಚಂದ್ರ ಬ್ಯಾನರ್ಜಿ - ಮೊದಲ ಅಧಿವೇಶನ

1887  ಮದ್ರಾಸ್ (ತಮಿಳುನಾಡು) - ಬದ್ರುದ್ದೀನ್ ತ್ಯಾಬ್ಜಿ  ಮೊದಲ ಮುಸ್ಲಿಂ ಅಧ್ಯಕ್ಷ

1888  ಅಲಹಾಬಾದ್ (ಉತ್ತರ ಪ್ರದೇಶ) - ಜಾರ್ಜ್ ಯೂಲೆ  ಮೊದಲ ಬ್ರಿಟಿಷ್ (ವಿದೇಶಿ) ಅಧ್ಯಕ್ಷ

1907 - ಸೂರತ್ (ಗುಜರಾತ್) – ರಾಸ್ ಬಿಹಾರಿ ಘೋಷ್ – ಕಾಂಗ್ರೆಸ್ ಇಬ್ಭಾಗ (ಮಂದಗಾಮಿಗಳು ಮತ್ತು ತೀವ್ರಗಾಮಿಗಳು)

1916 - ಲಖ್ನೋ (ಉತ್ತರ ಪ್ರದೇಶ) – ಎ.ಸಿ ಮಜುಂದಾರ್ – ಕಾಂಗ್ರೆಸ್ ವಿಲೀನ (ಮಂದಗಾಮಿಗಳು ಮತ್ತು ತೀವ್ರಗಾಮಿಗಳು)

1917  ಕಲ್ಕತ್ತಾ (ಪಶ್ಚಿಮ ಬಂಗಾಳ)  ಅನಿಬೆಸೆಂಟ್  ಮೊದಲ ಮಹಿಳಾ ಅಧ್ಯಕ್ಷೆ

1923  ದೆಹಲಿ - ಮೌಲಾನಾ ಅಬುಲ್ ಕಲಾಂ ಆಜಾದ್  ಅತಿ ಕಿರಿಯ ಅಧ್ಯಕ್ಷ

1924 - ಬೆಳಗಾವಿ (ಕರ್ನಾಟಕ) - ಗಾಂಧೀಜಿ  ಕರ್ನಾಟಕ (ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ)

1925  ಕಾನ್ಪುರ (ಉತ್ತರ ಪ್ರದೇಶ) - ಸರೋಜಿನಿ ನಾಯ್ಡು  ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ

1929  ಕಲ್ಕತ್ತಾ (ಪಶ್ಚಿಮ ಬಂಗಾಳ)  ಜವಾಹರ್ ಲಾಲ್ ನೆಹರು - ಸ್ವರಾಜ್ಯ ಘೋಷಣೆ

1937 - ಫೈಜಾಪುರ್ (ಮಹಾರಾಷ್ಟ್ರ) - ಜವಾಹರ್ ಲಾಲ್ ನೆಹರು - ಹಳ್ಳಿಯಲ್ಲಿ ನಡೆದ ಮೊದಲ ಅಧಿವೇಶನ

1939  ತ್ರಿಪುರ - ಸುಭಾಷ್ ಚಂದ್ರ ಬೋಸ್ - ಬೋಸರ ರಾಜಿನಾಮೆ ಮತ್ತು ಫಾರ್ವರ್ಡ್ ಬ್ಲಾಕ್ ಸ್ಥಾಪನೆ

1946  ಮೀರತ್ (ಉತ್ತರ ಪ್ರದೇಶ)  ಆಚಾರ್ಯ ಕೃಪಲಾನಿ - ಬ್ರಿಟಿಷ್ ಭಾರತದ ಕೊನೆಯ ಅಧಿವೇಶನ

1948  ಜೈಪುರ (ರಾಜಸ್ತಾನ) - ಪಟ್ಟಾಭೀ ಸೀತಾರಾಮಯ್ಯ - ಸ್ವಾತಂತ್ರ್ಯೋತ್ತರ ಭಾರತದ ಮೊದಲ ಅಧಿವೇಶನ

ಭಾರತೀಯ ಕಾಂಗ್ರೆಸ್ ಪೂರ್ವದ ರಾಜಕೀಯ ಸಂಘಟನೆಗಳು

ಬಾಂಬೆ ಅಸೋಸಿಯೇಷನ್  1852  ಜಗನ್ನಾಥ ಶಂಕರ್ ಸೇಠ್

ಮದ್ರಾಸ್ ನೇಟಿವ್ ಅಸೋಸಿಯೇಷನ್  1852  ಗಾಜುಲು ಲಕ್ಷ್ಮಿನರಸು ಚೆಟ್ಟಿ

ಈಸ್ಟ್ ಇಂಡಿಯಾ ಅಸೋಸಿಯೇಷನ್  1866  ದಾದಾಬಾಯಿ ನವರೋಜಿ

ಪೂನಾ ಸಾರ್ವಜನಿಕ ಸಭಾ - 1870  ಮಹದೇವ ಗೋವಿಂದ ರಾನಡೆ ಮತ್ತು ಗಣೇಶ್ ವೆಂಕಟೇಶ್ ಜೋಶಿ

ಇಂಡಿಯನ್ ಲೀಗ್ - 1875 - ಶಿಶಿರ್ ಕುಮಾರ್ ಘೋಷ್

ಇಂಡಿಯನ್ ಅಸೋಸಿಯೇಷನ್ ಆಫ್ ಕೋಲ್ಕತ್ತಾ  1876 - ಸುರೆಂದ್ರನಾಥ್ ಬ್ಯಾನರ್ಜಿ ಮತ್ತು ಆನಂದ್ ಮೋಹನ್ ಬೋಸ್

ಮದ್ರಾಸ್ ಮಹಾಜನಾ ಸಭಾ  1884  ವೀರ ರಾಘವಾಚಾರಿಸುಬ್ರಹ್ಮಣ್ಯ ಅಯ್ಯರ್ ಮತ್ತು ಆನಂದಾಚಾರಿ

ಬಾಂಬೆ ಪ್ರೆಸಿಡೆನ್ಸಿ ಅಸೋಸಿಯೇಷನ್  1885 - ಬದ್ರುದ್ದೀನ್ ತ್ಯಾಬ್ಜಿಫಿರೋಜ್ ಷಾ ಮೆಹ್ತಾ ಮತ್ತು ಕೆ.ಟಿ ತೆಲಾಂಗ್

ಮಂದಗಾಮಿಗಳ ಯುಗ (1885-1905)

ದಾದಾಬಾಯಿ ನವರೋಜಿ, ಫಿರೋಜ್ ಷಾ ಮೆಹ್ತಾ, ಉಮೇಶ್ ಚಂದ್ರ ಬ್ಯಾನರ್ಜಿ ಮತ್ತು ಗೋಪಾಲ ಕೃಷ್ಣ ಗೋಖಲೆ ಪ್ರಮುಖ ಮಂದಗಾಮಿ ನಾಯಕರು. ಸಂವಿಧಾನದ ಚೌಕಟ್ಟಿನೊಳಗೆ ಬ್ರಿಟಿಷ್ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುವ ಮೂಲಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಭಾರತದ ವೃದ್ಧ ಪಿತಾಮಹಾ ಎಂದು ಹೆಸರಾಗಿದ್ದ ದಾದಾಬಾಯಿ ನವರೋಜಿಯವರು ಮೊದಲ ಬಾರಿಗೆ ಸಂಪತ್ತಿನ ಸೋರಿಕೆ ಸಿದ್ದಾಂತದ ಮೂಲಕ ಭಾರತದ ಸಂಪತ್ತು ಹೇಗೆ ಭಾರತದಿಂದ ಬ್ರಿಟನ್ನಿಗೆ ಹೋಗುತ್ತಿದೆ ಎಂಬುದನ್ನು ತೊರಿಸಿಕೊಟ್ಟರು. ದ ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಎಂಬುದು ಇವರ ಕೃತಿ.

ದಾದಾಬಾಯಿ ನವರೋಜಿ 

ಫಿರೋಜ್ ಷಾ ಮೆಹ್ತಾರವರು 1885 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯನ್ನು ಸ್ಥಾಪಿಸಿದರು. ಮಹಾರಾಷ್ಟ್ರದ ಸಾಕ್ರೆಟಿಸ್ ಎಂದು ಕರೆಯಲ್ಪಡುವ ಎಂ.ಜಿ ರಾನಡೆಯವರು ಗೋಪಾಲಕೃಷ್ಣ ಗೋಖಲೆಯವರ ರಾಜಕೀಯ ಗುರುವಾಗಿದ್ದರು. ಗೋಪಾಲಕೃಷ್ಣ ಗೋಖಲೆಯವರು ಗಾಂಧೀಜಿಗೆ ರಾಜಕೀಯ ಗುರುವಾಗಿದ್ದರು.

ತೀವ್ರಗಾಮಿಗಳ ಯುಗ (1905-1915)

ಲಾಲಾ ಲಜಪತ್ ರಾಯ್ಬಾಲ ಗಂಗಾಧರ ತಿಲಕ್ ಹಾಗೂ ಬಿಪಿನ್ ಚಂದ್ರ ಪಾಲ್

ಲಾಲ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್ ಹಾಗೂ ಬಿಪಿನ್ ಚಂದ್ರ ಪಾಲರು ತೀವ್ರಗಾಮಿಗಳಾಗಿದ್ದರು. ಲಾಲ್, ಬಾಲ್, ಪಾಲ್ ಎಂದೇ ಇವರು ಪ್ರಸಿದ್ಧಿಯಾಗಿದ್ದಾರೆ. ಇವರು ಮಂದಗಾಮಿಗಳಂತೆ ಬೇಡಿಕೆಯ ರೂಪದಲ್ಲಿ ಸ್ವಾತಂತ್ರ್ಯವನ್ನು ಬಯಸದೇ ಹೋರಾಟದ ರೂಪದಲ್ಲಿಯೇ ಪಡೆಯಲು ಇಚ್ಛಿಸಿದರು. ಮಂದಗಾಮಿಗಳು ಅನುಸರಿಸುವ ರೀತಿಯನ್ನು ತೀವ್ರಗಾಮಿಗಳು ತಿರುಪೆಯ ನೀತಿ (ಪಾಲಿಸಿ ಆಫ್ ಮೆಂಡಿಕೆನ್ಸಿ) ಎಂದು ಕರೆಯುತ್ತಿದ್ದರು.

ಪಂಜಾಬಿನ ಸಿಂಹ ಎಂದೇ ಖ್ಯಾತರಾಗಿದ್ದ ಲಾಲಾ ಲಜಪತರಾಯರು ಅನ್‍ಹ್ಯಾಪಿ ಇಂಡಿಯಾ ಎಂಬ ಕೃತಿಯನ್ನು ಬರೆದರು. ಜೊತೆಗೆ ಪಂಜಾಬಿ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ಇವರು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಂಘದ ಮೊದಲ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.  1927 ರ ಸೈಮನ್ ಗೋ ಬ್ಯಾಕ್ ಚಳುವಳಿಯಲ್ಲಿ ಸ್ಯಾಂಡರ್ಸ್ ಎಂಬ ಪೊಲೀಸ್ ಅಧಿಕಾರಿಯ ಲಾಠಿ ಏಟಿನಿಂದ ಲಾಲಾ ಲಜಪತರಾಯರು ಹತರಾದರು.

ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುವೆನು ಎಂಬ ಪ್ರಸಿದ್ಧ ಘೋಷಣೆಯಿಂದ ಖ್ಯಾತರಾದವರು ಬಾಲಗಂಗಾಧರ ತಿಲಕರು. ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ತಿಲಕರು 1893 ರಲ್ಲಿ ಗಣೇಶ ಜಯಂತಿ ಮತ್ತು 1895 ರಲ್ಲಿ ಶಿವಾಜಿ ಜಯಂತಿಗಳನ್ನು ಆಚರಣೆಗೆ ತಂದರು. ಆಂಗ್ಲ ಭಾಷೆಯಲ್ಲಿ ಮರಾಠ ಮತ್ತು ಮರಾಠಿ ಭಾಷೆಯಲ್ಲಿ ಕೇಸರಿ ಹಾಗೂ ಕಾಲ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. ಸೆರೆವಾಸದಲ್ಲಿದ್ದಾಗ ಇವರು ಗೀತಾರಹಸ್ಯ ಎಂಬ ಕೃತಿಯನ್ನು ಬರೆದರು. ತಿಲಕರನ್ನು ಜನರು ಗೌರವದಿಂದ ಲೋಕಮಾನ್ಯ ಎಂದು ಕರೆಯುತ್ತಿದ್ದರು.

ಬಿಪಿನ್ ಚಂದ್ರಪಾಲರನ್ನು ಕ್ರಾಂತಿಕಾರಿಗಳ ಪಿತಾಮಹಾ ಎನ್ನುವರು. ಇವರು ಪರಿದರ್ಶಿಕಾ ಮತ್ತು ನ್ಯೂ ಇಂಡಿಯಾ ಎಂಬ ಪತ್ರಿಕೆಗಳನ್ನು ನಡೆಸುತ್ತಿದ್ದರು.

ಅರವಿಂದ ಘೋಷರು ಮತ್ತೋರ್ವ ಪ್ರಮುಖ ತೀವ್ರಗಾಮಿ ನಾಯಕರಾಗಿದ್ದರು. ಇವರು ನ್ಯೂ ಲ್ಯಾಂಪ್ ಫರ್ ದಿ ಓಲ್ಡ್ ಎಂಬ ಕೃತಿಯಲ್ಲಿ ಮಂದಗಾಮಿಗಳ ನಡೆಯನ್ನು ಕುರಿತು ಟೀಕಿಸಿದ್ದಾರೆ. ವರ್ತಮಾನ ರಣನೀತಿ ಎಂಬುದು ಇವರ ಮತ್ತೊಂದು ಪ್ರಮುಖ ಕೃತಿ. ಇವರು ಕರ್ಮಯೋಗಿವಂದೇ ಮಾತರಂ ಮತ್ತು ಯುಗಾಂತರ ಎಂಬ ಪತ್ರಿಕೆಗಳನ್ನು ನಡೆಸುತ್ತಿದ್ದರು.

ಬಂಗಾಳದ ವಿಭಜನೆ (1905)

1905 ಅಕ್ಟೋಬರ್ 16 ರಂದು ವೈಸ್ರಾಯ್ ಲಾರ್ಡ್ ಕರ್ಜನ್ ಬಂಗಾಳವನ್ನು ಮುಸ್ಲಿಂರು ಅಧಿಕವಾಗಿರುವ ಪೂರ್ವ ಬಂಗಾಳ ಮತ್ತು ಹಿಂದೂಗಳು ಅಧಿಕವಾಗಿರುವ ಪಶ್ಚಿಮ ಬಂಗಾಳ ಎಂದು 2 ಭಾಗಗಳಾಗಿ ಒಡೆದನು. ಇದಕ್ಕೆ ಪ್ರತಿರೋಧವಾಗಿ ಬಂಗಾಳದಲ್ಲಿ ಶೋಕ ದಿನಾಚರಣೆಯನ್ನು ಆಚÀರಿಸಲಾಯಿತು. ಈ ಸಂದರ್ಭದಲ್ಲಿ ಠಾಗೂರರು ಅಮರ್ ಸೋನಾರ್ ಬಾಂಗ್ಲಾ ಎಂಬ ಹಾಡನ್ನು ರಾಷ್ಟ್ರಗೀತೆಯಾಗಿ ಹಾಡಿದರು. ವಂದೇಮಾತರಂ ಎಂಬ ಸಾಲನ್ನು ಎಲ್ಲರೂ ಪ್ರತಿಭಟನೆಯ ಘೋಷಣೆಯಾಗಿ ಅಳವಡಿಸಿಕೊಂಡರು. ಹಿಂದೂ ಮುಸ್ಲಿಂರು ಐಕ್ಯವಾಗಿ ರಾಖಿ ಕಟ್ಟಿಕೊಂಡು ರಕ್ಷಾಬಂಧನ್ ಹಬ್ಬವನ್ನು ಆಚರಿಸಿದರು. ಈ ಪ್ರತಿಭಟನೆ ದೇಶದ ತುಂಬೆಲ್ಲಾ ಹರಡಿ ದೇಶಾದ್ಯಂತ ಪ್ರತಿಭಟನೆ ಶುರುವಾಯಿತು.

1911 ಡಿಸೆಂಬರ್ 12 ರಂದು ದೊರೆ 5ನೇ ಜಾರ್ಜ್ ಭಾರತಕ್ಕೆ ದರ್ಬಾರ್ ನಡೆಸಲು ಬಂದಾಗ ಈ ಪ್ರತಿಭಟನೆಯನ್ನು ಕಂಡು ಬಂಗಾಳದ ವಿಭಜನೆಯನ್ನು ರದ್ಧು ಮಾಡಿದನು. ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು.

ಸ್ವದೇಶಿ ಚಳುವಳಿ (1905)

ಪ್ರಮುಖ ತೀವ್ರಗಾಮಿ ಮುಖಂಡರಾಗಿದ್ದ ಅರವಿಂದ ಘೋಷರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಭಾರತದಲ್ಲೇ ತಯಾರಿಸಿದ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಸ್ವದೇಶಿ ಚಳುವಳಿಗೆ ಕರೆ ನೀಡಿದರು. 1905 ರಲ್ಲಿ ಬನಾರಸ್ ನಲ್ಲಿ ಗೋಪಾಲ ಕೃಷ್ಣ ಗೋಖಲೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಚಳುವಳಿಯ ಪರಿಣಾಮ 1907 ರಲ್ಲಿ ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆ್ಯಕ್ಟ್ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಮುಸ್ಲಿಂ ಲೀಗ್ ಸ್ಥಾಪನೆ (1906)

1906 ಅಕ್ಟೋಬರ್ 1 ರಂದು ಆಗಾಖಾನ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಹಿತಾಸಕ್ತಿಗಾಗಿ ಮುಸ್ಲಿಂ ಲೀಗ್ ಸ್ಥಾಪನೆಯಾಯಿತು. ಇದರ ಮೊದಲ ಸಭೆ ಇಂದಿನ ಬಾಂಗ್ಲಾದೇಶದ ರಾಜಧಾನಿಯಾಗಿರುವ ಢಾಕಾದಲ್ಲಿ ನಡೆಯಿತು.

ಸೂರತ್ ಒಡಕು (1907)

ಮಂದಗಾಮಿಗಳಾದ ಗೋಪಾಲಕೃಷ್ಣ ಗೋಖಲೆ, ದಾದಾಭಾಯ್ ನವರೋಜಿ, ಎಂ.ಜಿ ರಾನಡೆ ಮುಂತಾದವರಿಗೆ ತೀವ್ರಗಾಮಿಗಳಾದ ಅರವಿಂಧ ಘೋಷ್, ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರಪಾಲ ಮುಂತಾದವರ ಸಿದ್ದಾಂತಗಳು ಇಷ್ಟವಾಗುತ್ತಿರಲಿಲ್ಲ. 

1907 ರ ಸೂರತ್ ಅಧಿವೇಶನದಲ್ಲಿ ಮಂದಗಾಮಿಗಳು ರಾಸ್ ಬಿಹಾರಿ ಘೋಷ್ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಬೇಕೆಂತಲೂ ಮತ್ತು ತೀವ್ರಗಾಮಿಗಳು ಲಾಲಾ ಲಜಪತರಾಯ್ ಅವರು ಸಭೆಯ ಅಧ್ಯಕ್ಷತೆ ವಹಿಸಬೇಕೆಂತಲೂ ವಾದಕ್ಕಿಳಿದರು. ಕೊನೆಗೆ ಇದು ಫಲಕಾರಿಯಾಗದೆ ಕಾಂಗ್ರೆಸ್ ಪಕ್ಷ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂದು ಇಬ್ಭಾಗವಾಗಿ ಒಡೆಯಿತು. ಸೂರತ್ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ರಾಸ್ ಬಿಹಾರಿ ಘೋಷ್ ವಹಿಸಿಕೊಂಡರು.

ಕ್ರಾಂತಿಕಾರಿಗಳು

ವಾಸುದೇವ್ ಬಲವಂತ್ ಫಡ್ಕೆ ಅವರನ್ನು ಭಾರತದ ಮೊಟ್ಟಮೊದಲ ಕ್ರಾಂತಿಕಾರಿ ಎನ್ನಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಲು ಮಹಾರಾಷ್ಟ್ರದಲ್ಲಿ ಕೊಲಿಸ್ಭಿಲ್ ಮತ್ತು ದಾಂಗರ್ ಬುಡಕಟ್ಟುಗಳನ್ನು ಸೇರಿಸಿ ರಮೋಶಿ ಎಂಬ ಸೈನ್ಯವನ್ನು ಕಟ್ಟಿದರು.

ವಿ.ಡಿ ಸಾವರ್ಕರ್ (ವಿನಾಯಕ ದಾಮೋದರ್ ಸಾವರ್ಕರ್) 1899 ರಲ್ಲಿ ಮಿತ್ರಮೇಳ ಎಂಬ ಮೊದಲ ಗುಪ್ತಚರ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟಿದರು.

ಬಂಗಾಳದ ವಿಭಜನೆಯ ನಂತರ 1906 ರಲ್ಲಿ ಅರಬಿಂದೊ ಘೋಷ್ ನೇತೃತ್ವದಲ್ಲಿ ರಹಸ್ಯವಾದ ಜುಗಾಂತರ್ (ಯುಗಾಂತರ್) ಪಕ್ಷ ಸ್ಥಾಪನೆಯಾಯಿತು. ಅರಬಿಂದೊ ಘೋಷರು ಇದೇ ಹೆಸರಿನಲ್ಲಿ ಪತ್ರಿಕೆಯೊಂದನ್ನು ಸಹ ಪ್ರಾರಂಭಿಸಿದರು.

ಕ್ರಾಂತಿಕಾರಿಯಾದ ಖುದಿರಾಮ್ ಬೋಸ್ ನನ್ನು 1908 ರಲ್ಲಿ ನೇಣು ಹಾಕಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ನೇಣುಗಂಬವೇರಿದ ಮೊದಲ ಕ್ರಾಂತಿಕಾರಿ ಹುತಾತ್ಮನೆಂದು ಈತ ಪ್ರಸಿದ್ಧಿಯಾಗಿದ್ದಾನೆ.

ಚಂದ್ರಶೇಖರ್ ಆಝಾದರು ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ (ಇಂಡಿಯನ್ ಸೋಷಿಯಲಿಸ್ಟ್ ರಿಪಬ್ಲಿಕ್) ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಯ ಸದಸ್ಯರಾಗಿದ್ದ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆಯನ್ನು ಪ್ರತಿಭಟಿಸಿ 1929 ಅಕ್ಟೊಬರ್ 8 ರಂದು ಕೇಂದ್ರೀಯ ಶಾಸನ ಸಭೆಯಲ್ಲಿ ಬಾಂಬ್ ಎಸೆದರು. ಈ ಸೆಂಟ್ರಲ್ ಅಸೆಂಬ್ಲಿ ಬಾಂಬ್ ಮೊಕದ್ದಮೆಯ ವಿಚಾರಣೆಯ ನಂತರ ಭಗತಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 23 ಮಾರ್ಚ್ 1931 ರಂದು ನೇಣು ಹಾಕಲಾಯಿತು.

ಪ್ರಮುಖ ಕ್ರಾಂತಿಕಾರಿ ಸಂಘಟನೆಗಳು

ಪ್ಯಾರಿಸ್ ಇಂಡಿಯನ್ ಸೊಸೈಟಿ  ಪ್ಯಾರಿಸ್ (ಫ್ರಾನ್ಸ್)  1905 - ಮದನ್ ಭೀಕಾಜಿ ಕಾಮಾ

ಇಂಡಿಯಾ ಹೌಸ್ - ಲಂಡನ್ (ಇಂಗ್ಲೆಂಡ್) (1905-1910) - ಶ್ಯಾಂ ಕೃಷ್ಣ ವರ್ಮ

ಗದ್ದರ್ ಪಕ್ಷ  ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕಾ)  1913 - ಲಾಲಾ ಹರದಯಾಳ್ (ಮೊದಲ ಜಾತ್ಯಾತೀತಪ್ರಜಾತಾಂತ್ರಿಕ ಮತ್ತು ಕ್ರಾಂತಿಕಾರಿ ಸಂಘಟನೆ)

ಇಂಡಿಯಾ ಇಂಡಿಪೆಂಡೆನ್ಸ್ ಕಮಿಟಿ  ಬರ್ಲಿನ್ (ಜರ್ಮನಿ)  1915  ವೀರೇಂದ್ರನಾಥ ಚಟ್ಟೋಪಧ್ಯಾಯ

ಕಾಮೆಂಟ್‌ಗಳು